ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹೈದ್ರಾಬಾದ್‌ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಿಕೆಟ್ ಮಾರಾಟದ ಅವ್ಯವಸ್ಥೆ: ಅಜರುದ್ದೀನ್‌ಗೆ ತೆಲಂಗಾಣ ಕ್ರೀಡಾ ಸಚಿವರ ಸಮನ್ಸ್‌

m azharuddin

ಭಾರತ-ಆಸ್ಟ್ರೇಲಿಯಾ ಸರಣಿಯ ಮೂರನೇ ಮತ್ತು ಅಂತಿಮ ಟಿ20 ಅಂತಾರಾಷ್ಟ್ರೀಯ ಪಂದ್ಯ ಭಾನುವಾರ ಹೈದರಾಬಾದ್‌ನ ಉಪ್ಪಲ್‌ನಲ್ಲಿರುವ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಶುಕ್ರವಾರ ನಾಗ್ಪುರದಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲಿ ಭಾರತ ಗೆದ್ದರೆ, ಮೂರನೇ ಪಂದ್ಯವು ಸಾಕಷ್ಟು ಕುತೂಹಲಕ್ಕೆ ಕಾರಣವಾಗುತ್ತದೆ. ಆದ್ರೆ ಮೂರನೇ ಪಂದ್ಯಕ್ಕೆ ಟಿಕೆಟ್ ಮಾರಾಟದ ಸ್ಥಳದ ಅವ್ಯವಸ್ಥೆಯಿಂದ ಸಾಕಷ್ಟು ಜನರು ತೊಂದರೆಗೀಡಾದ ಪರಿಸ್ಥಿತಿ ನಿರ್ಮಾಣವಾಯಿತು. 2019ರ ನಂತರ ಹೈದರಾಬಾದ್‌ನಲ್ಲಿ ಭಾರತದ ಮೊದಲ ಪಂದ್ಯ ಇದಾಗಿದೆ. ಸಹಜವಾಗಿಯೇ ಟಿಕೆಟ್‌ಗಳಿಗಾಗಿ ಬೇಡಿಕೆ ಹೆಚ್ಚಿದ್ದು, ಅದರಿಂದಾಗಿಯೇ ಅವ್ಯವಸ್ಥೆಯ ಪರಿಸ್ಥಿತಿ ನಿರ್ಮಾಣವಾಯಿತು.

ಹೈದ್ರಾಬಾದ್‌ನಲ್ಲಿ ಟಿಕೆಟ್ ಮಾರಾಟದ ಅವ್ಯವಸ್ಥೆ

ಹೈದ್ರಾಬಾದ್‌ನಲ್ಲಿ ಟಿಕೆಟ್ ಮಾರಾಟದ ಅವ್ಯವಸ್ಥೆ

ಭಾರತ-ಆಸ್ಟ್ರೇಲಿಯಾ ಮೂರನೇ ಟಿ20 ಪಂದ್ಯದ ಟಿಕೆಟ್‌ಗಳನ್ನು ಜಿಮ್ಖಾನಾ ಮೈದಾನದಿಂದ ಮಾರಾಟ ಮಾಡಲಾಗುತ್ತಿತ್ತು. 1003 ಟಿಕೆಟ್‌ಗಾಗಿ ಕ್ರಿಕೆಟ್ ಪ್ರೇಮಿಗಳು ರಾತ್ರಿಯಿಂದಲೇ ಕಾಯುತ್ತಿದ್ದರು. ಸಂಖ್ಯೆ ಸುಮಾರು 30 ಸಾವಿರದಷ್ಟಿತ್ತು. ಮಳೆಯ ನಡುವೆಯೂ ಸರತಿ ಸಾಲಿನಲ್ಲಿ ಅಭಿಮಾನಿಗಳು ನಿಂತಿದ್ದರು. ಆದ್ರೆ ಗುರುವಾರ ಬೆಳಗ್ಗೆ ಎರಡು ಕೌಂಟರ್ ಮಾತ್ರ ತೆರೆಯಲಾಗಿತ್ತು. ಸಾಕಷ್ಟು ಟಿಕೆಟ್ ಸಿಗದ ಕಾರಣ ತಾಳ್ಮೆಯ ಕಟ್ಟೆ ಒಡೆದಿದೆ. ಆಕ್ರೋಶ ಹೆಚ್ಚುತ್ತಿದ್ದಂತೆಯೇ ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಲು ಮುಂದಾದರು. ಇದು ಕಾಲ್ತುಳಿದಂತಹ ಪರಿಸ್ಥಿತಿಯನ್ನು ಸೃಷ್ಟಿಸಿದೆ. ವಿವಿಧ ಮಾಧ್ಯಮ ಮೂಲಗಳ ಪ್ರಕಾರ, ಕನಿಷ್ಠ 20 ಜನರು ಗಾಯಗೊಂಡಿದ್ದು, ಅವರಲ್ಲಿ ಏಳು ಮಂದಿಯ ಸ್ಥಿತಿ ಗಂಭೀರವಾದ ಕಾರಣ ಸಿಕಂದರಾಬಾದ್‌ನ ಆಸ್ಪತ್ರೆಗೆ ದಾಖಲಾಗಬೇಕಾಯಿತು.

