ದೇವಧರ್ ಟ್ರೋಫಿ: ದಿನೇಶ್ ಕಾರ್ತಿಕ್ ಹೋರಾಟ ವ್ಯರ್ಥ, ಭಾರತ ಬಿ ತಂಡಕ್ಕೆ ಜಯ

ದೆಹಲಿ, ಅಕ್ಟೋಬರ್ 23: ದೇವಧರ್ ಟ್ರೋಫಿ ಟೂರ್ನಿಯ ಮೊದಲ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ಬಿ ತಂಡ ದಿನೇಶ್ ಕಾರ್ತಿಕ್ ನಾಯಕತ್ವದ ಭಾರತ ಎ ತಂಡದ ವಿರುದ್ಧ 43 ರನ್‌ಗಳ ಗೆಲುವು ಸಾಧಿಸಿದೆ.
ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಬಿ ತಂಡ ಮೊದಲು ಬ್ಯಾಟಿಂಗ್‌ಗೆ ಇಳಿಯಿತು.
ಆರಂಭದಲ್ಲಿಯೇ ರುತುರಾಜ್ ಗಾಯಕ್‌ವಾಡ್ ಅವರ ವಿಕೆಟ್ ಕಳೆದುಕೊಂಡಿತು. ಕರ್ನಾಟಕದ ಮಯಾಂಕ್ ಅಗರವಾಲ್ ಮತ್ತು ಶ್ರೇಯಸ್ ಅಯ್ಯರ್ ತಂಡಕ್ಕೆ ಆಸರೆಯಾದರು. ಆರಂಭದಲ್ಲಿಯೇ ಜೀವದಾನ ಪಡೆದ ಮಯಾಂಕ್, ಅರ್ಧಶತಕದ ಹೊಸ್ತಿಲಲ್ಲಿ ಎಡವಿದರು.
ಬಳಿಕ ಹನುಮ ವಿಹಾರಿ ಮತ್ತು ಮನೋಜ್ ತಿವಾರಿ ರನ್ ಗತಿ ಹೆಚ್ಚಿಸಿದರು. ಕೊನೆಯಲ್ಲಿ ವಿಕೆಟ್ ಕಳೆದುಕೊಂಡರೂ 250ರ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

ಆರಂಭದಲ್ಲೇ ಆಘಾತ
262 ರನ್ ಗುರಿ ಬೆನ್ನತ್ತಿದ್ದ ಎ ತಂಡದ ಆರಂಭವೂ ಉತ್ತಮವಾಗಿರಲಿಲ್ಲ. ಪೃಥ್ವಿ ಶಾ ಏಳು ರನ್ ಗಳಿಸಿ ಶಹಬಾಜ್ ನದೀಮ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಅದರ ಮರು ಎಸೆತದಲ್ಲಿಯೇ ಕನ್ನಡಿಗ ಕರುಣ್ ನಾಯರ್ ಸೊನ್ನೆ ಸುತ್ತಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಅಂಕಿತ್ ಭಾವ್ನೆ, ಅನ್ಮೋಲ್ ಪ್ರೀತ್ ಸಿಂಗ್, ಕೃಣಾಲ್ ಪಾಂಡ್ಯ, ಶ್ರೇಯಸ್ ಗೋಪಾಲ್ ಎಲ್ಲರೂ ವೈಫಕ್ಯ ಅನುಭವಿಸಿದರು.

ಶತಕ ವಂಚಿತ ಕಾರ್ತಿಕ್
87 ರನ್‌ಗೆ ಐದು ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿದ್ದ ತಂಡಕ್ಕೆ ನಾಯಕ ದಿನೇಶ್ ಕಾರ್ತಿಕ್ ಮತ್ತು ರವಿಚಂದ್ರನ್ ಅಶ್ವಿನ್ ಆಸರೆಯಾದರು.
ಇಬ್ಬರೂ ಆರನೇ ವಿಕೆಟ್‌ಗೆ 123 ರನ್ ಜತೆಯಾಟ ನೀಡಿದರು. ಆದರೆ, ಅಶ್ವಿನ್ ಔಟಾದ ಕೆಲ ಹೊತ್ತಿನಲ್ಲಿಯೇ 99 ರನ್ ಗಳಿಸಿದ್ದ ದಿನೇಶ್ ಕಾರ್ತಿಕ್ ಕೂಡ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಎ ತಂಡದ ಗೆಲುವಿನ ಕನಸು ಕಮರಿತು.
ಸನ್‌ರೈಸರ್ಸ್ ಮೇಲೆ ಶಿಖರ್ ಧವನ್ ಕೋಪ: ಮುಂಬೈ ಇಂಡಿಯನ್ಸ್ ಸೇರ್ಪಡೆ ಸಾಧ್ಯತೆ

ಸಂಕ್ಷಿಪ್ತ ಸ್ಕೋರ್
ಭಾರತ ಬಿ: 261/8 (50) ಮಯಾಂಕ್ ಅಗರವಾಲ್ 46, ಹನುಮ ವಿಹಾರಿ 87, ಮನೋಜ್ ತಿವಾರಿ 52, ಶ್ರೇಯಸ್ ಅಯ್ಯರ್ 41, ಆರ್. ಅಶ್ವಿನ್ 39/2, ಶ್ರೇಯಸ್ ಗೋಪಾಲ್ 38/1, ಕೃಣಾಲ್ ಪಾಂಡ್ಯ 39/1
ಭಾರತ ಎ: 218/10 (46.4) ದಿನೇಶ್ ಕಾರ್ತಿಕ್ 99, ಆರ್. ಅಶ್ವಿನ್ 54, ಕೃಣಾಲ್ ಪಾಂಡ್ಯ 17, ಮಯಾಂಕ್ ಮಾರ್ಕಂಡೆ 48/4, ಶಹಬಾಜ್ ನದೀಮ್ 32/3, ವರುಣ್ ಆರೋನ್ 45/2
ಫಲಿತಾಂಶ: ಭಾರತ ಬಿ ತಂಡಕ್ಕೆ 43 ರನ್ ಜಯ.
ಭಾರತೀಯ ಕ್ರಿಕೆಟ್‌ಗೆ ಬರುತ್ತಿದ್ದಾರೆ ಮೊದಲ ಮಹಿಳಾ ಅಂಪೈರ್

ಮುಂದಿನ ಪಂದ್ಯ
ಭಾರತ ಬಿ Vs ಭಾರತ ಸಿ
ದಿನಾಂಕ: ಅ.23, ಬುಧವಾರ
ಸಮಯ: ಬೆಳಿಗ್ಗೆ 9 ಗಂಟೆ
ಸ್ಥಳ: ಫಿರೋಜ್ ಶಾ ಕೋಟ್ಲಾ ಮೈದಾನ, ದೆಹಲಿ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 2
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications