ಏಷ್ಯಾಕಪ್ ಸೋಲು ಭಾರತಕ್ಕೆ ಬಹುದೊಡ್ಡ ಪಾಠ, ವಿಶ್ವಕಪ್‌ಗೂ ಮುನ್ನ ಎಚ್ಚೆತ್ತುಕೊಳ್ಳಲಿ: ಶೋಯೆಬ್ ಅಖ್ತರ್

ಏಷ್ಯಾಕಪ್ 2022 ಸೂಪರ್ 4 ಹಂತದಲ್ಲಿ ಸತತ ಎರಡು ಪಂದ್ಯಗಳನ್ನ ಸೋಲುವ ಮೂಲಕ ಟೀಂ ಇಂಡಿಯಾ ಟ್ರೋಫಿ ಗೆಲ್ಲುವ ಕನಸನ್ನ ಬಹುತೇಕ ಕೈ ಬಿಟ್ಟಿದೆ. ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ ಮತ್ತು ಆರಂಭಿಕ ವಿಕೆಟ್ ಪಡೆಯುವಲ್ಲಿ ಬೌಲರ್‌ಗಳಿಗೆ ಸಾಧ್ಯವಾಗದೇ ಇರುವುದು ಭಾರತದ ಸೋಲಿಗೆ ಎಡೆಮಾಡಿಕೊಟ್ಟಿತು.
ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ಅನುಭವಿಸಿದ ಈ ಸೋಲು, ಎಚ್ಚೆತ್ತುಕೊಳ್ಳುವ ಉತ್ತಮ ಕರೆಯಾಗಿದೆ ಎಂದು ಪಾಕಿಸ್ತಾನದ ಮಾಜಿ ಬೌಲರ್ ಶೋಯೆಬ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.
ಭಾರತವು ಗ್ರೂಪ್ ಹಂತದಲ್ಲಿ ಆರಂಭಿಕ ಎರಡೂ ಪಂದ್ಯಗಳನ್ನ ಗೆಲ್ಲುವ ಮೂಲಕ ಸೂಪರ್ 4 ಪ್ರವೇಶಿಸಿತು. ಪಾಕಿಸ್ತಾನ ವಿರುದ್ಧ ಐದು ವಿಕೆಟ್‌ಗಳ ಜಯ ಸಾಧಿಸಿ, ಹಾಂಕಾಂಗ್ ವಿರುದ್ಧ 192 ರನ್‌ಗಳಿಂದ ಡಿಫೆಂಡ್ ಮಾಡಿಕೊಂಡಿದ್ದಲ್ಲದೆ 40 ರನ್‌ಗಳಿಂದ ಗೆಲುವು ಸಾಧಿಸಿತು. ಆದ್ರೆ ಸೂಪರ್ 4 ಹಂತದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಸೋಲುವ ಮೂಲಕ ಭಾರೀ ನಿರಾಸೆ ಮೂಡಿಸಿತು.

ಏಷ್ಯಾಕಪ್‌ನ ಫೇವರಿಟ್ ಆಗಿದ್ದ ಟೀಂ ಇಂಡಿಯಾ
ಏಷ್ಯಾಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಟ್ರೋಫಿ ಮುಡಿಗೇರಿಸಿಕೊಂಡಿರುವ ಟೀಂ ಇಂಡಿಯಾ, ಟಿ20 ವಿಶ್ವಕಪ್‌ಗೂ ಮುನ್ನಡೆ ನಡೆಯುತ್ತಿರುವ ಏಷ್ಯಾಕಪ್‌ನ ಹಾಟ್ ಫೇವರಿಟ್ ಆಗಿತ್ತು. ದಾಖಲೆಯ ಮತ್ತೊಂದು ಟ್ರೋಫಿ ಗೆಲ್ಲಲು ಹಾಲಿ ಚಾಂಪಿಯನ್ನರು ಯೋಜನೆ ರೂಪಿಸಿಕೊಂಡಿದ್ದರು. ಆದ್ರೆ ರೋಹಿತ್ ಶರ್ಮಾ ಪಡೆ ಅಂದುಕೊಂಡ ಯೋಜನೆಗಳೆಲ್ಲಾ ತಲೆಕೆಳಗಾಗಿವೆ. ರೋಹಿತ್ ನಾಯಕನಾದ ಬಳಿಕ ಟಿ20 ಕ್ರಿಕೆಟ್‌ನಲ್ಲಿ ಭಾರತ ಮೊದಲ ಬಾರಿಗೆ ಸತತ ಎರಡು ಪಂದ್ಯ ಸೋತು ಹಿನ್ನಡೆ ಅನುಭವಿಸಿದೆ.
ದಿನೇಶ್ ಕಾರ್ತಿಕ್ ಡ್ರೆಸ್ಸಿಂಗ್ ರೂಂನಲ್ಲಿ ಕುಳಿತು ಪಂದ್ಯ ಗೆಲ್ಲಿಸಲು ಸಾಧ್ಯವಿಲ್ಲ: ವೀರೇಂದ್ರ ಸೆಹ್ವಾಗ್

ಭಾರತ ಏಷ್ಯಾಕಪ್ ಫೈನಲ್ ತಲುಪಲಿ ಎಂದು ಬಯಸಿದ ಶೋಯೆಬ್ ಅಖ್ತರ್
ಟಿ20 ವಿಶ್ವಕಪ್‌ಗೂ ಮುನ್ನ ಭಾರತವು ಎಚ್ಚೆತ್ತುಕೊಳ್ಳಲು ಇದು ಸರಿಯಾದ ಸಮಯವಾಗಿದೆ. ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ಪ್ರದರ್ಶನವನ್ನ ಗಮನಿಸಿದ್ರೆ ವಿಶ್ವಕಪ್‌ಗೆ ಮುನ್ನ ತಮ್ಮ ವೈಫಲ್ಯಗಳನ್ನ ಸರಿಪಡಿಸಿಕೊಂಡು ರೆಡಿಯಾಗಬೇಕಿದೆ ಎಂದಿದ್ದಾರೆ.
"ನೀವು ಮುಂದಿನ ಭಾಗವನ್ನು ನೋಡಲು ಬಯಸಿದರೆ, ಭಾರತಕ್ಕೆ ಉತ್ತಮ ಎಚ್ಚರಿಕೆಯ ಕರೆ ಸಿಕ್ಕಿದೆ. ಇಲ್ಲಿಂದ ಭಾರತ ತನ್ನ ಅಂತಿಮ ಹನ್ನೊಂದನ್ನು ಹುಡುಕಬೇಕಾಗಿದೆ. ಈ ಮೂಲಕ ಭಾರತಕ್ಕೆ ಒಳ್ಳೆಯದಾಗಿದೆ. ಆದ್ದರಿಂದ ವಿಶ್ವಕಪ್‌ಗೂ ಮುನ್ನ ಭಾರತಕ್ಕೆ ಉತ್ತಮ ವೇಕ್‌ಅಪ್ ಕಾಲ್ ಸಿಕ್ಕಿದೆ ಮತ್ತು ಅವರು ತಮ್ಮ ಅಂತಿಮ ಹನ್ನೊಂದನ್ನು ನಿರ್ಧರಿಸಬಹುದು. ಅವರು ಎಲ್ಲಿ ದುರ್ಬಲರಾಗಿದ್ದಾರೆಂದು ಈಗ ಅವರಿಗೆ ತಿಳಿದಿದೆ'' ಎಂದು ಶೋಯೆಬ್ ಅಖ್ತರ್ ಹೇಳಿದರು.
20ನೇ ಓವರ್‌ನಲ್ಲಿ ಅರ್ಷ್‌ದೀಪ್ ಅದ್ಭುತ ಬೌಲಿಂಗ್: ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ಪಡೆದ ಯುವ ಬೌಲರ್

ಟೀಂ ಇಂಡಿಯಾ ಬೌಲಿಂಗ್ ಬಲಪಡಿಸಬೇಕು: ಶೋಯೆಬ್ ಅಖ್ತರ್
ಚುಟುಕು ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾ ಅಂತಿಮ ಐವರು ಬೌಲರ್‌ಗಳನ್ನ ಹುಡುಕಿಕೊಳ್ಳಬೇಕಿದೆ ಮತ್ತು ಬೌಲಿಂಗ್ ಬಲಪಡಿಸುವ ಪ್ರಯತ್ನ ನಡೆಸಬೇಕು ಎಂದು ಪಾಕಿಸ್ತಾನದ ಮಾಜಿ ಬೌಲರ್ ಶೋಯೆಬ್ ಅಖ್ತರ್ ಹೇಳಿದ್ದಾರೆ. ಇದೇ ವೇಳೆಯಲ್ಲಿ ಹಾರ್ದಿಕ್ ಪಾಂಡ್ಯ 140ರ ವೇಗದಲ್ಲಿ ಬೌಲಿಂಗ್ ಮಾಡುವುದು ಮತ್ತು ಅರ್ಷ್‌ದೀಪ್ ಸಿಂಗ್ ಉತ್ತಮವಾಗಿ ಬೌಲಿಂಗ್ ಮಾಡುತ್ತಿರುವುದನ್ನ ನೋಡಲು ಖುಷಿಯಾಗುತ್ತದೆ ಎಂದಿದ್ದಾರೆ.
ಇಲ್ಲಿಂದ ಭಾರತ ಬೌಲಿಂಗ್ ಸುಧಾರಿಸಿಕೊಳ್ಳಬೇಕು. ಅವರು ತಮ್ಮ ಅಂತಿಮ ಹನ್ನೊಂದರಲ್ಲಿ ತಮ್ಮ ಐದು ಬೌಲರ್‌ಗಳನ್ನು ಹುಡುಕಬೇಕಾಗಿದೆ. ಇನ್ನೊಂದು ಒಳ್ಳೆಯ ವಿಷಯವೆಂದರೆ ಹಾರ್ದಿಕ್ ಪಾಂಡ್ಯ 140kmph ಕ್ಕಿಂತ ಹೆಚ್ಚು ಬೌಲಿಂಗ್ ಮಾಡುತ್ತಿದ್ದಾರೆ ಮತ್ತು ಅರ್ಷದೀಪ್ ಸಿಂಗ್ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಹೌದು, ಅವರು ಕ್ಯಾಚ್ ಅನ್ನು ಕೈಬಿಟ್ಟಿರಬಹುದು ಆದರೆ ತಪ್ಪುಗಳು ಸಂಭವಿಸುತ್ತವೆ. ಆದ್ರೆ ಅವರು ಉತ್ತಮ ವೇಗದ ಬೌಲರ್ ಎಂದು ಹೊಗಳಿದ್ದಾರೆ.
"ಅವರು ಅಂತಿಮ ಓವರ್‌ನಲ್ಲಿ ಉತ್ತಮವಾಗಿ ಬೌಲ್ ಮಾಡಿದರು. ದುರದೃಷ್ಟವಶಾತ್, ಅವರು(ಭಾರತ) ಪಂದ್ಯವನ್ನು ಗೆಲ್ಲಬಹುದಿತ್ತು, ಆದರೆ ಕೊನೆಯ ಓವರ್ ಅನ್ನು ಚೆನ್ನಾಗಿ ಬೌಲ್ ಮಾಡಿದರು. ಅವರು ಉತ್ತಮ ಪ್ರತಿಭೆ ಎಂದು ನಾನು ಭಾವಿಸುತ್ತೇನೆ'' ಎಂದು ಶೋಯೆಬ್ ಅಖ್ತರ್ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications