Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ind vs Pak: ಪಂದ್ಯಕ್ಕೂ ಮುನ್ನ ನಾಯಕ ರೋಹಿತ್ ಶರ್ಮಾ ಸುದ್ದಿಗೋಷ್ಟಿ, ಪ್ಲೇಯಿಂಗ್ 11ನಲ್ಲಿ ಯಾರಿಗೆಲ್ಲಾ ಸ್ಥಾನ?

Rohit Sharma

ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಮೆಂಟ್‌ ಟೂರ್ನಮೆಂಟ್‌ನಲ್ಲಿ ಸಾಂಪ್ರದಾಯಿ ಎದುರಾಳಿಗಳ ಮುಖಾಮುಖಿಗೆ ಕ್ಷಣಗಣನೆ ಶುರುವಾಗಿದೆ. ಅಗಸ್ಟ್ 28ರಂದು ಭಾರತ-ಪಾಕ್‌ ಮುಖಾಮುಖಿಯಾಗುತ್ತಿವೆ. 2021ರ ಟಿ20 ವಿಶ್ವಕಪ್‌ ಬಳಿಕ ಕಣಕ್ಕಿಳಿಯುತ್ತಿರುವ ಉಭಯ ತಂಡಗಳು ಗೆಲುವಿಗಾಗಿ ಕಣ್ಣಿಟ್ಟಿವೆ.

ಗಡಿ ವಿವಾದದಿಂದಾಗಿ ಉಭಯ ರಾಷ್ಟ್ರಗಳು ದ್ವಿಪಕ್ಷೀಯ ಸರಣಿ ಆಡುವುದನ್ನ ಬಿಟ್ಟು ವರ್ಷಗಳೇ ಉರುಳಿ ಹೋಗಿವೆ. ಹೀಗಿರುವಾಗ ಉಭಯ ತಂಡಗಳು ಕೇವಲ ಐಸಿಸಿ ಟೂರ್ನಮೆಂಟ್‌ನಲ್ಲಿ ಮಾತ್ರ ಎದುರಾಗುತ್ತಿದ್ದು, ಅದ್ರ ಜೊತೆಗೆ ಏಷ್ಯಾಕಪ್ ಕೂಡ ಸೇರಿದೆ. 2018ರಲ್ಲಿ ಚಾಂಪಿಯನ್ ಭಾರತವು ನಾಲ್ಕು ವರ್ಷಗಳ ಬಳಿಕ ಏಷ್ಯಾಕಪ್‌ನಲ್ಲಿ ಪಾಕ್‌ ತಂಡವನ್ನ ಎದುರಿಸಲು ಸಜ್ಜಾಗಿದೆ.

ಕಳೆದ 2021ರ ಟಿ20 ವಿಶ್ವಕಪ್ ಮುಖಾಮುಖಿಯಲ್ಲಿ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ ಸೋಲನ್ನು ಅನುಭವಿಸಿದ ಭಾರತ, ಇತಿಹಾಸದಲ್ಲೇ ಕಾಣದ 10 ವಿಕೆಟ್‌ಗಳಿಂದ ಹೀನಾಯ ಸೋಲು ಕಂಡಿತು. ಇದಷ್ಟೇ ಅಲ್ಲದೆ ಲೀಗ್ ಹಂತದಲ್ಲಿಯೇ ಹೊರಬಿದ್ದಿತು. ಆದ್ರೀಗ ಸೋಲಿಗೆ ಸೇಡು ತೀರಿಸಿಕೊಲ್ಳಲು ಭಾರತ ಸಜ್ಜಾಗಿದೆ. ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸುದ್ದಿಗೋಷ್ಟಿಯಲ್ಲಿ ಪ್ರಬಲ ಎಚ್ಚರಿಕೆ ನೀಡಿದ್ದಾರೆ.

ಪಾಕ್ ವಿರುದ್ಧ ಆಡುವುದು ಸವಾಲಿನ ವಿಚಾರ, ನಾವು ಸಿದ್ಧರಾಗಿದ್ದೇವೆ: ರೋಹಿತ್ ಶರ್ಮಾ

ಪಾಕ್ ವಿರುದ್ಧ ಆಡುವುದು ಸವಾಲಿನ ವಿಚಾರ, ನಾವು ಸಿದ್ಧರಾಗಿದ್ದೇವೆ: ರೋಹಿತ್ ಶರ್ಮಾ

ಭಾರತದ ಪಾಳಯದಲ್ಲಿ ಎಲ್ಲರ ಚಿತ್ತ ಉತ್ತಮವಾಗಿದೆ ಎಂದು ರೋಹಿತ್ ಹೇಳಿದ್ದಾರೆ. ಹೊಸ ಪಂದ್ಯಾವಳಿ, ಹೊಸ ಆರಂಭ. ಹಿಂದೆ ಏನಾಯಿತು ಎಂದು ನನಗೆ ನೆನಪಿಲ್ಲ. ಪಾಕಿಸ್ತಾನದ ವಿರುದ್ಧ ಆಡುವುದು ಯಾವಾಗಲೂ ಸವಾಲಿನ ಸಂಗತಿ. ಒಂದೊಂದು ಪಂದ್ಯದಲ್ಲೂ ಮುಂದೆ ಸಾಗುತ್ತೇವೆ. ಮೊದಲ ಪಂದ್ಯಕ್ಕೆ ನಾವು ಇನ್ನೂ ಹನ್ನೊಂದು ಆಟಗಾರರನ್ನ ಅಂತಿಮಗೊಳಿಸಿಲ್ಲ. ಇಂದು ರಾತ್ರಿ ನಡೆಯುತ್ತಿರುವ ಶ್ರೀಲಂಕಾ-ಅಫ್ಘಾನಿಸ್ತಾನ ಪಂದ್ಯವನ್ನು ನೋಡುವ ಮೂಲಕ ಮೊದಲ ಹನ್ನೊಂದನ್ನು ಅಂತಿಮಗೊಳಿಸುತ್ತೇನೆ. ಪಿಚ್‌ಗೆ ಅನುಗುಣವಾಗಿ ತಂಡವನ್ನ ಸಿದ್ಧಗೊಳಿಸಲಿದ್ದೇವೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

Asia cup 2022: ಪಾಕಿಸ್ತಾನ ವಿರುದ್ಧ ದಿನೇಶ್‌ ಕಾರ್ತಿಕ್‌ ಆಡುವುದು ಅನುಮಾನ!

