Aus vs Eng 3rd T20: ಪಂದ್ಯಕ್ಕೆ ಮಳೆ ಕಾಟ, ಇಂಗ್ಲೆಂಡ್‌ಗೆ 2-0 ಅಂತರದಲ್ಲಿ ಸರಣಿ ಜಯ

ಕ್ಯಾನ್ಬೆರ ಮನುಕ ಓವಲ್‌ನಲ್ಲಿ ನಡೆದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಹಾಗೂ ಅಂತಿಮ T20 ಪಂದ್ಯವು ಮಳೆಯಲ್ಲಿ ಕೊಚ್ಚಿಹೋಗಿದೆ. ಮಳೆಯ ಕಾಟ ಮತ್ತು ಒದ್ದೆಯಾದ ಔಟ್‌ಫೀಲ್ಡ್ ಹಿನ್ನಲೆಯಲ್ಲಿ ಪಂದ್ಯವು ಯಾವುದೇ ಫಲಿತಾಂಶ ಕಾಣದ ಅಂತ್ಯಗೊಂಡಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 2-0 ಅಂತರದಲ್ಲಿ ಸರಣಿ ಜಯಿಸಿದೆ.
ಮೊದಲ ಎರಡು ಟಿ20 ಪಂದ್ಯಗಳನ್ನ ಜಯಿಸಿದ್ದ ಇಂಗ್ಲೆಂಡ್, ಅಂತಿಮ ಪಂದ್ಯವನ್ನೂ ಗೆಲ್ಲುವ ವಿಶ್ವಾಸ ಹೊಂದಿತ್ತು. ಟಾಸ್ ಗೆದ್ದ ಆತಿಥೇಯ ಆಸ್ಟ್ರೇಲಿಯಾ ಬೌಲಿಂಗ್ ಆಯ್ದುಕೊಂಡಿತು. ಪರಿಣಾಮ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆರಂಭಿಸಿತು. ಆದ್ರೆ ಮಳೆಯಿಂದಾಗಿ ಪಂದ್ಯವು 12 ಓವರ್‌ಗಳಿಗೆ ಸೀಮಿತಗೊಂಡಿತು.

ಇಂಗ್ಲೆಂಡ್ ಪರ ಅಬ್ಬರಿಸಿದ ಜಾಸ್ ಬಟ್ಲರ್
ಇಂಗ್ಲೆಂಡ್ ಪರ ಓಪನರ್ ಅಲೆಕ್ಸ್ ಹೇಲ್ಸ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ಬಳಿಕ, ಅಬ್ಬರದ ಆಟಕ್ಕಿಳಿದ ನಾಯಕ ಮತ್ತು ಓಪನರ್ ಜಾಸ್ ಬಟ್ಲರ್ ಆಸಿಸ್ ಬೌಲರ್‌ಗಳನ್ನ ಬೆಂಡೆತ್ತಿದ್ರು. 41 ಎಸೆತಗಳಲ್ಲಿ 65 ರನ್ ಸಿಡಿಸಿದ ಜಾಸ್ ಬಟ್ಲರ್ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಿತ್ತು.
ಜಾಸ್ ಬಟ್ಲರ್‌ಗೆ ಸಾಥ್ ಕೊಟ್ಟ ಡೇವಿಡ್ ಮಲನ್ 23, ಬೆನ್ ಸ್ಟೋಕ್ಸ್ 10 ಎಸೆತಗಳಲ್ಲಿ ಅಜೇಯ 17ರನ್ ಕಲೆಹಾಕುವ ಮೂಲಕ ತಂಡದ ಸ್ಕೋರನ್ನು 100ರ ಗಡಿದಾಟಿಸಿದ್ರು. ಅಂತಿಮವಾಗಿ ಕಡಿತಗೊಂಡಿದ್ದ 12 ಓವರ್‌ಗಳಿಗೆ 2 ವಿಕೆಟ್ ನಷ್ಟಕ್ಕೆ 112ರನ್ ಕಲೆಹಾಕಿತು.
ಟೀಂ ಇಂಡಿಯಾ ಪ್ಲೇಯಿಂಗ್ 11ನಲ್ಲಿ ಪಂತ್‌ಗೆ ಸ್ಥಾನ ಸಿಗೋದೆ ಅನುಮಾನ: ಕೋಚ್ ಮತ್ತು ನಾಯಕನ ನಂಬಿಕೆ ಕಳೆದುಕೊಂಡ ರಿಷಭ್
17 ರನ್‌ಗೆ 3 ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ
ಅದಾಗಲೇ ಸರಣಿ ಸೋತಿದ್ದ ಆಸಿಸ್ ಅಂತಿಮ ಪಂದ್ಯದಲ್ಲಾದ್ರೂ ಗೆದ್ದು ಆತ್ಮವಿಶ್ವಾಸ ಪಡೆಯುವ ಯೋಚನೆಯಲ್ಲಿತ್ತು. ಆದ್ರೆ ಆಲ್‌ರೌಂಡರ್ ಕ್ರಿಸ್ ವೋಕ್ಸ್ ಮಾರಕ ಬೌಲಿಂಗ್ ದಾಳಿಗೆ ಆಸಿಸ್ ತತ್ತರಿಸಿತು. ಆಸ್ಟ್ರೇಲಿಯಾ ಮೂವರು ಟಾಪ್ ಆರ್ಡರ್ ಬ್ಯಾಟರ್‌ಗಳನ್ನ ಪೆವಿಲಿಯನ್‌ಗೆ ಅಟ್ಟಿದ ವೋಕ್ಸ್ 2 ಓವರ್‌ಗಳಲ್ಲಿ ಕೇವಲ 4 ರನ್ ನೀಡಿ 3 ವಿಕೆಟ್ ಕಬಳಿಸಿದ್ರು.
ಆಸಿಸ್ ಪರ ನಾಯಕ ಆ್ಯರೋನ್ ಫಿಂಚ್ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಗೋಲ್ಡನ್ ಡಕೌಟ್ ಆದ್ರೆ, ಮಿಚೆಲ್ ಮಾರ್ಷ್ ಕೂಡ ನಂತರದ ಎಸೆತದಲ್ಲೇ ಶೂನ್ಯಕ್ಕೆ ಔಟಾಗಿದ್ದು ಆಸ್ಟ್ರೇಲಿಯಾಗೆ ಸಿಡಿಲು ಬಡಿದಂತಾಯಿತು. ಇನ್ನು ಕಳಪೆ ಫಾರ್ಮ್‌ನಲ್ಲಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಆಟ ಕೇವಲ 8ರನ್‌ಗಳಿಗೆ ಕೊನೆಗೊಂಡಿತು.
ಮಳೆಯಿಂದಾಗಿ ಪಂದ್ಯ ಸ್ಥಗಿತಗೊಳ್ಳುವ ಮುನ್ನ ಸ್ಟೀವನ್ ಸ್ಮಿತ್ ಅಜೇಯ 7, ಮಾರ್ಕಸ್ ಸ್ಟೋಯ್ನಿಸ್ ಅಜೇಯ 8ರನ್ ಕಲೆಹಾಕುವ ಮೂಲಕ ಆಸಿಸ್ 3.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 30ರನ್ ಕಲೆಹಾಕಿತ್ತು. ಆದ್ರೆ ಮಳೆ ನಿಲ್ಲದ ಹಿನ್ನಲೆ ಪಂದ್ಯವು ಫಲಿತಾಂಶವಿಲ್ಲದೆ ಕೊನೆಗೊಂಡಿತು.
ಕೊನೆಯ ಕ್ಷಣದಲ್ಲಿ ಪಾಕಿಸ್ತಾನ ಸ್ಕ್ವಾಡ್‌ನಲ್ಲಿ ಬದಲಾವಣೆ: ಫಖಾರ್ ಜಮಾನ್‌ಗೆ ಸ್ಥಾನ

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಇಂಗ್ಲೆಂಡ್ ಪ್ಲೇಯಿಂಗ್ 11: ಜಾಸ್ ಬಟ್ಲರ್ (ನಾಯಕ ಮತ್ತು ವಿಕೆಟ್ ಕೀಪರ್), ಅಲೆಕ್ಸ್ ಹೇಲ್ಸ್, ಡೇವಿಡ್ ಮಲನ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಡೇವಿಡ್ ವಿಲ್ಲಿ, ಮಾರ್ಕ್ ವುಡ್, ಆದಿಲ್ ರಶೀದ್, ರೀಸ್ ಟೋಪ್ಲಿ
ಬೆಂಚ್: ಸ್ಯಾಮ್ ಕರ್ರನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಫಿಲಿಪ್ ಸಾಲ್ಟ್
ಇಂಗ್ಲೆಂಡ್ ಪ್ಲೇಯಿಂಗ್ 11: ಆ್ಯರೋನ್ ಫಿಂಚ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ಕಸ್ ಸ್ಟೊಯ್ನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್
ಬೆಂಚ್: ಡೇವಿಡ್ ವಾರ್ನರ್, ಕೇನ್ ರಿಚರ್ಡ್ಸನ್, ಸೀನ್ ಅಬಾಟ್, ಆಷ್ಟನ್ ಅಗರ್, ಜೋಶ್ ಇಂಗ್ಲಿಸ್, ಕ್ಯಾಮರೂನ್ ಗ್ರೀನ್, ಡೇನಿಯಲ್ ಸ್ಯಾಮ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications