For Quick Alerts
ALLOW NOTIFICATIONS  
For Daily Alerts
 

Asia Cup 2022: ದೀಪಕ್ ಚಹಾರ್ ಗಾಯಗೊಂಡಿಲ್ಲ, ವದಂತಿಗಳಿಗೆ ತೆರೆ ಎಳೆದ ಬಿಸಿಸಿಐ

Deepak chahar

ಟೀಂ ಇಂಡಿಯಾದ ಏಷ್ಯಾಕಪ್ ಸ್ಕ್ವಾಡ್ ಸೇರಿಕೊಂಡಿದ್ದ ದೀಪಕ್ ಚಹಾರ್ ಗಾಯಗೊಂಡಿದ್ದಾರೆ, ಆತನ ಬದಲು ಕುಲದೀಪ್ ಸೇನ್‌ಗೆ ಅವಕಾಶ ನೀಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ನಿಜಕ್ಕೂ ಶಾಕ್ ಎದುರಾಯಿತು. ಇತ್ತೀಚೆಗಷ್ಟೇ ಚೇತರಿಸಿಕೊಂಡು ಟೀಂ ಇಂಡಿಯಾ ಸೇರಿದ್ದ ದೀಪಕ್ ಚಹಾರ್ ಮತ್ತೆ ಗಾಯಗೊಂಡ್ರಾ? ಎಂಬುದು ಆತಂಕಕ್ಕೆ ಕಾರಣವಾಗಿತ್ತು.

ಇದಕ್ಕೆ ಪುಷ್ಠಿ ನೀಡುವಂತೆ ರಾಜಸ್ಥಾನ್ ರಾಯಲ್ಸ್ ಯುವ ವೇಗಿ ಕುಲದೀಪ್ ಸೇನ್ಗೆ ಬುಲಾವ್ ನೀಡಲಾಗಿತ್ತು. ಏಷ್ಯಾ ಕಪ್ 2022 ರ ಟಿ20 ಪಂದ್ಯಾವಳಿಯ ಹಿನ್ನೆಲೆಯಲ್ಲಿ ಅವರು ಟೀಮ್ ಇಂಡಿಯಾದ ಕರೆಯನ್ನು ಸ್ವೀಕರಿಸಿದರು. ಆದ್ರೀಗ ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕುಲದೀಪ್ ಸೇನ್‌ ತಂಡಕ್ಕೆ ನೆಟ್ ಬೌಲರ್ ಆಗಿ ಸೇರ್ಪಡೆಯಾಗಿದ್ದಾರೆ, ದೀಪಕ್ ಚಹಾರ್ ಗಾಯಗೊಂಡಿದ್ದಾರೆ ಎಂಬ ಸುದ್ದಿ ಸುಳ್ಳು ಎಂದಿದ್ದಾರೆ.

ದೀಪಕ್ ಚಹಾರ್‌ ನಿಜವಾಗಿಯೂ ಗಾಯಗೊಂಡಿದ್ರಾ?

ದೀಪಕ್ ಚಹಾರ್‌ ನಿಜವಾಗಿಯೂ ಗಾಯಗೊಂಡಿದ್ರಾ?

ಗಾಯದ ಸಮಸ್ಯೆಯಿಂದ ಸುಮಾರು 6 ತಿಂಗಳ ಕಾಲ ಆಟದಿಂದ ಹೊರಗುಳಿದಿದ್ದ ದೀಪಕ್ ಚಹಾರ್ ಇತ್ತೀಚೆಗೆ ಜಿಂಬಾಬ್ವೆ ಪ್ರವಾಸದೊಂದಿಗೆ ರೀ ಎಂಟ್ರಿ ಕೊಟ್ಟಿದ್ದರು. ಮೊದಲ ಪಂದ್ಯದಲ್ಲಿ ತಮ್ಮ ಬೌಲಿಂಗ್ ಮೂಲಕ ತಮ್ಮ ಸಾಮರ್ಥ್ಯ ತೋರಿದ್ದರು. ಆದರೆ, ಆ ಬಳಿಕ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ದೀಪಕ್ ಚಹಾರ್ ಅಂತಿಮ ತಂಡದಲ್ಲಿ ಸ್ಥಾನ ಪಡೆಯಲಿಲ್ಲ. ಆರು ತಿಂಗಳ ನಂತರ ಒಂದೇ ಒಂದು ಪಂದ್ಯವನ್ನಾಡಿರುವ ದೀಪಕ್ ಚಹಾರ್ ಅವರಿಗೆ ಎರಡನೇ ಏಕದಿನದಲ್ಲಿ ವಿಶ್ರಾಂತಿ ನೀಡುವ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು.

ಆದರೆ, ಮೂರನೇ ಏಕದಿನ ಪಂದ್ಯದಲ್ಲಿ ಮ್ಯಾನೇಜ್‌ಮೆಂಟ್ ದೀಪಕ್ ಚಹಾರ್ ಅವರನ್ನು ತಂಡಕ್ಕೆ ಮರಳಿ ಕರೆತಂದು ಅನುಮಾನಗಳಿಗೆ ಪೂರ್ಣವಿರಾಮ ಹಾಕಿತು. ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಅವರಂತಹ ಹಿರಿಯ ಆಟಗಾರರು ಗಾಯಗೊಂಡು ಏಷ್ಯಾಕಪ್ 2022 ಟೂರ್ನಿಯಿಂದ ಹೊರಗುಳಿದಿರುವುದರಿಂದ ಅಂತಿಮ 15 ಮಂದಿಯ ತಂಡದಲ್ಲಿ ದೀಪಕ್ ಚಹಾರ್ ಅವರಿಗೆ ಸ್ಥಾನ ನೀಡಿದರೆ ಉತ್ತಮ ಎಂದು ಕ್ರಿಕೆಟ್ ಅಭಿಮಾನಿಗಳು ನಂಬಿದ್ದಾರೆ.

ಏಷ್ಯಾ ಕಪ್ 2022: ಗಾಯಗೊಂಡಿದ್ರೂ ಶಾಹೀನ್ ಅಫ್ರಿದಿ ಏಕೆ ಪಾಕಿಸ್ತಾನ ತಂಡದ ಜೊತೆಯಲ್ಲಿದ್ದಾರೆ?

ಕುಲ್‌ದೀಪ್ ಸೇನ್‌ಗೆ ಬುಲಾವ್ ನೀಡಿದ್ದ ಬಿಸಿಸಿಐ

ಕುಲ್‌ದೀಪ್ ಸೇನ್‌ಗೆ ಬುಲಾವ್ ನೀಡಿದ್ದ ಬಿಸಿಸಿಐ

ಆದರೆ ಟೀಂ ಇಂಡಿಯಾದಿಂದ ಕುಲದೀಪ್ ಸೇನ್ ಗೆ ಕರೆ ಬಂದಿದೆ ಎಂಬ ಸುದ್ದಿ ಹೊರಬಿದ್ದಿದ್ದು, ಚಹಾರ್ ಮತ್ತೊಮ್ಮೆ ಗಾಯಗೊಂಡಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಚಹರ್ ಸ್ಥಾನದಲ್ಲಿ ಕುಲದೀಪ್ ಸೇನ್ ಸ್ಟ್ಯಾಂಡ್‌ಬೈ ಆಟಗಾರನಾಗುವ ನಿರೀಕ್ಷೆ ಇತ್ತು. ಆದರೆ ಬಿಸಿಸಿಐ ಅಧಿಕಾರಿಯೊಬ್ಬರು ಈ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ. ನೆಟ್‌ ಬೌಲರ್‌ ಆಗಿ ಮಾತ್ರ ಆತ ಸೇವೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ದೀಪಕ್ ಚಹಾರ್ ಗಾಯಗೊಂಡಿದ್ದಾರೆ ಎಂಬ ವದಂತಿ ಸುಳ್ಳು. ಅವರು ಫಿಟ್ ಆಗಿದ್ದಾರೆ. ತಂಡದೊಂದಿಗೆ ಅಭ್ಯಾಸ ನಡೆಸುತ್ತಿದ್ದಾರೆ. ಅವರು ನಿನ್ನೆ ಮತ್ತು ಇಂದು ಕೂಡ ಅಭ್ಯಾಸ ಮಾಡಿದರು. ಕುಲದೀಪ್ ಸೇನ್ ನೆಟ್‌ ಬೌಲರ್ ಆಗಿ ತಂಡವನ್ನು ಸೇರಿಕೊಂಡರು. ಅವರು ಅತ್ಯುತ್ತಮ ವೇಗಿ ಎಂದು ಅಧಿಕಾರಿ ಹೇಳಿದರು.

''ಇದು ಸಂಪೂರ್ಣವಾಗಿ ಅವಿವೇಕದ ಸುದ್ದಿಯಾಗಿದೆ. ಅವರು ಇನ್ನೂ ದುಬೈನಲ್ಲಿ ತಂಡದೊಂದಿಗೆ ಇದ್ದಾರೆ. ಅವರು ನಿನ್ನೆ ಅಭ್ಯಾಸಕ್ಕೆ ಸೇರಿಕೊಂಡರು ಮತ್ತು ಇಂದಿಗೂ ಅದನ್ನು ಮುಂದುವರಿಸುತ್ತಾರೆ. ಅವರು ಸಂಪೂರ್ಣವಾಗಿ ಚೆನ್ನಾಗಿದ್ದಾರೆ. ಕುಲದೀಪ್ ನೆಟ್ ಬೌಲರ್ ಆಗಿ ಸೇರಿಕೊಂಡಿದ್ದಾರೆ. ಅವರು ಉತ್ತಮ ಪ್ರತಿಭೆ ಆದರೆ ಪೂರ್ಣ ಸಮಯದ ಆಯ್ಕೆಯಾಗಿಲ್ಲ, "ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಇನ್ಸೈಡ್‌ಸ್ಪೋರ್ಟ್‌ಗೆ ತಿಳಿಸಿದರು.

ಕೊಹ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ: ವಿರಾಟ್ ಅಂಕಿ-ಅಂಶ ನೋಡಿ ಶಾಕ್ ಆದ ರವಿಶಾಸ್ತ್ರಿ

ರಾಜಸ್ತಾನ್ ರಾಯಲ್ಸ್ ಪರ ಆಡಿದ್ದ ಕುಲದೀಪ್ ಸೇನ್

ರಾಜಸ್ತಾನ್ ರಾಯಲ್ಸ್ ಪರ ಆಡಿದ್ದ ಕುಲದೀಪ್ ಸೇನ್

ಐಪಿಎಲ್ 2022ರ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿದ್ದ ಕುಲದೀಪ್ ಸೇನ್ ಅಬ್ಬರಿಸಿದರು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ 15 ರನ್ ಗಳಿಸಿ ಎಲ್ಲರ ಗಮನ ಸೆಳೆದಿದ್ದರು. ಅವರು 7 ಪಂದ್ಯಗಳಲ್ಲಿ 9.42 ರ ಎಕಾನಮಿ ದರದೊಂದಿಗೆ 8 ವಿಕೆಟ್‌ಗಳನ್ನು ಪಡೆದರು. ಅವರು 16 ಪ್ರಥಮ ದರ್ಜೆ ಪಂದ್ಯಗಳಲ್ಲಿ 44 ವಿಕೆಟ್ ಪಡೆದಿದ್ದಾರೆ. ಭಾನುವಾರ ನಡೆಯಲಿರುವ ಪಾಕಿಸ್ತಾನ ವಿರುದ್ಧದ ಏಷ್ಯಾಕಪ್‌ನ ಮೊದಲ ಪಂದ್ಯದಿಂದ ಭಾರತ ಪ್ರಶಸ್ತಿ ಬೇಟೆ ಆರಂಭಿಸಲಿದೆ.

Story first published: Thursday, August 25, 2022, 21:39 [IST]
Other articles published on Aug 25, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+