
ಪಾಕಿಸ್ತಾನ ವಿರುದ್ಧ ಬೌಲಿಂಗ್‌ನಲ್ಲಿ ಹಾರ್ದಿಕ್ ಮಿಂಚು
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಪರ ಭುವನೇಶ್ವರ್ ಕುಮಾರ್ ಎದುರಾಳಿ ತಂಡದ ಮೊದಲ ವಿಕೆಟ್ ಎಗರಿಸಿದ್ರೆ, ನಂತರ ನಡೆದಿದ್ದು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮಿಂಚು. ಇಫ್ತಿಕರ್ ಅಹ್ಮದ್ (28), ಮೊಹಮ್ಮದ್ ರಿಜ್ವಾನ್ (43), ಖುಷ್ದಿಲ್ (2) ವಿಕೆಟ್ ಪಡೆಯುವ ಮೂಲಕ ಸೆಟ್ ಆಗಿದ್ದ ಬ್ಯಾಟರ್‌ಗಳನ್ನೇ ಪೆವಿಲಿಯನ್‌ಗೆ ಅಟ್ಟಿದರು.
ಅದ್ರಲ್ಲೂ ತನ್ನ ಪ್ರಮುಖ ಅಸ್ತ್ರ ಶಾರ್ಟ್ ಬಾಲ್ ಮೂಲಕ ಪಾಕ್ ಬ್ಯಾಟ್ಸ್‌ಮನ್‌ಗಳ ನಿದ್ದೆಗೆಡಿಸಿದ ಹಾರ್ದಿಕ್ ಪಾಂಡ್ಯ ಎದುರಾಳಿ ಪಾಕ್ ಬ್ಯಾಟಿಂಗ್ ವಿಭಾಗಕ್ಕೆ ಬಲವಾದ ಪೆಟ್ಟು ನೀಡಿದರು. 4 ಓವರ್‌ಗಳಲ್ಲಿ 25 ರನ್ ನೀಡಿದ ಪಾಂಡ್ಯ 3 ಪ್ರಮುಖ ವಿಕೆಟ್ ಕಬಳಿಸಿದ್ರು.

ಬ್ಯಾಟಿಂಗ್‌ನಲ್ಲಿ ಬರೋಡಾ ಆಲ್‌ರೌಂಡರ್ ಅಬ್ಬರ
ಬೌಲಿಂಗ್ ಅಷ್ಟೇ ಅಲ್ಲದೆ ಭಾರತಕ್ಕೆ ಬ್ಯಾಟಿಂಗ್‌ನಲ್ಲೂ ನೆರವಾದ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾವನ್ನ ಗೆಲುವಿನ ದಡ ತಲುಪಿಸಿದರು. ರವೀಂದ್ರ ಜಡೇಜಾ ಜೊತೆಗೂಡಿ ಐದನೇ ವಿಕೆಟ್‌ಗೆ 52ರನ್‌ಗಳ ಜೊತೆಯಾಟವಾಡಿದ ಹಾರ್ದಿಕ್ ಪಾಕ್‌ನಿಂದ ಸುಲಭವಾಗಿ ಗೆಲುವನ್ನ ಕಸಿದುಕೊಂಡರು.
ಕೇವಲ 17 ಎಸೆತಗಳಲ್ಲಿ 194.12ರ ಸ್ಟ್ರೈಕ್‌ರೇಟ್‌ನಲ್ಲಿ ಅಜೇಯ 33ರನ್ ಕಲೆಹಾಕಿದ ಹಾರ್ದಿಕ್ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 1 ಅಮೋಘ ಸಿಕ್ಸರ್ ಒಳಗೊಂಡಿತ್ತು. ಮೊಹಮ್ಮದ್ ನವಾಜ್ ಬೌಲಿಂಗ್‌ನಲ್ಲಿ ಚೆಂಡನ್ನ ಬೌಂಡರಿ ಗೆರೆ ದಾಟಿಸಿದ ಹಾರ್ದಿಕ್ ಭಾರತಕ್ಕೆ ಐದು ವಿಕೆಟ್‌ಗಳ ಗೆಲುವು ತಂದುಕೊಟ್ಟರು. ಇನ್ನೆರಡು ಎಸೆತ ಬಾಕಿ ಇರುವಂತೆಯೇ ಭಾರತ 148ರನ್ ಚೇಸ್ ಮಾಡಿ ಪಂದ್ಯ ಗೆದ್ದಿತು.
