For Quick Alerts
ALLOW NOTIFICATIONS  
For Daily Alerts
 

ಸಂಜು ಸ್ಯಾಮ್ಸನ್ ರ್ಯಾಪಿಡ್‌ ಫೈರ್‌: ಅಡ್ಡ ಹೆಸರೇನು? ಇಷ್ಟವಾದ ಆಹಾರ ಯಾವುದು?

Sanju samson

ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿ ಹಿನ್ನಲೆಯಲ್ಲಿ ಹರಾರೆಯಲ್ಲಿ ಅಭ್ಯಾಸ ನಡೆಸುತ್ತಿರುವ ಟೀಂ ಇಂಡಿಯಾ ಪರ ವಿಕೆಟ್ ಕೀಪಿಂಗ್ ಬ್ಯಾಟರ್ ಸಂಜು ಸ್ಯಾಮ್ಸನ್‌ಗೆ ರ್ಯಾಪಿಡ್ ಫೈರ್ ಪ್ರಶ್ನೆಗಳನ್ನ ಕೇಳಲಾಗಿದೆ. ಜಿಂಬಾಬ್ವೆ ವಿರುದ್ಧ ಉತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿರುವ ಸ್ಯಾಮ್ಸನ್‌ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಬಿಸಿಸಿಐ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ರ್ಯಾಪಿಡ್ ಫೈರ್ ಸೆಷನ್ ನಲ್ಲಿ ಸಂಜು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಸ್ಯಾಮ್ಸನ್‌ಗೆ ಏನೆಲ್ಲಾ ಪ್ರಶ್ನೆಗಳನ್ನ ಕೇಳಲಾಗಿದೆ, ಅದಕ್ಕೆ ಕೇರಳದ ಆಟಗಾರನ ಉತ್ತರವೇನು ಎಂಬುದನ್ನ ಈ ಕೆಳಗೆ ತಿಳಿಯಿರಿ.

ಸಂಜು ಸ್ಯಾಮ್ಸನ್ ಅಡ್ಡ ಹೆಸರೇನು?

ಸಂಜು ಸ್ಯಾಮ್ಸನ್ ಅಡ್ಡ ಹೆಸರೇನು?

ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಸ್ಥಾನ ಪಡೆದಿದ್ದರೂ, ಮುಂಬರುವ ಏಷ್ಯಾಕಪ್‌ಗೆ ತಂಡದಿಂದ ಹೊರಗುಳಿದಿರುವ ನಿರಾಸೆಯನ್ನು ಹೊಂದಿರುವ ಸಂಜು ಸ್ಯಾಮ್ಸನ್‌ ರ್ಯಾಪಿಡ್ ಪ್ರಶ್ನೆಗಳಿಗೆ ಅತ್ಯಂತ ವಿಶ್ವಾಸದಿಂದ ಉತ್ತರಿಸಿದ್ದಾರೆ.

ಸಂಜು ಸ್ಯಾಮ್ಸನ್‌ಗೆ ಕೇಳಿದ ಮೊದಲ ಪ್ರಶ್ನೆಯೆಂದರೆ ಹೆಚ್ಚಿನ ಜನರಿಗೆ ತಿಳಿದಿಲ್ಲದ ಅವನ ಅಡ್ಡಹೆಸರು ಏನು ಎಂಬುದು ಆಗಿತ್ತು. ಇದಕ್ಕೆ ಉತ್ತರಿಸಿರುವ ಸಂಜು, ತನ್ನ ಅಡ್ಡ ಹೆಸರು ಬಪ್ಪು ಎಂದು ಉತ್ತರಿಸಿದ್ದಾರೆ.

ಭಾರತವನ್ನು ಎದುರಿಸಲು ನಮ್ಮಲ್ಲಿ ಯೋಜನೆಗಳು ಸಿದ್ಧವಿದೆ: ಎಚ್ಚರಿಕೆ ನೀಡಿದ ಜಿಂಬಾಬ್ವೆ ಕ್ರಿಕೆಟಿಗ

ಸಂಜುಗೆ ಅಮ್ಮನ ಅಡುಗೆ ಅಂದ್ರೆ ಬಹಳ ಇಷ್ಟ

ನೀವು ಇಷ್ಟಪಡುವ ಆಹಾರ ಹಾಗೂ ಇಲ್ಲಿ ತಿನ್ನಲು ಸಾಧ್ಯವಿಲ್ಲದೇ ಇರುವುದು ಯಾವುವು ಎಂಬುದು ಮುಂದಿನ ಪ್ರಶ್ನೆಯಾಗಿತ್ತು. ನಾನು ಚಾಕೊಲೇಟ್‌ಗಳನ್ನು ಇಷ್ಟಪಡುತ್ತೇನೆ. ಪ್ರವಾಸದ ಮೊದಲು ಮತ್ತು ಪ್ರವಾಸದ ಸಮಯದಲ್ಲಿ ನಾನು ಚಾಕೊಲೇಟ್‌ಗಳನ್ನು ತಿನ್ನುವುದನ್ನ ತಪ್ಪಿಸುತ್ತೇನೆ. ನನ್ನ ತಾಯಿ ಮಾಡುವ ಅನೇಕ ಆಹಾರಗಳನ್ನು ನಾನು ತಿನ್ನಲು ಇಷ್ಟಪಡುತ್ತೇನೆ. ಆದರೆ ಈಗ ಅದು ಸಾಧ್ಯವಿಲ್ಲ ಎಂದು ಸ್ಯಾಮ್ಸನ್ ಹೇಳಿದ್ದಾರೆ.

Ind vs Zim 1st ODI: ಹೆಡ್‌ ಟು ಹೆಡ್ ರೆಕಾರ್ಡ್‌, ಆಟಗಾರರು ತಲುಪಲಿರುವ ಮೈಲಿಗಲ್ಲು

ಫೇವರಿಟ್ ಜಾಗ ಮತ್ತು ಫೇವರಿಟ್ ಫುಟ್ಬಾಲಿಗ!

ಫೇವರಿಟ್ ಜಾಗ ಮತ್ತು ಫೇವರಿಟ್ ಫುಟ್ಬಾಲಿಗ!

ಸಂಜು ಸ್ಯಾಮ್ಸನ್ ಅವರು ಬೀಚ್ ಅಥವಾ ಪರ್ವತಗಳಲ್ಲಿ ಯಾವುದನ್ನು ಇಷ್ಟಪಡುತ್ತೀರ ಎಂಬ ಪ್ರಶ್ನೆಗೆ ಕಡಲತೀರಗಳು ಎಂದಿದ್ದಾರೆ. ಅದ್ರಲ್ಲೂ ಕೇರಳದಲ್ಲಿ ಅನೇಕ ಬ್ಯಾಕ್‌ವಾಟರ್ ಇದೆ, ಹೀಗಾಗಿ ಇಲ್ಲಿಯು ಸೇರಿದಂತೆ ಬೀಚ್‌ನಲ್ಲಿ ಸಮಯ ಕಳೆಯಲು ಇಷ್ಟಪಡುತ್ತೇನೆ ಎಂದು ಸ್ಯಾಮ್ಸನ್‌ ಹೇಳಿದರು.

ಇನ್ನು ಮುಂದಿನ ಪ್ರಶ್ನೆಯೆಂದರೆ ನೀವು ಲಿಯೋನೆಲ್ ಮೆಸ್ಸಿ ಅಥವಾ ಕ್ರಿಸ್ಟಿಯಾನೋ ರೊನಾಲ್ಡೊ ಯಾರನ್ನು ಇಷ್ಟಪಡುತ್ತೀರಿ? ಎಂದಾಗ, ನನಗೆ ಅವರಿಬ್ಬರೂ ಇಷ್ಟ. ಆದರೆ, ಸಂಜು ಅವರು ಮೆಸ್ಸಿ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದು ಬಹಿರಂಗಪಡಿಸಿದರು.

ತಮ್ಮ ನೆಚ್ಚಿನ ಕ್ರೀಡಾ ವ್ಯಕ್ತಿತ್ವ ಯಾರು ಎಂದು ಕೇಳುವವರೇ ಹೆಚ್ಚು ಎಂದು ಸಂಜು ಸ್ಯಾಮ್ಸನ್ ಸ್ಪಷ್ಟಪಡಿಸಿದ್ದಾರೆ. ಆದ್ರೆ ನನಗೆ ಬಹಳ ಸ್ಫೂರ್ತಿ ತುಂಬಿದವರು ಅನೇಕ ಜನರಿದ್ದಾರೆ. ಅವರಲ್ಲಿ ಒಬ್ಬರು ಖಂಡಿತವಾಗಿಯೂ ಎಂಎಸ್ ಧೋನಿ ಎಂದು ಸ್ಯಾಮ್ಸನ್ ಉತ್ತರಿಸಿದರು.

ತನಗೆ ಮಹಾಶಕ್ತಿ ಸಿಕ್ಕರೆ ಕ್ಷಣಮಾತ್ರದಲ್ಲಿ ಪ್ರತಿ ಸ್ಥಳಕ್ಕೂ ಭೇಟಿ ನೀಡಿ ಕಣ್ಮರೆಯಾಗುವ ಸಾಮರ್ಥ್ಯ ತನ್ನದಾಗುತ್ತಿತ್ತು ಎಂದು ಸಂಜು ಬಹಿರಂಗಪಡಿಸಿದ್ದಾರೆ. ತಮಾಷೆಯ ಇನ್‌ಸ್ಟಾಗ್ರಾಮ್‌ ಫೀಡ್‌ನೊಂದಿಗೆ ಕಾಣಿಸಿಕೊಳ್ಳುವ ಭಾರತದ ಕ್ರಿಕೆಟಿಗ ಯಾರು ಎಂದು ಕೇಳಿದಾಗ, ಅದು ನಮ್ಮ ಸೂಪರ್‌ಸ್ಟಾರ್ ಯುಜ್ವೇಂದ್ರ ಚಹಾಲ್ ಎಂದು ಸಂಜು ನಗುತ್ತಾ ಹೇಳಿದರು.

IND vs ZIM: ಜಿಂಬಾಬ್ವೆ ಸರಣಿಗೆ ಆಯ್ಕೆಯಾಗಿದ್ದರೂ ಸಹ ಈ ಮೂವರಿಗೆ ಆಡುವ ಅವಕಾಶ ಸಿಗುವುದು ಕನಸೇ!

ಶಿಖರ್ ಧವನ್ ಇನ್‌ಸ್ಟಾಗ್ರಾಮ್ ರೀಲ್ಸ್‌ ಅಂದ್ರೆ ಇಷ್ಟ!

ಶಿಖರ್ ಧವನ್ ಇನ್‌ಸ್ಟಾಗ್ರಾಮ್ ರೀಲ್ಸ್‌ ಅಂದ್ರೆ ಇಷ್ಟ!

ಶಿಖರ್ ಧವನ್ ಅವರ ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ನಾನು ಹೆಚ್ಚು ಆನಂದಿಸುತ್ತೇನೆ ಎಂದು ಸಂಜು ಹೇಳಿದ್ದಾರೆ. ನಾನು ಮತ್ತು ನನ್ನ ಹೆಂಡತಿ ಮನೆಯಲ್ಲಿ ಅಥವಾ ಲಿವಿಂಗ್ ರೂಮಿನಲ್ಲಿ ಕುಳಿತು ಶಿಖರ್ ಭಾಯ್ ಅವರ ರೀಲ್ಸ್‌ಗಳನ್ನ ಒಟ್ಟಿಗೆ ನೋಡುತ್ತಿದ್ದೆವು. ಇದು ತುಂಬಾ ಆಸಕ್ತಿದಾಯಕ ಮತ್ತು ತಮಾಷೆಯಾಗಿತ್ತು ಎಂದು ಸಂಜು ಸೇರಿಸಿದ್ದಾರೆ.

Story first published: Wednesday, August 17, 2022, 19:30 [IST]
Other articles published on Aug 17, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+