ರಾತ್ರೋರಾತ್ರಿ ಬಾಂಗ್ಲಾದೇಶ ತಂಡದ ಪ್ರದರ್ಶನ ಬದಲಾಗಲ್ಲ: ಶಕೀಬ್ ಅಲ್ ಹಸನ್

ಟಿ20 ಮಾದರಿಯಲ್ಲಿ ಬಾಂಗ್ಲಾದೇಶದ ನೂತನ ನಾಯಕನಾಗಿ ಶಕೀಬ್ ಅಲ್ ಹಸನ್ ಈಗಾಗಲೇ ಆಯ್ಕೆಯಾಗಿದ್ದಾರೆ. ಆದರೆ, ಅವರ ನಾಯಕತ್ವನಿಂದ ರಾತ್ರೋರಾತ್ರಿ ಬಾಂಗ್ಲಾದೇಶದ ಪ್ರದರ್ಶನದಲ್ಲಿ ಬದಲಾಗಲಿದೆ ಎಂದು ನಿರೀಕ್ಷಿಸಬೇಡಿ ಎಂದು ಶಕೀಬ್ ಅಭಿಮಾನಿಗಳಿಗೆ ಹೇಳಿದ್ದಾರೆ.
ತಂಡದ ಪ್ರದರ್ಶನವನ್ನ ರಾತ್ರೋರಾತ್ರಿ ಬದಲಿಸಲು ಸಾಧ್ಯವಿಲ್ಲ ಎಂದರು. ಶಕೀಬ್ ಅವರ ಮಾತಿನಲ್ಲಿ ಹೇಳುವುದಾದರೆ, ಇಡೀ ಪರಿಸ್ಥಿತಿಯು ರಾತ್ರೋರಾತ್ರಿ ಬದಲಾಗಬಹುದು ಎಂದು ನಾವು ನಿರೀಕ್ಷಿಸಿದರೆ, ನಾವು "ಮೂರ್ಖರ ಸ್ವರ್ಗದಲ್ಲಿ ವಾಸಿಸುತ್ತಿದ್ದೇವೆ." ಎಂದರ್ಥ.

ಬಾಂಗ್ಲಾದೇಶ ತಂಡದ ನೂತನ ನಾಯಕನಾಗಿ ಆಯ್ಕೆಯಾಗಿರುವ ಶಕೀಬ್
2022 ರ ಟಿ20 ಕ್ರಿಕೆಟ್ ವಿಶ್ವಕಪ್ ವರೆಗೆ ಬಾಂಗ್ಲಾದೇಶದ ನೂತನ ಟಿ20 ನಾಯಕರಾಗಿ ಶಕೀಬ್ ಅಲ್ ಹಸನ್ ಆಯ್ಕೆಯಾಗಿದ್ದಾರೆ. ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಸ್ಪರ್ಧೆ ನಡೆಯಲಿದೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಭಾರತದ ಮಾಜಿ ಕ್ರಿಕೆಟಿಗ ಶ್ರೀಧರನ್ ಶ್ರೀರಾಮ್ ಅವರನ್ನು ಹೊಸ ತಾಂತ್ರಿಕ ನಿರ್ದೇಶಕರನ್ನಾಗಿ ಆಯ್ಕೆ ಮಾಡಿದೆ. ಆದರೆ, ಶಕೀಬ್ ನಾಯಕತ್ವ ವಹಿಸಿಕೊಂಡ ನಂತರ ಯಾವುದೇ ಪ್ರಮುಖ ಬದಲಾವಣೆಗಳನ್ನು ನಿರೀಕ್ಷಿಸುತ್ತಿಲ್ಲ.
ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನಕ್ಕೆ ಇದು ದೊಡ್ಡ ಹಿನ್ನಡೆ ಎಂದ ಮಾಜಿ ಕ್ರಿಕೆಟಿಗ ಆಕಿಬ್ ಜಾವೇದ್ tml

ತಂಡದಲ್ಲಿ ದಿಢೀರ್ ಬದಲಾವಣೆ ಆಗಲಿದೆ ಎಂದು ನಿರೀಕ್ಷಿಸಬೇಡಿ!
ಏಷ್ಯಾ ಕಪ್ ಆಗಸ್ಟ್ 27 ರಿಂದ ಆರಂಭವಾಗಲಿದೆ. ಈ ಕೆಲವೇ ದಿನಗಳಲ್ಲಿ ತಂಡದಲ್ಲಿ ಆಮೂಲಾಗ್ರ ಬದಲಾವಣೆಗಳಾಗಬಹುದು ಎಂದು ಶಕೀಬ್ ಭಾವಿಸಿಲ್ಲ. ಟಿ20 ವಿಶ್ವಕಪ್‌ನಿಂದ ತಂಡದ ಸರಿಯಾದ ಸುಧಾರಣೆ ಕಾಣಲಿದೆ ಎಂದರು. ಕ್ರಿಕ್‌ಬಝ್‌ಗೆ ಶಕೀಬ್, "ನನಗೆ ಯಾವುದೇ ಗುರಿಗಳಿಲ್ಲ. ವಿಶ್ವಕಪ್‌ನಲ್ಲಿ ಉತ್ತಮವಾಗಿ ಆಡುವುದು ನನ್ನ ಏಕೈಕ ಗುರಿಯಾಗಿದೆ ಮತ್ತು ಇದಕ್ಕಾಗಿ ಸಿದ್ಧತೆಗಳಾಗಿವೆ." ಎಂದು ಹೇಳಿದ್ದಾರೆ.
"ಒಂದು ಅಥವಾ ಎರಡು ದಿನಗಳಲ್ಲಿ ನಾನು ಎಲ್ಲವನ್ನೂ ಬದಲಾಯಿಸುತ್ತೇನೆ ಎಂದು ನಾವು ಭಾವಿಸಿದರೆ ಅಥವಾ ಬೇರೆ ಯಾರಾದರೂ ಬಂದು ಅದನ್ನು ಬದಲಾಯಿಸಲು ಹೋಗುವುದಾದ್ರೆ, ನಾವು ಮೂರ್ಖರ ಸ್ವರ್ಗದಲ್ಲಿ ವಾಸಿಸುತ್ತಿದ್ದೇವೆ ಎಂದರ್ಥ. ವಾಸ್ತವಿಕವಾಗಿ, ನೀವು ಅದರ ಬಗ್ಗೆ ಯೋಚಿಸಿದರೆ, ತಂಡವು ಸುಧಾರಿಸುತ್ತದೆ. ಆದ್ರೆ ಅದಕ್ಕೆ ತಿಂಗಳ ಸಮಯ ಬೇಕಾಗಬಹುದು ಎಂದು ಹೇಳಿದರು. ಈ ಸ್ವರೂಪದಲ್ಲಿ ಬಾಂಗ್ಲಾದೇಶ ಬಹಳ ಹಿಂದುಳಿದಿದೆ'' ಎಂದು ಅವರು ಹೇಳಿದರು.
ನ್ಯೂಜಿಲೆಂಡ್ A ಸರಣಿಗೆ ಭಾರತ ತಂಡ ಘೋಷಣೆ: ಶುಭಮನ್ ಗಿಲ್‌ಗೆ ನಾಯಕತ್ವ

ಶಕೀಬ್ ಅಲ್ ಹಸನ್ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನ
ಶಕೀಬ್ ಅಲ್ ಹಸನ್ ನೇತೃತ್ವದ ತಂಡವು ಸ್ಟಾರ್ ಆಟಗಾರ ಮುಷ್ಫೀಕರ್ ರಹೀಮ್, ಮಹಮುತುಲ್ಲಾ, ಮುಸ್ತಾಫಿಜುರ್ ರಹಮಾನ್, ತಸ್ಕಿನ್ ಅಹ್ಮದ್, ಅನಾಮುಲ್ ಹಕ್, ಮೆಘಿದಿ ಹಸನ್ ಅವರಂತಹ ಪ್ರತಿಭಾವಂತ ಆಟಗಾರರನ್ನು ಒಳಗೊಂಡಿದೆ. ಏಷ್ಯಾ ಕಪ್ ಇತಿಹಾಸವನ್ನು ನೋಡಿದರೆ, ಬಾಂಗ್ಲಾದೇಶ ತಂಡವು ಕಳೆದ ಎಲ್ಲಾ ಮೂರು ಟೂರ್ನಿಗಳಲ್ಲೂ ಫೈನಲ್ ತಲುಪಿದೆ.
2012, 2016 ಮತ್ತು 2018ರ ಏಷ್ಯಾಕಪ್ ಟೂರ್ನಿಗಳಲ್ಲಿ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿರುವ ಬಾಂಗ್ಲಾದೇಶ ತಂಡವು ಒಮ್ಮೆಯು ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಆದ್ರೆ ಈ ಬಾರಿ ಫೈನಲ್ ತಲುಪುವುದು ಅಷ್ಟು ಸುಲಭದ ಮಾತಲ್ಲ.
ಬಾಂಗ್ಲಾದೇಶ ಏಷ್ಯಾ ಕಪ್ ಮುಖ್ಯ ಸುತ್ತಿನಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಕ್ವಾಲಿಫೈಯರ್ ಜೊತೆಗೆ ಸ್ಪರ್ಧಿಸಲಿದೆ. ಆಗಸ್ಟ್ 20 ರಂದು ಪ್ರಾರಂಭವಾಗುವ ಅರ್ಹತಾ ಪಂದ್ಯಾವಳಿಯಲ್ಲಿ ಅರ್ಹತಾ ತಂಡವನ್ನ ಬಹಿರಂಗಪಡಿಸಲಾಗುತ್ತದೆ.
ಬಾಬರ್ ಅಜಮ್ ''ಕ್ರಿಸ್ಟಿಯಾನಲ್ ಮೆಸ್ಸಿ ಆಫ್ ಕ್ರಿಕೆಟ್'' ಎಂದ ಶದಾಬ್ ಖಾನ್ .html

ಬಾಂಗ್ಲಾದೇಶ ಏಷ್ಯಾಕಪ್ 2022 ಸ್ಕ್ವಾಡ್
ಶಕೀಬ್ ಅಲ್ ಹಸನ್ (ನಾಯಕ), ಅನಾಮುಲ್ ಹಕ್, ಮುಜ್ಫಿಕುರ್ ರಹೀಮ್, ಅಫೀಬ್ ಹುಸೇನ್, ಮೊಸಾದೆಗ್ ಹುಸೇನ್, ಮಹಮುದುಲ್ಲಾ, ಮೆಹದಿ ಹಸನ್, ಮೊಹಮ್ಮದ್ ಸೈಫುದ್ದೀನ್, ಹಸನ್ ಮಹಮೂದ್, ಮುಸ್ತಾಫಿಜುರ್ ರೆಹಮಾನ್, ತಸ್ಕಿನ್ ಅಹ್ಮದ್, ನಸುಮ್ ಅಹ್ಮದ್, ಸಬೀರ್ ರೆಹಮಾನ್, ಮೆಹದಿ ಹಸನ್ ಮಿರಾಜ್, ಇಬಾದತ್ ಹುಸೇನ್, ಪರ್ವೇಜ್ ಹುಸೇನ್, ನೂರುಲ್ ಹಸನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications