ಟಿ20 ವಿಶ್ವಕಪ್‌ಗೂ ಮುನ್ನ ಇಂಗ್ಲೆಂಡ್‌ಗೆ ಭಾರೀ ಹಿನ್ನಡೆ: ತಂಡ ಘೋಷಿಸಿದ ಕೆಲವೇ ಘಂಟೆಯಲ್ಲಿ ಜಾನಿ ಬೈಸ್ಟ್ರೋವ್‌ ಔಟ್‌

ಕಾಂಗರೂ ನಾಡು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೂ ಮುನ್ನ ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟರ್‌ಗಳಲ್ಲಿ ಒಬ್ಬಾತ ಜಾನಿ ಬೈಸ್ಟ್ರೋವ್‌ ವಿಶ್ವಕಪ್‌ನಿಂದ ಹೊರಬಿದ್ದಿರುವುದು ಆಂಗ್ಲರಿಗೆ ಭಾರೀ ಹಿನ್ನಡೆಯಾಗಿದೆ.

ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ ಸ್ಕ್ವಾಡ್‌ನ ಅನ್ನು ಘೋಷಿಸಿದ ಕೆಲವೇ ಘಂಟೆಗಳಲ್ಲಿ ಜಾನಿ ಬೈಸ್ಟ್ರೋವ್‌ ತಂಡದಿಂದ ಹೊರಬಿದ್ದಿರುವುದು ನಿಜಕ್ಕೂ ಆಶ್ಚರ್ಯಕ್ಕೆ ಎಡೆಮಾಡಿಕೊಟ್ಟಿದೆ. ಇಂಗ್ಲೆಂಡ್ ಸ್ಕ್ವಾಡ್‌ ಘೋಷಣೆಯಾದ ಕೆಲವೇ ಘಂಟೆಗಳಲ್ಲಿ ಜಾನಿ ಗಾಯಗೊಂಡಿದ್ದು ಹೇಗೆ ಎಂಬುದು ಅಭಿಮಾನಿಗಳಿಗೆ ಗೊಂದಲ ಮೂಡಿಸಿದೆ.

ವಿಚಿತ್ರ ಅಪಘಾತ ಎಂದು ಕರೆದ ಇಸಿಬಿ

ವಿಚಿತ್ರ ಅಪಘಾತ ಎಂದು ಕರೆದ ಇಸಿಬಿ

ಜಾನಿ ಬೈಸ್ಟ್ರೋವ್‌ಗೆ ಯಾವ ರೀತಿಯಲ್ಲಿ ಗಾಯಗೊಂಡರು ಎಂಬುದನ್ನ ಪೂರ್ಣವಾಗಿ ವಿವರಿಸದ ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಬೋರ್ಡ್‌ ಇದೊಂದು ವಿಚಿತ್ರ ಅಪಘಾತ ಎಂದು ಘೋಷಣೆ ಮಾಡುವ ಮೂಲಕ ಜಾನಿ ಬೈಸ್ಟ್ರೋವ್‌ ಟಿ20 ವಿಶ್ವಕಪ್‌ಗೆ ಲಭ್ಯವಿಲ್ಲ ಎಂದು ಘೋಷಿಸಿದೆ.

"ಶುಕ್ರವಾರ ಲೀಡ್ಸ್‌ನಲ್ಲಿ ಗಾಲ್ಫ್ ಆಡುತ್ತಿದ್ದಾಗ ಅಪಘಾತದಲ್ಲಿ ಬೈರ್‌ಸ್ಟೋ ಅವರ ಕೈಕಾಲುಗಳ ಕೆಳಭಾಗಕ್ಕೆ ಗಾಯವಾಯಿತು. ಗಾಯದ ಸಂಪೂರ್ಣ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲು ಅವರು ಮುಂದಿನ ವಾರ ತಜ್ಞರನ್ನು ಭೇಟಿ ಮಾಡುತ್ತಾರೆ''

"ಇಂಗ್ಲೆಂಡ್‌ನ ಐಸಿಸಿ ಪುರುಷರ ಟಿ20 ವಿಶ್ವಕಪ್‌ ತಂಡದಲ್ಲಿ ಬೈಸ್ಟ್ರೋವ್‌ ಬದಲು ಯಾರು ಅವಕಾಶ ಪಡೆಯುತ್ತಾರೆ ಎಂಬುದರ ಕುರಿತು ಮುಂದಿನ ಪ್ರಕಟಣೆಯನ್ನು ಸಮಯೋಚಿತವಾಗಿ ಮಾಡಲಾಗುವುದು" ಎಂದು ECB ಯ ಹೇಳಿಕೆ ತಿಳಿಸಿದೆ.

ಹಾಂಕಾಂಗ್ ವಿರುದ್ಧ ಭರ್ಜರಿಯಾಗಿ ಗೆದ್ದ ಪಾಕಿಸ್ತಾನ: 8,2,0,6,1,4,3,3,0,1,0 ಇದು ಹಾಂಕಾಂಗ್ ಸ್ಕೋರ್

ಇನ್‌ಸ್ಟಾಗ್ರಾಮ್‌ನಲ್ಲಿ ಬೇಸರ ವ್ಯಕ್ತಪಡಿಸಿದ ಜಾನಿ

ಇನ್ನು ತನ್ನ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ದಿಢೀರ್ ಎಂದು ಆದ ಗಾಯದಿಂದಾಗಿ ಜಾನಿ ಬೈಸ್ಟ್ರೋವ್ ಸಾಕಷ್ಟು ಬೇಸರ ಸಹ ವ್ಯಕ್ತಪಡಿಸಿದ್ದಾರೆ. ಜೊತೆಗೆ ಆಗಿರುವ ಗಾಯಕ್ಕೆ ಶಸ್ತ್ರಚಿಕಿತ್ಸೆ ಕೂಡ ಆಗಬೇಕಿದೆ ಎಂದು ತಿಳಿಸಿದ್ದಾರೆ.

'' ದುರದೃಷ್ಟವಶಾತ್ ನಾನು ತಕ್ಷಣಕ್ಕೆ ಮುಂದಿನ ಎಲ್ಲಾ ಪಂದ್ಯಗಳು/ಪ್ರವಾಸಗಳಿಗೆ ಅಲಭ್ಯನಾಗಿದ್ದೇನೆ. ಕಾರಣವೇನೆಂದರೆ, ಇಂದು ಬೆಳಿಗ್ಗೆ ಗಾಲ್ಫ್ ಕೋರ್ಸ್ನಲ್ಲಿ ವಿಲಕ್ಷಣ ಅಪಘಾತದಲ್ಲಿ ನನ್ನ ಕೆಳ ಕಾಲಿಗೆ ಗಾಯವಾಗಿದೆ ಮತ್ತು ಅದಕ್ಕೆ ಆಪರೇಷನ್ ಅಗತ್ಯವಿದೆ. ನಾನು ಜಾರಿ ಬಿದ್ದಾಗ ಈ ಗಾಯವಾಯಿತು. ಆದ್ರೂ ನಾನು ಧೈರ್ಯಶಾಲಿಯಾಗಿದ್ದೇನೆ ಮತ್ತು ಓವಲ್‌ನಲ್ಲಿ ಈ ವಾರ ಎಲ್ಲರಿಗೂ ಶುಭ ಹಾರೈಸುತ್ತೇನೆ. ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾಗೆ ತೆರಳಲಿರುವ ಹುಡುಗರಿಗೆ ಮೊದಲು ಶುಭ ಹಾರೈಸುತ್ತೇನೆ. ಸಂಪೂರ್ಣವಾಗಿ ಧೈರ್ಯದಿಂದ ನಾನು ಹಿಂತಿರುಗುತ್ತೇನೆ'' ಎಂದು ಜಾನಿ ಬೈಸ್ಟ್ರೋವ್ ತನ್ನ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಲೆಜೆಂಡರಿ ಸಿಂಗರ್‌ ಕಿಶೋರ್ ಕುಮಾರ್‌ ಮುಂಬೈ ಬಂಗಲೆಯಲ್ಲಿ ರೆಸ್ಟೋರೆಂಟ್‌ ತೆರೆಯಲಿರುವ ವಿರಾಟ್ ಕೊಹ್ಲಿ

ಅಮೋಘ ಫಾರ್ಮ್‌ನಲ್ಲಿದ್ದ ಜಾನಿ ಬೈಸ್ಟ್ರೋವ್‌

ಅಮೋಘ ಫಾರ್ಮ್‌ನಲ್ಲಿದ್ದ ಜಾನಿ ಬೈಸ್ಟ್ರೋವ್‌

ಜಾನಿ ಬೈಸ್ಟ್ರೋವ್ ತಂಡದಿಂದ ಹೊರಬಿದ್ದ ಪರಿಣಾಮ ಇಂಗ್ಲೆಂಡ್ ತಂಡಕ್ಕೆ ತುಂಬಲಾರದ ನಷ್ಟವಾಗಿದೆ. ಈ ವರ್ಷ ಅದ್ಭುತ ಫಾರ್ಮ್‌ನಲ್ಲಿದ್ದ ಜಾನಿ ಟೆಸ್ಟ್ ಕ್ರಿಕೆಟ್‌ನಲ್ಲಿ ಆರು ಶತಕ ಸಹಿತ 1000ಕ್ಕೂ ಹೆಚ್ಚು ರನ್ ಕಲೆಹಾಕಿದ್ದರು. ಇನ್ನು ಎಲ್ಲಾ ಫಾರ್ಮೆಟ್‌ನಿಂದ ಇಂಗ್ಲೆಂಡ್ ಪರ ಅತಿ ಹೆಚ್ಚು ರನ್ ಕಲೆಹಾಕಿರುವ ಮೂರನೇ ಬ್ಯಾಟರ್ ಆಗಿದ್ದರು. ಹೀಗಿರುವಾಗ ತಂಡಕ್ಕೆ ವಿಕೆಟ್ ಕೀಪಿಂಗ್ ಜೊತೆಗೆ ಓಪನರ್ ಆಗಿ ಕಣಕ್ಕಿಳಿಯುವ ಸಾಮರ್ಥ್ಯ ಹೊಂದಿದ್ದ ಜಾನಿ ಟಿ20 ವಿಶ್ವಕಪ್‌ಗೂ ಮುನ್ನವೆ ತಂಡದಿಂದ ಹೊರಬಿದ್ದಿರುವುದು ದೊಡ್ಡ ಮಟ್ಟಿನ ಹಿನ್ನಡೆಯಾಗಿದೆ.

ಇಂಗ್ಲೆಂಡ್ ಟಿ20 ವಿಶ್ವಕಪ್ ತಂಡ

ಇಂಗ್ಲೆಂಡ್ ಟಿ20 ವಿಶ್ವಕಪ್ ತಂಡ

ಜೋಸ್ ಬಟ್ಲರ್ (ನಾಯಕ), ಮೊಯಿನ್ ಅಲಿ, ಹ್ಯಾರಿ ಬ್ರೂಕ್, ಸ್ಯಾಮ್ ಕರ್ರಾನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲಾನ್, ಆದಿಲ್ ರಶೀದ್, ಫಿಲ್ ಸಾಲ್ಟ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್

ಸ್ಟ್ಯಾಂಡ್‌ ಬೈ ಆಟಗಾರರು: ಲಿಯಾಮ್ ಡಾಸನ್, ರಿಚರ್ಡ್ ಗ್ಲೀಸನ್, ಟೈಮಲ್ ಮಿಲ್ಸ್

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, September 3, 2022, 8:32 [IST]
Other articles published on Sep 3, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X