For Quick Alerts
ALLOW NOTIFICATIONS  
For Daily Alerts
 

ಪಾಕ್‌ಗೆ ತೆರಳಲು ಯಾವುದೇ ಆಟಗಾರ ಹಿಂದೆ ಸರಿದ್ರೂ ಪರವಾಗಿಲ್ಲ ಎಂದ ಪ್ಯಾಟ್ ಕಮಿನ್ಸ್‌!

Pat cummins

ಮುಂಬರುವ ಪಾಕಿಸ್ತಾನ ಪ್ರವಾಸದಲ್ಲಿ ಆಸ್ಟ್ರೇಲಿಯಾದ ಸ್ಕ್ವಾಡ್‌ನ ಯಾವುದಾದ್ರೂ ಆಟಗಾರನು ಪಾಕ್‌ಗೆ ತೆರಳಲು ಬಯಸಿದ್ದರೂ ಪರವಾಗಿಲ್ಲ ಅವರನ್ನ ಬೆಂಬಲಿಸುವುದಾಗಿ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಾಯಕ ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.

ಇದೇ ವರ್ಷ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ತಂಡವು ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದ್ದು, ಮೂರು ಟೆಸ್ಟ್ ಹಾಗೂ ಏಕದಿನ ಸರಣಿ ಜೊತೆಗೆ ಟಿ20 ಪಂದ್ಯಗಳನ್ನು ಸಹ ಆಡಲಿದೆ. ಆದ್ರೆ ಯಾವುದೇ ಆಟಗಾರನು ಪಾಕ್ ಪ್ರವಾಸ ಕೈಗೊಳ್ಳಲು ಇಚ್ಚಿಸದಿದ್ದಲ್ಲಿ ಪರವಾಗಿಲ್ಲ ಎಂದು ಆಸೀಸ್ ನಾಯಕ ಪ್ಯಾಟ್‌ ಕಮಿನ್ಸ್ ಆಶ್ಚರ್ಯಕರ ಹೇಳಿಕೆ ನೀಡಿದ್ದಾರೆ.

ಈ ಹಿಂದೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸೇರಿದಂತೆ ಇಂಗ್ಲೆಂಡ್ ತಂಡವು ಭದ್ರತೆಯ ನೆಪವೊಡ್ಡಿ ಪಾಕ್‌ ಪ್ರವಾಸವನ್ನ ನಿರಾಕರಿಸಿದ್ದವು.

24 ವರ್ಷಗಳಿಂದ ಪಾಕಿಸ್ತಾನದಲ್ಲಿ ಆಡದ ಆಸ್ಟ್ರೇಲಿಯಾ!

24 ವರ್ಷಗಳಿಂದ ಪಾಕಿಸ್ತಾನದಲ್ಲಿ ಆಡದ ಆಸ್ಟ್ರೇಲಿಯಾ!

ಐದು ಬಾರಿ ವಿಶ್ವಕಪ್ ವಿಜೇತ ತಂಡ ಆಸ್ಟ್ರೇಲಿಯಾ ಕೊನೆಯ ಬಾರಿಗೆ 1998 ರಲ್ಲಿ ಪಾಕಿಸ್ತಾನದ ಪ್ರವಾಸ ಕೈಗೊಂಡಿತ್ತು. ಅದಾದ ಬಳಿಕ ಆಸ್ಟ್ರೇಲಿಯನ್ ತಂಡವು ಪಾಕಿಸ್ತಾನದಲ್ಲಿ ಈ ಬಾರಿ ಆಡುವ ಮೂಲಕ 24 ವರ್ಷಗಳ ಅನುಪಸ್ಥಿತಿಯನ್ನು ಕೊನೆಗೊಳಿಸುತ್ತದೆ.

