For Quick Alerts
ALLOW NOTIFICATIONS  
For Daily Alerts
 

Aus vs SL 2nd Test: ಇನ್ನಿಂಗ್ಸ್‌ ಮುನ್ನಡೆ ಪಡೆದಿರುವ ಶ್ರೀಲಂಕಾ, 4ನೇ ದಿನದಾಟದ LIVESCORE

Srilanka

ಗಾಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್‌ನಲ್ಲಿ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿರುವ ಶ್ರೀಲಂಕಾ ತಂಡವು ದಿನೇಶ್ ಚಾಂಡಿಮಲ್ ಅಜೇಯ ಶತಕ ನೆರವಿನಿಂದ 80ಕ್ಕೂ ಹೆಚ್ಚು ರನ್ ಮುನ್ನಡೆ ಸಾಧಿಸಿದೆ.

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ 364ರನ್‌ಗಳಿಗೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಪರ ದಿಮುತ್ ಕರುಣರತ್ನೆ, ಕುಸಾಲ್ ಮೆಂಡೀಸ್, ಏಂಜೆಲೊ ಮ್ಯಾಥ್ಯೂಸ್ , ಕಮಿಂದು ಮೆಂಡೀಸ್ ಅರ್ಧಶತಕದ ಜೊತೆಗೆ ಚಾಂಡಿಮಲ್ ಶತಕದ ನೆರವಿನಿಂದ ಶ್ರೀಲಂಕಾ ಉತ್ತಮ ಸ್ಥಾನದತ್ತ ಸಾಗಿದೆ. ನಾಲ್ಕನೇ ದಿನದಾಟದ ಲೈವ್ ಸ್ಕೋರ್ ಈ ಕೆಳಗಿದೆ.

1
53771
ಶ್ರೀಲಂಕಾದ ಓಪನರ್‌ಗೆ ಕೋವಿಡ್ ಪಾಸಿಟಿವ್

ಶ್ರೀಲಂಕಾದ ಓಪನರ್‌ಗೆ ಕೋವಿಡ್ ಪಾಸಿಟಿವ್

ಮೊದಲ ಇನ್ನಿಂಗ್ಸ್‌ನ ಮುನ್ನಡೆಯ ಜೊತೆಗೆ ಶ್ರೀಲಂಕಾಗೆ ಆಘಾತದ ಸುದ್ದಿ ಹೊರಬಿದ್ದಿತು. ಸೋಮವಾರ(ಜು.11) 4ನೇ ದಿನದಾಟ ಆರಂಭಕ್ಕೂ ಮುನ್ನ ಶ್ರೀಲಂಕಾದ ಓಪನರ್ ಪತುಮ್ ನಿಸ್ಸಾಂಕಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಪರಿಣಾಮ ಕೋವಿಡ್ ನಿಯಮಾವಳಿ ಪ್ರಕಾರ ನಿಸ್ಸಾಂಕ ಐಸೋಲೇಷನ್‌ಗೆ ಒಳಪಟ್ಟಿದ್ದು, ಆತನ ಬದಲಿಗೆ ಒಶಾದ ಫರ್ನಾಂಡೊ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದಾರೆ.

ಸೂರ್ಯಕುಮಾರ್ ಅಬ್ಬರದ ಶತಕ ವ್ಯರ್ಥ: ವೈಟ್‌ವಾಶ್ ಮುಖಭಂಗ ತಪ್ಪಿಸಿಕೊಂಡ ಇಂಗ್ಲೆಂಡ್

ಅಮೋಘ ಬ್ಯಾಟಿಂಗ್ ಪ್ರದರ್ಶಿಸಿರುವ ಲಂಕಾದ ಬ್ಯಾಟರ್ಸ್‌

ಅಮೋಘ ಬ್ಯಾಟಿಂಗ್ ಪ್ರದರ್ಶಿಸಿರುವ ಲಂಕಾದ ಬ್ಯಾಟರ್ಸ್‌

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನ 364ರನ್‌ಗಳಿಗೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ ಆರಂಭಿಕ ಬ್ಯಾಟರ್ ಪಾತುಮ್ ನಿಸ್ಸಾಂಕ 6 ರನ್‌ಗೆ ಔಟಾದ ಬಳಿಕ ದಿಮುತ್ ಕರುಣರತ್ನೆ 86 ರನ್ ಮತ್ತು ಕುಸಾಲ್ ಮೆಂಡೀಸ್ 85ರನ್‌ಗಳನ್ನ ಕಲೆಹಾಕುವ ಮೂಲಕ ತಂಡಕ್ಕೆ ಆಧಾರವಾದ್ರು. ನಂತರದಲ್ಲಿ ಏಂಜೆಲೊ ಮ್ಯಾಥ್ಯೂಸ್ 52, ಕಮಿಂದು ಮೆಂಡೀಸ್ 61, ದಿನೇಶ್ ಚಾಂಡಿಮಲ್ ಅಜೇಯ 127ರನ್ ಕಲೆಹಾಕಿ ನಾಲ್ಕನೇ ದಿನದಾಟವಾಡುತ್ತಿದ್ದಾರೆ. ಚಾಂಡಿಮಾಲ್‌ಗೆ ರಮೇಶ್ ಮೆಂಡೀಸ್ ಸಾಥ್ ನೀಡಿದ್ದು, ಶ್ರೀಲಂಕಾ 80ಕ್ಕೂ ಹೆಚ್ಚು ಮುನ್ನಡೆ ಸಾಧಿಸಿದೆ.

ವಿಂಬಲ್ಡನ್ 2022 ಫೈನಲ್: ಏಳನೇ ಬಾರಿಗೆ ವಿಂಬಲ್ಡನ್ ಕಿರೀಟ ಮುಡಿಗೇರಿಸಿಕೊಂಡ ಜೊಕೊವಿಕ್

ದಿನೇಶ್ ಚಾಂಡಿಮಾಲ್ ಶತಕ, ಆಸ್ಟ್ರೇಲಿಯಾಗೆ ಹಿನ್ನಡೆ

ದಿನೇಶ್ ಚಾಂಡಿಮಾಲ್ ಶತಕ, ಆಸ್ಟ್ರೇಲಿಯಾಗೆ ಹಿನ್ನಡೆ

ಶ್ರೀಲಂಕಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ತಂಡಕ್ಕೆ ಆಧಾರವಾಗಿದ್ದು, ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಮಾಜಿ ಲಂಕಾ ನಾಯಕ ದಿನೇಶ್ ಚಾಂಡಿಮಲ್ ತಂಡಕ್ಕೆ ಅದ್ಭುತ ಕೊಡುಗೆ ನೀಡಿದರು. ಟೆಸ್ಟ್‌ ಕ್ರಿಕೆಟ್‌ನಲ್ಲಿ 13ನೇ ಶತಕ ದಾಖಲಿಸಿದ ಚಾಂಡಿಮಲ್ ಅತ್ಯಂತ ತಾಳ್ಮೆಯುತ ಇನ್ನಿಂಗ್ಸ್‌ ಕಟ್ಟಿದರು. ಮ್ಯಾಥ್ಯೂಸ್ 52ರನ್‌ಗಳಿಸಿ ಔಟಾದ ಬಳಿಕ, ಕಮಿಂದು ಮೆಂಡೀಸ್ ಜೊತೆಗೆ ಐದನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದರು.

ಕಮಿಂದು ಮೆಂಡೀಸ್ 61ರನ್‌ಗಳಿಸಿ ಔಟಾದ ಬಳಿಕ ವಿಕೆಟ್ ಕೀಪರ್ ನಿರೋಶನ್‌ ಡಿಕ್ವಾಲ ಬೇಗನೆ ಐದು ರನ್‌ಗಳಿಸಿ ಔಟಾದ್ರು. ಆದ್ರೆ ಏಳನೇ ವಿಕೆಟ್‌ಗೆ ರಮೇಶ್ ಮೆಂಡೀಸ್ ಜೊತೆಗೆ ಜೊತೆಯಾಟ ಸಾಗಿಸುವ ಮೂಲಕ ಲಂಕಾಗೆ ನೂರಕ್ಕೂ ಹೆಚ್ಚು ರನ್‌ಗಳ ಲೀಡ್ ಬಂದಿದೆ.

ಭಾರತ ಹಾಗೂ ವಿಶ್ವ XI ನಡುವೆ ಪಂದ್ಯ ಆಯೋಜನೆಗೆ ಬಿಸಿಸಿಐಗೆ ಮನವಿ ಮಾಡಿದ ಸರ್ಕಾರ: ವರದಿ

ಸೂರ್ಯಕುಮಾರ್ ಯಾದವ್ ಶತಕ ಸಿಡಿಸಿದ್ರೂ ಇಂಗ್ಲೆಂಡ್ ವಿರುದ್ಧ ಭಾರತ ಸೋಲ್ಬೇಕಾಯ್ತು...| * Cricket | OneIndia
ಉಭಯ ತಂಡಗಳ ಪ್ಲೇಯಿಂಗ್ 11

ಉಭಯ ತಂಡಗಳ ಪ್ಲೇಯಿಂಗ್ 11

ಆಸ್ಟ್ರೇಲಿಯಾ
ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಮಿಚೆಲ್ ಸ್ವೆಪ್ಸನ್

ಶ್ರೀಲಂಕಾ
ಒಶಾದ ಫರ್ನಾಂಡೊ, ದಿಮುತ್ ಕರುಣಾರತ್ನೆ (ನಾಯಕ), ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ದಿನೇಶ್ ಚಾಂಡಿಮಲ್, ಕಮಿಂದು ಮೆಂಡಿಸ್, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಮಹೀಶ್ ತೀಕ್ಷಣ, ಪ್ರಭಾತ್ ಜಯಸೂರ್ಯ, ಕಸುನ್ ರಜಿತಾ

Story first published: Monday, July 11, 2022, 11:09 [IST]
Other articles published on Jul 11, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+