
ಚೇತನ್ ಶರ್ಮಾ ಓವರ್‌ನ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿದರು!
ಈ ಹಿಂದೆ ಉಭಯ ದೇಶಗಳ ನಡುವೆ ಹಲವು ಸ್ಮರಣೀಯ ಪಂದ್ಯಗಳು ನಡೆದಿದ್ದು, ಅದರಲ್ಲಿ ವಾಸಿಂ ಅಕ್ರಮ್ ಭಾಗವಾಗಿದ್ದಾರೆ. ಪಾಕಿಸ್ತಾನದ ಲೆಜೆಂಡರಿ ಬೌಲರ್ ವಾಸಿಂ ಅಕ್ರಂ 1986 ರಲ್ಲಿ ಏಷ್ಯಾಕಪ್‌ನ ಫೈನಲ್‌ನಲ್ಲಿ ಭಾರತದ ವಿರುದ್ಧ ಒಂದು ವಿಕೆಟ್‌ನಿಂದ ನಾಟಕೀಯ ಗೆಲುವು ಸಾಧಿಸಿದಾಗ ಅಂತಹ ಹೋರಾಟವನ್ನು ನೆನಪಿಸಿಕೊಂಡರು. ಪಾಕಿಸ್ತಾನದ ದಿಗ್ಗಜ ಬ್ಯಾಟ್ಸ್‌ಮನ್ ಜಾವೇದ್ ಮಿಯಾಂದಾದ್ ಕೊನೆಯ ಎಸೆತದಲ್ಲಿ ಚೇತನ್ ಶರ್ಮಾ ಬೌಲಿಂಗ್‌ನಲ್ಲಿ ಗೆಲುವಿಗೆ ನಾಲ್ಕು ರನ್‌ಗಳ ಅಗತ್ಯವಿದ್ದಾಗ ಸಿಕ್ಸರ್ ಬಾರಿಸಿದ ಘಟನೆಯನ್ನ ಮೆಲುಕು ಹಾಕಿದ್ದಾರೆ.
2016ರ ಏಷ್ಯಾಕಪ್‌ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿ ಹೇಗಿತ್ತು? ಒಂದು ಸಿಕ್ಸರ್ ಸಿಡಿಸದೆ ಭಾರತ ಪಂದ್ಯ ಗೆದ್ದಿದ್ದೇಗೆ?

ಡ್ರೆಸ್ಸಿಂಗ್ ರೂಂನಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದ ಯುವ ಆಟಗಾರರು
ಇತ್ತೀಚೆಗೆ, ಅಕ್ರಂ ಭಾರತದ ನಾಯಕ ಕಪಿಲ್ ದೇವ್ ಅವರೊಂದಿಗಿನ ಸಂಭಾಷಣೆಯಲ್ಲಿ ಪಾಕಿಸ್ತಾನದ ಡ್ರೆಸ್ಸಿಂಗ್ ರೂಂನಲ್ಲಿ ಪಂದ್ಯದ ಕೊನೆಯ ಕೆಲವು ಓವರ್‌ಗಳಲ್ಲಿ ಎಷ್ಟರ ಮಟ್ಟಿಗೆ ಉದ್ವಿಗ್ನತೆ ಇತ್ತು ಮತ್ತು ಪಂದ್ಯದ ಅಂತ್ಯದಲ್ಲಿ ಪಾಕ್ ತಂಡದ ಇಬ್ಬರು ಯುವ ಕ್ರಿಕೆಟಿಗರಾದ ಜಾಕಿರ್ ಖಾನ್ ಮತ್ತು ಮೊಹ್ಸಿನ್ ಕಮಾಲ್ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿದರು ಎಂದು ಬಹಿರಂಗಪಡಿಸಿದರು.
"ನಾನು ರನ್ ಔಟ್ ಆಗಿದ್ದು ನನಗೆ ನೆನಪಿದೆ. ತೌಸೀಫ್ ಅಹ್ಮದ್ ತ್ವರಿತ ಸಿಂಗಲ್ ತೆಗೆದುಕೊಂಡರು ಮತ್ತು ನಂತರ ಮಿಯಾಂದಾದ್ ಮಾಡಿದರು. ಆಗ ನಾನು ಚಿಕ್ಕವನಾಗಿದ್ದೆ, ಮತ್ತು ನನ್ನೊಂದಿಗೆ ಜಾಕಿರ್ ಖಾನ್ ಮತ್ತು ಮೊಹ್ಸಿನ್ ಕಮಲ್ ಇಬ್ಬರೂ ಯುವಕರು ಇದ್ದರು. ಅವರಿಬ್ಬರೂ ಪಂದ್ಯದಲ್ಲಿ ಆಡದಿದ್ದರೂ ಸಹ ಕೊನೆಯ ಓವರ್‌ನ ಉದ್ವಿಗ್ನತೆಗೆ ಅವರು ನಿಲ್ಲಿಸದೆ ಅಳುತ್ತಿದ್ದರು. ನಾನು ಅವರನ್ನು ಕೇಳಿದೆ, "ತುಮ್ ರೋ ಕ್ಯೂನ್ ರಹೇ ಹೋ ಭಾಯಿ?" (ನೀವು ಯಾಕೆ ಅಳುತ್ತಿದ್ದಿರಿ?)"ಎಂದು ಅಕ್ರಂ ಸ್ಟಾರ್ ಸ್ಪೋರ್ಟ್ಸ್‌ಗೆ ಹೇಳಿದ್ದಾರೆ.
Asia Cup 2022: ಭಾರತ ಮತ್ತು ಪಾಕ್ ನಡುವಿನ ಟಿ20 ಪಂದ್ಯಗಳಲ್ಲಿ ಹೆಚ್ಚು ಗೆದ್ದ ಬಲಿಷ್ಠ ತಂಡ ಯಾವುದು?

ಕಪಿಲ್‌ಗೆ ಇವತ್ತಿಗೂ ಫಲಿತಾಂಶ ನೆನಪಿಸಿಕೊಂಡ್ರೆ ನಿದ್ರೆ ಬರುವುದಿಲ್ಲ
1986ರ ಏಷ್ಯಾಕಪ್ ಫೈನಲ್‌ನಲ್ಲಿ ಜಾವೇದ್ ಮಿಯಾಂದಾದ್ ಕೇವಲ 115 ಎಸೆತಗಳಲ್ಲಿ ಔಟಾಗದೆ 116 ರನ್ ಗಳಿಸುವ ಮೂಲಕ ನೆಲಕಚ್ಚಿ ಆಟವಾಡಿದ ನಂತರ ಭಾರತ ಸೋಲನ್ನ ಕಂಡಿತು.. ಜಾವೇದ್ ಮಿಯಾಂದಾದ್ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವುದರೊಂದಿಗೆ ಪಾಕಿಸ್ತಾನ 246 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತು.
ಪಂದ್ಯದ ಅಂತಿಮ ಎಸೆತದಲ್ಲಿ ಪಾಕಿಸ್ತಾನ ಗೆಲುವಿಗೆ 4 ರನ್‌ಗಳ ಅಗತ್ಯವಿತ್ತು. ಕಪಿಲ್ ದೇವ್ ಅಂತಿಮ ಓವರ್ ಬೌಲ್ ಮಾಡಲು ಚೇತನ್ ಶರ್ಮಾ ಕೈಗೆ ನೀಡಿದರು. ಜಾವೇದ್ ಮಿಯಾಂದಾದ್ ಲಾಂಗ್-ಆನ್ ಸ್ಟ್ಯಾಂಡ್‌ನತ್ತ ಸಿಕ್ಸರ್ ಬಾರಿಸಿದರು. ಪಾಕಿಸ್ತಾನ ರೋಚಕವಾಗಿ ಪಂದ್ಯ ಗೆದ್ದಿದ್ದನ್ನ ನೆನಪಿಸಿಕೊಂಡರೆ ನಮಗೆ ನಿದ್ರೆ ಬರುವುದಿಲ್ಲ ಎಂದು ಕಪಿಲ್ ದೇವ್ ಹೇಳಿದ್ದಾರೆ.
ಅನೇಕ ಕ್ರಿಕೆಟಿಗರು ಈಗಲೂ ಈ ಪಂದ್ಯವನ್ನು ಕ್ಲಾಸಿಕ್ ಎಂದು ನೆನಪಿಸಿಕೊಳ್ಳುತ್ತಾರೆ. ಭಾರತದಲ್ಲಿ ಆ ಪಂದ್ಯದ ಗೆಲುವನ್ನು ಕಸಿದುಕೊಂಡ ಮಿಯಾಂದಾದ್ ಮತ್ತು ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿಕೊಂಡ ಬೌಲರ್ ಚೇತನ್ ಶರ್ಮಾ ನೆನಪಾಗುತ್ತಾರೆ ಎಂದು ವಾಸಿಂ ಅಕ್ರಂ ಹೇಳಿದ್ದಾರೆ.


Click it and Unblock the Notifications












