ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇದಪ್ಪಾ ಆತ್ಮವಿಶ್ವಾಸ!: ಕಣ್ಸನ್ನೆಯಲ್ಲೇ 'ನಾನ್ ಇದೀನಲ್ಲಾ' ಎಂದ ಹಾರ್ದಿಕ್: ವೈರಲ್ ಆಯ್ತು ವಿಡಿಯೋ

India vs Pakistan: Indian Fans crazy for Hardik Pandya Confident reaction after dot ball

ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾ ಕಪ್‌ನ ಮುಖಾಮುಖಿ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದೆ. ಸಾಕಷ್ಟು ಪೈಪೋಟಿಯಿಂದ ಕೂಡಿದ್ದ ಈ ಪಂದ್ಯದಲ್ಲಿ ಎರಡು ತಂಡಗಳು ಕೂಡ ಗೆಲುವಿಗಾಗಿ ಶಕ್ತಿ ಮೀರಿ ಪ್ರಯತ್ನಿಸಿದೆ. ಅಂತಿಮ ಓವರ್‌ನಲ್ಲಿ ಭಾರತ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸಿಕ್ಸರ್ ಸಿಡಿಸುವ ಮೂಲಕ ಭಾರತ ತಂಡಕ್ಕೆ ಗೆಲುವು ಸಾರುವಲ್ಲಿ ಯಶಸ್ವಿಯಾಗಿದ್ದಾರೆ. ಬ್ಯಾಟಿಂಗ್ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಅಬ್ಬರಿಸಿದ ಹಾರ್ದಿಕ್ ಪಾಂಡ್ಯ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಹಾರ್ದಿಕ್ ಪಾಂಡ್ಯ ಈ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ನೀಡಿದ ಸಮಯೋಚಿತ ಪ್ರದರ್ಶನ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಬ್ಯಾಟಿಂಗ್ ನಡೆಸಲು ಅತ್ಯಂತ ಸವಾಲಾಗಿದ್ದ ಪಿಚ್‌ನಲ್ಲಿ ಹಾರ್ದಿಕ್ ಪಾಂಡ್ಯ 17 ಎಸೆತಗಳಲ್ಲಿ 33 ರನ್ ಬಾರಿಸುವ ಮೂಲಕ ತಾನು ಭಾರತ ತಂಡಕ್ಕೆ ಎಷ್ಟು ಮೌಲ್ಯಯುತ ಆಟಗಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಆದರೆ ಈ ಪಂದ್ಯದಲ್ಲಿ ಗೆಲುವಿನ ಸಿಕ್ಸರ್ ಬಾರಿಸುವುದಕ್ಕೂ ಮುನ್ನ ಅತ್ಯಂತ ಒತ್ತಡದ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ತಾಳ್ಮೆಯಿಂದಲೇ ಜೊತೆಗಾರ ದಿನೇಶ್ ಕಾರ್ತಿಕ್‌ಗೆ ನೀಡಿದ ಒಂದು ಕಣ್ಸನ್ನೆ ಅಭಿಮಾನಿಗಳ ಮನಸೂರೆಗೊಂಡಿದ್ದು ಆಲ್‌ರೌಂಡರ್‌ನ ಆತ್ಮವಿಶ್ವಾಸಕ್ಕೆ ಕನ್ನಡಿ ಹಿಡಿದಂತಿದೆ.

ಬಾಬರ್ ಅಜಂ ಅಲ್ಲ: ಈ ಪಾಕ್ ಆಟಗಾರ ಐಪಿಎಲ್‌ನಲ್ಲಿ ಇದ್ದರೆ 14-15 ಕೋಟಿಗೆ ಹರಾಜಾಗುತ್ತಿದ್ದ ಎಂದ ಆರ್ ಅಶ್ವಿನ್ಬಾಬರ್ ಅಜಂ ಅಲ್ಲ: ಈ ಪಾಕ್ ಆಟಗಾರ ಐಪಿಎಲ್‌ನಲ್ಲಿ ಇದ್ದರೆ 14-15 ಕೋಟಿಗೆ ಹರಾಜಾಗುತ್ತಿದ್ದ ಎಂದ ಆರ್ ಅಶ್ವಿನ್

ಲಾಸ್ಟ್ ಓವರ್ ಥ್ರಿಲ್ಲರ್!

ಲಾಸ್ಟ್ ಓವರ್ ಥ್ರಿಲ್ಲರ್!

ರೋಚಕ ಪಂದ್ಯದ ಅಂತಿಮ ಓವರ್‌ನಲ್ಲಿ ಭಾರತ ತಂಡ ಗೆಲುವಿನ ಸನಿಹಕ್ಕೆ ತಲುಪಿತ್ತು. ಆರು ಎಸೆತಗಳಲ್ಲಿ ಕೇವಲ 7 ರನ್‌ಗಳಿಸುವ ಸವಾಲು ಭಾರತ ತಂಡದ ಮುಂದಿತ್ತು. ಅಂತಿಮ ಓವರ್ ಎಸೆಯಲು ಕಣಕ್ಕಿಳಿದಿದ್ದು ಎಡಗೈ ಸ್ಪಿನ್ನರ್ ಮೊಹಮ್ಮದ್ ನವಾಜ್. ರವೀಂದ್ರ ಜಡೇಜಾ ಸ್ಟ್ರೈಕ್‌ನಲ್ಲಿ ಚೆಂಡು ಎದುರಿಸಿದ್ದರು. ಆದರೆ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿದ ಅವರು ಬೌಲ್ಡ್ ಆಗುವ ಮೂಲಕ ವಿಕೆಟ್ ಕಳೆದುಕೊಂಡರು. ನಂತರ ಕಣಕ್ಕಿಳಿದಿದ್ದು ದಿನೇಶ್ ಕಾರ್ತಿಕ್. ಎದುರಿಸಿದ ಮೊದಲ ಎಸೆತದಲ್ಲಿ ಒಂಟಿ ರನ್ ಕದ್ದ ಡಿಕೆ ಹಾರ್ದಿಕ್ ಪಾಂಡ್ಯಗೆ ಕ್ರೀಸ್ ನೀಡಿದರು.

ಕಣ್ಣಲ್ಲಿದ್ದ ಆತ್ಮವಿಶ್ವಾಸದಿಂದಲೇ ಭಾರತ ಗೆದ್ದಾಗಿತ್ತು!

ಅಂತಿಮ ನಾಲ್ಕು ಎಸೆತಗಳಲ್ಲಿ 6 ರನ್‌ಗಳಿಸುವ ಸವಾಲು. ಈ ಸಂದರ್ಭದಲ್ಲಿ ಹಾರ್ದಿಕ್ ಬೌಂಡರಿ ಪಡೆಯುವ ಪ್ರಯತ್ನ ನಡೆಸಿದರಾದರೂ ಚೆಂಡು ಫೀಲ್ಡರ್‌ನ ಕೈಗೆ ತಲುಪಿದ್ದ ಕಾರಣ ರನ್ ಬಾರಲಿಲ್ಲ. ಮೂರು ಎಸೆತದಲ್ಲಿ ಆರು ರನ್‌ಗಳಿಸುವ ಕಠಿಣ ಸವಾಲು. ಈ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ನಾನ್‌ಸ್ಟ್ರೈಕ್‌ನಲ್ಲಿದ್ದ ದಿನೇಶ್ ಕಾರ್ತಿಕ್‌ಗೆ ಕಣ್ಣಲ್ಲೇ ಒಂದು ಸನ್ನೆ ಮಾಡಿದ್ದರು. 'ನಾನ್ ಇದ್ದೀನಿ. ಚಿಂತೆ ಯಾಕೆ?' ಎಂಬಂತಿತ್ತು ಆ ಕಣ್ಣಿನ ಸನ್ನೆ. ಶಾಂತಚಿತ್ತದಿಂದ ಆತ್ಮವಿಶ್ವಾಸದಿಂದ ತುಂಬಿದ್ದ ಆ ನೋಟವನ್ನು ನೋಡಿಯೇ ಭಾರತೀಯ ಅಭಿಮಾನಿಗಳ ಮೇಲಿದ್ದ ಒತ್ತಡ ಸಂಪೂರ್ಣ ಕಡಿಮೆಯಾಗಿತ್ತು. ಖಂಡಿತಾ ಹಾರ್ದಿಕ್ ಈ ಪಂದ್ಯವನ್ನು ಸೋಲಿಸಲು ಬಿಡಲಾರ ಎಂಬ ಆತ್ಮವಿಶ್ವಾಸ ಅಭಿಮಾನಿಗಳಲ್ಲಿ ತುಂಬಿತ್ತು. ಮುಂದಿನ ಎಸೆತದಲ್ಲಿಯೇ ಅಮೋಘ ಸಿಕ್ಸರ್ ಬಾರಿಸಿದ ಹಾರ್ದಿಕ್ ಪಾಂಡ್ಯ ಭಾರತಕ್ಕೆ ವಿಕೆಟ್‌ಗಳ ರೋಚಕ ಜಯವನ್ನು ಸಾರಿದರು. ಈ ಮೂಲಕ ಏಷ್ಯಾ ಕಪ್‌ನ ಮೊದಲ ಪಂದ್ಯದಲ್ಲಿ ಬದ್ಧ ಎದುರಾಳಿ ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ ಸಾಧಿಸಿದೆ.

ಬೌಲಿಂಗ್‌ನಲ್ಲಿಯೂ ಹಾರ್ದಿಕ್ ಪಾಂಡ್ಯ ಜಾದೂ

ಬೌಲಿಂಗ್‌ನಲ್ಲಿಯೂ ಹಾರ್ದಿಕ್ ಪಾಂಡ್ಯ ಜಾದೂ

ಇದಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿಯೂ ಅಮೋಘ ಪ್ರದರ್ಶನ ನೀಡುವ ಮೂಲಕ ಪಾಕಿಸ್ತಾನ ತಂಡಕ್ಕೆ ಆಘಾತ ನೀಡಿದರು. ನಾಲ್ಕು ಓವರ್‌ಗಳ ತಮ್ಮ ಬೌಲಿಂಗ್ ದಾಳಿಯಲ್ಲಿ ಹಾರ್ದಿಕ್ ಪಾಂಡ್ಯ ಬರೊಬ್ಬರಿ ಮೂರು ವಿಕೆಟ್ ಪಡೆದುಕೊಂಡಿದ್ದಾರೆ. ಬಿಟ್ಟುಕೊಟ್ಟ ರನ್ ಕೇವಲ 25. ಮೊಹಮ್ಮದ್ ರಿಜ್ವಾನ್, ಇಫ್ತಿಕಾರ್ ಅಹ್ಮದ್ ಹಾಗೂ ಕುಶ್ದಿಲ್ ಹಾರ್ದಿಕ್ ಪಾಡೆದ ವಿಕೆಟ್‌ಗಳು. ತಮ್ಮ ಶಾರ್ಟ್‌ಪಿಚ್ ಎಸೆತವನ್ನು ಅದ್ಭುತವಾಗಿ ಬಳಸಿಕೊಂಡ ಹಾರ್ದಿಕ್ ಪಾಕ್ ಬ್ಯಾಟರ್‌ಗಳಿಗೆ ಸವಾಲಾದರು. ಇನ್ನು ಅನುಭವಿ ಭುವನೇಶ್ವರ್ ಕುಮಾರ್ ಈ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಿತ್ತು ಮಿಂಚಿದ್ದಾರೆ.

ಇತ್ತಂಡಗಳ ಆಡುವ ಬಳಗ

ಇತ್ತಂಡಗಳ ಆಡುವ ಬಳಗ

ಭಾರತ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದಿನೇಶ್ ಕಾರ್ತಿಕ್ (ವಿಕೆ), ಹಾರ್ದಿಕ್ ಪಾಂಡ್ಯ,
ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್
ಬೆಂಚ್: ರಿಷಬ್ ಪಂತ್, ರವಿಚಂದ್ರನ್ ಅಶ್ವಿನ್, ದೀಪಕ್ ಹೂಡಾ, ರವಿ ಬಿಷ್ಣೋಯ್

ಪಾಕಿಸ್ತಾನ ಆಡುವ ಬಳಗ: ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಆಸಿಫ್ ಅಲಿ, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ನಸೀಮ್ ಶಾ, ಹ್ಯಾರಿಸ್ ರೌಫ್, ಶಹನವಾಜ್ ದಹಾನಿ
ಬೆಂಚ್: ಮೊಹಮ್ಮದ್ ಹಸನೈನ್, ಉಸ್ಮಾನ್ ಖಾದಿರ್, ಹಸನ್ ಅಲಿ, ಹೈದರ್ ಅಲಿ

Story first published: Monday, August 29, 2022, 14:01 [IST]
Other articles published on Aug 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X