ಯೋಗರಾಜ್ ಸಿಂಗ್ ಕ್ಯಾಂಪ್‌ನಲ್ಲಿ ಅರ್ಜುನ್ ತೆಂಡೂಲ್ಕರ್‌ಗೆ ಟ್ರೈನಿಂಗ್
ಅರ್ಜುನ್ ತೆಂಡೂಲ್ಕರ್ ಅವರು ತಮ್ಮ ಬ್ಯಾಟಿಂಗ್ ಕೌಶಲ್ಯವನ್ನು ಸುಧಾರಿಸಲು ಮತ್ತು ಅವರ ವೃತ್ತಿಜೀವನವನ್ನು ಪುನರುಜ್ಜೀವನಗೊಳಿಸಲು ಚಂಡೀಗಢದಲ್ಲಿರುವ ಯೋಗರಾಜ್ ಸಿಂಗ್ (ಯುವರಾಜ್ ಸಿಂಗ್ ಅವರ ತಂದೆ) ಅವರ ಡಿಎವಿ ಕಾಲೇಜಿನಲ್ಲಿ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಅರ್ಜುನ್ ತೆಂಡೂಲ್ಕರ್ ರಣಜಿ ಟೂರ್ನಮೆಂಟ್‌ನಲ್ಲಿ ಆಡಲು ಅವಕಾಶಕ್ಕಾಗಿ ಇನ್ನೂ ಎದುರು ನೋಡುತ್ತಿದ್ದಾರೆ. ಇದುವರೆಗೆ ಮುಂಬೈ ಪರ 2020/21ರ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಮೆಂಟ್‌ನಲ್ಲಿ ಎರಡು ಟಿ20 ಪಂದ್ಯಗಳನ್ನ ಮಾತ್ರ ಆಡಿದ್ದಾರೆ.
ದುಲೀಪ್ ಟ್ರೋಫಿ ಫೈನಲ್: ಯಶಸ್ವಿ ಜೈಸ್ವಾಲ್ ಅಮೋಘ ದ್ವಿಶತಕ; ವೆಸ್ಟ್ ಝೋನ್ ಹಿಡಿತದಲ್ಲಿ ಪಂದ್ಯ

ಗೋವಾ ತಂಡವನ್ನ ಸೇರಿಕೊಂಡ ಅರ್ಜುನ್ ಕುರಿತು ಸಚಿನ್ ಏನು ಹೇಳಿದ್ದಾರೆ?
ಇನ್ನು ಅರ್ಜುನ್ ಪ್ರದರ್ಶನ ಕುರಿತು ಮಾತನಾಡಿರುವ ಸಚಿನ್ '' ಅರ್ಜುನ್ ತನ್ನ ಆಟದ ಕುರಿತು ಹೆಚ್ಚು ಗಮನ ಹರಿಸಬೇಕೆ ಹೊರತು, ಆಯ್ಕೆಯಾಗುತ್ತೇನೆಯೇ ಅಥವಾ ಇಲ್ಲವೋ ಎಂಬುದರ ಕುರಿತು ಅಲ್ಲ. ನಾನು ಸೆಲೆಕ್ಷನ್ ವಿಚಾರದಲ್ಲಿ ಎಂಟ್ರಿಯಾಗುವುದಿಲ್ಲ, ಅದು ಸಂಪೂರ್ಣ ಮ್ಯಾನೇಜ್‌ಮೆಂಟ್‌ಗೆ ಬಿಟ್ಟ ವಿಚಾರ'' ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದರು!
ಐಪಿಎಲ್ 2022ರ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ತಂಡವು ದಯನೀಯವಾಗಿ ಸೋತಿದ್ದು, ಸತತ ಎಂಟು ಪಂದ್ಯಗಳಲ್ಲಿ ಸೋಲನುಭವಿಸಿತು. ಈ ಸಂದರ್ಭದಲ್ಲಿ ಅರ್ಜುನ್‌ಗೆ ಅವಕಾಶ ನೀಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಮುಂಬೈ ಮ್ಯಾನೇಜ್‌ಮೆಂಟ್ ಒಂದೇ ಒಂದು ಪಂದ್ಯದಲ್ಲಿ ಅವರನ್ನು ಖುಷಿಪಡಿಸಲಿಲ್ಲ. ಇದರ ಬಳಿಕ ಮುಂಬೈ ರಣಜಿ ತಂಡದಲ್ಲಿ ಸರ್ಫರಾಜ್ ಖಾನ್ ಮತ್ತು ಅವರ ಸಹೋದರ ಮುಶೀರ್ ಸ್ಥಾನ ಪಡೆದರು. ಕೂಚ್ ಬೆಹರ್ ಟ್ರೋಫಿಯಲ್ಲಿ ಮುಶೀರ್ ಮಿಂಚಿದ್ದರು. ವಾಸಿಂ ಜಾಫರ್ ಅವರ ಅಳಿಯ ಅರ್ಮಾನ್ ಜಾಫರ್ ಅವರಿಗೂ ಅವಕಾಶ ಸಿಕ್ಕಿತು. ಆದ್ರೆ ಅರ್ಜುನ್‌ಗೆ ಮಾತ್ರ ಮುಂಬೈ ತಂಡದಲ್ಲಿ ಅವಕಾಶ ಸಿಗದ ಕಾರಣ ಗೋವಾದತ್ತ ಮುಖಮಾಡಿದರು.


Click it and Unblock the Notifications












