ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Asia cup 2022: ಪಂದ್ಯಕ್ಕೂ ಮುನ್ನ ಪಾಕಿಸ್ತಾನಿ ಅಭಿಮಾನಿಯನ್ನ ಅಪ್ಪಿಕೊಂಡ ರೋಹಿತ್ ಶರ್ಮಾ, Video Viral

Rohit Sharma

ಟೀಂ ಇಂಡಿಯಾ ಮತ್ತು ಪಾಕಿಸ್ತಾನ ತಂಡಗಳು ಆಗಸ್ಟ್‌ 28ರಂದು ಮುಖಾಮುಖಿಗೆ ಸಿದ್ಧಗೊಂಡಿವೆ. 2021ರ ಟಿ20 ವಿಶ್ವಕಪ್‌ ಬಳಿಕ ಉಭಯ ತಂಡಗಳು ಅಖಾಡಕ್ಕಿಳಿಯುತ್ತಿದ್ದು, ಭಾರತ ಹೀನಾಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದೆ. ಮತ್ತೊಂದೆಡೆ ಬಾಬರ್ ಅಜಮ್ ತಂಡ ಭರ್ಜರಿ ಪರ್ಫಾಮೆನ್ಸ್ ನೀಡಲು ಎದುರು ನೋಡುತ್ತಿದೆ.

ಕಳೆದ ವರ್ಷ ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್‌ನಲ್ಲಿ ಸೋಲಿನ ನಂತರ ಭಾರತ ತಂಡದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ನಾಯಕತ್ವದ ಮಟ್ಟದಲ್ಲಿ ಸಂಪೂರ್ಣ ನಿರ್ವಹಣೆ ಬದಲಾಗಿದೆ. ರೋಹಿತ್ ಮತ್ತು ದ್ರಾವಿಡ್ ಅವರ ಚಿಂತನೆಯೊಂದಿಗೆ ತಂಡವನ್ನು ಮುನ್ನಡೆಸಲು ಒತ್ತು ನೀಡಲಾಗಿದೆ. ಕಳೆದ ಟಿ-20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ 10 ವಿಕೆಟ್‌ಗಳಿಂದ ಸೋಲನ್ನ ಅನುಭವಿಸಿದ್ದು, ಈಗ ತಂಡವು ಹೊಸ ಸವಾಲಿಗೆ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಸೋಲಿಗೆ ಸೇಡು ತೀರಿಸಿಕೊಳ್ಳುತ್ತೇವೆ ಎಂದಿರುವ ಕೆ.ಎಲ್ ರಾಹುಲ್

ಸೋಲಿಗೆ ಸೇಡು ತೀರಿಸಿಕೊಳ್ಳುತ್ತೇವೆ ಎಂದಿರುವ ಕೆ.ಎಲ್ ರಾಹುಲ್

ಶುಕ್ರವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿರುವ ಭಾರತ ತಂಡದ ಉಪನಾಯಕ ಕೆ.ಎಲ್ ರಾಹುಲ್ "ನಾವು ಯಾವಾಗಲೂ ಭಾರತ-ಪಾಕಿಸ್ತಾನದ ಘರ್ಷಣೆಯನ್ನು ಎದುರು ನೋಡುತ್ತೇವೆ. ಏಕೆಂದರೆ ನಾವು ಬೇರೆಲ್ಲಿಯೂ ಪರಸ್ಪರ ಆಡುವುದಿಲ್ಲ ಆದರೆ ಈ ದೊಡ್ಡ ಪಂದ್ಯಾವಳಿಗಳಲ್ಲಿ ಮಾತ್ರ ಆಡುತ್ತೇವೆ. ಆದ್ದರಿಂದ ಇದು ಯಾವಾಗಲೂ ಪಾಕಿಸ್ತಾನದಂತಹ ತಂಡದೊಂದಿಗೆ ಆಡುವುದು ರೋಚಕವಾಗಿರುತ್ತದೆ" ಎಂದು ಅವರು ಹೇಳಿದರು.

''ಪಾಕಿಸ್ತಾನ ವಿರುದ್ಧ ಎಷ್ಟು ಬಾರಿ ಆಡಿದ್ದೇವೆ ಮತ್ತು ಪ್ರತಿ ಪಂದ್ಯವನ್ನ ಗೆದ್ದಿದ್ದೇವೆ ಎಂಬ ಇತಿಹಾಸವಿರಬಹುದು. ಆದರೆ ಅದು ಯಾವುದಕ್ಕೂ ಲೆಕ್ಕವಿಲ್ಲ. ಇದು ಯಾವಾಗಲೂ 0 ರಿಂದ ಪ್ರಾರಂಭವಾಗುತ್ತದೆ. ಹೀಗಾಗಿ ಟೂರ್ನಿಯಲ್ಲಿ ಚೆನ್ನಾಗಿ ಪ್ರಾರಂಭಿಸಲು ಬಯಸುತ್ತೇವೆ. ಕಳೆದ ಪಂದ್ಯದ ಸೋಲಿಗೆ ಉತ್ತರ ನೀಡಲಿದ್ದೇವೆ'' ಎಂದು ರಾಹುಲ್ ಹೇಳಿದ್ದಾರೆ.

Ind vs Pak: ಪಾಕಿಸ್ತಾನದ ವಿಶೇಷ ಅಭಿಮಾನಿಯನ್ನ ಭೇಟಿ ಮಾಡಿದ ವಿರಾಟ್ ಕೊಹ್ಲಿ, ವೀಡಿಯೋ ವೈರಲ್

ಪಾಕಿಸ್ತಾನದಲ್ಲಿದ್ದಾರೆ ಟೀಂ ಇಂಡಿಯಾದ ಅನೇಕ ಅಭಿಮಾನಿಗಳು

ಪಾಕಿಸ್ತಾನದಲ್ಲಿದ್ದಾರೆ ಟೀಂ ಇಂಡಿಯಾದ ಅನೇಕ ಅಭಿಮಾನಿಗಳು

ಭಾರತ ಮತ್ತು ಪಾಕಿಸ್ತಾನಗಳು ಈಗ ಕಡಿಮೆ ಕ್ರಿಕೆಟ್ ಆಡುತ್ತವೆ, ಅವುಗಳ ನಡುವಿನ ಪಂದ್ಯಗಳು ತಮ್ಮದೇ ಆದ ಕ್ರೇಜ್ ಅನ್ನು ಉಳಿಸಿಕೊಳ್ಳುತ್ತವೆ. ಈ ಪಂದ್ಯಗಳಲ್ಲಿ ಉಭಯ ತಂಡಗಳ ವ್ಯಕ್ತಿತ್ವದ ಹೋಲಿಕೆ ಇದೆ. ಕೊಹ್ಲಿ ಮತ್ತು ಬಾಬರ್ ಅಜಮ್ ನಡುವಿನ ಹೋಲಿಕೆ ಸಾಕಷ್ಟು ಹಳೆಯದು. ಇದರ ಜೊತೆಗೆ ರೋಹಿತ್ ಶರ್ಮಾ ಲಿಮಿಟೆಡ್ ಓವರ್ ಕ್ರಿಕೆಟ್‌ನಲ್ಲಿ ಎಂತಹ ಸೂಪರ್ ಕ್ಲಾಸ್ ಬ್ಯಾಟರ್ ಅನ್ನೋದು ಎಲ್ಲರಿಗೂ ತಿಳಿದಿದೆ. ಹೀಗಾಗಿಯೇ ಟೀಂ ಇಂಡಿಯಾ ಅಭಿಮಾನಿಗಳಂತೆಯೇ, ಪಾಕಿಸ್ತಾನದಲ್ಲಿಯೂ ಭಾರತೀಯ ಆಟಗಾರರಿಗೆ ಅಭಿಮಾನಿಗಳಿಗೇನು ಕೊರತೆಯಿಲ್ಲ.

IND vs PAK: ವಿರಾಟ್ ಕೊಹ್ಲಿ, ಬಾಬರ್ ಅಜಂ ನಡುವೆ ಯಾರು ಉತ್ತಮ ಟಿ20 ಬ್ಯಾಟರ್?; ಇಲ್ಲಿದೆ ಅಂಕಿಅಂಶ!

ಅನೇಕ ಜನರು ರೋಹಿತ್ ಅವರ ವಿಶಿಷ್ಟ ಸ್ವಭಾವವನ್ನು ಮೆಚ್ಚುತ್ತಾರೆ

ಅನೇಕ ಜನರು ರೋಹಿತ್ ಅವರ ವಿಶಿಷ್ಟ ಸ್ವಭಾವವನ್ನು ಮೆಚ್ಚುತ್ತಾರೆ

ರೋಹಿತ್ ಶರ್ಮಾ ಒಬ್ಬ ಶ್ರೇಷ್ಠ ಆಟಗಾರ ಮತ್ತು ಶ್ರೇಷ್ಠ ನಾಯಕ. ಅವರ ಈ ವಿಶಿಷ್ಟ ಸ್ವಭಾವವು ಅನೇಕ ಜನರಿಗೆ ಇಷ್ಟವಾಗುತ್ತದೆ. ಇದರಲ್ಲಿ ಪಾಕಿಸ್ತಾನದ ಅಭಿಮಾನಿಗಳು ಭಿನ್ನವಾಗಿಲ್ಲ. ಭಾರತ ಮತ್ತು ಪಾಕಿಸ್ತಾನ ತಂಡಗಳು ಪರಸ್ಪರ ಮುಖಾಮುಖಿಯಾಗಿರುವುದು ಮಾತ್ರವಲ್ಲದೆ ಎರಡೂ ದೇಶಗಳ ಕ್ರಿಕೆಟ್ ಅಭಿಮಾನಿಗಳು ಪರಸ್ಪರ ಬೆರೆಯುತ್ತಿರುವಾಗ ಏಷ್ಯಾಕಪ್ ಅಂತಹ ಅವಕಾಶವನ್ನು ತಂದಿದೆ. ಈ ದೊಡ್ಡ ಪಂದ್ಯದ ಮೊದಲು, ರೋಹಿತ್ ಶರ್ಮಾ ಅವರ ಜನಪ್ರಿಯತೆಯನ್ನು ಮತ್ತೊಮ್ಮೆ ಪ್ರದರ್ಶಿಸಿವು ವೀಡಿಯೊ ಸಾಕಷ್ಟು ವೈರಲ್ ಆಗುತ್ತಿದೆ.

Asia Cup 2022: IND vs PAK ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಬಗ್ಗೆ ಸೌರವ್ ಗಂಗೂಲಿ ಹೇಳಿದ್ದೇನು?

