Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ind vs AFG: ಟಾಸ್ ಗೆದ್ದ ಅಫ್ಘಾನಿಸ್ತಾನ ಬೌಲಿಂಗ್ ಆಯ್ಕೆ, KL ರಾಹುಲ್ ನೇತೃತ್ವದಲ್ಲಿ ಭಾರತ ಬ್ಯಾಟಿಂಗ್

India vs Afghanistan

ದುಬೈ ಅಂತರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಗುರುವಾರ ನಡೆಯುತ್ತಿರುವ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಷ್ಯಾಕಪ್‌ ಔಪಚಾರಿಕ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಈಗಾಗಲೇ ಏಷ್ಯಾಕಪ್ ಫೈನಲ್ ಟಿಕೆಟ್ ಕಳೆದುಕೊಂಡಿರುವ ಉಭಯ ತಂಡಗಳು ಗೆಲುವಿನೊಂದಿಗೆ ಟೂರ್ನಿಯಿಂದ ಹೊರನಡೆಯಲು ರೆಡಿಯಾಗಿವೆ.

ಆಶ್ಚರ್ಯಕರ ರೀತಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಂತಿಮ ಪಂದ್ಯಕ್ಕೆ ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗುಳಿದಿದ್ದು, ಓಪನರ್ ಹಾಗೂ ಉಪನಾಯಕ ಕೆ.ಎಲ್ ರಾಹುಲ್ ಅಂತಿಮ ಪಂದ್ಯದಲ್ಲಿ ಭಾರತ ತಂಡವನ್ನ ಮುನ್ನಡೆಸುತ್ತಿದ್ದಾರೆ.

ಹಿಂದಿನ ದಿನವಷ್ಟೇ ಪಾಕಿಸ್ತಾನ ವಿರುದ್ಧ ಕೊನೆಯ ಓವರ್‌ನಲ್ಲಿ ಪಂದ್ಯ ಸೋತ ಅಫ್ಘಾನಿಸ್ತಾ ತಂಡವು 24 ಗಂಟೆಗಳಲ್ಲಿ ಮತ್ತೊಂದು ಪಂದ್ಯವನ್ನಾಡುತ್ತಿದ್ದು, ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲದೆ ಕಣಕ್ಕಿಳಿಯುತ್ತಿದೆ.

ಟೀಂ ಇಂಡಿಯಾದಲ್ಲಿ ಮೂವರು ಆಟಗಾರರ ಬದಲಾವಣೆ

ಟೀಂ ಇಂಡಿಯಾದಲ್ಲಿ ಮೂವರು ಆಟಗಾರರ ಬದಲಾವಣೆ

ಟೀಂ ಇಂಡಿಯಾ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಮೂವರು ಆಟಗಾರರ ಬದಲಾವಣೆಯಾಗಿದೆ. ನಾಯಕ ರೋಹಿತ್ ಶರ್ಮಾ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಸ್ಪಿನ್ನರ್ ಯುಜವೇಂದ್ರ ಚಹಾಲ್‌ ಔಟ್‌ ಆಗಿದ್ದು, ಅವರ ಬದಲು ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ದೀಪಕ್ ಚಹಾರ್‌ಗೆ ಸ್ಥಾನ ನೀಡಲಾಗಿದೆ.

ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳ ಪ್ಲೇಯಿಂಗ್ ಇಲೆವೆನ್‌ನಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎಂಬುದನ್ನ ಈ ಕೆಳಗೆ ಕಾಣಬಹುದು.

AUS vs NZ 2nd ODI: 82 ರನ್‌ಗೆ ಆಲೌಟ್, ನ್ಯೂಜಿಲೆಂಡ್‌ಗೆ ಹೀನಾಯ ಸೋಲು, ಆಸಿಸ್‌ಗೆ ಸರಣಿ ಜಯ

ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್:

ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್:

ಕೆಎಲ್ ರಾಹುಲ್(ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್(ವಿಕೆಟ್ ಕೀಪರ್), ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ದೀಪಕ್ ಚಾಹರ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್

ಬೆಂಚ್: ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಯುಜವೇಂದ್ರ ಚಹಾಲ್, ರವಿ ಬಿಷ್ಣೋಯಿ

ಶುಭಮನ್ ಗಿಲ್‌ಗೆ ಹುಟ್ಟುಹಬ್ಬದ ಸಂಭ್ರಮ: ಗ್ಲಾಮೊರ್ಗಾನ್‌ ಪರ ಚೊಚ್ಚಲ ಪಂದ್ಯದಲ್ಲೇ 92 ರನ್

ಅಫ್ಘಾನಿಸ್ತಾನ ಪ್ಲೇಯಿಂಗ್ ಇಲೆವೆನ್:

ಅಫ್ಘಾನಿಸ್ತಾನ ಪ್ಲೇಯಿಂಗ್ ಇಲೆವೆನ್:

ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ (ನಾಯಕ), ಕರೀಮ್ ಜನತ್, ರಶೀದ್ ಖಾನ್, ಅಜ್ಮತುಲ್ಲಾ ಒಮರ್ಜಾಯ್, ಮುಜೀಬ್ ಉರ್ ರಹಮಾನ್, ಫರೀದ್ ಅಹ್ಮದ್ ಮಲಿಕ್, ಫಜಲ್ಹಕ್ ಫಾರೂಕಿ

ಬೆಂಚ್: ಸಮೀವುಲ್ಲಾ ಶಿನ್ವಾರಿ, ಹಶ್ಮತುಲ್ಲಾ ಶಾಹಿದಿ, ಅಫ್ಸರ್ ಝಜೈ, ಉಸ್ಮಾನ್ ಘನಿ, ನವೀನ್-ಉಲ್-ಹಕ್, ನೂರ್ ಅಹ್ಮದ್

Story first published: Thursday, September 8, 2022, 19:30 [IST]
Other articles published on Sep 8, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+