ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2006ರಲ್ಲಿ ತನ್ನ ಬದುಕನ್ನೇ ಬದಲಾಯಿಸಿದ ಎಸೆತವನ್ನ ನೆನಪಿಸಿಕೊಂಡ ಡ್ವೇನ್ ಬ್ರಾವೋ

Dwayne Bravo
ದಾಖಲೆ ಮಾಡಿ ಮಿಂಚುತ್ತಿರುವ ಬ್ರಾವೋ | Oneindia Kannada

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸೂಪರ್ ಆಲ್‌ರೌಂಡರ್ ಡ್ವೇನ್ ಬ್ರಾವೋ ಸಿಎಸ್‌ಕೆ ತಂಡದ ಪ್ರಮುಖ ಕೀ ಪ್ಲೇಯರ್ ಆಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಡ್ವೇನ್ ಬ್ರಾವೋ ಗರಿಷ್ಠ ವಿಕೆಟ್ ಟೇಕರ್ ಆಗಲು ಇನ್ನೊಂದೇ ಹಜ್ಜೆ ಹಿಂದೆ ಇದ್ದಾರೆ.

ವಿಂಡೀಸ್ ಮೂಲದ ಆಲ್‌ರೌಂಡರ್ ಬ್ರಾವೋ ಚುಟುಕು ಕ್ರಿಕೆಟ್‌ನಲ್ಲಿ ಈ ಮಟ್ಟಿಗೆ ಮಿಂಚಲು ಆ ಒಂದು ಎಸೆತ ಕಾರಣ ಎಂದಿದ್ದಾರೆ. ವಿಂಡೀಸ್‌ನೊಂದಿಗೆ ವಿಶ್ವದಾದ್ಯಂತ ಟಿ20 ಲೀಗ್‌ಗಳಲ್ಲಿ ಆಡಿರುವ ಬ್ರಾವೋ ಯಶಸ್ವಿ ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ.

ಐಪಿಎಲ್‌ನಲ್ಲಿ 152 ಪಂದ್ಯಗಳನ್ನು ಆಡಿರುವ ಬ್ರಾವೋ, 170 ವಿಕೆಟ್‌ಗಳೊಂದಿಗೆ ಲಸಿತ್ ಮಾಲಿಂಗ ಅವರನ್ನು ಗರಿಷ್ಠ ವಿಕೆಟ್ ಟೇಕರ್ ಆಗಿ ಸರಿಗಟ್ಟಿದ್ದಾರೆ. ಇನ್ನೊಂದು ವಿಕೆಟ್ ಪಡೆದರೆ ಐಪಿಎಲ್‌ನ ಗರಿಷ್ಠ ವಿಕೆಟ್ ಟೇಕರ್ ಆಗಲಿದ್ದಾರೆ.

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಸಾಕಷ್ಟು ಅನುಭವ ಹೊಂದಿರುವ ಡ್ವೇನ್ ಬ್ರಾವೋ, ಯುವರಾಜ್ ಸಿಂಗ್ ಅವರ ಒಂದು ಎಸೆತ ತನ್ನ ಜೀವನವನ್ನೇ ಬದಲಿಸಿ, ಜಗತ್ತಿನ ಮುಂದೆ ಟಿ20 ಸ್ಪೆಷಲಿಸ್ಟ್ ಬೌಲರ್ ಆಗುವಂತೆ ಮಾಡಿದೆ ಎಂದು ಸ್ವತಃ ಬ್ರಾವೋ ಹೇಳಿದ್ದಾರೆ.

2006ರ ವೆಸ್ಟ್ ಇಂಡೀಸ್ ಪ್ರವಾಸ

2006ರ ವೆಸ್ಟ್ ಇಂಡೀಸ್ ಪ್ರವಾಸ

ಟೀಂ ಇಂಡಿಯಾ 2006ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿತ್ತು. ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಮುನ್ನಡೆದ ಟೀಮ್ ಇಂಡಿಯಾ ಮೊದಲ ಏಕದಿನ ಪಂದ್ಯದಲ್ಲಿ ಜಯಿಸಿತು. ಎರಡನೇ ಏಕದಿನ ಪಂದ್ಯದಲ್ಲಿ ಕೇವಲ ಒಂದು ರನ್‌ಗಳ ಸೋಲನ್ನ ಕಂಡಿತು.

ಎರಡನೇ ಏಕದಿನ ಪಂದ್ಯದಲ್ಲಿ ಬ್ರಾವೋ ವಿಕೆಟ್ ಪಡೆಯುವ ಮುನ್ನ ಯುವರಾಜ್ ಸತತ ಎರಡು ಬೌಂಡರಿ ಬಾರಿಸಿದರು. ಭಾರತಕ್ಕೆ ಗೆಲುವಿಗೆ ಮೂರು ಎಸೆತಗಳಲ್ಲಿ ಎರಡು ರನ್‌ಗಳ ಅಗತ್ಯವಿತ್ತು. ಆದರೆ ಆ ಓವರ್ ನ ನಾಲ್ಕನೇ ಎಸೆತಕ್ಕೆ ಯುವಿ ಕ್ಲೀನ್ ಬೌಲ್ಡ್ ಆದರು. ಆ ಮೂಲಕ ಭಾರತಕ್ಕೆ ಭಾರೀ ಹಿನ್ನಡೆಯಾಯಿತು.

ಆ ಒಂದು ಎಸೆತ ನನ್ನ ಬದುಕು ಬದಲಾಯಿಸಿತು: ಬ್ರಾವೊ

ಆ ಒಂದು ಎಸೆತ ನನ್ನ ಬದುಕು ಬದಲಾಯಿಸಿತು: ಬ್ರಾವೊ

'ಅಂದು ಈ ಜಗತ್ತು ನನ್ನನ್ನು ಗುರುತಿಸಿದ ಕ್ಷಣ. ವಿಭಿನ್ನವಾಗಿ ಚೆಂಡುಗಳನ್ನು ಎಸೆಯುವಲ್ಲಿ ದಿಟ್ಟತನ ತೋರುತ್ತೇನೆ ಎಂದು ನನ್ನ ಮೇಲೆ ನಂಬಿಕೆ ಇಡಲಾಯಿತು. ಆ ಆತ್ಮವಿಶ್ವಾಸ ನನ್ನ ಟಿ20 ವೃತ್ತಿಜೀವನವನ್ನು ನಿರ್ಮಿಸಿದೆ.

ನಮ್ಮ ಆಗಿನ ನಾಯಕ ಬ್ರಿಯಾನ್ ಲಾರಾ ಆ ಚೆಂಡನ್ನು ಯುವಿಗೆ ಎಸೆಯುವ ಮೊದಲು ಮೈದಾನದ ಸೆಟಪ್ ಬಗ್ಗೆ ಮಾತನಾಡಿದರು. ಆದರೆ ನಿಜ ಹೇಳಬೇಕೆಂದರೆ ನನ್ನ ಓಟವನ್ನು ಪ್ರಾರಂಭಿಸುವವರೆಗೂ ನಾನು ಏನು ಎಸೆಯಬೇಕೆಂದು ನಿರ್ಧರಿಸಲಿಲ್ಲ. ನಾನು ನನ್ನ ರನ್‌ಅಪ್ ಅಂಪೈರ್‌ಗೆ ಹತ್ತಿರವಾಗುತ್ತಿದ್ದಂತೆ ನಾನು ಡಿಪ್ಪರ್ ಮಾಡಲು ಮುಂದಾದೆ. ಯುವಿ ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಕ್ಲೀನ್ ಬೌಲ್ಡ್ ಮಾಡಿದರು. ಈ ರೀತಿಯ ಚೆಂಡುಗಳು ಬಹಳಷ್ಟು ಆಯ್ಕೆ ಇದೆ. ಆದರೆ ನೀವು ಒಂದನ್ನು ಆಯ್ಕೆ ಮಾಡಲು ಬಯಸಿದರೆ, ಆ ಯುವ ರಾಜ್ ಬಾಲ್ ನನ್ನ ನೆಚ್ಚಿನದು. ಇದು ನನ್ನ ಜೀವನವನ್ನೇ ಬದಲಿಸಿದೆ ಎಂದು ಬ್ರಾವೋ ಹೇಳಿದ್ದಾರೆ.

KKR vs PBKS Preview: ಪ್ರಿವ್ಯೂ, ಸಂಭಾವ್ಯ ತಂಡ, ಪಿಚ್ ರಿಪೋರ್ಟ್, ಹವಾಮಾನ ವರದಿ

ಐಪಿಎಲ್‌ನಲ್ಲಿ ಹೊಸ ದಾಖಲೆಗೆ ಇನ್ನೊಂದೇ ವಿಕೆಟ್ ಬೇಕು

ಐಪಿಎಲ್‌ನಲ್ಲಿ ಹೊಸ ದಾಖಲೆಗೆ ಇನ್ನೊಂದೇ ವಿಕೆಟ್ ಬೇಕು

ಐಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಲು ಡ್ವೇನ್ ಬ್ರಾವೋ ಒಂದು ವಿಕೆಟ್ ಅಂತರದಲ್ಲಿದ್ದಾರೆ. ಇಂದು ನಡೆಯಲಿರುವ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಬ್ರಾವೋ ಮತ್ತೊಂದು ವಿಕೆಟ್ ಪಡೆದರೆ, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಮುರಿಯಲಿದ್ದಾರೆ.

ಈ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮಾಜಿ ಬೌಲರ್ ಲಸಿತ್ ಮಾಲಿಂಗ (170) ದಾಖಲೆ ಮುರಿದಿದ್ದಾರೆ. ಪ್ರಸ್ತುತ ಬ್ರಾವೋ 170 ವಿಕೆಟ್‌ಗಳೊಂದಿಗೆ ಮಾಲಿಂಗಗೆ ಸರಿಸಮನಾಗಿ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಮುಂದುವರಿದಿದ್ದಾರೆ. ಐಪಿಎಲ್ ಟಾಪ್ 6 ವಿಕೆಟ್ ಪಡೆದವರ ಪಟ್ಟಿಯಲ್ಲಿ ಮಾಲಿಂಗ ಮತ್ತು ಬ್ರಾವೋ ನಂತರ ಅಮಿತ್ ಮಿಶ್ರಾ (166), ಪಿಯೂಷ್ ಚಾವ್ಲಾ (157), ಹರ್ಭಜನ್ ಸಿಂಗ್ (150) ಮತ್ತು ರವಿಚಂದ್ರನ್ ಅಶ್ವಿನ್ (145) ಇದ್ದಾರೆ.

Story first published: Friday, April 1, 2022, 10:56 [IST]
Other articles published on Apr 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X