ರೋಹಿತ್‌ರನ್ನ ಕಾಣಲು ಹಾತೊರೆಯುತ್ತಿದ್ದ ಹುಚ್ಚು ಅಭಿಮಾನಿಗಳು

ದುಬೈನಲ್ಲಿ ಭಾನುವಾರ ನಡೆಯಲಿರುವ ಪಂದ್ಯಕ್ಕೂ ಮುನ್ನ ಅಭ್ಯಾಸ ನಡೆಸಿರುವ ಟೀಂ ಇಂಡಿಯಾ ಆಟಗಾರರನ್ನ ನೋಡಲು ಕೆಲವು ಪಾಕಿಸ್ತಾನಿ ಅಭಿಮಾನಿಗಳು ಸ್ಟೇಡಿಯಂಗೆ ಆಗಮಿಸಿದ್ರು. ಈ ವೇಳೆಯಲ್ಲಿ ರೋಹಿತ್ ಶರ್ಮಾ ಮೈದಾನದ ಹೊರಗೆ ಬೌಂಡರಿ ಗೆರೆಯನ್ನು ದಾಟುತ್ತಿರುವಾಗ, ಪಾಕಿಸ್ತಾನಿ ಅಭಿಮಾನಿಗಳಿಂದ ರೋಹಿತ್-ರೋಹಿತ್ ಎಂದು ಧ್ವನಿ ಕೂಗಲು ಪ್ರಾರಂಭಿಸಿದ್ದಾರೆ. ಅವರ ಜೊತೆಗೆ ಫೋಟೋಗಳನ್ನ ತೆಗೆದುಕೊಳ್ಳಲು ಶರ್ಮಾಗೆ ವಿನಂತಿಸುವುದನ್ನು ಇಲ್ಲಿ ನಾವು ನೋಡಬಹುದು.

ಈ ವೇಳೆ 10 ವರ್ಷಗಳಿಂದ ರೋಹಿತ್ ಅವರನ್ನು ನೋಡಲು ಕಾಯುತ್ತಿದ್ದೇವೆ ಎಂಬ ಧ್ವನಿ ಕೇಳಿಬರುತ್ತಿದೆ. ರೋಹಿತ್ ಈ ಜನರ ಬಳಿಗೆ ಹೋಗಿದ್ದಾರೆ ಮತ್ತು ಸೆಲ್ಫಿ ತೆಗೆದುಕೊಳ್ಳುವ ಹಂತವು ಪ್ರಾರಂಭವಾಗುತ್ತದೆ. ಇದರಲ್ಲಿ, ರೋಹಿತ್ ಭಾಯ್ , ರೋಹಿತ್ ಭಾಯ್ ಎಂದು ಎರಡೂ ತೋಳುಗಳನ್ನು ಚಾಚಿ ರೋಹಿತ್ ರನ್ನ ತಬ್ಬಿಕೊಳ್ಳುವಂತೆ ವೀಡಿಯೋ ಸಾಕಷ್ಟು ವೈರಲ್ ಆಗಿದೆ.

ರೋಹಿತ್ ಅಪ್ಪುಗೆಯ ವೀಡಿಯೋ ವೈರಲ್

ರೋಹಿತ್ ರನ್ನು ಅಪ್ಪಿಕೊಳ್ಳಬೇಕು ಎಂದು ಹಠ ಹಿಡಿದ ಅಭಿಮಾನಿಗೆ ರೋಹಿತ್ ಅಪ್ಪಿಕೊಂಡ ಬಳಿಕ ವೀಡಿಯೋ ಸಾಕಷ್ಟು ವೈರ್ ಆಗಿದೆ. ರೋಹಿತ್ ಯಾವುದೇ ಅಭಿಮಾನಿಗಳನ್ನು ನಿರಾಸೆಗೊಳಿಸಿಲ್ಲ. ಆತ ತಬ್ಬಿಕೊಂಡ ಬಳಿಕ ಅಭಿಮಾನಿಗಳು ಸಂತೋಷಪಟ್ಟಿದ್ದಾರೆ. 2018ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಕೊನೆಯ ಬಾರಿಗೆ ಏಷ್ಯಾಕಪ್ ಗೆದ್ದಿತ್ತು. ಭಾರತ ತಂಡಕ್ಕೆ ಪ್ರಶಸ್ತಿ ಗೆಲ್ಲಿಸುವ ಗುರಿಯೊಂದಿಗೆ ಮತ್ತೊಮ್ಮೆ ಕಣಕ್ಕಿಳಿಯಲಿದ್ದಾರೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನದಿಂದ ಕಠಿಣ ಸವಾಲನ್ನು ನೀಡುವ ನಿರೀಕ್ಷೆಯಿದೆ.

Story first published: Saturday, August 27, 2022, 11:49 [IST]
Other articles published on Aug 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X