ಏಷ್ಯಾ ಕಪ್ 2022: ಗಾಯಗೊಂಡಿದ್ರೂ ಶಾಹೀನ್ ಅಫ್ರಿದಿ ಏಕೆ ಪಾಕಿಸ್ತಾನ ತಂಡದ ಜೊತೆಯಲ್ಲಿದ್ದಾರೆ?

ನಾಲ್ಕು ವರ್ಷದ ಬಳಿಕ ನಡೆಯುತ್ತಿರುವ ಏಷ್ಯಾಕಪ್ ಟೂರ್ನಿಗೆ ಕ್ಷಣಗಣನೆ ಶುರುವಾಗಿದ್ದು, ಇದೇ ಶನಿವಾರ (ಆ.27) ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ಮುಖಾಮುಖಿಯಾದ್ರೆ, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಭಾನುವಾರ (ಆ.28) ಅಖಾಡಕ್ಕಿಳಿಯಲಿವೆ.
2021ರ ಟಿ20 ವಿಶ್ವಕಪ್ ಬಳಿಕ ಭಾರತ-ಪಾಕಿಸ್ತಾನ ತಂಡಗಳು ಕಣಕ್ಕಿಳಿಯುತ್ತಿದ್ದು, ಸಾಕಷ್ಟು ರೋಚಕತೆಗೆ ಎಡೆಮಾಡಿಕೊಟ್ಟಿದೆ. ಉಭಯ ತಂಡಗಳಲ್ಲಿ ಪ್ರಮುಖ ಸ್ಟಾರ್ ಬೌಲರ್ ಅನುಪಸ್ಥಿತಿಯಲ್ಲಿ ತಂಡಗಳು ಯುಎಇ ತಲುಪಿದೆ. ಭಾರತ ಪರ ಪ್ರೈಮ್ ಬೌಲರ್ ಜಸ್ಪ್ರೀತ್ ಬುಮ್ರಾ ಇಂಜ್ಯುರಿಯಿಂದಾಗಿ ತಂಡದಿಂದ ಹೊರಬಿದ್ರೆ, ಪಾಕಿಸ್ತಾನದ ವೇಗಿ ಶಾಹೀನ್ ಶಾ ಅಫ್ರಿದಿ ಏಷ್ಯಾಕಪ್ ಟೂರ್ನಿಯಿಂದ ಅವಕಾಶ ಕಳೆದುಕೊಂಡಿದ್ದಾರೆ. ಹೀಗಿರುವಾಗ ಶಾಹೀನ್ ಅಫ್ರಿದಿ ಪಾಕ್ ತಂಡದೊಂದಿಗೆ ದುಬೈಗೆ ತೆರಳಿರುವುದು ಅನೇಕ ಚರ್ಚೆಗೆ ಕಾರಣವಾಗಿದೆ.

ಶಾಹೀನ್ ಅಫ್ರಿದಿ ಇಂಜ್ಯುರಿಯಾಗಿದ್ರೂ, ಪಾಕ್ ತಂಡದೊಂದಿಗೆ ಏಕೆ ಪ್ರಯಾಣ?
22 ವರ್ಷದ ಎಡಗೈ ವೇಗದ ಬೌಲರ್ ಶಾಹೀನ್ ಅಫ್ರಿದಿ ಟೂರ್ನಿಗೂ ಮುನ್ನ ಗಾಯಗೊಂಡಿದ್ರೂ ಸಹ, ಪಾಕಿಸ್ತಾನ ತಂಡದ ಜೊತೆಗೆ ಏಕೆ ಪ್ರಯಾಣಿಸಿದ್ದಾರೆ ಎಂಬ ಪ್ರಶ್ನೆಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್(ಪಿಸಿಬಿ) ವಕ್ತಾರ ಉತ್ತರಿಸಿದ್ದಾರೆ.
ಆಗಸ್ಟ್ 20ರಂದು ಶನಿವಾರ ಪಿಸಿಬಿ ಪ್ರಕಟಣೆ ಹೊರಡಿಸಿದ್ದು, ಶ್ರೀಲಂಕಾ ವಿರುದ್ಧ ಗಾಲೆಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಮೊಣಕಾಲಿನ ಗಾಯದಿಂದಾಗಿ ಶಾಹೀನ್ ಅಫ್ರಿದಿ ಮುಂಬರುವ ಏಷ್ಯಾಕಪ್ ಟೂರ್ನಿಯಿಂದ ಹೊರಗುಳಿದಿದ್ದಾರೆ ಎಂದು ತಿಳಿಸಲಾಗಿತ್ತು. ಜೊತೆಗೆ 4-6 ವಾರಗಳ ಕಾಲ ವಿಶ್ರಾಂತಿ ಬೇಕಾಗಿದ್ದು, ಅಕ್ಟೋಬರ್ ತಿಂಗಳಿನಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲಿದ್ದಾರೆ ಎಂದು ಪಿಸಿಬಿ ತಿಳಿಸಿತು.
ಕೊಹ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ: ವಿರಾಟ್ ಅಂಕಿ-ಅಂಶ ನೋಡಿ ಶಾಕ್ ಆದ ರವಿಶಾಸ್ತ್ರಿ

ತಂಡದೊಂದಿಗೆ ಶಾಹೀನ್ ಅಫ್ರಿದಿ ಇರಲಿ ಎಂದಿದ್ರಂತೆ ಬಾಬರ್!
ಶಾಹೀನ್ ಅಫ್ರಿದಿ ಏಷ್ಯಾಕಪ್‌ನಿಂದ ಹೊರಬಿದ್ದಿದ್ರೂ ಸಹ, ಯುಎಇಗೆ ತೆರಳಿದ ಪಾಕಿಸ್ತಾನ ತಂಡದ ಜೊತೆಗೆ ಪ್ರಯಾಣ ಬೆಳಸಿ ಆಶ್ಚರ್ಯ ಮೂಡಿಸಿದ್ರು. ಇದಕ್ಕೆ ಕಾರಣ ತಿಳಿಸಿರುವ ಪಿಸಿಬಿ ವಕ್ತಾರ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಒತ್ತಾಯದ ಮೇರೆಗೆ ಶಾಹೀನ್ ಅಫ್ರಿದಿ ಪಾಕ್ ತಂಡದೊಂದಿಗೆ ಪ್ರಯಾಣ ಬೆಳೆಸಿದ್ದಾರೆ.
ಪಾಕಿಸ್ತಾನ ಟೀಂ ಮ್ಯಾನೇಜ್‌ಮೆಂಟ್ ಆತನ ಚೇತರಿಕೆಯನ್ನ ಹತ್ತಿರದಿಂದಲೇ ಗಮನಿಸಲು ಜೊತೆಗೆ ತಂಡಕ್ಕೆ ಮಾನಸಿಕ ಶಕ್ತಿಯಾಗಿ ಶಾಹೀನ್ ಅಫ್ರಿದಿಯನ್ನ ಬಾಬರ್ ಅಜಮ್ ಯುಎಇಗೆ ಪ್ರಯಾಣ ಬೆಳೆಸಲು ಕೇಳೆಕೊಂಡರು ಎಂದಿದ್ದಾರೆ.
"ಬಾಬರ್ ಅವರು ಶಾಹೀನ್ ಅಫ್ರಿದಿ ತಂಡದೊಂದಿಗೆ ಇರಬೇಕೆಂದು ಬಯಸಿದ್ದರು. ಅವನ ಗಾಯದ ಚೇತರಿಕೆಯನ್ನ ನಿಕಟವಾಗಿ ಮೇಲ್ವಿಚಾರಣೆ ಮಾಡಲು ಮ್ಯಾನೇಜ್‌ಮೆಂಟ್ ಬಯಸುತ್ತದೆ. ಅವರು ತಂಡದೊಂದಿಗೆ ದುಬೈನಲ್ಲಿಯೇ ಇರುತ್ತಾರೆ'' ಎಂದು ಟೈಮ್ಸ್ ನೌ ಉಲ್ಲೇಖಿಸಿದಂತೆ ಪಿಸಿಬಿ ವಕ್ತಾರರು ಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳಿಗೆ ಇದನ್ನು ಖಚಿತಪಡಿಸಿದ್ದಾರೆ.
ಭಾರತ ವಿರುದ್ಧ ಆಡುವಾಗ ಡ್ರೆಸ್ಸಿಂಗ್ ರೂಂನಲ್ಲಿ ಪಾಕ್ ಆಟಗಾರರು ಬಿಕ್ಕಿ ಬಿಕ್ಕಿ ಅತ್ತಿದ್ದರು: ವಾಸಿಂ ಅಕ್ರಂ

ಶಾಹೀನ್ ಅಫ್ರಿದಿ ಬದಲಿಗೆ ಮೊಹಮ್ಮದ್ ಹಸ್ನೈನ್‌ಗೆ ಸ್ಥಾನ
ಈ ಎಲ್ಲಾ ಬೆಳವಣಿಗೆ ಜೊತೆಗೆ ಆಗಸ್ಟ್ 22ರಂದು ಸೋಮವಾರ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಪ್ರಕಟಣೆಯನ್ನ ಹೊರಡಿಸಿದ್ದು, 22 ವರ್ಷದ ಬಲಗೈ ಬೌಲರ್ ಮೊಹಮ್ಮದ್ ಹಸ್ನೈನ್ ಗಾಯಗೊಂಡಿರುವ ಶಾಹೀನ್ ಅಫ್ರಿದಿ ಬದಲು ಏಷ್ಯಾಕಪ್ ಸ್ಕ್ವಾಡ್‌ನಲ್ಲಿ ಸ್ಥಾನ ಪಡೆದಿದ್ದಾರೆ ಎಂದು ತಿಳಿಸಿತು. ಆದ್ರೆ ಇದ್ರ ಬೆನಲ್ಲೇ ಯುಎಇಗೆ ತೆರಳಿದ ಪಾಕ್ ತಂಡದೊಂದಿಗೆ ಶಾಹೀನ್ ಅಫ್ರಿದಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಅಚ್ಚರಿಗೆ ಕಾರಣವಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications