ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನಕ್ಕೆ ಹೀಗಾ ಬಾರಿಸೋದು?: ಟ್ವಿಟ್ಟರ್‌ನಲ್ಲಿ ಕ್ರಿಕೆಟ್ ಫ್ಯಾನ್ಸ್‌ ಸಂಭ್ರಮ

Asia cup 2018: India vs Pakistan 2nd match twitter reactions

ದುಬೈ, ಸೆಪ್ಟೆಂಬರ್ 24: ಏಷ್ಯಾ ಕಪ್ ಕ್ರಿಕೆಟ್‌ನಲ್ಲಿ ಭಾರತ ಮತ್ತೆ ಪ್ರಾಬಲ್ಯ ಮೆರೆದಿದೆ. ಸಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ಒಂಬತ್ತು ವಿಕೆಟ್‌ಗಳ ಭರ್ಜರಿ ಜಯಗಳಿಸಿದೆ.

ಲೀಗ್‌ನಲ್ಲಿ ಗೆದ್ದು ಬೀಗಿದ್ದ ಭಾರತ, ಎರಡನೆಯ ಪಂದ್ಯದಲ್ಲಿಯೂ ಪಾಕಿಸ್ತಾನವು ತನಗೆ ಸವಾಲೇ ಅಲ್ಲ ಎಂಬಂತೆ ಸದೆಬಡಿಯಿತು.

ಭಾರತದ ಆಟದ ಎದುರು ಪಾಕಿಸ್ತಾನ ಮಂಕಾದಂತೆ ಕಂಡುಬಂದಿತು. ಆರಂಭದಲ್ಲಿ ಬೌಲಿಂಗ್‌ನಲ್ಲಿ ಹಿಡಿತ ಸಾಧಿಸಿದರೆ, ಬಳಿಕ ಆರಂಭಿಕರಾದ ಶಿಖರ್ ಧವನ್ ಮತ್ತು ನಾಯಕ ರೋಹಿತ್ ಶರ್ಮಾ, ಪಾಕ್ ಬೌಲಿಂಗ್ ತಮಗೆ ಸವಾಲೇ ಅಲ್ಲ ಎಂಬಂತೆ ಬ್ಯಾಟ್ ಬೀಸಿದರು.

ಏಷ್ಯಾ ಕಪ್: ಧವನ್-ರೋ'ಹಿಟ್' ಶತಕ, ಪಾಕ್ ವಿರುದ್ಧ ಭಾರತಕ್ಕೆ ಗೆಲುವು ಏಷ್ಯಾ ಕಪ್: ಧವನ್-ರೋ'ಹಿಟ್' ಶತಕ, ಪಾಕ್ ವಿರುದ್ಧ ಭಾರತಕ್ಕೆ ಗೆಲುವು

ಭಾರತದ ಆಟಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರಲ್ಲಿಯೂ ಟ್ವಿಟ್ಟರ್‌ನಲ್ಲಿ ಪಾಕಿಸ್ತಾನವನ್ನು ಲೇವಡಿ ಮಾಡುವ ಅನೇಕ ಟ್ವೀಟ್‌ಗಳು ಪೋಸ್ಟ್ ಆಗಿವೆ. ಹೀಗೆ ವ್ಯಕ್ತವಾದ ಕೆಲವು ಅಭಿಪ್ರಾಯಗಳು ಇಲ್ಲಿವೆ.

ಮಹಾಘಟಬಂಧನ್ ಬೇಕು

ಭಾರತದ ವಿರುದ್ಧ ಗೆಲ್ಲಲು ಪಾಕಿಸ್ತಾನ+ಬಾಂಗ್ಲಾದೇಶ+ಅಫ್ಘಾನಿಸ್ತಾನಗಳು ಮಹಾಘಟಬಂಧನ್ ರಚಿಸಬೇಕಾಗಬಹುದು ಎಂದು ಶ್ರೀಹರ್ಷ ಹೇಳಿದ್ದಾರೆ. ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಎಲ್ಲಾ ವಿರೋಧ ಪಕ್ಷಗಳು ಸೇರಿ ಮಹಾಘಟಬಂಧನ ಮೈತ್ರಿಕೂಟ ನಿರ್ಮಿಸಿದ್ದನ್ನು ಇದಕ್ಕೆ ಹೋಲಿಕೆ ಮಾಡಿದ್ದಾರೆ.

ಇತಿಹಾಸ : ಧೋನಿ ರುಂಡ ಹಿಡಿದ ಬಾಂಗ್ಲಾ ಹುಲಿಗಳು ಇಲಿಗಳಾಗಿದ್ದು!

