Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ENG vs SA 1st Test: ಪಂದ್ಯಕ್ಕೆ ಮಳೆ ಅಡ್ಡಿ, ಆರು ವಿಕೆಟ್ ಕಳೆದುಕೊಂಡ ಇಂಗ್ಲೆಂಡ್

Kagiso rabada

ಐತಿಹಾಸಿಕ ಲಂಡನ್‌ನ ಲಾರ್ಡ್ಸ್‌ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟಕ್ಕೆ ವರುಣರಾಯ ಅಡ್ಡಿಪಡಿಸಿದ್ದಾನೆ. ಹರಿಣಗಳ ಬೌಲಿಂಗ್ ದಾಳಿಗೆ ತತ್ತರಿಸಿರುವ ಆತಿಥೇಯ ಇಂಗ್ಲೆಂಡ್ ತಂಡಕ್ಕೆ ಈ ಮೂಲಕ ಕೊಂಚ ಬ್ರೇಕ್ ಸಿಕ್ಕಂತಾಗಿದೆ.

ಟಾಸ್ ಗೆದ್ದ ಬೌಲಿಂಗ್ ಆಯ್ದುಕೊಂಡ ಪ್ರವಾಸ ದಕ್ಷಿಣ ಆಫ್ರಿಕಾ ಆತಿಥೇಯರಿಗೆ ಬ್ಯಾಟಿಂಗ್ ಆಹ್ವಾನಿಸಿತು. ನಾಯಕ ಡೀನ್ ಎಲ್ಗರ್ ನಿರ್ಧಾರವನ್ನ ಬೆಂಬಲಿಸಿದ ದಕ್ಷಿಣ ಆಫ್ರಿಕಾ ಬೌಲರ್‌ಗಳು ಇಂಗ್ಲೆಂಡ್‌ನ ಟಾಪ್ ಆರ್ಡರ್ ಬ್ಯಾಟರ್‌ಗಳನ್ನ ಪೆವಿಲಿಯನ್‌ಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಮಳೆ ಬಂದು ಪಂದ್ಯ ಸ್ಥಗಿತಗೊಳ್ಳುವ ಮುನ್ನ ಇಂಗ್ಲೆಂಡ್ 32 ಓವರ್‌ಗಳಲ್ಲಿ 6 ಪ್ರಮುಖ ವಿಕೆಟ್ ಕಳೆದುಕೊಂಡು 116ರನ್ ಕಲೆಹಾಕಿದೆ.

ರಬಾಡ ಬೌಲಿಂಗ್‌ ದಾಳಿಗೆ ತತ್ತರಿಸಿದ ಇಂಗ್ಲೆಂಡ್

ಭರ್ಜರಿ ಫಾರ್ಮ್‌ನಲ್ಲಿರುವ ಇಂಗ್ಲೆಂಡ್‌ ತಂಡವು ಮೊದಲು ಬ್ಯಾಟಿಂಗ್ ಮಾಡುವ ಅವಕಾಶದಲ್ಲಿ ಎಡವಿದೆ. ಇಂಗ್ಲೆಂಡ್‌ನ ಓಪನಿಂಗ್ ಬ್ಯಾಟ್ಸ್‌ಮನ್‌ಗಳಿಬ್ಬರು ಕಗಿಸೊ ರಬಾಡ ಬೌಲಿಂಗ್ ದಾಳಿಗೆ ತತ್ತರಿಸಿ ಪೆವಿಲಿಯನ್‌ಗೆ ಸೇರಿಕೊಂಡಿದ್ದಾರೆ.

ಮೊದಲಿಗೆ ಅಲೆಕ್ಸ್ ಹೀಲ್ಸ್ ಕೇವಲ 5ರನ್‌ಗೆ ಕಗಿಸೊ ರಬಾಡಗೆ ವಿಕೆಟ್ ಒಪ್ಪಿಸಿದ್ರೆ, ನಂತರದಲ್ಲಿ ಝಾಕ್ ಕ್ರಾಲಿ ಕೇವಲ 9ರನ್‌ಗಳಿಸಿ ಏಡನ್ ಮಕ್ರಾಮ್‌ಗೆ ಕ್ಯಾಚಿತ್ತರು. ಈ ಮೂಲಕ ಇಬ್ಬರು ಓಪನರ್‌ಗಳ ವಿಕೆಟ್ ಪಡೆಯುವಲ್ಲಿ ರಬಾಡ ಯಶಸ್ವಿಯಾಗಿದ್ದಾರೆ.

ರಬಾಡಗೆ ಉತ್ತಮ ಸಾಥ್ ನೀಡಿದ ವೇಗದ ಬೌಲರ್ ಅನ್ರಿಕ್ ನೊರ್ಕಿಯಾ ಮೂರು ವಿಕೆಟ್ ಕಬಳಿಸಿದ್ದಾರೆ. ಜಾನಿ ಬೈಸ್ಟ್ರೋವ್ 0, ಬೆನ್ ಸ್ಟೋಕ್ಸ್‌ 20, ಬೆನ್‌ ಫೋಕ್ಸ್‌ 6ರನ್‌ಗೆ ನೊರ್ಕಿಯಾಗೆ ವಿಕೆಟ್ ಒಪ್ಪಿಸಿದರು.

ಸಂಜು ಸ್ಯಾಮ್ಸನ್ ರ್ಯಾಪಿಡ್‌ ಫೈರ್‌: ಅಡ್ಡ ಹೆಸರೇನು? ಇಷ್ಟವಾದ ಆಹಾರ ಯಾವುದು?

ಜೋ ರೂಟ್‌ನನ್ನು ಎಲ್‌ಬಿಡಬ್ಲ್ಯೂ ಬಲೆಗೆ ಕೆಡವಿದ ಜಾನ್ಸನ್

ಜೋ ರೂಟ್‌ನನ್ನು ಎಲ್‌ಬಿಡಬ್ಲ್ಯೂ ಬಲೆಗೆ ಕೆಡವಿದ ಜಾನ್ಸನ್

ಇನ್ನು ಇಂಗ್ಲೆಂಡ್ ಇನ್‌ ಫಾರ್ಮ್ ಬ್ಯಾಟರ್ ಜೋ ರೂಟ್‌ರನ್ನು ಎಲ್‌ಬಿಡಬ್ಲ್ಯೂ ಬಲೆಗೆ ಕೆಡವುವಲ್ಲಿ ಮಾರ್ಕೊ ಜಾನ್ಸನ್ ಯಶಸ್ವಿಯಾದ್ರು. ಟೆಸ್ಟ್ ಚಾಂಪಿಯನ್ ಸೈಕಲ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿರುವ ಬ್ಯಾಟರ್ ಜೋ ರೂಟ್‌ 8 ರನ್‌ಗಳಿಸಿದ್ದ ವೇಳೆಯಲ್ಲಿ ಜಾನ್ಸನ್ ಎಲ್‌ಬಿಡಬ್ಲ್ಯೂ ಬಲೆಗೆ ಸಿಲುಕಿದ್ರು. ಈ ಮೂಲಕ ಬಹು ಮುಖ್ಯವಾದ ವಿಕೆಟ್ ಪಡೆಯುವಲ್ಲಿ ಹರಿಣಗಳು ಯಶಸ್ವಿಯಾದ್ರು.

ಮಳೆಗೂ ಮುನ್ನ ಆರು ಪ್ರಮುಖ ವಿಕೆಟ್ ಕಳೆದುಕೊಂಡಿರುವ ಇಂಗ್ಲೆಂಡ್ ತಂಡಕ್ಕೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಒಲ್ಲಿ ಪೋಪ್ ಏಕೈಕ ಆಧಾರವಾದ್ರು. 87 ಎಸೆತಗಳಲ್ಲಿ ಅಜೇಯ 61 ರನ್ ಕಲೆಹಾಕಿರುವ ಒಲ್ಲಿ ಪೋಪ್ ಕ್ರೀಸ್‌ನಲ್ಲಿ ಉಳಿದಿದ್ದು, ಸ್ಟುವರ್ಟ್ ಬ್ರಾಡ್ ವಿಕೆಟ್ ಉಳಿಸಿಕೊಳ್ಳುವ ಪ್ರಯತ್ನ ನಡೆಸಲಿದ್ದಾರೆ. ಇಂಗ್ಲೆಂಡ್ 32 ಓವರ್‌ಗಳಲ್ಲಿ 6 ಪ್ರಮುಖ ವಿಕೆಟ್ ಕಳೆದುಕೊಂಡು 116ರನ್ ಕಲೆಹಾಕಿದೆ.

Ind vs Zim 1st ODI: ಹೆಡ್‌ ಟು ಹೆಡ್ ರೆಕಾರ್ಡ್‌, ಆಟಗಾರರು ತಲುಪಲಿರುವ ಮೈಲಿಗಲ್ಲು

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ದಕ್ಷಿಣ ಆಫ್ರಿಕಾ
ಡೀನ್ ಎಲ್ಗರ್ (ನಾಯಕ), ಸರೆಲ್ ಎರ್ವೀ, ಕೀಗನ್ ಪೀಟರ್ಸನ್, ಏಡೆನ್ ಮಾರ್ಕ್ರಾಮ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಕೈಲ್ ವೆರ್ರೆನ್ನೆ (ವಿಕೆಟ್ ಕೀಪರ್), ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಆನ್ರಿಚ್ ನಾರ್ಟ್ಜೆ, ಲುಂಗಿ ಎನ್ಗಿಡಿ

ಬೆಂಚ್‌: ಲುಥೋ ಸಿಪಾಮ್ಲಾ, ಸೈಮನ್ ಹಾರ್ಮರ್, ಖಯಾ ಜೊಂಡೋ, ರಿಯಾನ್ ರಿಕೆಲ್ಟನ್, ಗ್ಲೆಂಟನ್ ಸ್ಟೌರ್ಮನ್


ಇಂಗ್ಲೆಂಡ್
ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಒಲ್ಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋ, ಬೆನ್ ಸ್ಟೋಕ್ಸ್(ನಾಯಕ), ಬೆನ್ ಫೋಕ್ಸ್(ವಿಕೆಟ್ ಕೀಪರ್), ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್, ಮ್ಯಾಟಿ ಪಾಟ್ಸ್, ಜೇಮ್ಸ್ ಆಂಡರ್ಸನ್

ಬೆಂಚ್‌: ಆಲಿ ರಾಬಿನ್ಸನ್, ಕ್ರೇಗ್ ಓವರ್ಟನ್, ಹ್ಯಾರಿ ಬ್ರೂಕ್

Story first published: Wednesday, August 17, 2022, 20:12 [IST]
Other articles published on Aug 17, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+