Asia cup 2022: ತಂಡವೊಂದರ ವಿರುದ್ಧ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ರೆಕಾರ್ಡ್ ಯಾರ ಹೆಸರಲ್ಲಿದೆ?

ನಾಲ್ಕು ವರ್ಷಗಳ ಬಳಿಕ ಏಷ್ಯಾಕಪ್ ಟೂರ್ನಿಗೆ ಇಂದು(ಶನಿವಾರ) ಚಾಲನೆ ಸಿಗಲಿದೆ. ಆರಂಭಿಕ ಪಂದ್ಯ ಮಾಜಿ ಚಾಂಪಿಯನ್ ಶ್ರೀಲಂಕಾ ಮತ್ತು ಅಪಾಯಕಾರಿ ಅಫ್ಘಾನಿಸ್ತಾನ ನಡುವೆ ನಡೆಯಲಿದೆ. ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತೀಯ ಕಾಲಮಾನ ರಾತ್ರಿ 7.30 ರಿಂದ ಪಂದ್ಯ ನಡೆಯಲಿದೆ. ಆದರೆ ಫೈನಲ್‌ಗಿಂತ ಹೆಚ್ಚಾಗಿ ಭಾರತ-ಪಾಕಿಸ್ತಾನ ಥ್ರಿಲ್ಲರ್ ಅನ್ನು ಕ್ರಿಕೆಟ್ ಪ್ರೇಮಿಗಳು ಭಾನುವಾರ ಎದುರು ನೋಡುತ್ತಿದ್ದಾರೆ.
ಇದೇ ವೇಳೆ ಕಳೆದ 14 ಆವೃತ್ತಿಗಳ ಟೂರ್ನಿಯ ಇತಿಹಾಸವನ್ನು ಅವಲೋಕಿಸಿದರೆ ಹಲವು ಸಿಕ್ಸರ್ ಹೀರೋಗಳನ್ನು ಕಾಣಬಹುದು. ಅವರಲ್ಲಿ, ತಂಡದ ವಿರುದ್ಧ ಹೆಚ್ಚು ಸಿಕ್ಸರ್ ಗಳಿಸಿದವರ ಬಗ್ಗೆ ಈ ಕೆಳಗೆ ತಿಳಿಸಲಾಗಿದೆ. ಯಾವ ಆಟಗಾರ ಯಾವ ತಂಡದ ವಿರುದ್ಧ ಹೆಚ್ಚು ಸಿಕ್ಸರ್ ಸಿಡಿಸಿದ್ದಾನೆ ಎಂಬುದನ್ನ ಈ ಕೆಳಗೆ ಕಾಣಬಹುದು.

ಶಾಹಿದ್ ಅಫ್ರಿದಿ
ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಪ್ರಸ್ತುತ ಏಷ್ಯಾಕಪ್‌ನಲ್ಲಿ ಒಂದು ತಂಡದ ವಿರುದ್ಧ ಅತಿ ಹೆಚ್ಚು ಸಿಕ್ಸರ್‌ಗಳ ಸಾರ್ವಕಾಲಿಕ ದಾಖಲೆಯನ್ನು ಹೊಂದಿದ್ದಾರೆ. ಬಾಂಗ್ಲಾದೇಶ ವಿರುದ್ಧ 13 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಅವರು ಈ ದಾಖಲೆಯನ್ನು ಹೊಂದಿದ್ದಾರೆ.
ಏಷ್ಯಾಕಪ್‌ನಲ್ಲಿ ತಂಡವೊಂದರ ವಿರುದ್ಧ ಅಷ್ಟೇ ಅಲ್ಲದೆ ಒಟ್ಟಾರೆ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆಯು ಶಾಹಿದ್ ಅಫ್ರಿದಿ ಹೆಸರಿನಲ್ಲಿದೆ. ಅಫ್ರಿದಿ 23 ಇನ್ನಿಂಗ್ಸ್‌ನಲ್ಲಿ 26 ಬಾರಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದ್ದಾರೆ. ಶ್ರೀಲಂಕಾದ ಸನತ್ ಜಯಸೂರ್ಯ 23, ರೋಹಿತ್ ಶರ್ಮಾ 21 ಸಿಕ್ಸರ್ ದಾಖಲೆ ಹೊಂದಿದ್ದಾರೆ.

ಸೌರವ್ ಗಂಗೂಲಿ
ಈ ಪಟ್ಟಿಯಲ್ಲಿ ಭಾರತದ ಮಾಜಿ ನಾಯಕ ಮತ್ತು ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರು 12 ಸಿಕ್ಸರ್‌ಗಳೊಂದಿಗೆ ಎರಡನೇ ಸ್ಥಾನ ಪಡೆದರು. ಅಫ್ರಿದಿಯಂತೆ ದಾದಾ ಕೂಡ ಬಾಂಗ್ಲಾದೇಶದ ವಿರುದ್ಧ ಹೆಚ್ಚು ಸಿಕ್ಸರ್ ಬಾರಿಸಿದ್ದರು. ಗಂಗೂಲಿ ಜೊತೆಗೆ ಶ್ರೀಲಂಕಾದ ಮಾಜಿ ದಿಗ್ಗಜ ಸನತ್ ಜಯಸೂರ್ಯ ಕೂಡ ಇದ್ದಾರೆ. ಬಾಂಗ್ಲಾದೇಶ ವಿರುದ್ಧವೇ 12 ಸಿಕ್ಸರ್‌ಗಳನ್ನು ಬಾರಿಸಿದ್ದರು.
Asia cup 2022: ಪಂದ್ಯಕ್ಕೂ ಮುನ್ನ ಪಾಕಿಸ್ತಾನಿ ಅಭಿಮಾನಿಯನ್ನ ಅಪ್ಪಿಕೊಂಡ ರೋಹಿತ್ ಶರ್ಮಾ, Video Viral

ರೋಹಿತ್ ಶರ್ಮಾ
ಶಾಹಿದ್ ಅಫ್ರಿದಿ ಅವರ ಸಾರ್ವಕಾಲಿಕ ದಾಖಲೆ ಈ ಬಾರಿ ಮುರಿಯುವ ಸಾಧ್ಯತೆ ಹೆಚ್ಚಿದೆ. ಭಾರತದ ನಾಯಕ ರೋಹಿತ್ ಶರ್ಮಾ ಈ ದಾಖಲೆಯ ಮೇಲೆ ಕಣ್ಣಿಟ್ಟಿದ್ದಾರೆ. ಅವರು ಪ್ರಸ್ತುತ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಆದರೆ ಅವರು ಈಗಾಗಲೇ ಪಾಕಿಸ್ತಾನ ವಿರುದ್ಧ 10 ಸಿಕ್ಸರ್ ಬಾರಿಸಿದ್ದಾರೆ.
ಭಾನುವಾರ ನಡೆಯಲಿರುವ ಸೂಪರ್ ಸಂಡೇ ಫೈಟ್‌ನಲ್ಲಿ ಪಾಕಿಸ್ತಾನ ವಿರುದ್ಧ ನಾಲ್ಕು ಸಿಕ್ಸರ್ ಬಾರಿಸಿದರೆ ಹಿಟ್ ಮ್ಯಾನ್ ಪಟ್ಟಿಯ ಕಿಂಗ್ ಆಗಲಿದ್ದಾರೆ.
ಅಷ್ಟೇ ಅಲ್ಲ, ರೋಹಿತ್ ಪಾಕಿಸ್ತಾನ ವಿರುದ್ಧ ಹಾಗೂ ಬಾಂಗ್ಲಾದೇಶ ವಿರುದ್ಧವೂ 10 ಸಿಕ್ಸರ್ ಬಾರಿಸಿದ್ದಾರೆ. ಟೂರ್ನಿಯ ಸೂಪರ್ ಫೋರ್‌ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗುವ ಸಾಧ್ಯತೆ ಇರುವುದರಿಂದ ಈ ಪಂದ್ಯದಲ್ಲೂ ದಾಖಲೆ ಬದಲಿಸುವ ಅವಕಾಶವಿದೆ.
ಏಷ್ಯಾ ಕಪ್ 2022: ಪ್ರತಿಷ್ಠಿತ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 10 ಬ್ಯಾಟ್ಸ್‌ಮನ್‌ಗಳ ಪಟ್ಟಿ

ಮೊಹಮ್ಮದ್ ಅಜರುದ್ದೀನ್
ರೋಹಿತ್ ಶರ್ಮಾ ನಂತರ, ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಮತ್ತು ಪಾಕಿಸ್ತಾನದ ಮಾಜಿ ನಾಯಕ ಮಿಸ್ಬಾಹುಲ್ ಹಕ್ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿದ್ದಾರೆ. ಇಬ್ಬರೂ ಆಟಗಾರರು ತಲಾ ಒಂಬತ್ತು ಸಿಕ್ಸರ್ ಗಳಿಸಿದ್ದಾರೆ. ಅಜರ್ ಮತ್ತು ಮಿಸ್ಬಾ ಶ್ರೀಲಂಕಾ ವಿರುದ್ಧ ಹಲವು ಸಿಕ್ಸರ್‌ಗಳನ್ನು ಸಿಡಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications