ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ಇದೇ ಮೊದಲ ಬಾರಿಗೆ ಬೇರೆ ಫ್ರಾಂಚೈಸಿ ಪರ ಕಣಕ್ಕಿಳಿಯಲಿದ್ದಾರೆ ಈ ಐವರು ಖ್ಯಾತ ಕ್ರಿಕೆಟಿಗರು

5 cricketers who are going to play for a different IPL team for the first time

ಎಲ್ಲಾ ಯೋಜನೆಗಳಂತೆ ನಡೆದರೆ ಮುಂಬರುವ ಮಾರ್ಚ್ 26ರಿಂದ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಭಾರತ ನೆಲದಲ್ಲಿಯೇ ಆರಂಭಗೊಳ್ಳಲಿದೆ. ಹೌದು, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಸಂಪೂರ್ಣವಾಗಿ ಭಾರತದಲ್ಲಿಯೇ ನಡೆಸಲು ಬಿಸಿಸಿಐ ತೀರ್ಮಾನಿಸಿದ್ದು, ಲೀಗ್ ಹಂತದ ಪಂದ್ಯಗಳು ಮುಂಬೈ ಹಾಗೂ ಪುಣೆ ನಗರದ ಕ್ರೀಡಾಂಗಣಗಳಲ್ಲಿ ನಡೆಯಲಿದ್ದು, ಎಲ್ಲವೂ ಯೋಜನೆಗಳ ಪ್ರಕಾರವೇ ನಡೆದರೆ ಪ್ಲೇ ಆಫ್ ಸುತ್ತಿನ ಪಂದ್ಯಗಳು ಅಹಮದಾಬಾದ್ ನಗರದ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿವೆ ಎನ್ನಲಾಗುತ್ತಿದೆ.

ಒಂದು ದಿನ ಮುಂಚಿತವಾಗಿಯೇ ಶುರುವಾಗಲಿದೆ ಐಪಿಎಲ್ 2022: ಈ 2 ನಗರಗಳಲ್ಲಿ ಪಂದ್ಯಗಳ ಆಯೋಜನೆಒಂದು ದಿನ ಮುಂಚಿತವಾಗಿಯೇ ಶುರುವಾಗಲಿದೆ ಐಪಿಎಲ್ 2022: ಈ 2 ನಗರಗಳಲ್ಲಿ ಪಂದ್ಯಗಳ ಆಯೋಜನೆ

ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸಾಕಷ್ಟು ವಿಶೇಷತೆಗಳಿಂದ ಕೂಡಿರಲಿದ್ದು, ಟ್ರೋಫಿಗಾಗಿ ಒಟ್ಟು 10 ತಂಡಗಳ ನಡುವೆ ಸೆಣಸಾಟ ನಡೆಯಲಿದೆ. ಹೀಗೆ ಈ ಬಾರಿ ನೂತನ ತಂಡಗಳ ಆಗಮನವಾಗಿರುವುದರಿಂದ ಟೂರ್ನಿ ಆರಂಭಕ್ಕೂ ಮುನ್ನವೇ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆದಿದೆ. ಹೌದು, ಇದೇ ತಿಂಗಳ 12 ಹಾಗೂ 13ರಂದು ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಪ್ರಕ್ರಿಯೆ ನಡೆದಿದ್ದು, ಈ ಹರಾಜಿನಲ್ಲಿ ಒಟ್ಟು 590 ಆಟಗಾರರು ಭಾಗವಹಿಸಿದ್ದು, 203 ಆಟಗಾರರು ಯಶಸ್ವಿಯಾಗಿ ಬಿಕರಿಯಾಗಿದ್ದಾರೆ. ಹೀಗೆ ಯಶಸ್ವಿಯಾಗಿ ಹರಾಜಾದ ಆಟಗಾರರ ಪೈಕಿ 66 ವಿದೇಶಿ ಆಟಗಾರರಿದ್ದರೆ, ಇನ್ನುಳಿದ 137 ಆಟಗಾರರು ಭಾರತೀಯರಾಗಿದ್ದಾರೆ. ಇನ್ನು ಈ ಆಟಗಾರರನ್ನು ಖರೀದಿಸಲು ಎಲ್ಲಾ 10 ಫ್ರಾಂಚೈಸಿಗಳು ಖರ್ಚು ಮಾಡಿರುವ ಒಟ್ಟು ಮೊತ್ತ 551.7 ಕೋಟಿ ರೂಪಾಯಿಗಳು. ಅಷ್ಟೇ ಅಲ್ಲದೆ ಇದಕ್ಕೂ ಮುನ್ನ ನಡೆದ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಫ್ರಾಂಚೈಸಿಗಳು 33 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು 324.2 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದವು.

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕನ್ನಡತಿ ವನಿತಾ ವಿ ಆರ್ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕನ್ನಡತಿ ವನಿತಾ ವಿ ಆರ್

ಹೀಗೆ ನಡೆದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ತಮ್ಮ ತಂಡಗಳ ಪರ ಈ ಹಿಂದಿನ ಆವೃತ್ತಿಗಳಲ್ಲಿ ಆಡಿದ್ದ ಆಟಗಾರರನ್ನು ಕೆಲ ಫ್ರಾಂಚೈಸಿಗಳು ಮತ್ತೆ ಖರೀದಿಸುವಲ್ಲಿ ಯಶಸ್ವಿಯಾದರೆ, ಇನ್ನೂ ಹಲವಾರು ಪ್ರಮುಖ ಆಟಗಾರರನ್ನು ಫ್ರಾಂಚೈಸಿಗಳು ಮತ್ತೆ ತಮ್ಮ ತಂಡಕ್ಕೆ ಖರೀದಿಸುವಲ್ಲಿ ವಿಫಲವಾಗಿವೆ. ಹೀಗೆ ತಾವು ಐಪಿಎಲ್ ಆಡಲು ಆರಂಭಿಸಿದಾಗಿನಿಂದ ಇಲ್ಲಿಯವರೆಗೂ ಒಂದೇ ತಂಡದ ಪರ ಆಟವನ್ನಾಡಿದ್ದ ಈ ಕೆಳಕಂಡ ಐವರು ಪ್ರಮುಖ ಆಟಗಾರರು ಇದೇ ಮೊದಲ ಬಾರಿಗೆ ಬೇರೆ ತಂಡದ ಪರ ಕಣಕ್ಕಿಳಿದು ಆಟವನ್ನು ‌ಅಡಲಿದ್ದಾರೆ.

1. ಹಾರ್ದಿಕ್ ಪಾಂಡ್ಯ

1. ಹಾರ್ದಿಕ್ ಪಾಂಡ್ಯ

2015ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೇರಿದ್ದ ಬರೋಡಾ ಮೂಲದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅಂದಿನಿಂದ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯವರೆಗೂ ಮುಂಬೈ ಇಂಡಿಯನ್ಸ್ ತಂಡದ ಪರವೇ ಕಣಕ್ಕಿಳಿದಿದ್ದಾರೆ. ಆದರೆ ಕಳೆದ ಬಾರಿಯ ರಿಟೆನ್ಷನ್ ಪ್ರಕ್ರಿಯೆಯಲ್ಲಿ ತಂಡದಿಂದ ಹೊರಬಿದ್ದ ಹಾರ್ದಿಕ್ ಪಾಂಡ್ಯ 15 ಕೋಟಿಗೆ ನೂತನ ಫ್ರಾಂಚೈಸಿಯಾದ ಗುಜರಾತ್ ಟೈಟಾನ್ಸ್ ತಂಡ ಸೇರಿದ್ದು, ಇದೇ ಮೊದಲ ಬಾರಿಗೆ ಬೇರೊಂದು ಐಪಿಎಲ್ ತಂಡದ ಪರ ಕಣಕ್ಕಿಳಿಯಲಿದ್ದಾರೆ.

2. ರಶೀದ್ ಖಾನ್

2. ರಶೀದ್ ಖಾನ್

ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರಶೀದ್ ಖಾನ್ 76 ಐಪಿಎಲ್ ಪಂದ್ಯಗಳನ್ನಾಡಿದ್ದು 93 ವಿಕೆಟ್‍ಗಳನ್ನು ಪಡೆದಿದ್ದಾರೆ. 2017ರ ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಸೇರಿದ್ದ ರಶೀದ್ ಖಾನ್ ಕಳೆದ ಆವೃತ್ತಿಯವರೆಗೂ ಕೂಡ ಅದೇ ತಂಡದ ಪರ ಆಟವನ್ನು ಆಡಿದ್ದಾರೆ. ಆದರೆ ರಿಟೆನ್ಷನ್ ವೇಳೆ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯಿಂದ ಹೊರಬಿದ್ದ ರಶೀದ್ ಖಾನ್ ಇದೀಗ ಗುಜರಾತ್ ಟೈಟಾನ್ಸ್ ತಂಡ ಸೇರಿದ್ದು ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೇರೊಂದು ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ.

3. ಶ್ರೇಯಸ್ ಅಯ್ಯರ್

3. ಶ್ರೇಯಸ್ ಅಯ್ಯರ್

2015ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 2.6 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದ ಶ್ರೇಯಸ್ ಅಯ್ಯರ್ ಕಳೆದ ಆವೃತ್ತಿಯವರೆಗೂ ಕೂಡ ಅದೇ ತಂಡದ ಪರ ಆಟವಾಡಿದ್ದಾರೆ. ಹೀಗೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸದಸ್ಯನಾದ ಶ್ರೇಯಸ್ ಅಯ್ಯರ್ ತನ್ನ ಉತ್ತಮ ಪ್ರದರ್ಶನದಿಂದ ನಂತರದ ದಿನಗಳಲ್ಲಿ ನಾಯಕನಾಗಿಯೂ ಕೂಡ ತಂಡವನ್ನು ಮುನ್ನಡೆಸಿದ್ದರು. ಆದರೆ ಕಳೆದ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಫ್ರಾಂಚೈಸಿಯಿಂದ ಹೊರಬಿದ್ದ ಶ್ರೇಯಸ್ ಅಯ್ಯರ್ ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪಾಲಾಗಿದ್ದಾರೆ. ಈ ಮೂಲಕ ಶ್ರೇಯಸ್ ಅಯ್ಯರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಹೊರತುಪಡಿಸಿ ಬೇರೊಂದು ಐಪಿಎಲ್ ತಂಡವೊಂದರ ಜೆರ್ಸಿಯಲ್ಲಿ ಇದೇ ಮೊದಲ ಬಾರಿಗೆ ಕ್ರಿಕೆಟ್ ಪ್ರೇಕ್ಷಕರು ನೋಡಲಿದ್ದಾರೆ.

4. ಕೃನಾಲ್ ಪಾಂಡ್ಯಾ

4. ಕೃನಾಲ್ ಪಾಂಡ್ಯಾ

2016ರ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಿಂದ ಕಳೆದ ಆವೃತ್ತಿಯವರೆಗೂ ಮುಂಬೈ ಇಂಡಿಯನ್ಸ್ ಸದಸ್ಯನಾಗಿದ್ದ ಕೃನಾಲ್ ಪಾಂಡ್ಯ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ನೂತನ ಫ್ರಾಂಚೈಸಿಯಾದ ಲಕ್ನೋ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿಯಲಿದ್ದಾರೆ. 8.25 ಕೋಟಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೇರಿರುವ ಕೃನಾಲ್ ಪಾಂಡ್ಯ ಇದೇ ಮೊದಲ ಬಾರಿಗೆ ಮುಂಬೈ ಇಂಡಿಯನ್ಸ್ ಹೊರತುಪಡಿಸಿ ಬೇರೊಂದು ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ.

ಐಪಿಎಲ್ ಯಾವಾಗ ಶುರು ಆಗತ್ತೆ ಗೊತ್ತಾ! | Oneindia Kannada
5. ಶುಬ್ ಮನ್ ಗಿಲ್

5. ಶುಬ್ ಮನ್ ಗಿಲ್

ಅಂಡರ್ 19 ಕ್ರಿಕೆಟ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಶುಬ್ ಮನ್ ಗಿಲ್ ಅವರನ್ನು 2018ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 1.8 ಕೋಟಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಖರೀದಿ ಮಾಡಿತ್ತು. ಆಗಿನಿಂದ ಕಳೆದ ಬಾರಿಯ ಐಪಿಎಲ್ ಆವೃತ್ತಿಯವರೆಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವೇ ಕಣಕ್ಕಿಳಿದಿದ್ದ ಶುಬ್ ಮನ್ ಗಿಲ್ ಇದೀಗ ಗುಜರಾತ್ ಟೈಟಾನ್ಸ್ ತಂಡದ ಪಾಲಾಗಿದ್ದಾರೆ. ಹೌದು, ರಿಟೆನ್ಷನ್ ಪ್ರಕ್ರಿಯೆಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯಿಂದ ಹೊರಬಿದ್ದ ಶುಬ್ ಮನ್ ಗಿಲ್ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ಜೆರ್ಸಿ ತೊಟ್ಟು ಆಡಲಿದ್ದು ಇದೇ ಮೊದಲ ಬಾರಿಗೆ ಬೇರೊಂದು ತಂಡವನ್ನು ಪ್ರತಿನಿಧಿಸಲಿದ್ದಾರೆ.

Story first published: Tuesday, February 22, 2022, 10:06 [IST]
Other articles published on Feb 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X