ಸಮಗ್ರ ಪ್ರದರ್ಶನ

ಮತ್ತೊಂದು ಸಮಗ್ರ ಪ್ರದರ್ಶನ ನೀಡಿದ ಭಾರತ ತಂಡಕ್ಕೆ ಅಭಿನಂದನೆಗಳು. ಪಾಕಿಸ್ತಾನವನ್ನು 237 ರನ್‌ಗಳಿಗೆ ನಿಯಂತ್ರಿಸುವಲ್ಲಿ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದರು. ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಅತ್ಯದ್ಭುತ ಆಟವಾಡಿದರು. ಒಂದು ತಂಡದ ಅತ್ಯುತ್ತಮ ಪ್ರದರ್ಶನ ಎಂದು ಕರ್ನಾಟಕ ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಟ್ವೀಟ್ ಮಾಡಿದ್ದಾರೆ.

ಗತಿ ಬದಲಿಸಿದ್ದ ಬೂಮ್ರಾ-ಭುವಿ

ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಉತ್ತಮ ಆಟವಾಡಿದರೂ, ಪಂದ್ಯದ ಗತಿಯನ್ನು ಬದಲಿಸಿದ್ದು, ಜಸ್‌ ಪ್ರೀತ್ ಬೂಮ್ರಾ ಮತ್ತು ರೋಹಿತ್ ಶರ್ಮಾ ಅವರ ಕೊನೆಯ 10 ಓವರ್‌ಗಳ ಬೌಲಿಂಗ್ ಎಂದು ಚೇತನ್ ಜೋಷಿ ಎಂಬುವವರು ಅಭಿಪ್ರಾಯಪಟ್ಟಿದ್ದಾರೆ.

ಏಕಪಕ್ಷೀಯ ಪಂದ್ಯಗಳು

ಈಗಿನ ಮತ್ತು ಮುಂದಿನ ಪೀಳಿಗೆಯ ಮಕ್ಕಳಿಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳೆಂದರೆ ಎಷ್ಟು ಆಸಕ್ತಿಕರ ಮತ್ತು ಕುತೂಹಲಕಾರಿ ಆಗಿರುತ್ತಿತ್ತು ಎನ್ನುವುದನ್ನು ನಂಬುವುದೇ ಇಲ್ಲ. ಏಕೆಂದರೆ ಈಗ ನಾವು ಏಕಪಕ್ಷೀಯ ಮತ್ತು ಜೀವರಹಿತ ಪಂದ್ಯಗಳನ್ನು ನೋಡುತ್ತಿದ್ದೇವೆ ಎಂದು ಶರದ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಸೊಗಸಾದ ಆಟ

ಅದ್ಭುತ ಗೆಲುವಿಗೆ ಅಭಿನಂದನೆಗಳು. ಧವನ್, ರೋಹಿತ್ ಸೊಗಸಾದ ಆಟವಾಡಿದರು. ಇದು ನೋಡಲು ಅದ್ಭುತ ಪಂದ್ಯವಾಗಿತ್ತು ಎಂದು ಮಾಜಿ ಕ್ರಿಕೆಟಿಗ ವೀರೇಂದ್ರರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಗೆಲುವು ಮುಂದುವರಿಸಿ

ಮನಮೋಹಕ ಪ್ರದರ್ಶನಕ್ಕಾಗಿ ಟೀಂ ಇಂಡಿಯಾಕ್ಕೆ ಅಭಿನಂದನೆಗಳು. ಪಾಕಿಸ್ತಾನದ ವಿರುದ್ಧ ಮತ್ತೊಂದು ಮಹಾ ಗೆಲುವು. ಗೆಲುವಿನ ಓಟವನ್ನು ಮುಂದುವರಿಸಿ, ಶುಭವಾಗಲಿ ಎಂದು ಬಿಜೆಪಿ ವಕ್ತಾರ ಶಹನವಾಜ್ ಹುಸೇನ್ ಹೇಳಿದ್ದಾರೆ.

ಹೀಗೆಲ್ಲಾ ಗೆಲ್ಲುವುದೇ?

ಭಾರತ ತಂಡ ತಮ್ಮ ಬಗ್ಗೆ ನಾಚಿಕೆಪಟ್ಟುಕೊಳ್ಳಬೇಕು. ನಿಮಗೆ ಗೆಲ್ಲಬೇಕೆಂದಿದ್ದರೆ, ಗೆಲ್ಲಿ. ಆದರೆ ಹೀಗೆಲ್ಲ ಅಲ್ಲ. ಎದುರಾಳಿ ತಂಡವನ್ನು ಸಂಪೂರ್ಣ ಪುಡಿಯೆಬ್ಬಿಸಿದ್ದೀರಿ. ಅವರು ಇಂದು ರಾತ್ರಿ ಹೇಗೆ ಮಲಗುವುದು? ಇದು ಮಾನವ ಹಕ್ಕುಗಳ ಉಲ್ಲಂಘನೆಯ ಪರಾಕಾಷ್ಠೆ. ವಿಶ್ವ ಸಂಸ್ಥೆ ಇದನ್ನು ಗಮನಿಸಬೇಕು ಎಂದು ತಮಾಷೆಯಾಗಿ ಮುಬೀನ್ ಖಾನ್ ಟ್ವೀಟ್ ಮಾಡಿದ್ದಾರೆ.

Story first published: Monday, September 24, 2018, 14:23 [IST]
Other articles published on Sep 24, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X