ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs PAK: 181 ಬಾರಿಸಿಯೂ ಸೋತೆವು; ಪಾಕ್ ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ರೋಹಿತ್ ಶರ್ಮಾ!

Asia Cup 2022: Rohit Sharma revealed the reason for Indias loss in Super 4 against Pakistan

ನಿನ್ನೆ ( ಸೆಪ್ಟೆಂಬರ್ 4 ) ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಈ ಬಾರಿಯ ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ದ್ವಿತೀಯ ಪಂದ್ಯ ಜರುಗಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿ ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿದ್ದ ಟೀಂ ಇಂಡಿಯಾ ಎದುರಾಳಿ ಪಾಕಿಸ್ತಾನ ತಂಡಕ್ಕೆ 182 ರನ್‌ಗಳ ಬೃಹತ್ ಮೊತ್ತವನ್ನೇ ಗುರಿಯನ್ನಾಗಿ ನೀಡಿತ್ತು. ಹೀಗೆ ಪಾಕಿಸ್ತಾನ ತಂಡಕ್ಕೆ ಸವಾಲಿನ ಮೊತ್ತವನ್ನು ಗುರಿಯಾಗಿ ನೀಡಿದರೂ ಸಹ ಟೀಮ್ ಇಂಡಿಯಾ ಪಂದ್ಯದಲ್ಲಿ ಸೋತಿದೆ.

IND vs PAK Super 4: ಬೌಲರ್‌ಗಳೇ ವಿಲನ್ಸ್; ಭಾರತದ ವಿರುದ್ಧ ಪಾಕ್‌ಗೆ 5 ವಿಕೆಟ್‍ಗಳ ರೋಚಕ ಜಯIND vs PAK Super 4: ಬೌಲರ್‌ಗಳೇ ವಿಲನ್ಸ್; ಭಾರತದ ವಿರುದ್ಧ ಪಾಕ್‌ಗೆ 5 ವಿಕೆಟ್‍ಗಳ ರೋಚಕ ಜಯ

ಭಾರತ ನೀಡಿದ ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಹಾಗೂ ಮೊಹಮ್ಮದ್ ನವಾಜ್ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ 19.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಕಲೆಹಾಕಿ 5 ವಿಕೆಟ್‍ಗಳ ಗೆಲುವನ್ನು ಕಂಡಿತು. ಹೀಗೆ ಟೀಮ್ ಇಂಡಿಯಾ ಉತ್ತಮ ಬ್ಯಾಟಿಂಗ್ ಮಾಡಿದರೂ ಸಹ ಪಂದ್ಯದಲ್ಲಿ ಬೌಲಿಂಗ್ ವಿಭಾಗ ದೊಡ್ಡ ಮಟ್ಟದಲ್ಲಿ ಎಡವಿದ ಕಾರಣದಿಂದಾಗಿ ತಂಡ ಮಹತ್ವದ ಪಂದ್ಯವನ್ನು ಸೋತಿದೆ ಎನ್ನಬಹುದು.

IND vs PAK: ಸೂಪರ್ 4 ಪಂದ್ಯದಿಂದ ಡಿಕೆ ಔಟ್; ಇದಕ್ಕಿಂತ ಅನ್ಯಾಯ ಮತ್ತೊಂದಿಲ್ಲ!IND vs PAK: ಸೂಪರ್ 4 ಪಂದ್ಯದಿಂದ ಡಿಕೆ ಔಟ್; ಇದಕ್ಕಿಂತ ಅನ್ಯಾಯ ಮತ್ತೊಂದಿಲ್ಲ!

ಇನ್ನು ಪಂದ್ಯದಲ್ಲಿ ಸೋಲನ್ನು ಅನುಭವಿಸಿದ ನಂತರ ಮಾತನಾಡಿದ ನಾಯಕ ರೋಹಿತ್ ಶರ್ಮಾ ಪಂದ್ಯದಲ್ಲಿ ಸೋಲಿಗೆ ಕಾರಣವಾದ ಅಂಶವೇನು ಎಂಬುದರ ಕುರಿತು ಮಾತನಾಡಿದ್ದು, ಈ ಕೆಳಕಂಡಂತೆ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

180 ದೊಡ್ಡ ಮೊತ್ತ ಎಂದು ಪರಿಗಣಿಸಿದ್ದೆವು, ನಾವೀಗ ಕಲಿತಿದ್ದೇವೆ

180 ದೊಡ್ಡ ಮೊತ್ತ ಎಂದು ಪರಿಗಣಿಸಿದ್ದೆವು, ನಾವೀಗ ಕಲಿತಿದ್ದೇವೆ

ಪಾಕ್ ವಿರುದ್ಧದ ಈ ಪಂದ್ಯದಲ್ಲಿ ಸವಾಲಿನ ಮೊತ್ತವನ್ನು ದಾಖಲಿಸಿದ ಕುರಿತು ಮಾತನಾಡಿದ ರೋಹಿತ್ ಶರ್ಮಾ 180ಕ್ಕೂ ಹೆಚ್ಚು ರನ್ ಕಲೆ ಹಾಕಿದ್ದರಿಂದ ಅದನ್ನು ನಾವು ದೊಡ್ಡ ಮೊತ್ತ ಎಂದು ಪರಿಗಣಿಸಿದ್ದೆವು, ಯಾವುದೇ ಕ್ರೀಡಾಂಗಣದಲ್ಲಿ ಈ ಮೊತ್ತವನ್ನು ದಾಖಲಿಸಿದರೆ ಅದನ್ನು ಉತ್ತಮ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ, ಆದರೆ ಇಂದು ಇದರಿಂದ ನಾವು ಪಾಠ ಕಲಿತಿದ್ದೇವೆ, ಇಂಥ ಸವಾಲಿನ ಮೊತ್ತವನ್ನು ಕಲೆ ಹಾಕಿದಾಗ ಯಾವ ರೀತಿ ಬೌಲಿಂಗ್ ದಾಳಿ ನಡೆಸಿ ಮೊತ್ತವನ್ನು ರಕ್ಷಿಸಬೇಕು ಎಂಬುದನ್ನು ಕಲಿತುಕೊಂಡಿದ್ದೇವೆ ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ. ಈ ಮೂಲಕ 180+ ದೊಡ್ಡ ಮೊತ್ತ ಎಂದು ಪರಿಗಣಿಸಿ ಕಣಕ್ಕಿಳಿದದ್ದೇ ತಪ್ಪಾಯ್ತು ಮತ್ತು ಸೋಲಿಗೆ ಕಾರಣವಾಯ್ತು ಎಂಬರ್ಥದಲ್ಲಿ ರೋಹಿತ್ ಶರ್ಮಾ ಮಾತನಾಡಿದ್ದಾರೆ.

ಅವರಿಬ್ಬರ ಜೊತೆಯಾಟ ಅತ್ಯುತ್ತಮವಾಗಿತ್ತು

ಅವರಿಬ್ಬರ ಜೊತೆಯಾಟ ಅತ್ಯುತ್ತಮವಾಗಿತ್ತು

ಇನ್ನೂ ಮುಂದುವರಿದು ಮಾತನಾಡಿದ ರೋಹಿತ್ ಶರ್ಮಾ ಮಹಮ್ಮದ್ ರಿಜ್ವಾನ್ ಹಾಗೂ ಮೊಹಮ್ಮದ್ ನವಾಜ್ ಜತೆಯಾಟವನ್ನು ಹೊಗಳಿದರು. ಆ ಇಬ್ಬರು ಕಣದಲ್ಲಿ ಉತ್ತಮ ಜತೆಯಾಟವನ್ನಾಡಿ ಒಳ್ಳೆಯ ಇನಿಂಗ್ಸ್ ಕಟ್ಟುತ್ತಿದ್ದಾಗಲೂ ಸಹ ನಾವು ತಾಳ್ಮೆಯಿಂದಲೇ ಇದ್ದೆವು, ಆದರೆ ಅವರ ಆಟ ಹೆಚ್ಚು ಕಾಲ ನಡೆದದ್ದು ತಮಗೆ ಹಿನ್ನಡೆಯಾಯಿತು ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ. ಹಾಗೂ ತಮಗಿಂತ ಪಾಕಿಸ್ತಾನ ಉತ್ತಮ ಕ್ರಿಕೆಟ್ ಆಡಿತು ಎಂಬುದನ್ನು ಸಹ ರೋಹಿತ್ ಶರ್ಮಾ ತಿಳಿಸಿದ್ದಾರೆ. ಈ ಮೂಲಕ ಪಾಕಿಸ್ತಾನದ ಬ್ಯಾಟಿಂಗ್ ಮುಂದೆ ತಮ್ಮ ತಂಡದ ಬೌಲಿಂಗ್ ವಿಫಲವಾಯಿತು ಎಂಬುದನ್ನು ರೋಹಿತ್ ಶರ್ಮಾ ಒಪ್ಪಿಕೊಂಡಿದ್ದಾರೆ.

ಕೊಹ್ಲಿಯನ್ನು ವಿಶೇಷವಾಗಿ ಹೊಗಳಿದ ರೋಹಿತ್

ಕೊಹ್ಲಿಯನ್ನು ವಿಶೇಷವಾಗಿ ಹೊಗಳಿದ ರೋಹಿತ್

ಇನ್ನು ಟೀಮ್ ಇಂಡಿಯಾ ಪ್ರದರ್ಶನದ ಬಗ್ಗೆ ನೇರವಾಗಿ ಹೆಚ್ಚು ಮಾತನಾಡದ ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಮಾತ್ರ ಪ್ರತ್ಯೇಕವಾಗಿ ಮಾತನಾಡಿದರು. ತಂಡದ ಎಲ್ಲಾ ಆಟಗಾರರೂ ವಿಕೆಟ್ ಒಪ್ಪಿಸುತ್ತಿದ್ದರೆ, ಮತ್ತೊಂದೆಡೆ ಏಕಾಂಗಿ ಹೋರಾಟ ನಡೆಸಿದ ವಿರಾಟ್ ಕೊಹ್ಲಿ ತಂಡಕ್ಕೆ ಆಸರೆಯಾದರು ಹಾಗೂ ಆ ಸಮಯದಲ್ಲಿ ಅದು ಭಾರತಕ್ಕೆ ಬೇಕಾಗಿದ್ದ ಅಮೂಲ್ಯ ಇನಿಂಗ್ಸ್ ಆಗಿತ್ತು ಎಂದು ರೋಹಿತ್ ಶರ್ಮಾ ಕೊಹ್ಲಿ ಪ್ರದರ್ಶನವನ್ನು ಹಾಡಿ ಹೊಗಳಿದ್ದಾರೆ.

Story first published: Monday, September 5, 2022, 8:38 [IST]
Other articles published on Sep 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X