ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

BCCI ಕೇಂದ್ರೀಯ ಗುತ್ತಿಗೆ 2022: ಕೆ.ಎಲ್ ರಾಹುಲ್, ರಿಷಭ್ ಪಂತ್‌ಗೆ 7 ಕೋಟಿ ಸಿಗುವ ಸಾಧ್ಯತೆ

KL Rahul and Rishabh pant

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತೀಯ ಕ್ರಿಕೆಟಿಗರ 2022ರ ಕೇಂದ್ರೀಯ ಒಪ್ಪಂದಗಳನ್ನ ಘೋಷಿಸಲು ಸಿದ್ಧತೆ ನಡೆಸಿದೆ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯು ಮುಂದಿನ ಕೆಲವು ದಿನಗಳಲ್ಲಿ ಈ ಕುರಿತಾಗಿ ಪ್ರಕಟಣೆ ಹೊರಡಿಸುವ ಸಾಧ್ಯತೆಯಿದೆ.

ಕೆಲವು ವರದಿಗಳ ಪ್ರಕಾರ ಭಾರತ ಲಿಮಿಟೆಡ್ ಓವರ್ ಕ್ರಿಕೆಟ್‌ನ ಉಪನಾಯಕ ಕೆ.ಎಲ್ ರಾಹುಲ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರು ಬಡ್ತಿ ಪಡೆಯುವ ಸಾಧ್ಯತೆಯ ಹೆಚ್ಚಿದೆ. ಈ ಮೂಲಕ ಇಬ್ಬರು ಸ್ಟಾರ್ ಕ್ರಿಕೆಟಿಗರ ವೇತನ ಕೂಡ ಹೆಚ್ಚಾಗಲಿದೆ.

A+ ಗ್ರೇಡ್‌ನಲ್ಲಿದ್ದಾರೆ ಮೂವರು ಆಟಗಾರರು

A+ ಗ್ರೇಡ್‌ನಲ್ಲಿದ್ದಾರೆ ಮೂವರು ಆಟಗಾರರು

BCCI ಗ್ರೇಡ್ A+ ಗುತ್ತಿಗೆ ಪಟ್ಟಿಯಲ್ಲಿ ಕೇವಲ ಮೂರು ಕ್ರಿಕೆಟಿಗರು ಮಾತ್ರ ಇದ್ದಾರೆ ಎಂಬುದನ್ನ ಇಲ್ಲಿ ಕಾಣಬಹುದು. ಸೀಮಿತ ಓವರ್‌ಗಳ ನಾಯಕ ರೋಹಿತ್ ಶರ್ಮಾ, ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ವಿರಾಟ್ ಕೊಹ್ಲಿ ಮಾತ್ರ ಗ್ರೇಡ್ A+ ಒಪ್ಪಂದದಲ್ಲಿರುವ ಮೂವರು ಭಾರತೀಯ ಕ್ರಿಕೆಟಿಗರು.

A+ ಗ್ರೇಡ್‌ ಸೇರಲಿರುವ ರಾಹುಲ್ ಮತ್ತು ಪಂತ್

A+ ಗ್ರೇಡ್‌ ಸೇರಲಿರುವ ರಾಹುಲ್ ಮತ್ತು ಪಂತ್

ಕೆಎಲ್ ರಾಹುಲ್ ಅವರು ಸೀಮಿತ ಓವರ್‌ಗಳ ಸ್ವರೂಪದಲ್ಲಿ ಆರಂಭಿಕರಾದಾಗಿನಿಂದ ಭಾರತದ ಪ್ರಮುಖ ಆಟಗಾರಗಿ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷ, ರಾಹುಲ್‌ಗೆ ಟೆಸ್ಟ್ ಮಾದರಿಯಲ್ಲಿ ಇನ್ನಿಂಗ್ಸ್ ತೆರೆಯಲು ಎರಡನೇ ಅವಕಾಶವನ್ನು ಪಡೆದ ಬಳಿಕ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ರಾಹುಲ್ ಜೊತೆಗೆ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಬ್ ಪಂತ್ ಕಳೆದ ವರ್ಷದಲ್ಲಿ ಭಾರತದ ಪ್ರಮುಖ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿ ತಮ್ಮನ್ನು ತಾವು ರೂಪಿಸಿಕೊಂಡಿದ್ದಾರೆ.

ಯುವ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಬ್ ಪಂತ್ ಕಳೆದ ವರ್ಷದಲ್ಲಿ ಭಾರತದ ಪ್ರಮುಖ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿ ತಮ್ಮನ್ನು ತಾವು ಗುರುತಿಸಿಕೊಂಡು. ಅವರು ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಟೆಸ್ಟ್ ಸ್ವರೂಪದಲ್ಲಿ ಮತ್ತು ಇತರ ಹಲವಾರು ಸಂದರ್ಭಗಳಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ತೋರಿಸಿದರು.

ಒಂದು ದಿನ ಮುಂಚಿತವಾಗಿಯೇ ಶುರುವಾಗಲಿದೆ ಐಪಿಎಲ್ 2022: ಈ 2 ನಗರಗಳಲ್ಲಿ ಪಂದ್ಯಗಳ ಆಯೋಜನೆ

ರಾಹುಲ್- ಪಂತ್ 7 ಕೋಟಿ ಪಡೆಯುವುದರಲ್ಲಿ ಅನುಮಾನವಿಲ್ಲ!

ರಾಹುಲ್- ಪಂತ್ 7 ಕೋಟಿ ಪಡೆಯುವುದರಲ್ಲಿ ಅನುಮಾನವಿಲ್ಲ!

"ನಿಸ್ಸಂಶಯವಾಗಿ, ರೋಹಿತ್, ಕೊಹ್ಲಿ ಮತ್ತು ಬುಮ್ರಾ ಅವರು ಮೂರು ಸ್ವರೂಪಗಳಲ್ಲಿ ಅನಿವಾರ್ಯ ಆಟಗಾರರಾಗಿರುವುದರಿಂದ ಎ ಪ್ಲಸ್ ವಿಭಾಗದಲ್ಲಿ ಸಂದೇಹವಿಲ್ಲ. ಆದರೆ ಈಗ ರಾಹುಲ್ ಮತ್ತು ಪಂತ್ ನಿಧಾನವಾಗಿ ಎಲ್ಲಾ ಮಾದರಿಯ ರೆಗ್ಯುಲರ್‌ಗಳಾಗಿ ತಮ್ಮನ್ನು ತಾವು ರೂಪಿಸಿಕೊಂಡಿದ್ದಾರೆ. ಆದ್ದರಿಂದ ಇವರಿಬ್ಬರು ಬಡ್ತಿ ಪಡೆಯುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಬೇಕಾಗಿದೆ'' ಎಂದು ಅನಾಮಧೇಯತೆಯ ಷರತ್ತುಗಳ ಕುರಿತು ಬಿಸಿಸಿಐನ ಹಿರಿಯ ಮೂಲವು ಪಿಟಿಐಗೆ ತಿಳಿಸಿದೆ.

ಐವರು ರಾಷ್ಟ್ರೀಯ ಆಯ್ಕೆಗಾರರು ಮತ್ತು ಮುಖ್ಯ ತರಬೇತುದಾರರೊಂದಿಗೆ ಅಗ್ರ ಮೂರು ಬಿಸಿಸಿಯ ಪದಾಧಿಕಾರಿಗಳು ಬಿಸಿಸಿಐನ ವಾರ್ಷಿಕ ಒಪ್ಪಂದಗಳಲ್ಲಿ ಆಟಗಾರನನ್ನು ಉಳಿಸಿಕೊಳ್ಳುವುದನ್ನು ಸರ್ವಾನುಮತದಿಂದ ನಿರ್ಧರಿಸುತ್ತಾರೆ.

IPLಗೂ ಮುನ್ನ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಆಘಾತ: 14 ಕೋಟಿಗೆ ಹರಾಜಾಗಿದ್ದ ದೀಪಕ್ ಚಹಾರ್‌ಗೆ ಗಾಯ

28 ಆಟಗಾರರು ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆ

28 ಆಟಗಾರರು ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆ

ಪ್ರಸ್ತುತ 28 ಆಟಗಾರರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ. ಆದಾಗ್ಯೂ, ಟೀಂ ಇಂಡಿಯಾದಲ್ಲಿ ಸ್ಥಾನ ಅನಿಶ್ಚಿತವಾಗಿರುವ ಕೆಲವು ಆಟಗಾರರ ಬಗ್ಗೆ ಬಿಸಿಸಿಐ ಅಧಿಕಾರಿಗಳು ಖಂಡಿತವಾಗಿ ಚರ್ಚಿಸುತ್ತಾರೆ. ಇದರಲ್ಲಿ ಇಶಾಂತ್ ಶರ್ಮಾ, ವೃದ್ದಿಮಾನ್ ಸಾಹಾ ಸೇರಿದಂತೆ ಕೆಲ ಆಟಗಾರರ ಕುರಿತು ಕಠಿಣ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

2021ರ ಆಟಗಾರರ ಕಾಂಟ್ರಾಕ್ಟ್‌ ಲಿಸ್ಟ್

2021ರ ಆಟಗಾರರ ಕಾಂಟ್ರಾಕ್ಟ್‌ ಲಿಸ್ಟ್

ಗ್ರೇಡ್ A+ (7 ಕೋಟಿ ರೂ.): ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ

ಗ್ರೇಡ್ A (5 ಕೋಟಿ ರೂ.): ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಚೇತೇಶ್ವರ ಪೂಜಾರ, ಶಿಖರ್ ಧವನ್, ಕೆಎಲ್ ರಾಹುಲ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ರವಿಚಂದ್ರನ್ ಅಶ್ವಿನ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ

ಗ್ರೇಡ್ B (3 ಕೋಟಿ ರೂ.): ಮಯಾಂಕ್ ಅಗರ್ವಾಲ್, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್, ವೃದ್ಧಿಮಾನ್ ಸಹಾ, ಶಾರ್ದೂಲ್ ಠಾಕೂರ್

ಗ್ರೇಡ್ C (1 ಕೋಟಿ ರೂ.): ನವದೀಪ್ ಸೈನಿ, ಯುಜವೇಂದ್ರ ಚಹಾಲ್, ದೀಪಕ್ ಚಾಹರ್, ಕುಲ್‌ದೀಪ್ ಯಾದವ್, ಶುಭಮನ್ ಗಿಲ್, ಹನುಮ ವಿಹಾರಿ, ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್.

ಐಪಿಎಲ್ ಯಾವಾಗ ಶುರು ಆಗತ್ತೆ ಗೊತ್ತಾ! | Oneindia Kannada

Story first published: Monday, February 21, 2022, 17:50 [IST]
Other articles published on Feb 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X