ಪಾಕಿಸ್ತಾನಕ್ಕೆ ಹೋಗದೆ ಇರಲು ಗ್ಲೆನ್ ಮ್ಯಾಕ್ಸ್‌ವೆಲ್ ನಿರ್ಧಾರ

ಪಾಕಿಸ್ತಾನಕ್ಕೆ ಹೋಗದೆ ಇರಲು ಗ್ಲೆನ್ ಮ್ಯಾಕ್ಸ್‌ವೆಲ್ ನಿರ್ಧಾರ

ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಪಾಕಿಸ್ತಾನ ಪ್ರವಾಸದಿಂದ ಹಿಂದೆ ಸರಿಯುವ ಸಾಧ್ಯತೆಯಿದೆ. ಏಕೆಂದರೆ ಆಸ್ಟ್ರೇಲಿಯಾ-ಪಾಕಿಸ್ತಾನ ನಡುವಿನ ಲಿಮಿಟೆಡ್ ಓವರ್ ಕ್ರಿಕೆಟ್ ಸರಣಿಯ ಅವಧಿಯಲ್ಲಿ ಅವರು ತಮ್ಮ ಫಿಯಾನ್ಸಿ ವಿನಿ ರಾಮನ್ ಅವರೊಂದಿಗೆ ವಿವಾಹ ಆಗಲು ಯೋಜಿಸಬಹುದು.

IPL 2022: 43 ವರ್ಷದ ತಾಹೀರ್‌ಗೆ ಇನ್ನೂ IPL ಆಡುವಾಸೆ, ಹರಾಜಿನಲ್ಲಿ ಭಾಗಿಯಾಗುತ್ತಿರುವ 5 ಹಿರಿಯ ಆಟಗಾರರು

ಮಿಚೆಲ್ ಸ್ಟಾರ್ಕ್ ಕೂಡ ಪಾಕ್‌ಗೆ ತೆರಳಲು ಹಿಂದೇಟು!

ಮಿಚೆಲ್ ಸ್ಟಾರ್ಕ್ ಕೂಡ ಪಾಕ್‌ಗೆ ತೆರಳಲು ಹಿಂದೇಟು!

ಇತ್ತೀಚೆಗಷ್ಟೇ ಕೊನೆಗೊಂಡ ಆ್ಯಶಸ್ ಟೆಸ್ಟ್ ಸರಣಿಯ ಅಂತಿಮ ಟೆಸ್ಟ ಪಂದ್ಯಕ್ಕೂ ಮುಂಚಿತವಾಗಿ ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರು ಪಾಕಿಸ್ತಾನ ಪ್ರವಾಸಕ್ಕೆ ತಮ್ಮ ಲಭ್ಯತೆಯ ಬಗ್ಗೆ ಖಚಿತವಾಗಿಲ್ಲ ಎಂದು ಹೇಳಿದರು.

ಸ್ಟಾರ್ಕ್ ಅಷ್ಟೇ ಅಲ್ಲದೆ ಪ್ರಮುಖ ಬೌಲರ್ ಜೋಶ್ ಹೇಜಲ್‌ವುಡ್ ಕೂಡ ಪಾಕ್ ಪ್ರವಾಸ ಕೈಗೊಳ್ಳುವುದು ಅನುಮಾನ ಎಂದಿದ್ದು, ಅನೇಕ ಆಟಗಾರರು ತಮ್ಮ ಕುಟುಂಬದೊಂದಿಗೆ ಚರ್ಚಿಸಿ ಆನಂತರ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದರು.

IPL 2022: ನಾನು ಯಾವುದೇ ತಂಡಕ್ಕೆ ಹೋಗಲು ಸಿದ್ದನಿದ್ದೇನೆ ಎಂದ ಯುಜವೇಂದ್ರ ಚಹಾಲ್

ಯಾರು ಬರಲಿ, ಬಿಡಲಿ ನಾವು ಹೋಗಲಿದ್ದೇವೆ ಎಂದು ಸಿದ್ದಗೊಂಡಿರುವ ಕಮಿನ್ಸ್‌

ಯಾರು ಬರಲಿ, ಬಿಡಲಿ ನಾವು ಹೋಗಲಿದ್ದೇವೆ ಎಂದು ಸಿದ್ದಗೊಂಡಿರುವ ಕಮಿನ್ಸ್‌

ಒಬ್ಬರ ಹಿಂದೆ ಮತ್ತೊಬ್ಬ ಆಸಿಸ್ ಆಟಗಾರರು ಮಾರ್ಚ್‌ನಲ್ಲಿ ಪಾಕಿಸ್ತಾನ ಪ್ರವಾಸವನ್ನ ಕೈಗೊಳ್ಳಲು ಹಿಂದೇಟು ಹಾಕುತ್ತಿರುವ ಬೆನ್ನಲ್ಲೇ ಪ್ಯಾಟ್‌ ಕಮಿನ್ಸ್ ಮಹತ್ವದ ಹೇಳಿಕೆ ನೀಡಿದ್ದು, ಕೆಲವು ಆಟಗಾರರು ಪ್ರವಾಸದಿಂದ ಹಿಂದೆ ಸರಿದರೂ ಪರವಾಗಿಲ್ಲ, ಅಂತಹ ಆಟಗಾರನನ್ನ ಬೆಂಬಲಿಸಲಿದ್ದೇವೆ ಎಂದು ಹೇಳಿದ್ದಾರೆ.

"ನಾವು ಪೂರ್ಣ ಸಾಮರ್ಥ್ಯದ ತಂಡದ ಹತ್ತಿರವಾಗುತ್ತೇವೆ ಎಂದು ನಾನು ಭಾವಿಸುತ್ತೇನೆ. ಇನ್ನೂ ಸ್ವಲ್ಪ ಕೆಲಸ ಬಾಕಿ ಇದ್ದು, ನಾವು ಸಾಕಷ್ಟು ಮಾಹಿತಿಯನ್ನು ಸ್ವೀಕರಿಸಿದ್ದೇವೆ. ಪೂರ್ವ ಪ್ರವಾಸದ ಭದ್ರತೆ ಮತ್ತು ಬಯೋ ಬಬಲ್ ಭದ್ರತೆಯ ಕೆಲಸಗಳನ್ನು ಪರೀಕ್ಷಿಸಿದ್ದು, ಎಲ್ಲವೂ ಅದ್ಭುತವಾಗಿದೆ, "ಎಂದು ಕಮ್ಮಿನ್ಸ್ ಹೇಳಿದ್ದಾರೆ ಇಎಸ್‌ಪಿಎನ್‌ ಕ್ರಿಕ್‌ಇನ್‌ಫೋದಿಂದ ಉಲ್ಲೇಖಿಸಿದ್ದಾರೆ.

"ಒಂದೆರಡು ಆಟಗಾರರು ಇನ್ನೂ ಸ್ವಲ್ಪ ಹೆಚ್ಚಿನ ಮಾಹಿತಿಯನ್ನು ಪಡೆಯಲು ಉತ್ಸುಕರಾಗಿದ್ದಾರೆ. ಆದರೆ ಪ್ರತಿಯೊಬ್ಬರೂ ನಿಜವಾಗಿಯೂ ಸರಣಿಯಲ್ಲಿ ಭಾಗವಹಿಸಲು ಸಿದ್ದಗೊಂಡಿದ್ದು, ಯಾರಾದರೂ ಪ್ರವಾಸವನ್ನು ಮಾಡದಿದ್ದರೆ ಅದು ಸಂಪೂರ್ಣವಾಗಿ ಸರಿ, ನಾವು ಅವರನ್ನು ಖಚಿತವಾಗಿ ಬೆಂಬಲಿಸುತ್ತೇವೆ, "ಎಂದು ಅವರು ಹೇಳಿದರು.

ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡಗಳು ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ಮಾರ್ಚ್‌ 3ರಂದು ಮೊದಲ ಟೆಸ್ಟ್ ಪಂದ್ಯವನ್ನಾಡಲಿವೆ. ಟೆಸ್ಟ್ ಸರಣಿ ಬಳಿಕ ಏಕದಿನ ಮತ್ತು ಟಿ20ಯಲ್ಲೂ ಮುಖಾಮುಖಿಯಾಗಲಿವೆ.

Story first published: Thursday, February 3, 2022, 21:49 [IST]
Other articles published on Feb 3, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+