ಪ್ಲೇಯಿಂಗ್ 11 ಅಂತಿಮವಾಗಿಲ್ಲ

ಜಸ್ಪ್ರೀತ್ ಬುಮ್ರಾ, ಹರ್ಷಲ್ ಪಟೇಲ್ ಗಾಯದ ಕಾರಣ ಏಷ್ಯಾಕಪ್‌ಗೆ ಲಭ್ಯರಿಲ್ಲ. ಹೀಗಾಗಿ ರೋಹಿತ್ ಪ್ರಕಾರ, ತಂಡದ ಪ್ರತಿಯೊಬ್ಬ ಯುವ ಬೌಲರ್ ಮೊದಲ ಇಲೆವೆನ್‌ನಲ್ಲಿ ಅವಕಾಶಕ್ಕೆ ಅರ್ಹರು. ನಾವು ಪ್ರತಿಯೊಬ್ಬರಿಗೂ ಅವರ ಜವಾಬ್ದಾರಿಗಳನ್ನು ವಿವರಿಸುತ್ತೇವೆ ಮತ್ತು ಅವರು ಅವುಗಳನ್ನು ಹೇಗೆ ನಿರ್ವಹಿಸುತ್ತಿದ್ದಾರೆಂದು ನೋಡುತ್ತೇವೆ. ಅತ್ಯುತ್ತಮ ಮೊದಲ ಇಲೆವೆನ್‌ ಅನ್ನು ಫೀಲ್ಡ್‌ಗೆ ಇಳಿಸಲಾಗುತ್ತದೆ. ರಾಷ್ಟ್ರೀಯ ತಂಡಕ್ಕೆ ಮರಳಿದ ನಂತರ ದಿನೇಶ್ ಕಾರ್ತಿಕ್ ಕೂಡ ಉತ್ತಮವಾಗಿ ಆಡುತ್ತಿದ್ದಾರೆ. ಇದರ ಪರಿಣಾಮವಾಗಿ, ನಾವು ಏಷ್ಯಾಕಪ್‌ನಲ್ಲಿ ಹಲವಾರು ವಿಷಯಗಳನ್ನು ನೋಡಲು ಬಯಸುತ್ತೇವೆ. ಹಾಗೆ ಮಾಡಿದರೆ ಯಶಸ್ಸು ಸಿಗದೇ ಇರಬಹುದು. ತಂಡದ ಕಾಂಬಿನೇಷನ್ ನಾಳೆ ತಿಳಿಯಲಿದೆ. ಫಲಿತಾಂಶ ಏನೇ ಬಂದರೂ ಕೆಲವು ಪ್ರಯೋಗಗಳು ನಡೆಯುತ್ತಲೇ ಇರುತ್ತವೆ ಎಂದು ರೋಹಿತ್ ಪುನರುಚ್ಚರಿಸಿದ್ದಾರೆ.

Asia Cup 2022: ಅಫ್ಘಾನ್ ದಾಳಿಗೆ ತತ್ತರಿಸಿದ ಶ್ರೀಲಂಕಾ; ಅಫ್ಘಾನಿಸ್ತಾನಕ್ಕೆ ಸುಲಭ ಗುರಿ

ರೋಹಿತ್ ಶರ್ಮಾ ಮತ್ತು ಬಾಬರ್ ಅಜಮ್ ಆತ್ಮೀಯ ಮಾತುಕತೆ

ಕಳೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ 10 ವಿಕೆಟ್‌ಗಳಿಂದ ಸೋತಿದ್ದ ಭಾರತ ಮತ್ತೆ ಬಾಬರ್ ಆಜಮ್ ತಂಡದ ವಿರುದ್ಧವೇ ಆಡುತ್ತಿದೆ. ಆದ್ರೆ ಈ ಬಾರಿ ರೋಹಿತ್ ಶರ್ಮಾ ಟೀಂ ಇಂಡಿಯಾ ನಾಯಕ. ಅಭ್ಯಾಸದ ವೇಳೆ ಇಬ್ಬರು ನಾಯಕರು ಸ್ವಲ್ಪ ಹೊತ್ತು ಖಾಸಗಿಯಾಗಿ ಮಾತನಾಡುತ್ತಿರುವುದು ಕಂಡುಬಂದಿತು. ಕೆಲವು ದಿನಗಳ ನಂತರ ಅವರ ಕುಟುಂಬ ಸದಸ್ಯರು ತಂಡದ ಹೋಟೆಲ್‌ಗೆ ಬರುತ್ತಾರೆ ಎಂದು ರೋಹಿತ್ ಹೇಳಿದರು. ಆದರೆ ಬಾಬರ್ ಕುಟುಂಬ ಇನ್ನೂ ದುಬೈ ತಲುಪಿಲ್ಲ.

Story first published: Saturday, August 27, 2022, 21:46 [IST]
Other articles published on Aug 27, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+