3 ಫಾರ್ಮೆಟ್ ಕ್ರಿಕೆಟ್ ಆಡಬಲ್ಲ ಪ್ಲೇಯರ್ ನಾನು, ತಂಡಕ್ಕೆ ವಾಪಸ್ಸಾಗಲು ರೆಡಿಯಿದ್ದೇನೆ: ಶಾರ್ದೂಲ್ ಠಾಕೂರ್

ಟಿಕೆಟ್ ಸಿಗದೆ ಆಕ್ರೋಶಗೊಂಡ ಅಭಿಮಾನಿಗಳು

ಮಧ್ಯಾಹ್ನದ ವೇಳೆಗೆ, ಟಿಕೆಟ್‌ಗಳು ಮಾರಾಟವಾಗಿವೆ ಎಂದು ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಘೋಷಿಸಿತು. ಇದರಿಂದಾಗಿ ಕ್ರಿಕೆಟ್ ಪ್ರೇಮಿಗಳು ಸಾಕಷ್ಟು ಹತಾಶೆಗೊಂಡರು. ಬೆಳಗ್ಗೆಯಿಂದಲೇ ಮಕ್ಕಳೊಂದಿಗೆ ಮಹಿಳೆಯರೂ ಟಿಕೆಟ್ ಸರದಿಯಲ್ಲಿ ಕಾಣಿಸಿಕೊಂಡರು. ಬೆಳಗ್ಗೆ 10 ಗಂಟೆಗೆ ಕೌಂಟರ್ ತೆರೆಯಲಾಗಿದೆ ಎಂದು ಆರೋಪಿಸಿದರು. ಅಂದಿನಿಂದ ಒಂದೆರಡು ಗಂಟೆ ಕಳೆದರೂ ಬಹುಶಃ 100 ಟಿಕೆಟ್‌ಗಳೂ ಮಾರಾಟವಾಗಿಲ್ಲ.

ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ​​ವೈಫಲ್ಯದಿಂದ ಇಂತಹ ಅಹಿತಕರ ಪರಿಸ್ಥಿತಿ ಎದುರಾಗಿದೆ ಎಂಬುದು ಕ್ರಿಕೆಟ್ ಪ್ರೇಮಿಗಳ ದೂರಿದ್ದಾರೆ. ಆನ್ ಲೈನ್ ನಲ್ಲಿ ಟಿಕೆಟ್ ಮಾರಾಟಕ್ಕೆ ಒತ್ತು ನೀಡಿದ್ದರೆ ಹೀಗಾಗುತ್ತಿರಲಿಲ್ಲ. ಎಲ್ಲರೂ ಟಿಕೆಟ್ ಖರೀದಿಸಲು ಬಂದರು. ಆದರೆ ಅವರು ಎದುರಿಸಬೇಕಾದ ಅನುಭವ ಅನಿರೀಕ್ಷಿತವಾಗಿತ್ತು ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

IND vs AUS: ಟಿಕೆಟ್‌ಗಾಗಿ ಕಾಲ್ತುಳಿತ; ಹೈದರಾಬಾದ್ ಕ್ರಿಕೆಟ್ ಸಂಸ್ಥೆ ವಿರುದ್ಧ FIR ದಾಖಲು

ಮೂರು ವರ್ಷಗಳ ಬಳಿಕ ಹೈದ್ರಾಬಾದ್‌ನಲ್ಲಿ ಅಂತರಾಷ್ಟ್ರೀಯ ಪಂದ್ಯ

ಮೂರು ವರ್ಷಗಳ ಬಳಿಕ ಹೈದ್ರಾಬಾದ್‌ನಲ್ಲಿ ಅಂತರಾಷ್ಟ್ರೀಯ ಪಂದ್ಯ

ಉಪ್ಪಳದ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಎರಡನೇ ಬಾರಿಗೆ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಿದೆ. 2017ರಲ್ಲಿ ಭಾರತ-ಆಸ್ಟ್ರೇಲಿಯಾ ಟಿ20 ಅಂತಾರಾಷ್ಟ್ರೀಯ ಪಂದ್ಯ ಮಳೆಯಿಂದ ಕೊಚ್ಚಿ ಹೋಗಿತ್ತು, ಆ ಪಂದ್ಯದಲ್ಲಿ ಟಾಸ್ ಕೂಡ ಪೂರ್ಣಗೊಂಡಿರಲಿಲ್ಲ. ನಂತರ 2019 ರ ಡಿಸೆಂಬರ್‌ನಲ್ಲಿ ಭಾರತ ಇಲ್ಲಿ ವೆಸ್ಟ್ ಇಂಡೀಸ್ ಅನ್ನು 6 ವಿಕೆಟ್‌ಗಳಿಂದ ಸೋಲಿಸಿತು. ವಿಶ್ವ ಚಾಂಪಿಯನ್ನರ ವಿರುದ್ಧ ರೋಹಿತ್ ಅವರ ಆಟವನ್ನು ನೋಡಲು ಕ್ರಿಕೆಟ್ ಪ್ರೇಮಿಗಳು ಎದುರು ನೋಡುತ್ತಿದ್ದಾರೆ. ಆದ್ರೆ ಅದಕ್ಕೂ ಮುನ್ನ ನಡೆದ ಈ ಘಟನೆಯಿಂದಾಗಿ ತೆಲಂಗಾಣ ರಾಜ್ಯ ಕ್ರೀಡಾ ಸಚಿವ ವಿ. ಶ್ರೀನಿವಾಸ್ ಗೌದ್ ಅಜರುದ್ದೀನ್‌ಗೆ ಸಮನ್ಸ್‌ ನೀಡಿ ವಿಚಾರಿಸಿದ್ದಾರೆ.

Story first published: Friday, September 23, 2022, 17:56 [IST]
Other articles published on Sep 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X