ಏಷ್ಯಾಕಪ್‌ನಲ್ಲಿ ಭಾರತ ಭಾಗವಹಿಸದಿದ್ರೆ, ಏಷ್ಯಾಕಪ್ ನಡೆಯೋದೆ ಇಲ್ಲ: ಕಾರಣ ಏನೆಂದು ತಿಳಿಸಿದ ಆಕಾಶ್ ಚೋಪ್ರಾ

2023ರಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ಭಾಗವಹಿಸುವುದಿಲ್ಲ, ಟೂರ್ನಿಯು ತಟಸ್ಥ ಸ್ಥಳದಲ್ಲಿ ನಡೆಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಹೇಳಿಕೆ ನೀಡಿದ ಬಳಿಕ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಏಷ್ಯಾಕಪ್ ವೇಳಾಪಟ್ಟಿಯ ಪ್ರಕಾರ ಮುಂದಿನ ವರ್ಷ ಸೆಪ್ಟೆಂಬರ್‌ನಲ್ಲಿ ಪಾಕಿಸ್ತಾನವು ಆತಿಥ್ಯ ವಹಿಸಿದೆ. ಈಗಾಗಲೇ ಬಿಸಿಸಿಐ ಕಾರ್ಯದರ್ಶಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಷಾ ಟೀಂ ಇಂಡಿಯಾ ಪಾಕಿಸ್ತಾನ ಪ್ರವಾಸ ಕೈಗೊಳ್ಳುವುದಿಲ್ಲ, ತಟಸ್ಥ ಸ್ಥಳದಲ್ಲಿ ಟೂರ್ನಮೆಂಟ್ ನಡೆಯಲಿದೆ ಎಂದು ಹೇಳಿದ್ದರು. ಆದ್ರೆ ಈ ಕುರಿತಾಗಿ ಮಾತನಾಡಿರುವ ಟೀಂ ಇಂಡಿಯಾ ಮಾಜಿ ಆಟಗಾರ ಆಕಾಶ್ ಚೋಪ್ರಾ, ಏಷ್ಯಾಕಪ್ ಟೂರ್ನಿಯಲ್ಲಿ ಭಾರತವು ಬಿಡಿಗಾಸನ್ನು ಮುಟ್ಟುವುದಿಲ್ಲ, ತನ್ನ ಪಾಲನ್ನು ಬೇರೆ ತಂಡಗಳಿಗೆ ನೀಡುತ್ತದೆ ಎಂದು ಹೇಳುವ ಮೂಲಕ ಇದುವರೆಗೂ ಬಹಿರಂಗವಾಗದ ಮಾಹಿತಿ ಹೊರಬಿದ್ದಿದೆ.

ಭಾರತದಲ್ಲಿ 2023ರ ವಿಶ್ವಕಪ್‌ನಲ್ಲಿ ಭಾಗವಹಿಸುವುದಿಲ್ಲ ಎಂದ ಪಾಕಿಸ್ತಾನ
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿಕೆ ಹೊರಬೀಳುತ್ತಿದ್ದಂತೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್(ಪಿಸಿಬಿ) ಏಷ್ಯನ್ ಕ್ರಿಕೆಟ್ ಕೌನ್ಸಿಲ್ ತುರ್ತು ಸಭೆಗೆ ಮನವಿ ಮಾಡಿದೆ. ಜೊತೆಗೆ ಟೀಂ ಇಂಡಿಯಾ ನಮ್ಮ ದೇಶಕ್ಕೆ ಬರದಿದ್ರೆ, ನಾವು ಭಾರತದಲ್ಲಿ ನಡೆಯಲಿರುವ 2023ರ ಏಕದಿನ ಏಷ್ಯಾಕಪ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಬೆದರಿಕೆ ಹಾಕಿದೆ.
SMAT 2022: ಒಡಿಶಾ ವಿರುದ್ಧ ಸ್ಪೋಟಕ ಶತಕ ಸಿಡಿಸಿದ ಇಶಾನ್ ಕಿಶನ್, 64 ಎಸೆತ 102* ರನ್

ಭಾರತ ಭಾಗವಹಿಸದಿದ್ರೆ ಏಷ್ಯಾಕಪ್ ನಡೆಯೋದೆ ಇಲ್ಲ: ಆಕಾಶ್ ಚೋಪ್ರಾ
ಟೀಂ ಇಂಡಿಯಾ ಮುಂಬರುವ ಏಷ್ಯಾಕಪ್‌ನಲ್ಲಿ ಪಾಕಿಸ್ತಾನದಲ್ಲಿ ಭಾಗಿಯಾಗಲು ಹಿಂದೇಟು ಹಾಕಿದ ಬಳಿಕ ಮಾತನಾಡಿರುವ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ''ಭಾರತ ಏಷ್ಯಾಕಪ್‌ನಲ್ಲಿ ಭಾಗವಹಿಸದಿದ್ರೆ ಟೂರ್ನಮೆಂಟ್ ನಡೆಯೋದೆ ಇಲ್ಲ. ಯಾವುದೇ ಅವಕಾಶವೂ ಇರುವುದಿಲ್ಲ. ವಿಶ್ವಕಪ್‌ಗೆ ಹೋಲಿಸಿದ್ರೆ, ಏಷ್ಯಾಕಪ್ ಚಿಕ್ಕ ಟೂರ್ನಮೆಂಟ್ ಆಗಿದೆ'' ಎಂದು ಆಕಶ್ ಚೋಪ್ರಾ ಹೇಳಿದ್ದಾರೆ.
ಪಾಕಿಸ್ತಾನ ಮುಂಬರುವ ವಿಶ್ವಕಪ್‌ನಲ್ಲಿ ಭಾಗವಹಿಸುವುದಿಲ್ಲ ಎಂಬ ಕುರಿತು ತನ್ನ ಮಾತನ್ನು ಮುಂದುವರಿಸಿರುವ ಆಕಾಶ್ ಚೋಪ್ರಾ '' ವಿಶ್ವಕಪ್‌ನಲ್ಲಿ ಭಾಗಿಯಾಗುವುದನ್ನು ಪಾಕಿಸ್ತಾನ ತಪ್ಪಿಸಿದ್ರೆ, ಐಸಿಸಿಯಿಂದ ಬರುವಂತಹ ದೊಡ್ಡ ಮಟ್ಟಿನ ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ. ನಾನು ಈ ಕುರಿತು ಹೆಚ್ಚು ಮಾತನಾಡುವುದಿಲ್ಲ. 2023ರ ಏಷ್ಯಾಕಪ್ ಟೂರ್ನಿಯು ತಟಸ್ಥ ಸ್ಥಳದಲ್ಲಿಯೇ ನಡೆಯುತ್ತದೆ ಎಂದು ನನಗನಿಸುತ್ತಿದೆ'' ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
Asia cup 2023: ಪಾಕಿಸ್ತಾನ ಪ್ರವಾಸವನ್ನ BCCI ಏಕಾಂಗಿಯಾಗಿ ನಿರ್ಧರಿಸಲು ಸಾಧ್ಯವಿಲ್ಲ: ರೋಜರ್ ಬಿನ್ನಿ

2008ರ ಬಳಿಕ ಪಾಕಿಸ್ತಾನ ಪ್ರವಾಸವನ್ನೇ ಕೈಗೊಳ್ಳದ ಭಾರತ
ಭಾರತ-ಪಾಕಿಸ್ತಾನ ನಡುವಿನ ತೀವ್ರ ಗಡಿವಿವಾದ ಮತ್ತು ಭಯೋತ್ಪಾದಕ ಚಟುವಟಿಕೆಗಳ ಪ್ರಚೋದಿಸಿರುವ ಪಾಕಿಸ್ತಾನ ವಿರುದ್ಧ ದ್ವಿಪಕ್ಷೀಯ ಸರಣಿಯನ್ನಾಡದ ಭಾರತ, ಪಾಕ್ ಪ್ರವಾಸ ಕೈಗೊಂಡು ದಶಕವೇ ಕಳೆದು ಹೋಗಿದೆ.
ಟೀಂ ಇಂಡಿಯಾ ಕೊನೆಯ ಬಾರಿಗೆ 2008ರಲ್ಲ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದು, 2013ರಿಂದ ಉಭಯ ರಾಷ್ಟ್ರಗಳು ಯಾವುದೇ ದ್ವಿಪಕ್ಷೀಯ ಸರಣಿಯಲ್ಲಿ ಭಾಗಿಯಾಗಿಲ್ಲ. ಹೀಗಾಗಿ ಉಭಯ ತಂಡಗಳು ಕೇವಲ ಐಸಿಸಿ ಟೂರ್ನಮೆಂಟ್‌ನಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.
ಅಕ್ಟೋಬರ್ 23ರಂದು ಭಾರತ-ಪಾಕಿಸ್ತಾನ ತಂಡಗಳು ಮೆಲ್ಬರ್ನ್‌ನ ಎಂಸಿಜಿ ಮೈದಾನದಲ್ಲಿ ಕಣಕ್ಕಿಳಿಯುತ್ತಿದ್ದು, T20 ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications