ಕೊಹ್ಲಿ, ಪಾಂಡ್ಯನನ್ನು ಭೇಟಿ ಮಾಡಿದ ಪಾಕಿಸ್ತಾನದ ಖ್ಯಾತ ಮೀಮ್ಸ್ ಸ್ಟಾರ್: ಪಾಕ್ ಆಟಗಾರರ ಫಿಟ್ನೆಸ್ ಕುರಿತು ತಮಾಷೆಯ ವೀಡಿಯೋ!

ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ರೋಚಕ ಗೆಲುವಿನ ಬಳಿಕ ರೋಹಿತ್ ಶರ್ಮಾ ಪಡೆಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಪಾಕಿಸ್ತಾನ ತಂಡವನ್ನು 147 ರನ್‌ಗಳಿಗೆ ಕಟ್ಟಿಹಾಕಿದ ಭಾರತ, ಎರಡು ಎಸೆತ ಬಾಕಿ ಇರುವಂತೆಯೇ ಗುರಿ ತಲುಪಿ ಐದು ವಿಕೆಟ್‌ಗಳ ಗೆಲುವು ಸಾಧಿಸಿತು.
ಪಂದ್ಯದ ಬಳಿಕ ಪಾಕಿಸ್ತಾನದ ಖ್ಯಾತ ಮೀಮ್ಸ್ ಸ್ಟಾರ್ ಮೊಮಿನ್ ಶಾಕಿಬ್ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 2019 ರ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಸೋಲಿನ ಬಗ್ಗೆ ಅವರು ಪೋಸ್ಟ್ ಮಾಡಿದ ತಮಾಷೆಯ ವೀಡಿಯೊಗಳಿಂದ ಸಾಕಷ್ಟು ಫೇಮಸ್ ಆಗಿದ್ದ ಮೊಮಿನ್, ಟೀಂ ಇಂಡಿಯಾ ಆಟಗಾರರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಅವರು ಪಂದ್ಯ ಮುಗಿದ ಬಳಿಕ ಮಾಜಿ ನಾಯಕ ಕೊಹ್ಲಿ, ಪಾಂಡ್ಯರನ್ನ ಭೇಟಿ ಮಾಡಿದ್ದಾರೆ. ಪಾಕಿಸ್ತಾನದ ಸೋಲಿನಿಂದ ದುಃಖಿತನಾಗಿದ್ದರೂ, ವಿರಾಟ್ ಮತ್ತು ಹಾರ್ದಿಕ್ ಅವರನ್ನು ಭೇಟಿಯಾದ ನಂತರ ಈ ಪಾಕಿಸ್ತಾನಿ ಮೀಮ್ಸ್ ಸ್ಟಾರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಕೊಹ್ಲಿಯನ್ನ ಭೇಟಿ ಮಾಡಿ ಅಭಿನಂದನೆ ತಿಳಿಸಿದ ಮೊಮಿನ್
ವಿರಾಟ್ ಕೊಹ್ಲಿಗೆ ಹಸ್ತಲಾಘವ ಮಾಡಿದ ಮೊಮಿನ್, ಗೆಲುವಿಗೆ ಅಭಿನಂದನೆಗಳು ಎಂದರು. ಇಂದು ನನಗೆ ದುಃಖದ ದಿನ. ಆದರೆ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಅವರು ಪೋಸ್ಟ್ ಮಾಡಿದ ವೀಡಿಯೊಗಳಲ್ಲಿ ವಿರಾಟ್ ಅವರನ್ನು ಭೇಟಿ ಮಾಡುವ ವೀಡಿಯೊವಿದೆ, "ಒಬ್ಬ ಶ್ರೇಷ್ಠ ಕ್ರೀಡಾಪಟು ಮತ್ತು ನಂಬಲಾಗದಷ್ಟು ವಿನಮ್ರ ವ್ಯಕ್ತಿ" ಎಂದು ಮೊಮಿನ್ ಬರೆದಿದ್ದಾರೆ. ಅವರು ಮತ್ತೆ ಫಾರ್ಮ್ ಮರಳಿರೋದನ್ನ ನೋಡಲು ಸಂತೋಷವಾಗಿದೆ. ಇದು ಉತ್ತಮ ಆಟವಾಗಿತ್ತು. ಫೈನಲ್ ನಲ್ಲಿ ನೋಡೋಣ ಎಂದಿದ್ದಾರೆ.
ಹಾರ್ದಿಕ್ ಪಾಂಡ್ಯ ಅದ್ಭುತ ಕಂಬ್ಯಾಕ್: ಸ್ಟ್ರೆಚರ್‌ನಲ್ಲಿ ಮೈದಾನ ತೊರೆದ ಬಳಿಕ ಪಾಂಡ್ಯ ಜರ್ನಿ ಹೇಗಿತ್ತು?
ಹಾರ್ದಿಕ್ ಪಾಂಡ್ಯ ಕುರಿತು ಮೊಮಿನ್ ಮೆಚ್ಚುಗೆ
ಹಾರ್ದಿಕ್ ಅವರೊಂದಿಗಿನ ಭೇಟಿಯ ವೀಡಿಯೊದ ಶೀರ್ಷಿಕೆಯಲ್ಲಿ, ಮೋಮಿನ್ ಬರೆದಿದ್ದಾರೆ, ಇದು ಉತ್ತಮ ಸ್ಪರ್ಧಾತ್ಮಕ ಹೋರಾಟವಾಗಿತ್ತು. ಪಾಕಿಸ್ತಾನದ ಬೌಲರ್‌ಗಳು ಉತ್ತಮವಾಗಿ ಬೌಲಿಂಗ್ ಮಾಡಿದರು. ಆದರೆ, ಹಾರ್ದಿಕ್ ಬ್ಯಾಟ್‌ನಿಂದ ಪಾಕಿಸ್ತಾನದಿಂದ ಪಂದ್ಯವನ್ನು ಕಸಿದುಕೊಂಡರು. ಗೆದ್ದ ಸಿಕ್ಸರ್ ಅನ್ನು ಮರೆಯುವುದಿಲ್ಲ ಎಂದೂ ಮೊಮಿನ್ ತಿಳಿಸಿದ್ದಾರೆ.
ಐಪಿಎಲ್ ಮಾದರಿಯಲ್ಲೇ ರಾಷ್ಟ್ರೀಯ ತಂಡಕ್ಕೆ ಮರಳಿದ ನಂತರವೂ ಅದ್ಭುತ ಪ್ರದರ್ಶನ ನೀಡುತ್ತಿರುವ ಹಾರ್ದಿಕ್ ಪಾಂಡ್ಯಗೆ ಮೊಮಿನ್ ಇದೇ ವೇಳೆಯಲ್ಲಿ ಧನ್ಯವಾದಗಳನ್ನು ಅರ್ಪಿಸಿದರು. ಫೈನಲ್‌ನಲ್ಲಿ ಭಾರತ-ಪಾಕ್ ನಡುವಿನ ಹಣಾಹಣಿಯ ನಿರೀಕ್ಷೆಯ ಬಗ್ಗೆಯೂ ಹೇಳಲಾಗಿದೆ.
ಇದಪ್ಪಾ ಆತ್ಮವಿಶ್ವಾಸ!: ಕಣ್ಸನ್ನೆಯಲ್ಲೇ 'ನಾನ್ ಇದೀನಲ್ಲಾ' ಎಂದ ಹಾರ್ದಿಕ್: ವೈರಲ್ ಆಯ್ತು ವಿಡಿಯೋ
ಪಾಕ್ ತಂಡವನ್ನ ಅಣಕಿಸಿದ ಮೊಮಿನ್
ಮೊಮಿನ್ ಆಟದ ಸಮಯದಲ್ಲಿ ಹಲವಾರು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಪಾಕ್ ನಾಯಕ ಬಾಬರ್ ಅಜಮ್ ರನ್ ಗಳಿಸದೇ ನಿರಾಸೆ ಅನುಭವಿಸಿದರ ಜೊತೆಗೆ ಪಾಕಿಸ್ತಾನದ ಬ್ಯಾಟಿಂಗ್ ನೋಡಿದ ನಂತರ ಆಟಗಾರರ ಫಿಟ್ನೆಸ್ ತೊಂದರೆಗೆ ಒಳಗಾಗುವ ಕೆಲವು ತಮಾಷೆಯ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ.
ಪಾಕಿಸ್ತಾನವು ಕೊನೆಯಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡಾಗ ಮೊಮಿನ್ ಬ್ಯಾಟ್‌ನೊಂದಿಗೆ ಮೈದಾನಕ್ಕೆ ಇಳಿಯಲು ಸಿದ್ಧರಿರುವ ವೀಡಿಯೊಗಳಿಂದ ಹಿಡಿದು, ಪಾಕಿಸ್ತಾನದ ಸೋಲಿನ ನಂತರ ಅವರು ಕಣ್ಣೀರು ಹಾಕುವ ತಮಾಷೆಯ ವೀಡಿಯೊಗಳವರೆಗೆ ವೀಡಿಯೊಗಳು ವೈರಲ್ ಆಗಿವೆ. ಇದ್ರ ಜೊತೆಗೆ ಪಾಕಿಸ್ತಾನಿ ಆಟಗಾರರು ಮೈದಾನದಲ್ಲಿ ಎದುರಿಸಿದ ಫಿಟ್ನೆಸ್ ಸಮಸ್ಯೆಗಳ ಕುರಿತಾಗಿಯೂ ಅಣಕಿಸಿದ್ದಾರೆ. ಭಾರತ-ಪಾಕಿಸ್ತಾನವನ್ನು ಫೈನಲ್ ನಲ್ಲಿ ನೋಡಲು ಸಾಧ್ಯವಾಗದಿದ್ದರೂ, ಸೂಪರ್ ಫೋರ್ ನಲ್ಲೂ ಭಾರತ-ಪಾಕ್ ಹಣಾಹಣಿ ನಡೆಯುವುದು ಖಚಿತ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications