Asia cup 2022: ಶ್ರೀಲಂಕಾ vs ಅಫ್ಘಾನಿಸ್ತಾನ ಪಂದ್ಯದ ಪ್ರಿವ್ಯೂ, ಪಿಚ್ ರಿಪೋರ್ಟ್, ಸಂಭಾವ್ಯ ಪ್ಲೇಯಿಂಗ್ 11

ಏಷ್ಯಾಕಪ್ ಟೂರ್ನಿಯು ಪ್ರಮುಖ ಹಂತದತ್ತ ಸಾಗಿದ್ದು, ಸೂಪರ್ 4 ಫೈಟ್‌ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಮುಖಾಮುಖಿಯಾಗಲಿವೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಗ್ರೂಪ್ 'ಬಿ' ಮೂಲಕ ಸೂಪರ್ 4 ಪ್ರವೇಶಿಸಿರುವ B1 ಅಫ್ಘಾನಿಸ್ತಾನ ಮತ್ತು B2 ಶ್ರೀಲಂಕಾ ನಡುವೆ ಈ ಪ್ರಮುಖ ಫೈಟ್ ನಡೆಯಲಿದೆ.
ಗ್ರೂಪ್ ಹಂತದಲ್ಲಿ ಎರಡಕ್ಕೆ ಎರಡು ಪಂದ್ಯಗಳನ್ನ ಗೆಲ್ಲುವ ಮೂಲಕ ಅಫ್ಘಾನಿಸ್ತಾನ ತಂಡವು ನೇರವಾಗಿ ಸೂಪರ್ 4 ಪ್ರವೇಶಿಸಿತು. ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 8 ವಿಕೆಟ್‌ಗಳ ಗೆಲುವನ್ನ ಸಾಧಿಸಿದ್ರೆ , ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿತು.
ಇನ್ನು ಶ್ರೀಲಂಕಾ ತಂಡವು ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಮುಗ್ಗರಿಸಿದ ಬಳಿಕ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 2 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿ ಸೂಪರ್ 4 ಪ್ರವೇಶಿಸಿದೆ.
ಹೀಗೆ ಎರಡೂ ಗುಂಪಿನ ಅಗ್ರ 2 ತಂಡಗಳು ಸೂಪರ್ ಫೋರ್ ಸುತ್ತಿಗೆ ಅರ್ಹತೆ ಪಡೆದಿವೆ. ಸೂಪರ್ 4 ಸುತ್ತಿನಲ್ಲಿ, ಪ್ರತಿ ತಂಡವು ಇನ್ನೊಂದು ಪಂದ್ಯವನ್ನು ಆಡುತ್ತದೆ. ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಸೆಪ್ಟೆಂಬರ್ 11 ರಂದು ದುಬೈನಲ್ಲಿ ನಡೆಯಲಿರುವ ಫೈನಲ್‌ಗೆ ಅರ್ಹತೆ ಪಡೆಯಲಿವೆ.

ಪಿಚ್ ರಿಪೋರ್ಟ್
ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಇತ್ತೀಚಿನ ಕೆಲವು ಪಂದ್ಯಗಳನ್ನ ನೋಡಿದ್ರೆ ಸ್ಪಿನ್ ಬೌಲರ್‌ಗಳಿಗೆ ಹೆಚ್ಚು ನೆರವಾಗಿದೆ. ಹೀಗಾಗಿ ಸೂಪರ್ 4 ಪಂದ್ಯದಲ್ಲೂ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸಲಿದ್ದು, ಉಭಯ ತಂಡಗಳಲ್ಲಿ ಕ್ವಾಲಿಟಿ ಸ್ಪಿನ್ನರ್‌ಗಳಿದ್ದಾರೆ. ಹಾಂಗ್ ಕಾಂಗ್ ವಿರುದ್ಧ ಭಾರತದ ಗೆಲುವನ್ನು ಹೊರತುಪಡಿಸಿ, ಏಷ್ಯಾ ಕಪ್‌ನಲ್ಲಿ ಇಲ್ಲಿಯವರೆಗೆ ಎರಡನೇ ಬ್ಯಾಟಿಂಗ್ ಮಾಡುವ ತಂಡಗಳು ವಿಜಯಶಾಲಿಯಾಗಿ ಹೊರಹೊಮ್ಮಿವೆ, ಇದು ಟಾಸ್ ಗೆಲ್ಲುವ ನಾಯಕನಿಗೆ ಸ್ಪಷ್ಟ ಆಯ್ಕೆಯಾಗಿದೆ.
ಈ ಸ್ಟೇಡಿಯಂನಲ್ಲಿ ಒಟ್ಟು 26 ಪಂದ್ಯಗಳು ನಡೆದಿದ್ದು, ಮೊದಲ ಬ್ಯಾಟಿಂಗ್ ಮಾಡಿದ ತಂಡವು 16 ಬಾರಿ ಪಂದ್ಯವನ್ನ ಗೆದ್ರೆ, ಎರಡನೇ ಬ್ಯಾಟಿಂಗ್ ಮಾಡಿದ ತಂಡವು 10 ಪಂದ್ಯ ಗೆದ್ದಿದೆ.
ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 149 ರನ್ ಆಗಿದ್ದು, ಎರಡನಙೇ ಇನ್ನಿಂಗ್ಸ್ ಸ್ಕೋರ್ ಸರಾಸರಿ 125ರಷ್ಟಿದೆ. ಇನ್ನು ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಎರಡು ಟಿ20 ಅಂತರಾಷ್ಟ್ರೀಯ ಪಂದ್ಯಗಳ ಮುಖಾಮುಖಿಯಲ್ಲಿ ತಲಾ 1 ಗೆಲುವನ್ನ ಕಂಡಿವೆ.
ಟಿ20 ವಿಶ್ವಕಪ್‌ಗೂ ಮುನ್ನ ಇಂಗ್ಲೆಂಡ್‌ಗೆ ಭಾರೀ ಹಿನ್ನಡೆ: ತಂಡ ಘೋಷಿಸಿದ ಕೆಲವೇ ಘಂಟೆಯಲ್ಲಿ ಜಾನಿ ಬೈಸ್ಟ್ರೋವ್ ಔಟ್

ಶ್ರೀಲಂಕಾ ಸಂಭಾವ್ಯ ಪ್ಲೇಯಿಂಗ್ 11
ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕ, ದನುಷ್ಕ ಗುಣತಿಲಕ, ಭಾನುಕ ರಾಜಪಕ್ಸೆ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೀಶ್ ತೀಕ್ಷಣ, ಅಸಿತ ಫೆರ್ನಾಂಡೋ, ದಿಲ್ಶನ್ ಮಧುಶಂಕ
ಸೆರೆನಾ ಯುಗಾಂತ್ಯ: US ಓಪನ್‌ನ 3ನೇ ಸುತ್ತಿನಲ್ಲಿ ಸೋಲು, ಟೆನಿಸ್‌ಗೆ ವಿಲಿಯಮ್ಸ್ ವಿದಾಯ

ಅಫ್ಘಾನಿಸ್ತಾನ ಸಂಭಾವ್ಯ ಪ್ಲೇಯಿಂಗ್ 11
ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್, ನಜೀಬುಲ್ಲಾ ಝದ್ರಾನ್, ಕರೀಂ ಜನತ್, ಮೊಹಮ್ಮದ್ ನಬಿ (ನಾಯಕ), ರಶೀದ್ ಖಾನ್, ಅಜ್ಮತುಲ್ಲಾ ಒಮರ್ಝೈ, ನವೀನ್-ಉಲ್-ಹಕ್, ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫಾರೂಕಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications