For Quick Alerts
ALLOW NOTIFICATIONS  
For Daily Alerts
 

ರೋಹಿತ್‌ ಬಿಗ್ ಸ್ಕೋರ್ ಕಲೆಹಾಕದಿರಲು, ಅದೊಂದೇ ಕಾರಣ ಎಂದ ಶೋಯೆಬ್ ಅಖ್ತರ್

Rohit sharma

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಏಷ್ಯಾಕಪ್‌ನಲ್ಲಿ ನೀರಸ ಪ್ರದರ್ಶನ ತೋರುತ್ತಿದ್ದಾರೆ. ರೋಹಿತ್ ಮೊದಲೆರಡು ಪಂದ್ಯಗಳಲ್ಲಿ ಭಾರತದ ಪರ ನಿರಾಶಾದಾಯಕ ಪ್ರದರ್ಶನ ನೀಡಿದ್ದರು. ಅವರು ಪಾಕಿಸ್ತಾನದ ವಿರುದ್ಧ ನಿಧಾನಗತಿಯ ಬ್ಯಾಟಿಂಗ್‌ನಿಂದ ಔಟಾದ್ರೆ, ಹಾಂಗ್ ಕಾಂಗ್ ವಿರುದ್ಧ ದೊಡ್ಡ ಸ್ಕೋರ್ ಇಲ್ಲದೆ ಔಟಾದರು.

ಭಾನುವಾರ ನಡೆಯುತ್ತಿರುವ ಭಾರತ-ಪಾಕಿಸ್ತಾನ ಸೂಪರ್ ಫೋರ್ ಹಣಾಹಣಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಪ್ರದರ್ಶನದತ್ತ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಇದಕ್ಕೂ ಮುನ್ನ ಪಾಕಿಸ್ತಾನದ ಮಾಜಿ ವೇಗಿ, ರಾವಲ್ಪಿಂಡಿ ಎಕ್ಸ್‌ಪ್ರೆಸ್ ಖ್ಯಾತಿಯ ಶೋಯೆಬ್ ಅಖ್ತರ್ ರೋಹಿತ್ ಕೆಟ್ಟ ಫಾರ್ಮ್‌ಗೆ ಪ್ರಮುಖ ಕಾರಣ ಏನು ಎಂಬುದನ್ನ ತಿಳಿಸಿದ್ದಾರೆ.

ರೋಹಿತ್ ಅನಗತ್ಯ ಒತ್ತಡ ತೆಗೆದುಕೊಳ್ಳುತ್ತಿದ್ದಾರೆ

ರೋಹಿತ್ ಅನಗತ್ಯ ಒತ್ತಡ ತೆಗೆದುಕೊಳ್ಳುತ್ತಿದ್ದಾರೆ

ಶೋಯೆಬ್ ಅಖ್ತರ್‌ ರೋಹಿತ್ ಕೆಟ್ಟ ಫಾರ್ಮ್‌ಗೆ ಪ್ರಮುಖ ಕಾರಣ ಏನೆಂಬುದನ್ನ ತಿಳಿಸಿದ್ದಾರೆ. ಅಖ್ತರ್ ಪ್ರಕಾರ, '' ರೋಹಿತ್ ಶರ್ಮಾ ಅವರ ಪ್ರದರ್ಶನವು ಕ್ಷೀಣಿಸುತ್ತಿದೆ. ಏಕೆಂದರೆ ಅವರು ಅನಗತ್ಯ ಒತ್ತಡವನ್ನು ತೆಗೆದುಕೊಳ್ಳುತ್ತಿದ್ದಾರೆ. ನಾಯಕತ್ವವು ರೋಹಿತ್ ಶರ್ಮಾ ಮೇಲೆ ಒತ್ತಡ ಹೇರುತ್ತಿದೆ. ಅದೇ ಅವರ ಫಾರ್ಮ್ ಔಟ್ ಆಗಲು ಕಾರಣ'' ಎಂದು ಅಖ್ತರ್ ಹೇಳಿದರು.

ಟಿ20 ವಿಶ್ವಕಪ್‌ಗೂ ಮುನ್ನ ಭಾರತಕ್ಕೆ ಎದುರಾದ ಆತಂಕ

ಟಿ20 ವಿಶ್ವಕಪ್‌ಗೂ ಮುನ್ನ ಭಾರತಕ್ಕೆ ಎದುರಾದ ಆತಂಕ

ಟಿ20 ವಿಶ್ವಕಪ್‌ಗೂ ಮುನ್ನ ರೋಹಿತ್‌ ಪ್ರದರ್ಶನ ಭಾರತಕ್ಕೆ ಆತಂಕ ತಂದಿದೆ. ಮೊದಲ ಮೂರರಲ್ಲಿ ರೋಹಿತ್ ಹೊರತಾಗಿ ಕೆಎಲ್ ರಾಹುಲ್ ಕೂಡ ಕೆಟ್ಟ ಫಾರ್ಮ್ ನಲ್ಲಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ ಈ ಆರಂಭಿಕ ಜೊತೆಯಾಟ ಕ್ಲಿಕ್ ಆಗಲಿಲ್ಲ. ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಿರುವುದು ಭಾರತಕ್ಕೆ ಆತ್ಮವಿಶ್ವಾಸ ಮೂಡಿಸಿದೆ. ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಅವರ ಆಲ್ ರೌಂಡ್ ಸಾಮರ್ಥ್ಯ ಭಾರತಕ್ಕೆ ಬಲ ನೀಡಿದೆ.

ಹಾರ್ದಿಕ್ ಆಟವನ್ನ ಇದೇ ವೇಳೆಯಲ್ಲಿ ಅಖ್ತರ್ ಹೊಗಳಿದ್ದಾರೆ. ''ಗಾಯದಿಂದ ಹುಷಾರಾಗಿ ವಾಪಸ್ಸಾದದ ಹಾರ್ದಿಕ್ ಪಾಂಡ್ಯ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಕಳೆದ ಐಪಿಎಲ್‌ನಲ್ಲಿ ಹಾರ್ದಿಕ್ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ಪ್ರಶಸ್ತಿ ಗೆದ್ದಿದ್ದರು. ಅವರು ಟಿ20ಯಲ್ಲಿ ಭಾರತದ ಭವಿಷ್ಯದ ನಾಯಕ'' ಎಂದು ಅಖ್ತರ್ ಹೇಳಿದ್ದಾರೆ. ರೋಹಿತ್ ಶರ್ಮಾ ನಂತರ ಹಾರ್ದಿಕ್ ಭಾರತದ ಟಿ20 ನಾಯಕರಾಗುವ ಸಾಧ್ಯತೆ ಹೆಚ್ಚಿದೆ ಎನ್ನಬಹುದು.

LLC Season 2: ಅಭಿಮಾನಿಗಳ ಕನಸು ನನಸಾಯ್ತು..! ಒಂದೇ ತಂಡದಲ್ಲಿ ಆಡಲಿದ್ದಾರೆ ಕ್ರಿಸ್‌ಗೇಲ್ ಮತ್ತು ಸೆಹ್ವಾಗ್‌

ಟಿ20 ಆಡೋದು, ಬಿಡೋದು ಕೊಹ್ಲಿಗೆ ಬಿಟ್ಟ ವಿಚಾರ ಎಂದ ಅಖ್ತರ್

ಟಿ20 ಆಡೋದು, ಬಿಡೋದು ಕೊಹ್ಲಿಗೆ ಬಿಟ್ಟ ವಿಚಾರ ಎಂದ ಅಖ್ತರ್

ವಿರಾಟ್ ಕೊಹ್ಲಿ ಟಿ20 ಮಾದರಿಯಲ್ಲಿ ಯುವ ಆಟಗಾರರಿಗೆ ದಾರಿ ಮಾಡಿಕೊಡಬೇಕು ಎಂದು ಹಲವರು ಹೇಳುತ್ತಾರೆ. ಈ ಬಗ್ಗೆ ಅಖ್ತರ್ ಕೂಡ ಪ್ರತಿಕ್ರಿಯಿಸಿದ್ದಾರೆ. ''ಟಿ20 ವಿಶ್ವಕಪ್ ವರೆಗೆ ಟಿ20 ಮಾದರಿಯಲ್ಲಿ ಮುಂದುವರಿಯಬೇಕೇ ಅಥವಾ ಬೇಡವೇ ಎಂಬುದನ್ನು ಕೊಹ್ಲಿ ನಿರ್ಧರಿಸಬಾರದು ಎಂಬುದು ನನ್ನ ಮನವಿ. ಅವರು ಸಾರ್ವಕಾಲಿಕ ಅತ್ಯುತ್ತಮ ಆಟಗಾರ. ನೀನು ಶ್ರೇಷ್ಠ ಎಂದು ಮನವರಿಕೆ ಮಾಡಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಕೊಹ್ಲಿ ಚೆಂಡನ್ನು ಸರಿಯಾಗಿ ಕನೆಕ್ಟ್ ಮಾಡುತ್ತಿಲ್ಲ. ಕೊಹ್ಲಿ ಸ್ಟ್ರೈಕ್‌ರೇಟ್‌ ಅನ್ನು ಕಾಪಾಡಿಕೊಳ್ಳುವುದು ಅವಶ್ಯಕ'' ಎಂದು ಅಖ್ತರ್ ತನ್ನ ಮಾತಿಗೆ ಸೇರಿಸಿದರು.

ಇಷ್ಟು ವರ್ಷದಿಂದ RCB ಕಪ್‌ ಗೆಲ್ಲದಿರಲು, ವಿರಾಟ್ ಕೊಹ್ಲಿಯೇ ಮುಖ್ಯ ಕಾರಣ: ರಶೀದ್ ಲತೀಫ್‌

ಹಿರಿಯ ಆಟಗಾರರಿಂದ ತಂಡದ ಮೇಲೆ ಒತ್ತಡ!

ಹಿರಿಯ ಆಟಗಾರರಿಂದ ತಂಡದ ಮೇಲೆ ಒತ್ತಡ!

ಭಾರತದ ಹಿರಿಯ ಆಟಗಾರರ ನಿಧಾನಗತಿಯು ಇಡೀ ಬ್ಯಾಟಿಂಗ್ ತಂಡದ ಮೇಲೆ ಪರಿಣಾಮ ಬೀರುತ್ತಿದೆ. ರೋಹಿತ್ ಮತ್ತು ರಾಹುಲ್ ಪವರ್‌ಪ್ಲೇ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ. ವಿರಾಟ್ ಕೊಹ್ಲಿಗೂ ಬೇಗ ರನ್ ಗಳಿಸಲು ಸಾಧ್ಯವಾಗುತ್ತಿಲ್ಲ. ಇದರೊಂದಿಗೆ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಮೇಲೆ ಒತ್ತಡ ಹೆಚ್ಚಿದೆ. ಭಾರತವು ಪವರ್‌ಪ್ಲೇಯ ಲಾಭ ಪಡೆಯಲು ಸಾಧ್ಯವಾಗದಿದ್ದರೆ, ಮುಂಬರುವ ಟಿ20 ವಿಶ್ವಕಪ್‌ನಲ್ಲಿ ತೀವ್ರ ಹಿನ್ನಡೆಯಾಗಬಹುದು ಎಂದು ಅಖ್ತರ್ ಹೇಳಿದ್ದಾರೆ.

ಭಾರತ ಉತ್ತಮ ಆರಂಭ ಪಡೆದರೆ ಸಿಡಿದೇಳುವ ಮಧ್ಯಮ ಕ್ರಮಾಂಕವನ್ನು ಹೊಂದಿದೆ. ಸೂರ್ಯಕುಮಾರ್ ಯಾದವ್ ಮತ್ತು ರಿಷಬ್ ಪಂತ್ ಎದುರಾಳಿ ಬೌಲರ್‌ಗಳ ಮೇಲೆ ದಾಳಿ ನಡೆಸಲಿದ್ದಾರೆ. ದಿನೇಶ್ ಕಾರ್ತಿಕ್ ಕೂಡ ಉತ್ತಮವಾಗಿ ಫಿನಿಶಿಂಗ್ ಮಾಡುವುದರಲ್ಲಿ ನಿಸ್ಸೀಮರು ಎಂದಿದ್ದಾರೆ.

ಪಾಕಿಸ್ತಾನ ವಿರುದ್ಧದ ಸೂಪರ್ 4 ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದ ರೋಹಿತ್ ಶರ್ಮಾ 28 ರನ್‌ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ಮತ್ತೊಮ್ಮೆ ಬಿಗ್ ಸ್ಕೋರ್ ಕಲೆಹಾಕಲು ವಿಫಲರಾಗಿದ್ದಾರೆ.

Story first published: Sunday, September 4, 2022, 20:20 [IST]
Other articles published on Sep 4, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+