Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮುಂಬೈ ಇಂಡಿಯನ್ಸ್‌ಗೆ ಆನೆ ಬಲ: ಕ್ವಾರಂಟೈನ್ ಮುಗಿಸಿದ ಸೂರ್ಯಕುಮಾರ್ ಯಾದವ್

Suryakumar yadav

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ಪ್ರಾರಂಭವಾಗಿ ಬಹುತೇಕ ತಂಡಗಳು ತಲಾ ಒಂದು ಪಂದ್ಯಗಳನ್ನಾಡಿವೆ. ಆದ್ರೂ ಕೂಡ ಅನೇಕ ಸ್ಟಾರ್ ಆಟಗಾರರು ಇನ್ನೂ ತಮ್ಮ ತಂಡಗಳನ್ನು ಸೇರಿಕೊಂಡಿಲ್ಲ. ಪ್ರಮುಖ ಆಟಗಾರರಿಲ್ಲದೆ ತಂಡಗಳು ಆಡಿದ ಮೊದಲ ಪಂದ್ಯಗಳಲ್ಲಿ ಕೊರತೆ ಕಾಣುತ್ತಿತ್ತು.

ಆದ್ರೆ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಅಭಿಮಾನಿಗಳಿಗೆ ಗುಡ್‌ ನ್ಯೂಸ್ ಇಲ್ಲಿದೆ. ಈ ಮೂರು ತಂಡಗಳ ಪ್ರಮುಖ ಆಟಗಾರರು ಆಯಾ ತಂಡಗಳಿಗೆ ಸೇರ್ಪಡೆಯಾಗುತ್ತಿದ್ದಾರೆ.

ಸೂರ್ಯಕುಮಾರ್ ಯಾದವ್ ಕಂಬ್ಯಾಕ್

ಸೂರ್ಯಕುಮಾರ್ ಯಾದವ್ ಕಂಬ್ಯಾಕ್

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಗಾಯಗೊಂಡಿದ್ದ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರು ಶ್ರೀಲಂಕಾ ವಿರುದ್ಧದ ಸರಣಿಯ ಜೊತೆಗೆ ಸಂಪೂರ್ಣ ಸರಣಿಯನ್ನು ಕಳೆದುಕೊಂಡಿದ್ದರು. ಸೂರ್ಯಕುಮಾರ್ ಯಾದವ್ ಚೇತರಿಸಿಕೊಳ್ಳುತ್ತಿದ್ದರಿಂದ ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್‌ನ ಮೊದಲ ಪಂದ್ಯವನ್ನೂ ತಪ್ಪಿಸಿಕೊಂಡರು.

ಆದರೆ, ಗಾಯದಿಂದ ಚೇತರಿಸಿಕೊಂಡು ತಡವಾಗಿ ತಂಡವನ್ನು ಸೇರಿಕೊಂಡಿದ್ದ ಸೂರ್ಯಕುಮಾರ್ ಯಾದವ್ ಇತ್ತೀಚೆಗೆ ಕ್ವಾರಂಟೈನ್ ಮುಗಿಸಿದ್ದಾರೆ. ಇದರೊಂದಿಗೆ ಅವರು ಕ್ವಾರಂಟೈನ್‌ನಿಂದ ಹೊರ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 2ರಂದು ನಡೆಯಲಿರುವ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಮುಂಬೈ ಇಂಡಿಯನ್ಸ್ ಎರಡನೇ ಪಂದ್ಯಕ್ಕೆ ಸೂರ್ಯ ಕುಮಾರ್ ಯಾದವ್ ಲಭ್ಯರಾಗುವುದು ಖಚಿತವಾದಂತಿದೆ.

2006ರಲ್ಲಿ ತನ್ನ ಬದುಕನ್ನೇ ಬದಲಾಯಿಸಿದ ಎಸೆತವನ್ನ ನೆನಪಿಸಿಕೊಂಡ ಡ್ವೇನ್ ಬ್ರಾವೋ

ಆರ್‌ಸಿಬಿ ತಂಡಕ್ಕೆ ಮ್ಯಾಕ್ಸಿ ಬಲ

ಆರ್‌ಸಿಬಿ ತಂಡಕ್ಕೆ ಮ್ಯಾಕ್ಸಿ ಬಲ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಕೂಡ ಇಂದು ಭಾರತಕ್ಕೆ ಆಗಮಿಸುತ್ತಿದ್ದಾರೆ. ಆದಾಗ್ಯೂ, ನಿಯಮಗಳ ಪ್ರಕಾರ, ಮ್ಯಾಕ್ಸ್‌ವೆಲ್ ಅವರನ್ನು 3 ದಿನಗಳವರೆಗೆ ನಿರ್ಬಂಧಿಸಲಾಗುತ್ತದೆ. ಆದರೆ, ಆರ್‌ಸಿಬಿ ಆಡಲಿರುವ ಮುಂದಿನ ಪಂದ್ಯ ಏಪ್ರಿಲ್ 5 ರಂದು ನಡೆಯಲಿದೆ.

ಇದರೊಂದಿಗೆ ಮ್ಯಾಕ್ಸ್‌ವೆಲ್ ಕ್ವಾರಂಟೈನ್ ಮುಗಿಸಿ ತಂಡವನ್ನು ಸೇರಿಕೊಳ್ಳಬಹುದು. ಇದರೊಂದಿಗೆ ಅವರು ಏಪ್ರಿಲ್ 5 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಆರ್‌ಸಿಬಿ ಪಂದ್ಯಕ್ಕೆ ಲಭ್ಯವಾಗುವ ಸಾಧ್ಯತೆಯಿದೆ. ಲೀಗ್‌ನಲ್ಲಿ ಈಗಾಗಲೇ ಎರಡು ಪಂದ್ಯಗಳನ್ನಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂದು ಪಂದ್ಯ ಗೆದ್ದು ಒಂದರಲ್ಲಿ ಸೋತಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ತನ್ನ ಮದುವೆಯ ಕಾರಣದಿಂದಾಗಿ ಆರಂಭಿಕ ಪಂದ್ಯಗಳನ್ನು ತಪ್ಪಿಸಿಕೊಂಡರು.

ಧೋನಿಯಷ್ಟೇ ಕೂಲ್ ಈತ: ಆರ್‌ಸಿಬಿ ಅನುಭವಿ ಆಟಗಾರನನ್ನು ಕೊಂಡಾಡಿದ ನಾಯಕ ಫಾಫ್

ಮರಳಿ ಫಾರ್ಮ್ ಗೆ ಬಂದ ರಾಬಿನ್ ಉತ್ತಪ್ಪ! | Oneindia Kannada
ಪಂಜಾಬ್ ತಂಡಕ್ಕೆ ಜಾನಿ ಬೈಸ್ಟ್ರೋವ್ ಆಗಮನ

ಪಂಜಾಬ್ ತಂಡಕ್ಕೆ ಜಾನಿ ಬೈಸ್ಟ್ರೋವ್ ಆಗಮನ

ಪಂಜಾಬ್ ಕಿಂಗ್ಸ್ ಸ್ಟಾರ್ ಜಾನಿ ಬೈರ್‌ಸ್ಟೋವ್ ಕೂಡ ಇಂದು ಭಾರತಕ್ಕೆ ಆಗಮಿಸುತ್ತಿದ್ದಾರೆ. ಅವರು ನಿಯಮಗಳ ಪ್ರಕಾರ 3 ದಿನಗಳ ಕ್ವಾರಂಟೈನ್‌ನಲ್ಲಿರುತ್ತಾರೆ. ಇದರೊಂದಿಗೆ ಶುಕ್ರವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಬೈರ್ ಸ್ಟೋವ್ ವಿರುದ್ಧ ಆಡುವ ಸಾಧ್ಯತೆ ಇದೆ. ಇಂಗ್ಲೆಂಡ್ ತಂಡದ ವೆಸ್ಟ್ ಇಂಡೀಸ್ ಪ್ರವಾಸದಿಂದಾಗಿ ಬೈರ್‌ಸ್ಟೋ ಐಪಿಎಲ್‌ಗೆ ಸೇರಲು ವಿಳಂಬವಾಗಿತ್ತು.

ಐಪಿಎಲ್‌ನಲ್ಲಿ ಇದುವರೆಗೆ 115 ಪಂದ್ಯಗಳನ್ನು ಆಡಿರುವ ಸೂರ್ಯಕುಮಾರ್ ಯಾದವ್ 2341 ರನ್ ಗಳಿಸಿದ್ದಾರೆ. ಇದರಲ್ಲಿ 13 ಅರ್ಧ ಶತಕಗಳು, ಅತ್ಯಧಿಕ ಸ್ಕೋರ್ 82 ಆಗಿದೆ. ಇನ್ನು ಐಪಿಎಲ್‌ನಲ್ಲಿ ಇದುವರೆಗೆ 97 ಪಂದ್ಯಗಳನ್ನು ಆಡಿರುವ ಮ್ಯಾಕ್ಸ್‌ವೆಲ್ 2018 ರನ್‌ ಜೊತೆಗೆ 25 ವಿಕೆಟ್‌ ಪಡೆದಿದ್ದಾರೆ. ಮ್ಯಾಕ್ಸಿ 12 ಅರ್ಧಶತಕಗಳು ದಾಖಲಿಸಿದ್ದು, ಅತ್ಯಧಿಕ ಸ್ಕೋರ್ 95 ರನ್ ಆಗಿದೆ. ಐಪಿಎಲ್‌ನಲ್ಲಿ 28 ಪಂದ್ಯಗಳನ್ನು ಆಡಿರುವ ಬೈರ್‌ಸ್ಟೋವ್ 41 ವಿಕೆಟ್‌ಗಳೊಂದಿಗೆ 1038 ರನ್ ಗಳಿಸಿದ್ದಾರೆ. ಇದರಲ್ಲಿ 7 ಅರ್ಧ ಶತಕ ಹಾಗೂ ಒಂದು ಶತಕವಿದ್ದು, ಅತ್ಯಧಿಕ ಸ್ಕೋರ್ 114 ರನ್ ಆಗಿದೆ.

Story first published: Friday, April 1, 2022, 10:55 [IST]
Other articles published on Apr 1, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+