IND vs PAK: ವೀರೋಚಿತ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ಬಗ್ಗೆ ವಿರಾಟ್ ಕೊಹ್ಲಿ ದೊಡ್ಡ ಮಾತು
ಹಿನ್ನಡೆಗಿಂತ, ಕಂಬ್ಯಾಕ್ ಮಾಡುವುದೇ ಶ್ರೇಷ್ಟ ಎಂದ ಪಾಂಡ್ಯ
2018ರ ಏಷ್ಯಾಕಪ್ ವೇಳೆಯ ಆರಂಭದಲ್ಲೇ ಇಂಜ್ಯುರಿಯಿಂದಾಗಿ ಸ್ಟ್ರೆಚರ್‌ನಲ್ಲಿ ಫೀಲ್ಡ್ ತೊರೆದಿದ್ದ ಹಾರ್ದಿಕ್ ಪಾಂಡ್ಯ ಆ ಬಳಿಕ ಕಂಬ್ಯಾಕ್ ಮಾಡಿ ರೀತಿ ನಿಜಕ್ಕೂ ರೋಚಕವಾಗಿತ್ತು.
ಟೀಂ ಇಂಡಿಯಾ ಸ್ಫೋಟಕ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬೆನ್ನು ಮೂಳೆಯ ಶಸ್ತ್ರಚಿಕಿತ್ಸೆ ಬಳಿಕ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಮಂಕಾಗಿದ್ದನ್ನ ನಾವು ಕಂಡಿದ್ದೇವೆ. ಅದ್ರಲ್ಲೂ ಆಲ್‌ರೌಂಡರ್ ಆಗಿ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದ ಪಾಂಡ್ಯ 2021ರ ಐಪಿಎಲ್ ಸೀಸನ್‌ನಲ್ಲಿ ಒಂದೇ ಒಂದು ಎಸೆತವನ್ನು ಬೌಲಿಂಗ್ ಮಾಡಿರಲಿಲ್ಲ. ದುಬೈನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆದಿದ್ದ ಹಾರ್ದಿಕ್ ಅಲ್ಲೂ ಕೂಡ ಮಿಂಚುವಲ್ಲಿ ವಿಫಲಗೊಂಡಿದ್ದರು.
ಬ್ಯಾಟಿಂಗ್‌ನಲ್ಲಿ ಮಂಕಾಗಿರುವ, ಬೌಲಿಂಗ್‌ನಲ್ಲೂ ಸಂಪೂರ್ಣ ಲಯ ಕಳೆದುಕೊಂಡಿರುವ ಹಾರ್ದಿಕ್ ಪಾಂಡ್ಯರ ವೃತ್ತಿಜೀವನದ ಭವಿಷ್ಯ ಏನು ಎನ್ನುವುದು ಪ್ರಶ್ನೆಯಾಗಿತ್ತು. ಅನೇಕರು ಈತನ ಕೆರಿಯರ್ ಮುಗಿಯಿತು ಎಂದೇ ಭಾವಿಸಿದ್ದರು.

ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್ ಅಲ್ಲ ಎಂದಿದ್ದ ಕಪಿಲ್ ದೇವ್
ಹಾರ್ದಿಕ್ ಪಾಂಡ್ಯ ಐಪಿಎಲ್ 2021ರ ಸೀಸನ್‌ನಲ್ಲಿ ಮತ್ತು ಅದಕ್ಕೂ ಮುನ್ನ ನಿಯಮಿತವಾಗಿ ಬೌಲಿಂಗ್ ಮಾಡದ ಕಾರಣ ಅವರನ್ನು ಆಲ್ ರೌಂಡರ್ ಎಂದು ಪರಿಗಣಿಸಬಹುದೇ ಎಂದು ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಕಳೆದ ಐಪಿಎಲ್‌ಗೂ ಮುನ್ನ ಪ್ರಶ್ನಿಸಿದ್ದರು.
ಹೀಗಾಗಿಯೇ ಇವರನ್ನ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೂ ಆಯ್ಕೆ ಮಾಡಲಿಲ್ಲ. ಇವರ ಜಾಗದಲ್ಲಿ ಯುವ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಸ್ಥಾನ ಪಡೆದಿದ್ರು. ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡ ಬಳಿಕ ಐಪಿಎಲ್ 14ನೇ ಸೀಸನ್‌ನಲ್ಲಿ ಆಡಿದ ಪಾಂಡ್ಯ ಬ್ಯಾಟಿಂಗ್‌ನಲ್ಲೂ ಮಿಂಚಲಿಲ್ಲ. ಜೊತೆಗೆ ಬೌಲಿಂಗ್ ಕೂಡ ಮಾಡದೇ ಆಲ್‌ರೌಂಡರ್ ಸ್ಥಾನಕ್ಕೆ ನ್ಯಾಯ ಒದಗಿಸಲಿಲ್ಲ.
ಇದಪ್ಪಾ ಆತ್ಮವಿಶ್ವಾಸ!: ಕಣ್ಸನ್ನೆಯಲ್ಲೇ 'ನಾನ್ ಇದೀನಲ್ಲಾ' ಎಂದ ಹಾರ್ದಿಕ್: ವೈರಲ್ ಆಯ್ತು ವಿಡಿಯೋ

ಐಪಿಎಲ್ 15ನೇ ಸೀಸನ್‌ನಲ್ಲಿ ಮಿಂಚಿದ ಹಾರ್ದಿಕ್
ಇಂಡಿಯನ್ ಪ್ರೀಮಿಯರ್ ಹದಿನೈದನೇ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದಿಂದ ಹೊರಬಿದ್ದು, ಗುಜರಾತ್ ಟೈಟನ್ಸ್ ತಂಡವನ್ನ ಮುನ್ನಡೆಸಿದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಂಡವನ್ನ ಚೊಚ್ಚಲ ಸೀಸನ್‌ನಲ್ಲೇ ಚಾಂಪಿಯನ್ ಆಗಿ ಮಾಡಿದ್ರು. ನಾಯಕತ್ವದಲ್ಲಿ ಅಷ್ಟೇ ಅಲ್ಲದೆ ಆಟಗಾರನಾಗಿ ತಂಡದ ಪರ ಮಿಂಚಿದ ಪಾಂಡ್ಯ ತಂಡದ ಪರ ಗರಿಷ್ಠ ರನ್ ಸ್ಕೋರರ್ ಆಗಿಯೂ ಗುರುತಿಸಿಕೊಂಡರು.
ಇದೀಗ ಟೀಂ ಇಂಡಿಯಾ ಪರ ಪ್ರಮುಖ ಆಟಗಾರನಾಗಿ ಹೊರಹೊಮ್ಮಿರುವ ಹಾರ್ದಿಕ್, ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ತಂಡವನ್ನ ಬ್ಯಾಲೆನ್ಸ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹಾರ್ದಿಕ್ ಬೌಲಿಂಗ್‌ನಿಂದಾಗಿ ರೋಹಿತ್‌ಗೆ ನಾಯಕತ್ವ ಸುಲಭವಾಗಿದೆ. ಬ್ಯಾಟಿಂಗ್‌ನಲ್ಲೂ ಪಾಂಡ್ಯ ಸೂಪರ್ ಫಿನಿಷರ್ ಆಗಿ ಗುರುತಿಸಿಕೊಂಡಿದ್ದಾರೆ.


Click it and Unblock the Notifications
