Asia cup 2022: ಭಾರತ-ಪಾಕಿಸ್ತಾನ ಪಂದ್ಯ ನನಗೇನು ಸ್ಪೆಷಲ್ ಅಲ್ಲ, ಇನ್ನೊಂದು ಪಂದ್ಯವಷ್ಟೇ ಎಂದ ಸೌರವ್ ಗಂಗೂಲಿ

ಏಷ್ಯಾಕಪ್ 2022ರ ಟೂರ್ನಿಗೆ ಕ್ಷಣಗಣನೆ ಆರಂಭಗೊಂಡಿದ್ದು, ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧ ತನ್ನ ಅಭಿಯಾನವನ್ನ ಆರಂಭಿಸಲಿದೆ. ಸೂಪರ್ ಸಂಡೇ ಫೈಟ್ ಎಂದೇ ಕರೆಸಿಕೊಂಡಿರುವ ಭಾರತ-ಪಾಕಿಸ್ತಾನ ಮುಖಾಮುಖಿ ವೀಕ್ಷಿಸಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
ಸುಮಾರು ಒಂದು ವರ್ಷದ ಬಳಿಕ ಸಾಂಪ್ರದಾಯಿಕ ಎದುರಾಳಿಗಳು ಮೈದಾನದಲ್ಲಿ ಮುಖಾಮುಖಿಯಾಗುತ್ತಿವೆ. ಬೇರೆ ಯಾವುದೇ ದ್ವಿಪಕ್ಷೀಯ ಸರಣಿಯನ್ನ ಆಡದ ಉಭಯ ತಂಡಗಳು ಐಸಿಸಿ ವಿಶ್ವಕಪ್ ಹಾಗೂ ಏಷ್ಯಾಕಪ್ ಟೂರ್ನಿಗಳಲ್ಲಿ ಮಾತ್ರ ಎದುರಾಗುತ್ತಿವೆ. ಹೀಗಾಗಿ ಆಗಸ್ಟ್ 28ರಂದು ಭಾನುವಾರ ನಡೆಯಲಿರುವ ಪಂದ್ಯವು ಹೈವೋಲ್ಟೇಜ್‌ಗೆ ಕಾರಣವಾಗಿದೆ.

ನನಗೆ ಕೇವಲ ಮತ್ತೊಂದು ಪಂದ್ಯವಷ್ಟೇ ಎಂದ ಸೌರವ್ ಗಂಗೂಲಿ
ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಭಾರತ ವರ್ಸಸ್ ಪಾಕಿಸ್ತಾನ ಪಂದ್ಯವು ನನಗೆ ಮತ್ತೊಂದು ಪಂದ್ಯವಷ್ಟೇ ಆಗಿದೆ. ಅದರಲ್ಲೇನು ವಿಶೇಷತೆ ಇಲ್ಲ ಎಂದಿದ್ದಾರೆ.
ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ಮತ್ತು ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಭಾನುವಾರ ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಮುಖಾಮುಖಿಯಾಗುತ್ತಿವೆ. ಈ ಮೊದಲು ಕಳೆದ ಮುಖಾಮುಖಿಯು 2021ರ ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕಿಸ್ತಾನ 10 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ಭಾರತ-ಪಾಕಿಸ್ತಾನ ಪಂದ್ಯವು ಸಾಮಾನ್ಯವಾಗಿದೆ
ಪಾಕಿಸ್ತಾನ ವಿರುದ್ಧ 12 ಟೆಸ್ಟ್ ಪಂದ್ಯ ಹಾಗೂ 53 ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನ ಪ್ರತಿನಿಧಿಸಿರುವ ಮಾಜಿ ನಾಯಕ ಸೌರವ್ ಗಂಗೂಲಿ ಪ್ರಕಾರ ಭಾರತ ವರ್ಸಸ್ ಪಾಕಿಸ್ತಾನ ಪಂದ್ಯವು ಎಲ್ಲದಂತೆ ಸಾಮಾನ್ಯವಾಗಿದೆ. ಆದ್ರೆ ಭಾರತೀಯ ಆಟಗಾರರು ಯಾವ ರೀತಿಯಲ್ಲಿ ಎದುರಿಸಬೇಕು ಎಂಬುದನ್ನ ಅರಿತುಕೊಳ್ಳಬೇಕು ಎಂದಿದ್ದಾರೆ.
''ಭಾರತ ವರ್ಸಸ್ ಪಾಕಿಸ್ತಾನ ಪಂದ್ಯವು ಮತ್ತೊಂದು ಪಂದ್ಯವಷ್ಟೇ ಆಗಿದೆ. ಕ್ರಿಕೆಟ್ ಅನ್ನು ಯಾರು ಸತತವಾಗಿ ಆಡುತ್ತಾರೆ ಅಥವಾ ನಾವು ಆಡುವ ವೇಳೆಯಲ್ಲಿ ಪಾಕಿಸ್ತಾನ ವಿರುದ್ಧ ಪಂದ್ಯವನ್ನ ಅತ್ಯಂತ ವಿಶೇಷ ಎಂದು ಪರಿಗಣಿಸಲಿಲ್ಲ. ನಾಕೌಟ್ ಪಂದ್ಯಗಳಲ್ಲಷ್ಟೇ ಸ್ವಲ್ಪ ಹೆಚ್ಚು ಒತ್ತಡವಿರುತ್ತಿತ್ತು. ಆದ್ರೆ ವಿಶೇಷತೆ ಏನು ಇಲ್ಲ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅನುಭವಿ ಆಟಗಾರರಾಗಿದ್ದಾರೆ. ಅವರಿಗೆ ಒತ್ತಡವನ್ನ ಹೇಗೆ ಮೆಟ್ಟಿ ನಿಲ್ಲಬೇಕೆಂದು ತಿಳಿದಿದ್ದು, ದೊಡ್ಡ ವಿಚಾರವೇನು ಆಗದು'' ಎಂದು ಸೌರವ್ ಗಂಗೂಲಿ ಇಂಡಿಯಾ ಟುಡೆಗೆ ತಿಳಿಸಿದ್ದಾರೆ.
Asia cup 2022: ತಂಡವೊಂದರ ವಿರುದ್ಧ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ರೆಕಾರ್ಡ್ ಯಾರ ಹೆಸರಲ್ಲಿದೆ?

ಉಭಯ ತಂಡಗಳ ಪ್ರಮುಖ ವೇಗಿಗಳೇ ಮಿಸ್
ಟೀಂ ಇಂಡಿಯಾ ಪ್ರಮುಖ ಬೌಲಿಂಗ್ ಅಸ್ತ್ರ ಜಸ್ಪ್ರೀತ್ ಬುಮ್ರಾ ಮತ್ತು ಪಾಕಿಸ್ತಾನದ ವೇಗಿ ಶಾಹೀನ್ ಅಫ್ರಿದಿ ಇಂಜ್ಯುರಿ ಕಾರಣದಿಂದಾಗಿ ಇಡೀ ಏಷ್ಯಾಕಪ್ ಟೂರ್ನಿಗೆ ಅಲಭ್ಯರಾಗಿದ್ದಾರೆ. ಶಾಹಿನ್ ಮೊಣಕಾಲು ಗಾಯಕ್ಕೆ ತುತ್ತಾಗಿದ್ದು, 4 ರಿಂದ 6 ವಾರಗಳ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ. ಇನ್ನು ಜಸ್ಪ್ರೀತ್ ಬುಮ್ರಾ ಕೂಡ ಅನಿರ್ದಿಷ್ಟಾವದಿ ವಿಶ್ರಾಂತಿ ಪಡೆದಿದ್ದಾರೆ.
ಸೌರವ್ ಗಂಗೂಲಿ ಪ್ರಕಾರ ಯಾವುದೇ ತಂಡದ ಪರ ಒಬ್ಬ ಪ್ಲೇಯರ್ ಇಲ್ಲದಿದ್ದರೆ ದೊಡ್ಡ ಮಟ್ಟಿನ ವ್ಯತ್ಯಾಸ ಕಾಣದು ಎಂದಿದ್ದಾರೆ.
'' ನನ್ನ ಪ್ರಕಾರ ಒಬ್ಬ ಆಟಗಾರ ದೊಡ್ಡ ವ್ಯತ್ಯಾಸ ತರಲಾರನು. ಇದು ಟೀಂ ವರ್ಕ್'' ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ.
Asia Cup 2022: ಭಾರತದ ಈ ಸ್ಟಾರ್ ಏಷ್ಯಾ ಕಪ್‌ನಲ್ಲಿ ಹೆಚ್ಚು ರನ್ ಗಳಿಸಬಹುದು; ರಶೀದ್ ಖಾನ್

ವಿರಾಟ್ ಕೊಹ್ಲಿ ಶೀಘ್ರದಲ್ಲೇ ಕಂಬ್ಯಾಕ್ ಆಗಲಿದ್ದಾರೆ: ಸೌರವ್ ಗಂಗೂಲಿ
ವಿರಾಟ್ ಕೊಹ್ಲಿ ಮತ್ತೆ ಫಾರ್ಮ್‌ಗೆ ಮರಳಲಿದ್ದಾರೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಭಿಪ್ರಾಯ ಪಟ್ಟಿದ್ದಾರೆ. ಪ್ರತಿಯೊಬ್ಬ ಆಟಗಾರನು ಇಂತಹ ಪರಿಸ್ಥಿತಿಯನ್ನ ವೃತ್ತಿ ಜೀವನದಲ್ಲಿ ಒಮ್ಮೆ ಎದುರಿಸುತ್ತಾನೆ. ಆತನು ಕೂಡ ಬೌನ್ಸ್ ಬ್ಯಾಕ್ ಆಗಿ ಮರಳಲಿದ್ದಾನೆ ಎಂದಿದ್ದಾರೆ.
''ವಿರಾಟ್ ಬಹುದೊಡ್ಡ ಪ್ಲೇಯರ್ ಆಗಿದ್ದಾನೆ. ಆತ ರನ್‌ಗಳಿಗೆ ತನ್ನದೇ ಆದ ಫಾರ್ಮುಲಾ ಹೊಂದಿದ್ದಾನೆ. ಶೀಘ್ರದಲ್ಲೇ ಕೊಹ್ಲಿ ಕಂಬ್ಯಾಕ್ ಆಗಲಿದ್ದಾರೆ ಎಂದು ನಾವೆಲ್ಲಾ ನಂಬಿದ್ದೇವೆ'' ಎಂದು ಗಂಗೂಲಿ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಗ್ರೂಪ್ ಎನಲ್ಲಿ ಹಾಂಕಾಂಗ್ ಜೊತೆಗೆ ಸ್ಥಾನ ಪಡೆದಿದ್ದು ಪಾಯಿಂಟ್ಸ್ ಪಟ್ಟಿಯ ಟಾಪ್ 2 ತಂಡಗಳು ಸೂಪರ್ 4 ಹಂತಕ್ಕೆ ಪ್ರವೇಶ ಪಡೆಯಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications