ಟೀಂ ಇಂಡಿಯಾಗೆ ಸಿಕ್ಕ ಭರವಸೆಯ ಆಲ್‌ರೌಂಡರ್: ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಮಿಂಚಿದ ವೆಂಕಟೇಶ್ ಅಯ್ಯರ್

ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆಯಿಂದಾಗಿ ಭಾರತ ತಂಡದಿಂದ ಹಲವು ತಿಂಗಳಿನಿಂದ ಹೊರಗುಳಿದಿದ್ದರು. ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಮಾಡಲು ಸಾಧ್ಯವಾಗದ ಕಾರಣ ಆಯ್ಕೆಗಾರರು ಅವರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಅದೇ ಸಮಯದಲ್ಲಿ, ಯುವ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಭಾರತ ತಂಡದಲ್ಲಿ ಸ್ಥಾನ ಪಡೆಯುವುದರ ಜೊತೆಗೆ, ತಮ್ಮ ಆಟದ ಶೈಲಿಯಿಂದಲೂ ಪ್ರಭಾವಿತರಾಗಿದ್ದಾರೆ. ಬ್ಯಾಟಿಂಗ್ ಜೊತೆಗೆ ವಿಂಡೀಸ್ ವಿರುದ್ಧ ಬೌಲಿಂಗ್‌ನಲ್ಲೂ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡದಲ್ಲಿ ಯುವ ಆಲ್ ರೌಂಡರ್ ವೆಂಕಟೇಶ್ ಅಯ್ಯರ್ ಸ್ಥಾನ ಪಡೆದಿದ್ದರು. ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿದ್ದು, ವೆಂಕಟೇಶ್ ಅಯ್ಯರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಸಿಕ್ಕ ಅವಕಾಶದ ಆರಂಭದಲ್ಲಿ ಕೊಂಚ ಎಡವಿದರೂ ಈಗ ಸುಧಾರಿಸಿಕೊಳ್ಳುತ್ತಿದ್ದಾರೆ.
ತಂಡಕ್ಕೆ ಅಗತ್ಯವಿರುವ ಪ್ರಮುಖ ಕ್ಷಣಗಳಲ್ಲಿ ಅಮೂಲ್ಯವಾದ ರನ್‌ಗಳನ್ನು ಅಯ್ಯರ್ ಗಳಿಸುತ್ತಿದ್ದಾರೆ. ವಿಶೇಷವಾಗಿ ಟಿ20 ಸ್ವರೂಪದಲ್ಲಿ ಇತ್ತೀಚೆಗೆ ನಡೆದ ವಿಂಡೀಸ್ ವಿರುದ್ಧದ ಟಿ20 ಸರಣಿಯೇ ಇದಕ್ಕೆ ಸಾಕ್ಷಿ.

ಟೀಂ ಇಂಡಿಯಾಗೆ ಫಿನಿಷರ್ ಆಗಿ ಸ್ಥಾನ ತುಂಬಬಲ್ಲರು
ಇದೇ ವೇಳೆ ಟೀಂ ಇಂಡಿಯಾಗೆ ಫಿನಿಶರ್ ಕೊರತೆಯನ್ನು ವೆಂಕಟೇಶ್ ಅಯ್ಯರ್ ತುಂಬುತ್ತಿದ್ದಾರೆ ಎಂಬುದು ಅಭಿಮಾನಿಗಳು ಹಾಗೂ ಕ್ರಿಕೆಟ್ ವಿಶ್ಲೇಷಕರ ಅಭಿಪ್ರಾಯ. ಇದರೊಂದಿಗೆ ಇತ್ತೀಚೆಗೆ ನಡೆದ ವಿಂಡೀಸ್ ವಿರುದ್ಧದ ಟಿ20 ಸರಣಿಯ ನಿರ್ಣಾಯಕ ಕ್ಷಣದಲ್ಲಿ ಮಿಡ್ ಫೀಲ್ಡ್ ನಲ್ಲಿ ಬ್ಯಾಟ್ ಬೀಸಿದ ಅಯ್ಯರ್ ಉತ್ತಮ ಆಟವಾಡಿದ್ರು.
ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಯಲ್ಲಿ ವೆಂಕಟೇಶ್ ಅಯ್ಯರ್ ಮೂರು ಪಂದ್ಯಗಳಲ್ಲಿ ಕ್ರಮವಾಗಿ 24*(13), 33(18) & 35*(19) ರನ್ ಕಲೆಹಾಕಿದರು.
ಅದ್ರಲ್ಲೂ ಬ್ಯಾಟಿಂಗ್ ಜೊತೆಗೆ ಮೂರನೇ ಟಿ20 ಪಂದ್ಯದಲ್ಲಿ ಎರಡು ನಿರ್ಣಾಯಕ ವಿಕೆಟ್ ಪಡೆದರು. ಇದರೊಂದಿಗೆ ಹಾರ್ದಿಕ್ ಪಾಂಡ್ಯ ಸ್ಥಾನಕ್ಕೇರಬಲ್ಲ ಆಟಗಾರ ವೆಂಕಟೇಶ್ ಅಯ್ಯರ್ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದರೊಂದಿಗೆ ವೆಂಕಟೇಶ್ ಅಯ್ಯರ್ ತಂಡದಲ್ಲಿ ಸ್ಥಾನ ಗಟ್ಟಿ ಮಾಡಿಕೊಂಡಿದ್ದಾರೆ ಎನ್ನಬಹುದು.
ಐಪಿಎಲ್ 2022: ಇದೇ ಮೊದಲ ಬಾರಿಗೆ ಬೇರೆ ಫ್ರಾಂಚೈಸಿ ಪರ ಕಣಕ್ಕಿಳಿಯಲಿದ್ದಾರೆ ಈ ಐವರು ಖ್ಯಾತ ಕ್ರಿಕೆಟಿಗರು

ಅಯ್ಯರ್ ಸಾಮರ್ಥ್ಯವನ್ನ ಮೆಚ್ಚಿದ ವಾಸಿಂ ಜಾಫರ್
ಕ್ರಿಕೆಟ್ ವಿಶ್ಲೇಷಕ ವಾಸಿಂ ಜಾಫರ್ ಕೂಡ ವೆಂಕಟೇಶ್ ಅಯ್ಯರ್ ಅವರನ್ನು ಹೊಗಳಿದ್ದಾರೆ. ವೆಂಕಟೇಶ್ ಅಯ್ಯರ್ ಹಾರ್ದಿಕ್ ಪಾಂಡ್ಯ ಬದಲಿಗೆ ಸಮರ್ಥ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮುಂಬರುವ ವಿಶ್ವಕಪ್ ತಂಡದಲ್ಲಿ ವೆಂಕಟೇಶ್ ಅಯ್ಯರ್, ಹಾರ್ದಿಕ್ ಪಾಂಡ್ಯ ಅವರಿಗಿಂತ ಒಂದು ಹೆಜ್ಜೆ ಮುಂದೆ ಇರುತ್ತಾರೆ ಎಂದು ಅವರು ಹೇಳಿದರು. ಸದ್ಯಕ್ಕೆ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುತ್ತಿದ್ದಾರೆಯೇ ಎಂದು ಹೇಳಲು ಸಾಧ್ಯವಿಲ್ಲ ಮತ್ತು ಅವರು ಮತ್ತೆ ತಂಡದಲ್ಲಿ ಸ್ಥಾನ ಪಡೆಯಬೇಕಾದರೆ ಮುಂಬರುವ ಐಪಿಎಲ್ 2022 ಅವರಿಗೆ ನಿರ್ಣಾಯಕವಾಗಿದೆ ಎಂದು ಜಾಫರ್ ಹೇಳಿದರು.
BCCI ಕೇಂದ್ರೀಯ ಗುತ್ತಿಗೆ 2022: ಕೆ.ಎಲ್ ರಾಹುಲ್, ರಿಷಭ್ ಪಂತ್‌ಗೆ 7 ಕೋಟಿ ಸಿಗುವ ಸಾಧ್ಯತೆ

ಹಾರ್ದಿಕ್ ಪಾಂಡ್ಯಗೆ ಪ್ರಬಲ ಪೈಪೋಟಿ ನೀಡುತ್ತಿರುವ ದೀಪಕ್, ಶಾರ್ದೂಲ್
ವೆಂಕಟೇಶ್ ಅಯ್ಯರ್ ಮಾತ್ರವಲ್ಲದೆ ದೀಪಕ್ ಚಾಹರ್ ಮತ್ತು ಶಾರ್ದೂಲ್ ಠಾಕೂರ್ ಅವರಿಂದಲೂ ಹಾರ್ದಿಕ್ ಪಾಂಡ್ಯ ತೀವ್ರ ಪೈಪೋಟಿ ಎದುರಿಸುತ್ತಿದ್ದಾರೆ. ಚಹಾರ್ ಮತ್ತು ಠಾಕೂರ್ ಇತ್ತೀಚಿನ ದಿನಗಳಲ್ಲಿ ತಂಡಕ್ಕೆ ಅಗತ್ಯವಿರುವಾಗ ಬ್ಯಾಟ್ ಮತ್ತು ಬಾಲ್‌ನೊಂದಿಗೆ ಪ್ರಮುಖ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ತಂಡದಲ್ಲಿ ಖಾಯಂ ಸ್ಥಾನ ಸಿಗದಿದ್ರೂ, ತಂಡಕ್ಕೆ ಮಿಸ್ ಆಗದೆ ಆಯ್ಕೆಯಾಗುತ್ತಿದ್ದಾರೆ. ಹೀಗಾಗಿ ಹಾರ್ದಿಕ್ ಪಾಂಡ್ಯ ತಂಡಕ್ಕೆ ಮರಳುವುದು ಕಷ್ಟವಾಗಿದೆ. ಇನ್ನು ಕೆಲವರು ಟೀಮ್ ಇಂಡಿಯಾದಲ್ಲಿ ಹಾರ್ದಿಕ್ ಪಾಂಡ್ಯ ಕಥೆ ಮುಗಿಯಿತು ಎನ್ನುತ್ತಾರೆ. ಸದ್ಯ ಫಿಟ್ನೆಸ್ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿರುವ ಹಾರ್ದಿಕ್ ಪಾಂಡ್ಯ ಈ ಹಿಂದೆ ಹಲವು ಪಂದ್ಯಗಳನ್ನು ಬ್ಯಾಟ್ ಮತ್ತು ಬಾಲ್ ಮೂಲಕ ಗೆದ್ದು ತಂಡವನ್ನು ಗೆದ್ದುಕೊಂಡಿದ್ದಾರೆ.
ಆದ್ರೆ ಮುಂಬರುವ ಐಪಿಎಲ್ 2022ನಲ್ಲಿ ಹಾರ್ದಿಕ್ ಯಾವ ರೀತಿ ಪ್ರದರ್ಶನ ನೀಡಬಲ್ಲರುವ ಎಂಬುದರ ಆಧಾರದ ಮೇಲೆ ಅವರ ಭವಿಷ್ಯ ನಿರ್ಧಾರವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications