For Quick Alerts
ALLOW NOTIFICATIONS  
For Daily Alerts
 

ಶುಭ್‌ಮನ್ ಗಿಲ್ ಶತಕ: ಫೈನಲ್ ಪ್ರವೇಶಿಸಿದ ರಹಾನೆ ಬಳಗ

Deodhar trophy 3rd match India c beat India a by 6 wickets entered final

ದೆಹಲಿ, ಅಕ್ಟೋಬರ್ 25: ಯುವ ಆಟಗಾರ ಶುಭ್‌ಮನ್ ಗಿಲ್ ಅವರ ಅಮೋಘ ಅಜೇಯ ಶತಕದ ನೆರವಿನಿಂದ ಅಜಿಂಕ್ಯ ರಹಾನೆ ನೇತೃತ್ವದ ಭಾರತ ಸಿ ತಂಡ ದೇವಧರ್ ಟ್ರೋಫಿಯ ಫೈನಲ್ ತಲುಪಿದೆ.

ಗುರುವಾರ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ಸಿ ತಂಡ ಭಾರತ ಎ ತಂಡದ ವಿರುದ್ಧ ಆರು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಶನಿವಾರ ನಡೆಯುವ ಫೈನಲ್ ಪಂದ್ಯದಲ್ಲಿ ಭಾರತ ಬಿ ತಂಡದೊಂದಿಗೆ ಸಿ ತಂಡ ಪ್ರಶಸ್ತಿಗಾಗಿ ಸೆಣಸಲಿದೆ.

ಆಡಿದ ಎರಡೂ ಪಂದ್ಯಗಳನ್ನು ಗೆದ್ದಿರುವ ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ಬಿ ತಂಡ ಈಗಾಗಲೇ ಫೈನಲ್ ತಲುಪಿದೆ.

ಉತ್ತಮ ಆರಂಭ

ಉತ್ತಮ ಆರಂಭ

ಟಾಸ್ ಗೆದ್ದ ಎ ತಂಡದ ನಾಯಕ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಆಯ್ದುಕೊಂಡರು. ನಿರೀಕ್ಷೆಯಂತೆ ತಂಡಕ್ಕೆ ಉತ್ತಮ ಆರಂಭ ದೊರಕಿತು. ಅಭಿಮನ್ಯು ಈಶ್ವರನ್ ಮತ್ತು ಅನ್ಮೋಲ್ ಪ್ರೀತ್ ಸಿಂಗ್ ಮೊದಲ ವಿಕೆಟ್‌ಗೆ 99 ರನ್ ಕಲೆಹಾಕಿದರು. ಅನ್ಮೋಲ್ ಆಕ್ರಮಣಕಾರಿ ಆಟ ಪ್ರದರ್ಶಿಸಿದರೆ, ಅಭಿಮನ್ಯು ತಾಳ್ಮೆಯ ಆಟದ ಮೊರೆ ಹೋದರು.

ಜಾಧವ್, ಕಾರ್ತಿಕ್ ಅಬ್ಬರ

ಜಾಧವ್, ಕಾರ್ತಿಕ್ ಅಬ್ಬರ

ಬಳಿಕ ನಿತೀಶ್ ರಾಣಾ ಕೂಡ ಅರ್ಧಶತಕ ದಾಖಲಿಸಿದರು. ಕೊನೆಯಲ್ಲಿ ನಾಯಕ ದಿನೇಶ್ ಕಾರ್ತಿಕ್ 32 (23 ಎಸೆತ) ಮತ್ತು ಕೇದಾರ್ ಜಾಧವ್ 41 (25 ಎಸೆತ) ರನ್ ಗತಿ ಹೆಚ್ಚಿಸಿದರು. ಹೀಗಾಗಿ ತಂಡ 293 ರನ್‌ಗಳ ಸವಾಲಿನ ಮೊತ್ತ ದಾಖಲಿಸಿತು.

ವಿಜಯ್ ಶಂಕರ್ ಮೂರು ವಿಕೆಟ್ ಕಿತ್ತು ಪರಿಣಾಮಕಾರಿ ಎನಿಸಿದರು.

ದೇವಧರ್ ಟ್ರೋಫಿ: ರಹಾನೆ ತಂಡ ಮಣಿಸಿ ಫೈನಲ್ ಪ್ರವೇಶಿಸಿದ ಶ್ರೇಯಸ್ ಬಳಗ

ರಹಾನೆ, ರೈನಾ ವೈಫಲ್ಯ

ರಹಾನೆ, ರೈನಾ ವೈಫಲ್ಯ

ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಗುರಿ ಬೆನ್ನತ್ತಿದ ಸಿ ತಂಡ, ಆರಂಭದಲ್ಲಿಯೇ ನಾಯಕ ಅಜಿಂಕ್ಯ ರಹಾನೆ (14) ವಿಕೆಟ್ ಕಳೆದುಕೊಂಡಿತು. ಉತ್ತಮ ಆರಂಭ ಪಡೆದರೂ ಅಭಿನವ್ ಮುಕುಂದ್, ಶಮ್ಸ್ ಮುಲಾನಿ ಅವರಿಗೆ ವಿಕೆಟ್ ಒಪ್ಪಿಸಿದರು.

ಕಳೆದ ಪಂದ್ಯದಲ್ಲಿ ವಿಫಲರಾಗಿದ್ದ ಸುರೇಶ್ ರೈನಾ, ತಮ್ಮ ಸಾಮರ್ಥ್ಯ ಪ್ರದರ್ಶಿಸುವ ಅವಕಾಶವನ್ನು ಮತ್ತೊಮ್ಮೆ ಕಳೆದುಕೊಂಡರು. ಕೇವಲ ಎರಡು ರನ್ ಗಳಿಸಿ ರನೌಟ್ ಆದರು. ಒಂದೆಡೆ ಉತ್ತಮ ಆಟವಾಡುತ್ತಿದ್ದ ಶುಭ್‌ಮನ್ ಗಿಲ್ ಅವರಿಗೆ ವಿಕೆಟ್ ಕೀಪರ್ ಇಶನ್ ಕಿಶಾನ್ ಜತೆಯಾದರು. ಇಬ್ಬರೂ ನಾಲ್ಕನೆಯ ವಿಕೆಟ್‌ಗೆ 121 ರನ್ ಸೇರಿಸಿದರು.

ಸೂರ್ಯಕುಮಾರ್ ಅಬ್ಬರ

ಸೂರ್ಯಕುಮಾರ್ ಅಬ್ಬರ

ಕಿಶಾನ್ ಔಟಾದ ನಂತರ ಬಂದ ಸೂರ್ಯಕುಮಾರ್ ಯಾದವ್ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 36 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಸಹಿತ 56 ರನ್ ಗಳಿಸಿದರು. ಮುರಿಯದ ಐದನೇ ವಿಕೆಟ್‌ಗೆ ಇಬ್ಬರೂ 90 ರನ್ ಸೇರಿಸಿ ಗೆಲುವಿನ ದಡ ಮುಟ್ಟಿಸಿದರು.

ರವಿಚಂದ್ರನ್ ಅಶ್ವಿನ್ ಸೇರಿದಂತೆ ಎ ತಂಡದ ಯಾವ ಬೌಲರ್‌ಗಳೂ ಎದುರಾಳಿಗಳನ್ನು ನಿಯಂತ್ರಿಸುವಲ್ಲಿ ಸಫಲರಾಗಲಿಲ್ಲ.

ದೇವಧರ್ ಟ್ರೋಫಿ: ದಿನೇಶ್ ಕಾರ್ತಿಕ್ ಹೋರಾಟ ವ್ಯರ್ಥ, ಭಾರತ ಬಿ ತಂಡಕ್ಕೆ ಜಯ

ಸಂಕ್ಷಿಪ್ತ ಸ್ಕೋರ್

ಸಂಕ್ಷಿಪ್ತ ಸ್ಕೋರ್

ಭಾರತ ಎ: 293/6 (50) ಅಭಿಮನ್ಯು ಈಶ್ವರನ್ 69, ನಿತೀಶ್ ರಾಣಾ 68, ಅನ್ಮೋಲ್‌ಪ್ರೀತ್ ಸಿಂಗ್ 59, ಕೇದಾರ್ ಜಾಧವ್ 41, ವಿಜಯ್ ಶಂಕರ್ 40/3, ರಾಹುಲ್ ಚಾಹರ್ 79/2

ಭಾರತ ಸಿ: 296/4 (47) ಶುಭ್‌ಮನ್ ಗಿಲ್ 106*, ಇಶನ್ ಕಿಶಾನ್ 69, ಸೂರ್ಯಕುಮಾರ್ ಯಾದವ್ 56*, ಅಭಿನವ್ ಮುಕುಂದ್ 37, ಆರ್. ಅಶ್ವಿನ್ 46/1, ಶಮ್ಸ್ ಮುಲಾನಿ 51/1.

ಫಲಿತಾಂಶ: ಭಾರತ ಸಿ ತಂಡಕ್ಕೆ ಆರು ವಿಕೆಟ್ ಜಯ, ಫೈನಲ್ ಪ್ರವೇಶ

ಫೈನಲ್ ಪಂದ್ಯ

ಫೈನಲ್ ಪಂದ್ಯ

ಫೈನಲ್: ಭಾರತ ಬಿ ಮತ್ತು ಭಾರತ ಸಿ
ಸ್ಥಳ: ಫಿರೋಜ್ ಶಾ ಕೋಟ್ಲಾ, ದೆಹಲಿ
ಸಮಯ: ಶನಿವಾರ (ಅ.27), ಬೆಳಿಗ್ಗೆ 9
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 2

ವಿಂಡೀಸ್ ಸರಣಿಯ ಕೊನೆಯ ಮೂರು ಪಂದ್ಯ: ತಂಡಕ್ಕೆ ಮರಳಿದ ಭುವಿ, ಬೂಮ್ರಾ

Story first published: Thursday, October 25, 2018, 20:17 [IST]
Other articles published on Oct 25, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+