2016ರ ಏಷ್ಯಾಕಪ್‌ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿ ಹೇಗಿತ್ತು? ಒಂದು ಸಿಕ್ಸರ್ ಸಿಡಿಸದೆ ಭಾರತ ಪಂದ್ಯ ಗೆದ್ದಿದ್ದೇಗೆ?

ಟಿ20 ವಿಶ್ವಕಪ್‌ ಹಿನ್ನಲೆಯಲ್ಲಿ ಪ್ರಸ್ತುತ ಏಷ್ಯಾಕಪ್‌ನಂತೆಯೇ ಮೊದಲ ಬಾರಿಗೆ 2016ರಲ್ಲಿ ಟಿ20 ಫಾರ್ಮೆಟ್‌ನಲ್ಲಿ ಏಷ್ಯಾಕಪ್ ಟೂರ್ನಮೆಂಟ್ ಆಡಿಸಲಾಯಿತು. 2016ರ ಏಷ್ಯಾಕಪ್‌ನಲ್ಲಿ ಭಾರತ ಪಾಕಿಸ್ತಾನವನ್ನು ಸಂಪೂರ್ಣವಾಗಿ ಸೋಲಿಸಿತ್ತು. ಭಾರತದ ಬೌಲಿಂಗ್ ದಾಳಿಗೆ ಪಾಕಿಸ್ತಾನದ ಬ್ಯಾಟಿಂಗ್ ವಿಭಾಗ ತತ್ತರಿಸಿ ಹೋಯಿತು.

ಆ ಸಮಯದಲ್ಲಿ ಆಶಿಶ್ ನೆಹ್ರಾ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಟಿ20ಯಲ್ಲಿ ಅತ್ಯಂತ ಅಪಾಯಕಾರಿ ಜೋಡಿ ಎಂದು ಪರಿಗಣಿಸಲಾಗಿತ್ತು. ಆದರೆ ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅದ್ಭುತವಾಗಿ ಬೌಲಿಂಗ್ ಮಾಡಿದರು. ಜೊತೆಗೆ ಈ ಪಂದ್ಯದ ವಿಶೇಷತೆ ಅಂದ್ರೆ ಯಾವುದೇ ಸಿಕ್ಸರ್ ದಾಖಲಾಗದ ಏಕೈಕ ಟಿ20 ಅಂತರಾಷ್ಟ್ರೀಯ ಪಂದ್ಯವಾಗಿದೆ.

ಪಾಕಿಸ್ತಾನ ಕೇವಲ 83 ರನ್‌ಗೆ ಆಲೌಟ್‌

ಪಾಕಿಸ್ತಾನ ಕೇವಲ 83 ರನ್‌ಗೆ ಆಲೌಟ್‌

ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಪ್ರಬಲ ಬೌಲಿಂಗ್ ದಾಳಿಗೆ ತರಗುಟ್ಟಿದ ಪಾಕಿಸ್ತಾನ ತಂಡವು ಐಸಿಸಿ ಟೂರ್ನಮೆಂಟ್‌ನಲ್ಲಿ ಅತ್ಯಂತ ಹೀನಾಯವಾಗಿ ಆಲೌಟ್ ಆಗಿದ್ದನ್ನ ಕಾಣಬಹುದು.
ಹಾರ್ದಿಕ್ ತನ್ನ ವೇಗದ ಬೌಲಿಂಗ್‌ನಿಂದ ಪಾಕಿಸ್ತಾನವನ್ನು ಮಂಡಿಯೂರುವಂತೆ ಮಾಡಿದರು. ಹಾರ್ದಿಕ್ 3.3 ಓವರ್‌ಗಳಲ್ಲಿ 3 ವಿಕೆಟ್ ಪಡೆದರು. ಪಾಕಿಸ್ತಾನಕ್ಕೆ ಪೂರ್ಣ 20 ಓವರ್‌ಗಳನ್ನು ಆಡಲು ಸಾಧ್ಯವಾಗಲಿಲ್ಲ. 17.3 ಓವರ್‌ಗಳಲ್ಲಿ 83 ರನ್‌ಗಳಿಗೆ ಪಾಕ್‌ ಆಲೌಟ್‌ ಆಗಿದೆ.

ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಉಮರ್ ಅಕ್ಮಲ್, ಶಾಹಿದ್ ಅಫ್ರಿದಿ ಅವರಂತಹ ಸ್ಫೋಟಕ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದ್ದ ತಂಡ 83ಕ್ಕೆ ಆಲೌಟ್ ಆಗಿದ್ದು ಅಚ್ಚರಿ ಮೂಡಿಸಿತು. ಭಾರತ ವಿರುದ್ಧದ ಟಿ20ಯಲ್ಲಿ ಪಾಕಿಸ್ತಾನದ ಅತ್ಯಂತ ಮುಜುಗರದ ಪ್ರದರ್ಶನ ಇದಾಗಿದೆ. ಪಾಕಿಸ್ತಾನ 83 ರನ್‌ಗಳಿಗೆ ಆಲೌಟ್ ಆದ ಬಳಿಕ, ಭಾರತವು ಕೆಲಕಾಲ ತಡಬಡಾಯಿಸಿತು.

ಹಾರ್ದಿಕ್ 3.3 ಓವರ್‌ಗಳಲ್ಲಿ 3 ವಿಕೆಟ್ ಪಡೆದರು

ಹಾರ್ದಿಕ್ 3.3 ಓವರ್‌ಗಳಲ್ಲಿ 3 ವಿಕೆಟ್ ಪಡೆದರು

ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಪಾಕಿಸ್ತಾನದ ಮೊಹಮ್ಮದ್ ಹಫೀಜ್ ಮತ್ತು ಶರ್ಜೀಲ್ ಖಾನ್ ಇನಿಂಗ್ಸ್ ಆರಂಭಿಸಿದರು. ಆಶಿಶ್ ನೆಹ್ರಾ ಪಂದ್ಯದ ಮೊದಲ ಓವರ್‌ನಲ್ಲಿ ಹಫೀಜ್‌ರನ್ನು 4 ರನ್‌ಗಳಿಗೆ ಔಟ್ ಮಾಡಿದರು. ನಾಲ್ಕನೇ ಓವರ್‌ನಲ್ಲಿ ಜಸ್ಪ್ರೀತ್ ಬುಮ್ರಾ ಶಾರ್ಜೀಲ್ ಖಾನ್ ಅವರನ್ನು 7 ರನ್‌ಗಳಿಗೆ ಪೆವಿಲಿಯನ್‌ಗೆ ಸೇರಿಸಿದರು. ಪಾಕಿಸ್ತಾನ 32 ರನ್ ಗಳಿಸಿದ್ದಾಗ ಖುರ್ರಂ ಮಂಜೂರ್ ರನೌಟ್ ಆದರು.

ಪಾಕಿಸ್ತಾನ 5.5 ಓವರ್‌ಗಳಲ್ಲಿ 32 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತು. ಇದಾದ ನಂತರ ಹಾರ್ದಿಕ್ ಪಾಂಡ್ಯ ಅವರ ಪವಾಡದ ಆಟ ಶುರುವಾಯಿತು. ಅವರು ತಮ್ಮ ಔಟ್‌ಸ್ವಿಂಗರ್‌ನಲ್ಲಿ ಶೋಯೆಬ್ ಮಲಿಕ್ ಅವರನ್ನು ಬಲೆಗೆ ಬೀಳಿಸಿದರು. ಮಲಿಕ್ (4) ಧೋನಿಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಇದಾದ ಬಳಿಕ ಹಾರ್ದಿಕ್ ಮೊಹಮ್ಮದ್ ಸಮಿ ಹಾಗೂ ಮೊಹಮ್ಮದ್ ಅಮೀರ್ ವಿಕೆಟ್ ಪಡೆದರು. 3.3 ಓವರ್‌ಗಳಲ್ಲಿ ಕೇವಲ 8 ರನ್‌ ನೀಡಿ 3 ವಿಕೆಟ್‌ ಪಡೆದರು. ಅದು ಕೂಡ 2.29 ಎಕಾನಮಿ ದರದಲ್ಲಿ ಬೌಲಿಂಗ್ ಮಾಡಿದರು.

ಭಾರತ ತಂಡದ ಹೊಸ ರಣತಂತ್ರ ತಂಡಕ್ಕೆ ನೆರವಾಗಲಿದೆ ಎಂದ ರವಿ ಶಾಸ್ತ್ರಿ

ಟೀಂ ಇಂಡಿಯಾದ ಅದ್ಭುತ ಬೌಲಿಂಗ್ ದಾಳಿ

ಟೀಂ ಇಂಡಿಯಾದ ಅದ್ಭುತ ಬೌಲಿಂಗ್ ದಾಳಿ

ಆಶಿಶ್ ನೆಹ್ರಾ ಮತ್ತು ಜಸ್ಪ್ರೀತ್ ಬುಮ್ರಾ ಅವರ ವೇಗದ ಬೌಲಿಂಗ್‌ನ ಮುಂದೆ ಪಾಕಿಸ್ತಾನಿ ಬ್ಯಾಟ್ಸ್‌ಮನ್‌ಗಳು ಸಂಪೂರ್ಣವಾಗಿ ಅಸಹಾಯಕರಾಗಿದ್ದಾರೆ. ಬುಮ್ರಾ ಮೂರು ಓವರ್‌ಗಳಲ್ಲಿ ಎರಡು ಮೇಡನ್‌ಗಳನ್ನು ಎಸೆದರು. ಅವರು 8 ರನ್‌ಗಳಿಗೆ ಒಂದು ವಿಕೆಟ್ ಪಡೆದರು. ನೆಹ್ರಾ ಮೂರು ಓವರ್‌ಗಳಲ್ಲಿ 20 ರನ್ ನೀಡಿ ಒಂದು ವಿಕೆಟ್ ಪಡೆದರು. ರವೀಂದ್ರ ಜಡೇಜಾ 3 ಓವರ್ ಗಳಲ್ಲಿ 11 ರನ್ ನೀಡಿ 2 ವಿಕೆಟ್ ಪಡೆದರು. ಯುವರಾಜ್ ಸಿಂಗ್ ಒಂದು ವಿಕೆಟ್ ಪಡೆದರು. ಅಶ್ವಿನ್ ಹೊರತುಪಡಿಸಿ ಎಲ್ಲಾ ಭಾರತೀಯ ಬೌಲರ್‌ಗಳು ವಿಕೆಟ್ ಪಡೆದರು. ಮೀರ್‌ಪುರದ ಈ ಪಿಚ್‌ನಲ್ಲಿ ಬ್ಯಾಟಿಂಗ್ ಸುಲಭವಾಗಿರಲಿಲ್ಲ. ವೇಗದ ಬೌಲರ್‌ಗಳು ಪಿಚ್‌ನಿಂದ ಸಾಕಷ್ಟು ಸಹಾಯ ಪಡೆದರು.

Asia cup 2022: ಪಾಕಿಸ್ತಾನ ವಿರುದ್ಧ ವಿಶೇಷ ಬ್ಯಾಟ್‌ನಿಂದ ಆಡಲಿದ್ದಾರೆ ವಿರಾಟ್ ಕೊಹ್ಲಿ!

ಪಾಕಿಸ್ತಾನದ ಪ್ರಬಲ ಬೌಲಿಂಗ್ ದಾಳಿ

ಪಾಕಿಸ್ತಾನದ ಪ್ರಬಲ ಬೌಲಿಂಗ್ ದಾಳಿ

ಒಂದು ಇನ್ನಿಂಗ್ಸ್‌ ಮುಗಿಯುವ ಹೊತ್ತಿಗೆ ಪಿಚ್ ವೇಗದ ಬೌಲರ್ ಗಳಿಗೆ ನೆರವಾಗುತ್ತಿರುವುದು ಸ್ಪಷ್ಟವಾಯಿತು. ಆ ಸಮಯದಲ್ಲಿ ಪಾಕಿಸ್ತಾನವು ಸಮಿ ಮತ್ತು ಅಮೀರ್‌ನಂತಹ ಪ್ರಬಲ ವೇಗದ ಬೌಲರ್‌ಗಳನ್ನು ಹೊಂದಿತ್ತು. ಇಬ್ಬರು ಬೌಲರ್‌ಗಳ ವೇಗವು 150KM/H ಗಿಂತ ಹೆಚ್ಚಿತ್ತು. ಚೆಂಡು ತುಂಬಾ ವೇಗವಾಗಿ ಸ್ವಿಂಗ್ ಆಗುತ್ತಿತ್ತು. ಭಾರತೀಯ ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲಿ ಅಮೀರ್ ರೋಹಿತ್ ಶರ್ಮಾ ಅವರನ್ನು ಶೂನ್ಯಕ್ಕೆ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. ಕೇವಲ ಎರಡು ಎಸೆತಗಳ ನಂತರ ರಹಾನೆ ಅವರ ಇನ್ನಿಂಗ್ಸ್ ಅನ್ನು ಅಮೀರ್ ಕೊನೆಗೊಳಿಸಿದರು. ಅವರಿಗೂ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಎಕ್ಸ್‌ಟ್ರಾಗಳಿಂದ 2 ರನ್ ಗಳಿಸಲಾಯಿತು.

ಮೊದಲ ಓವರ್‌ನಲ್ಲಿ ಭಾರತದ ಸ್ಕೋರ್ 2 ವಿಕೆಟ್‌ಗೆ 2 ರನ್ ಆಗಿತ್ತು. ಅಮೀರ್ ಕೂಡ ಸುರೇಶ್ ರೈನಾ ಅವರನ್ನು ಕೇವಲ 1ರನ್‌ಗೆ ಔಟ್ ಮಾಡಿದ್ದರಿಂದ ಭಾರತಕ್ಕೆ ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. 84 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಭಾರತದ ಸ್ಕೋರ್ 8 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು.

Asia Cup 2022: ಕೊಹ್ಲಿಯ ಸಿಕ್ಸರ್ ಸುರಿಮಳೆ ಕಂಡು ಬೆರಗಾದ ಜಡೇಜಾ, ಚಾಹಲ್; ವಿಡಿಯೋ

ಕಠಿಣ ಪಿಚ್‌ನಲ್ಲಿ 49 ರನ್ ಗಳಿಸಿದ ಕೊಹ್ಲಿ

ಕಠಿಣ ಪಿಚ್‌ನಲ್ಲಿ 49 ರನ್ ಗಳಿಸಿದ ಕೊಹ್ಲಿ

ಈ ಸಂಕಷ್ಟದ ಸಮಯದಲ್ಲಿ ಕೊಹ್ಲಿ ವಿರಾಟ್ ಸ್ಮರಣೀಯ ಇನ್ನಿಂಗ್ಸ್ ಆಡಿದರು. ಅವರು ಅಮೀರ್ ಮತ್ತು ಸಮಿ ಅವರ ಉತ್ಸಾಹವನ್ನು ಕೊನೆಗೊಳಿಸಲು ಆಕ್ರಮಣಕಾರಿ ನೀತಿಯನ್ನು ಅಳವಡಿಸಿಕೊಂಡರು. ವೇಗವಾಗಿ ರನ್ ಗಳಿಸಲು ಪ್ರಾರಂಭಿಸಿದರು. ಬೌಲಿಂಗ್ ಉತ್ತಮ ಗುಣಮಟ್ಟದ್ದಾಗಿದ್ದರಿಂದ ಕೊಹ್ಲಿ ಯಾವುದೇ ಸಿಕ್ಸರ್ ಹೊಡೆತಗಳನ್ನು ಆಡಲು ಪ್ರಯತ್ನಿಸಲಿಲ್ಲ. ಬೌಂಡರಿಗಳ ನೆರವಿನಿಂದ ತಮ್ಮ ಸ್ಕೋರ್ ಹೆಚ್ಚಿಸುತ್ತಲೇ ಇದ್ದರು. ಕೊಹ್ಲಿ 51 ಎಸೆತಗಳಲ್ಲಿ 7 ಬೌಂಡರಿಗಳ ನೆರವಿನಿಂದ 49 ರನ್ ಗಳಿಸಿದರು. ಅವರನ್ನು ಸಾಮಿ ಔಟ್‌ ಮಾಡಿದರು.

76 ರನ್ ಗಳಿಸಿದ್ದಾಗ ವಿರಾಟ್ ಕೊಹ್ಲಿ ವಿಕೆಟ್ ಪತನವಾದಾಗ ಭಾರತ ಗೆಲುವಿನ ಸಮೀಪದಲ್ಲಿತ್ತು. ಈ ಪಂದ್ಯದಲ್ಲಿ, ಯುವರಾಜ್ ಸಿಂಗ್ ಸಂದರ್ಭದ ನಿಕಟತೆಯನ್ನು ಪರಿಗಣಿಸಿ ಅವರ ಮನಸ್ಥಿತಿಗೆ ವಿರುದ್ಧವಾಗಿ ಬ್ಯಾಟ್ ಮಾಡಿದರು. ಅವರು 32 ಎಸೆತಗಳಲ್ಲಿ ಅಜೇಯ 14 ರನ್ ಗಳಿಸಿದರು ಮತ್ತು ಧೋನಿ (7) ಜೊತೆಗೂಡಿ ಗೆಲುವಿನ ಗುರಿ ತಲುಪಿದರು. ಭಾರತ 15.3 ಓವರ್‌ಗಳಲ್ಲಿ 5 ವಿಕೆಟ್‌ಗೆ 85 ರನ್ ಗಳಿಸಿತು.

ಏಷ್ಯಾಕಪ್ 2022: ಈ 8 ಆಟಗಾರರ ನಡುವೆ ಜಿದ್ದಾಜಿದ್ದಿನ ಪೈಪೋಟಿ!

ಪಂದ್ಯದಲ್ಲಿ ಒಂದೇ ಒಂದು ಸಿಕ್ಸರ್ ಸಿಡಿಯಲಿಲ್ಲ

ಪಂದ್ಯದಲ್ಲಿ ಒಂದೇ ಒಂದು ಸಿಕ್ಸರ್ ಸಿಡಿಯಲಿಲ್ಲ

ಟಿ20 ಕ್ರಿಕೆಟ್ ಅಂದಮೇಲೆ ಅಲ್ಲಿ ಸಿಕ್ಸರ್‌ಗಳಿಗೇನು ಕೊರತೆ ಇರೋದಿಲ್ಲ. ಆದರೆ ಏಷ್ಯಾಕಪ್‌ನ ಈ ಪಂದ್ಯದಲ್ಲಿ ಯಾವುದೇ ಸಿಕ್ಸರ್‌ ಬಾರಿಸಲಿಲ್ಲ. ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ಸಿಕ್ಸರ್ ಬಾರಿಸದೇ ಇರುವುದು ಒಟ್ಟು ಐದನೇ ಬಾರಿ. ಶಾಹಿದ್ ಅಫ್ರಿದಿ, ರೋಹಿತ್ ಶರ್ಮಾ ಅವರಂತಹ ಸಿಕ್ಸರ್ ಕಿಂಗ್‌ಗಳು ಈ ಪಂದ್ಯದಲ್ಲಿ ಆಡುತ್ತಿದ್ದರೂ ಸಹ ವಿಫಲರಾದರು. ಹಫೀಜ್, ಅಕ್ಮಲ್ ಕೂಡ ಸಿಕ್ಸರ್ ಬಾರಿಸುವುದರಲ್ಲಿ ಹೆಸರುವಾಸಿಯಾಗಿದ್ದರು ಆದರೆ ಅವರು ಕೇವಲ 4 ಮತ್ತು 3 ರನ್‌ಗಳಿಗೆ ಔಟಾದರು.

ಯುವರಾಜ್ ಸಿಂಗ್ ಅವರಂತಹ ಸಿಕ್ಸರ್ ಮಾಸ್ಟರ್‌ ಅತ್ಯಂತ ರಕ್ಷಣಾತ್ಮಕವಾಗಿ ಬ್ಯಾಟಿಂಗ್ ಮಾಡಿದರು. ಹಾರ್ದಿಕ್ ಪಾಂಡ್ಯ ಶೂನ್ಯಕ್ಕೆ ಔಟಾದ ಕಾರಣ ಅವರಿಗೆ ಯಾವುದೇ ಅವಕಾಶ ಸಿಗಲಿಲ್ಲ. ಅದೇನೇ ಇರಲಿ, ಕೊನೆಗೂ ಭಾರತ ಗೆದ್ದು ಪಾಕಿಸ್ತಾನ ವಿರುದ್ಧ ಗೆದ್ದು ಮುನ್ನಡೆಯಿತು.

For Quick Alerts
ALLOW NOTIFICATIONS
For Daily Alerts
Story first published: Thursday, August 25, 2022, 12:36 [IST]
Other articles published on Aug 25, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X