ಏಷ್ಯಾ ಕಪ್ 2022: ಪ್ರತಿಷ್ಠಿತ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 10 ಬ್ಯಾಟ್ಸ್‌ಮನ್‌ಗಳ ಪಟ್ಟಿ

ಭಾರತ ಸೇರಿದಂತೆ ಏಷ್ಯಾ ಖಂಡದ ಆರು ದೇಶಗಳ ಕ್ರಿಕೆಟ್ ತಂಡಗಳು ಇಂದಿನಿಂದ ಆರಂಭಗೊಳ್ಳಲಿರುವ ಏಷ್ಯಾ ಕಪ್ 2022ರಲ್ಲಿ ಭಾಗವಹಿಸಿವೆ. ಈ ನಡುವೆ ಭಾನುವಾರ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯಲಿರುವ ಪಂದ್ಯ ಭಾರೀ ಕುತೂಹಲ ಕೆರಳಿಸಿದೆ.

ಏಷ್ಯಾ ಕಪ್ 2022ರ ಟೂರ್ನಿ ಯುಎಇಯಲ್ಲಿ ನಡೆಯಲಿದ್ದು, ಈ ವರ್ಷಾಂತ್ಯದಲ್ಲಿ ನಡೆಯುವ ಪ್ರತಿಷ್ಠಿತ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಣಕ್ಕಿಳಿಯಲು ಸಿದ್ಧತೆ ನಡೆಸಿಕೊಳ್ಳುತ್ತಿವೆ.

IND vs PAK: ವಿರಾಟ್ ಕೊಹ್ಲಿ, ಬಾಬರ್ ಅಜಂ ನಡುವೆ ಯಾರು ಉತ್ತಮ ಟಿ20 ಬ್ಯಾಟರ್?; ಇಲ್ಲಿದೆ ಅಂಕಿಅಂಶ!IND vs PAK: ವಿರಾಟ್ ಕೊಹ್ಲಿ, ಬಾಬರ್ ಅಜಂ ನಡುವೆ ಯಾರು ಉತ್ತಮ ಟಿ20 ಬ್ಯಾಟರ್?; ಇಲ್ಲಿದೆ ಅಂಕಿಅಂಶ!

ವಿಶ್ವ ಕ್ರಿಕೆಟ್‌ನ ಇತರೆ ದೇಶಗಳ ಚಿತ್ತ ಕೇವಲ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯತ್ತ ಇದ್ದರೆ, ಏಷ್ಯಾ ಖಂಡದ ದೇಶಗಳ ಕಣ್ಣು ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಆಯೋಜನೆಯಾಗಿರುವ ಏಷ್ಯಾ ಕಪ್ ಟ್ರೋಫಿ ಎತ್ತಿ ಹಿಡಿಯುವತ್ತ ಇದೆ.

ಏಷ್ಯಾ ಕಪ್ 2022 ಟೂರ್ನಿ ಆರಂಭಕ್ಕೆ ಕ್ಷಣಗಣನೆ

ಏಷ್ಯಾ ಕಪ್ 2022 ಟೂರ್ನಿ ಆರಂಭಕ್ಕೆ ಕ್ಷಣಗಣನೆ

ಏಷ್ಯಾ ಕಪ್ 2022 ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ ಮತ್ತು ಪಂದ್ಯಾವಳಿಯ ಮೊದಲ ಪಂದ್ಯವು ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವೆ ಶನಿವಾರ ನಡೆಯಲಿದೆ. ವಿರಾಟ್ ಕೊಹ್ಲಿ, ಬಾಬರ್ ಅಜಂ, ರೋಹಿತ್ ಶರ್ಮಾ, ಕೆಎಲ್ ರಾಹುಲ್, ಭಾನುಕ ರಾಜಪಕ್ಷ, ದಸುನ್ ಶನಕ, ರಶೀದ್ ಖಾನ್, ಮೊಹಮ್ಮದ್ ನಬಿ ಮತ್ತು ಮೊಹಮ್ಮದ್ ರಿಜ್ವಾನ್ ಅವರಂತಹ ಆಟಗಾರರು ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂಬುದರ ಮೇಲೆ ಎಲ್ಲರ ಕಣ್ಣಿದೆ.

ಏಷ್ಯಾ ಕಪ್‌ನ ಹಿಂದಿನ 14 ಆವೃತ್ತಿಗಳವರೆಗೆ ಶ್ರೀಲಂಕಾದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಸನತ್ ಜಯಸೂರ್ಯ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಶ್ರೀಲಂಕಾದ ಮಾಜಿ ನಾಯಕ ಸನತ್ ಜಯಸೂರ್ಯ 25 ಪಂದ್ಯಗಳಿಂದ 1,220 ರನ್ ಗಳಿಸಿದ್ದರು. ಶ್ರೀಲಂಕದಾ ಕುಮಾರ್ ಸಂಗಕ್ಕಾರ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ 23 ಏಷ್ಯಾ ಕಪ್ ಪಂದ್ಯಗಳಲ್ಲಿ 971 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಏಷ್ಯಾ ಕಪ್‌ನಲ್ಲಿ ಹೆಚ್ಚು ರನ್ ಗಳಿಸಿದವರ ಪಟ್ಟಿ ಇಲ್ಲಿದೆ

ಏಷ್ಯಾ ಕಪ್‌ನಲ್ಲಿ ಹೆಚ್ಚು ರನ್ ಗಳಿಸಿದವರ ಪಟ್ಟಿ ಇಲ್ಲಿದೆ

ಸನತ್ ಜಯಸೂರ್ಯ (ಶ್ರೀಲಂಕಾ)- 25 ಪಂದ್ಯಗಳಲ್ಲಿ 1,220 ರನ್

ಕುಮಾರ ಸಂಗಕ್ಕಾರ (ಶ್ರೀಲಂಕಾ)- 24 ಪಂದ್ಯಗಳಲ್ಲಿ 1,075 ರನ್

ಸಚಿನ್ ತೆಂಡೂಲ್ಕರ್ (ಭಾರತ)- 23 ಪಂದ್ಯಗಳಲ್ಲಿ 971 ರನ್

ಶೋಯೆಬ್ ಮಲಿಕ್ (ಪಾಕಿಸ್ತಾನ)- 21 ಪಂದ್ಯಗಳಲ್ಲಿ 907 ರನ್

ರೋಹಿತ್ ಶರ್ಮಾ (ಭಾರತ)- 27 ಪಂದ್ಯಗಳಲ್ಲಿ 883 ರನ್

ವಿರಾಟ್ ಕೊಹ್ಲಿ (ಭಾರತ)

ವಿರಾಟ್ ಕೊಹ್ಲಿ (ಭಾರತ)

ವಿರಾಟ್ ಕೊಹ್ಲಿ (ಭಾರತ)- 16 ಪಂದ್ಯಗಳಲ್ಲಿ 766 ರನ್

ಅರ್ಜುನ ರಣತುಂಗ (ಶ್ರೀಲಂಕಾ)- 19 ಪಂದ್ಯಗಳಲ್ಲಿ 741 ರನ್

ಮುಶ್ಫಿಕರ್ ರಹೀಮ್ (ಬಾಂಗ್ಲಾದೇಶ)- 26 ಪಂದ್ಯಗಳಲ್ಲಿ 739 ರನ್

ಎಂಎಸ್ ಧೋನಿ (ಭಾರತ)- 24 ಪಂದ್ಯಗಳಲ್ಲಿ 690 ರನ್

ಮಹೇಲಾ ಜಯವರ್ಧನೆ (ಶ್ರೀಲಂಕಾ)- 28 ಪಂದ್ಯಗಳಲ್ಲಿ 674 ರನ್

ಸೆಪ್ಟೆಂಬರ್ 11ರಂದು ಏಷ್ಯಾ ಕಪ್ ಫೈನಲ್

ಸೆಪ್ಟೆಂಬರ್ 11ರಂದು ಏಷ್ಯಾ ಕಪ್ ಫೈನಲ್

ಟಿ20 ವಿಶ್ವಕಪ್ ಟೂರ್ನಿ ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ಆರಂಭವಾಗುತ್ತಿದ್ದರೆ, ಏಷ್ಯಾ ಕಪ್ ಟೂರ್ನಿ ಇಂದಿನಿಂದ (ಆಗಸ್ಟ್ 27) ಆರಂಭಗೊಳ್ಳಲಿದ್ದು, ಸೆಪ್ಟೆಂಬರ್ 11ರ ಭಾನುವಾರದಂದು ನಡೆಯಲಿರುವ ಫೈನಲ್ ಪಂದ್ಯದ ಮೂಲಕ ಟೂರ್ನಿ ಅಂತ್ಯಗೊಳ್ಳಲಿದೆ.

ಇನ್ನು ಈ ಬಾರಿಯ ಏಷ್ಯಾಕಪ್ ಟೂರ್ನಿ ಶ್ರೀಲಂಕಾ ನೆಲದಲ್ಲಿ ನಡೆಯಬೇಕಿತ್ತು. ಆದರೆ, ಶ್ರೀಲಂಕಾ ದೇಶದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಟೂರ್ನಿಯನ್ನು ಇದೀಗ ಯುಎಇಗೆ ಸ್ಥಳಾಂತರಿಸಲಾಗಿದೆ. ಈ ಮೂಲಕ ನಾಲ್ಕನೇ ಬಾರಿಗೆ ಏಷ್ಯಾಕಪ್ ಟೂರ್ನಿ ಯುಎಇ ನೆಲದಲ್ಲಿ ಜರುಗಲಿದೆ. ಆಗಸ್ಟ್ 27ರ ಶನಿವಾರದಂದು ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಸೆಣಸಲಿವೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, August 27, 2022, 11:53 [IST]
Other articles published on Aug 27, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X