For Quick Alerts
ALLOW NOTIFICATIONS  
For Daily Alerts
 

ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ಎಂ.ಎಸ್ ಧೋನಿ: ನಾಯಕಿಯಾಗಿ ಸೂಪರ್‌ಸ್ಟಾರ್‌ ನಯನತಾರಾ ಸಹಿ!

MS Dhoni

ಐಪಿಎಲ್ ನಂತರ ಸಿಎಸ್‌ಕೆ ತಂಡದ ನಾಯಕ ಎಂಎಸ್ ಧೋನಿ ಹೊಸ ಇನ್ನಿಂಗ್ಸ್ ಅನ್ನು ಶುರು ಮಾಡಲಿದ್ದು, ತಮಿಳು ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಲಿದ್ದಾರೆ ಎಂದು ವರದಿಯಾಗಿದೆ.

ಭಾರತ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ತಮಿಳುನಾಡಿನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಇದನ್ನೇ ಬಂಡವಾಳವಾಗಿಟ್ಟುಕೊಂಡು ಮೊದಲ ಹೆಜ್ಜೆ ಇಡಲು ರೆಡಿಯಾಗಿರುವ 'ತಲ' ತಮಿಳು ಸಿನಿಮಾಗೆ ಹಣ ಹಾಕಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.

ಮತ್ತೆ ಸಿಎಸ್‌ಕೆ ನಾಯಕನಾಗಿ ಸಪ್ರೈಸ್ ನೀಡಿರುವ ಧೋನಿ

ಮತ್ತೆ ಸಿಎಸ್‌ಕೆ ನಾಯಕನಾಗಿ ಸಪ್ರೈಸ್ ನೀಡಿರುವ ಧೋನಿ

ಈಗಾಗಲೇ ಮಹೇಂದ್ರ ಸಿಂಗ್ ಧೋನಿ ಪ್ರಸಕ್ತ ಐಪಿಎಲ್‌ ಸೀಸನ್‌ನಲ್ಲಿ ಮತ್ತೊಮ್ಮೆ ಸಿಎಸ್‌ಕೆ ತಂಡದ ನಾಯಕನಾಗುವ ಮೂಲಕ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದಾರೆ. ರವೀಂದ್ರ ಜಡೇಜಾ ಸರಣಿಯ ಅರ್ಧದಲ್ಲಿ ನಾಯಕತ್ವದಿಂದ ಹಿಂದೆ ಸರಿದಾಗ, ಧೋನಿ ನಾಯಕತ್ವ ಜವಾಬ್ದಾರಿಯನ್ನ ಹೊತ್ತುಕೊಂಡರು. ಈ ಮೂಲಕ ಗೆಲುವಿಗಾಗಿ ಹುಡುಕಾಟ ನಡೆಸಿದ್ದ ಸಿಎಸ್‌ಕೆಗೆ ಮರುಜೀವ ನೀಡಿದರು.

ಟೀಕಾಕಾರರ ಬಾಯಿ ಮುಚ್ಚಿಸಲು ವಿರಾಟ್ ಕೊಹ್ಲಿ ಕಂಡುಕೊಂಡ ಉಪಾಯವೇನು?

ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ಧೋನಿ

ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ಧೋನಿ

ಈ ಸಂದರ್ಭದಲ್ಲಿ ಎಂ.ಎಸ್ ಧೋನಿ ಅಭಿಮಾನಿಗಳಿಗೆ ಮತ್ತೊಂದು ಸರ್ಪ್ರೈಸ್ ನೀಡಲು ಕಾತುರರಾಗಿದ್ದಾರೆ. ಈ ವರ್ಷ ಐಪಿಎಲ್ ಸರಣಿಯಿಂದ ಧೋನಿ ನಿವೃತ್ತಿಯಾಗುವ ನಿರೀಕ್ಷೆಯಿದೆ. ಹೀಗಾಗಿ ಅವರು ವಿವಿಧ ಉದ್ಯಮಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಹೀಗಾಗಿ ತಮಿಳು ಚಿತ್ರರಂಗಕ್ಕೆ ಕಾಲಿಟ್ಟು ತಮ್ಮ ಮಾರುಕಟ್ಟೆಯನ್ನು ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ.

ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವ ಆಸೆಯಲ್ಲಿರುವ ಚಹಲ್‌ಗೆ ಈ ನಾಲ್ವರದ್ದೇ ತಲೆನೋವು!

ತಮಿಳು ಸಿನಿಮಾ ಮಾಡಲಿದ್ದಾರೆ ಮಾಹಿ

ತಮಿಳು ಸಿನಿಮಾ ಮಾಡಲಿದ್ದಾರೆ ಮಾಹಿ

ಧೋನಿ ತಮಿಳು ಸಿನಿಮಾ ಮಾಡಲಿದ್ದಾರೆ ಎಂದು ಹಲವು ವರದಿಗಳು ಹರಿದಾಡಿವೆ. ಅವರು ಚೆನ್ನೈನಲ್ಲಿ ಪ್ರತ್ಯೇಕ ತಂಡವನ್ನು ರಚಿಸಿದ್ದಾರೆ ಮತ್ತು ಐಪಿಎಲ್ ನಂತರ ತಮ್ಮ ಚಿತ್ರವನ್ನು ಘೋಷಿಸುವ ನಿರೀಕ್ಷೆಯಿದೆ. ತಮಿಳುನಾಡು ಧೋನಿಗೆ ತುಂಬಾ ಹತ್ತಿರವಾಗಿರುವುದರಿಂದ ಇಲ್ಲಿಯೇ ಮೊದಲ ಸಿನಿಮಾ ಮಾಡುತ್ತಿದ್ದಾರೆ.

ಗುರುತು ಸಿಗದಂತೆ ಮಾಸ್ಕ್ ಧರಿಸಿ ಬೆಂಗಳೂರಿನ ಬೇಕರಿಯಲ್ಲಿ ತಿಂಡಿ ತಿನ್ನಲು ಹೊರಟ ಕೊಹ್ಲಿ; ಆಗಿದ್ದೇನು?

ಬಿಗ್ ಬಜೆಟ್ ಸಿನಿಮಾಗೆ ನಯನತಾರಾ ನಟಿ

ಬಿಗ್ ಬಜೆಟ್ ಸಿನಿಮಾಗೆ ನಯನತಾರಾ ನಟಿ

ಬಿಗ್ ಬಜೆಟ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ನಯನತಾರಾ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ವಿಘ್ನೇಶ್ ಶಿವನ್ ಅವರು ಧೋನಿ ಜೊತೆಗಿನ ಪ್ರಚಾರ ಚಿತ್ರವನ್ನು ನಿರ್ದೇಶಿಸಿದ್ದಾರೆ. ಹಾಗಾಗಿ ವಿಘ್ನೇಶ್ ಶಿವನ್ ಮೂಲಕ ಧೋನಿಗೆ ಈ ನಿರ್ಮಾಪಕನಾಗುವ ಆಲೋಚನೆ ಬಂದಿತ್ತು ಎಂದು ವರದಿಯಾಗಿದೆ.

ನಟಿ ನಯನತಾರಾ ಸದ್ಯ ಬಾಲಿವುಡ್‌ನಲ್ಲಿ ಶಾರುಖ್ ಖಾನ್ ಜೊತೆ ನಟಿಸಲು ತಯಾರಿ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಜೂನ್ 9 ರಂದು ತಿರುಪತಿಯಲ್ಲಿ ವಿಘ್ನೇಶ್ ಶಿವನ್ ಮತ್ತು ನಯನತಾರಾ ವಿವಾಹವಾಗಲಿದ್ದಾರೆ. ಹಾಗಾಗಿ ಮದುವೆಯ ನಂತರ ನಯನತಾರಾ ನಟಿಸಲಿರುವ ಚಿತ್ರವೇ ಧೋನಿ ನಿರ್ಮಾಣದ ಸಿನಿಮಾ ಆಗಿರಬಹುದು.

2008ರಿಂದ ಸಿಎಸ್‌ಕೆ ಫ್ರಾಂಚೈಸಿಯಲ್ಲಿರುವ ಧೋನಿ

2008ರಿಂದ ಸಿಎಸ್‌ಕೆ ಫ್ರಾಂಚೈಸಿಯಲ್ಲಿರುವ ಧೋನಿ

2008ರಲ್ಲಿ ಐಪಿಎಲ್ ಶುರುವಾದಾಗಿನಿಂದಲೇ ಸಿಎಸ್‌ಕೆ ತಂಡದ ಜೀವಾಳವಾಗಿರುವ ಮಹೇಂದ್ರ ಸಿಂಗ್ ಧೋನಿ, ತಮಿಳುನಾಡಿನ ಮನೆ ಮಾತಾಗಿದ್ದಾರೆ. ಧೋನಿಯೇ ಹೇಳಿರುವಂತೆ ಆತನಿಗೆ ರಾಂಚಿ ಬಿಟ್ಟರೆ, ಎರಡನೇ ತವರು ಮನೆ ತಮಿಳುನಾಡು ಆಗಿದೆ. ಕೋಟ್ಯಾಂತರ ಅಭಿಮಾನಿಗಳನ್ನ ಹೊಂದಿರುವ ಧೋನಿ ಹೊಸ ಹೆಜ್ಜೆ ಇರಿಸಲು ಸಜ್ಜಾಗಿದ್ದು, ಸಿನಿಮಾ ನಿರ್ಮಾಣ ಅವರ ಕೈ ಹಿಡಿಯುತ್ತಾ ಕಾದು ನೋಡಬೇಕಿದೆ.

Story first published: Thursday, May 12, 2022, 9:28 [IST]
Other articles published on May 12, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+