
ಕೊಹ್ಲಿ ಫಾರ್ಮ್ ಕುರಿತು ಮಾಜಿ ಕ್ರಿಕೆಟಿಗರ ಟೀಕೆ
ವಿರಾಟ್ ವೈಫಲ್ಯವನ್ನು ಉಲ್ಲೇಖಿಸಿ ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಡೇನಿಯಲ್ ವೆಟ್ಟೋರಿ ಮತ್ತು ಇಯಾನ್ ಬಿಷಪ್ ಟೀಕೆ ಮಾಡಿದ್ದಾರೆ. ಆರ್‌ಸಿಬಿ ವೈಫಲ್ಯಕ್ಕೆ ಕೊಹ್ಲಿಯ ಅತ್ಯಂತ ಕೆಟ್ಟ ಬ್ಯಾಟಿಂಗ್ ಕಾರಣ ಎಂದು ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ಅಖ್ತರ್ ಇಂತಹ ಟೀಕೆಗಳನ್ನು ಮಾಡಬೇಡಿ ಮತ್ತು ಸಣ್ಣ ಮಕ್ಕಳು ನಿಮ್ಮನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ ಎಂದು ಹೇಳಿದರು. ಸ್ಪೋರ್ಟ್ಸ್ ಕ್ರೀಡಾಗೆ ನೀಡಿದ ಸಂದರ್ಶನದಲ್ಲಿ ಅವರು ವಿರಾಟ್ ಅವರನ್ನು ಬೆಂಬಲಿಸಿ ಮಾತನಾಡಿದರು.
ಐಪಿಎಲ್ 2022ರ ಬೆಸ್ಟ್ ಪ್ಲೇಯಿಂಗ್ 11 ಹೆಸರಿಸಿದ ಸಚಿನ್ ತೆಂಡೂಲ್ಕರ್ : ಕೊಹ್ಲಿ, ರೋಹಿತ್ ಇಲ್ಲ

ವಿರಾಟ್‌ಗೆ ಕನಿಷ್ಠ ಗೌರವವನ್ನು ನೀಡಿ ಎಂದ ಅಖ್ತರ್
''ನಾವು ಅಭಿಪ್ರಾಯಗಳನ್ನು ಹೇಳುವ ಮುನ್ನ ಚಿಕ್ಕ ಮಕ್ಕಳು ತಮ್ಮನ್ನು ಗಮನಿಸುತ್ತಿದ್ದಾರೆ ಎಂಬುದನ್ನು ಎಲ್ಲಾ ಐಕಾನಿಕ್ ಆಟಗಾರರು ಅರಿತುಕೊಳ್ಳಬೇಕು. ವಿರಾಟ್ ಕೊಹ್ಲಿಗೆ ಕನಿಷ್ಠ ಗೌರವವನ್ನು ನೀಡಿ. ಒಬ್ಬ ಪಾಕಿಸ್ತಾನಿಯಾಗಿ ಹೇಳುವುದಾದರೆ, ವಿರಾಟ್ ಕೊಹ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರ. ಅಅವರು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 110 ಶತಕಗಳನ್ನು ಗಳಿಸಬೇಕೆಂದು ನಾನು ಬಯಸುತ್ತೇನೆ. ಅವನು 45 ವರ್ಷ ವಯಸ್ಸಿನವರೆಗೂ ಆಡಬೇಕೆಂದು ನಾನು ಬಯಸುತ್ತೇನೆ'' ಎಂದು ಅಖ್ತರ್ ಹೇಳಿದರು.
ಕಠಿಣ ಪರಿಸ್ಥಿತಿಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ರಾವಲ್ಪಿಂಡಿ ಎಕ್ಸ್‌ಪ್ರೆಸ್ ಕಿಂಗ್ ಕೊಹ್ಲಿಗೆ ತಿಳಿಸಿದ್ದಾರೆ. ಇಂತಹ ಸ್ಥಿತಿಗಳು ಮನುಷ್ಯನನ್ನು ಸದೃಢರನ್ನಾಗಿಸುತ್ತದೆ ಎಂದರು.
ನನ್ನ ಕುಂಗ್ ಫೂ ಪಾಂಡ್ಯನನ್ನು ಕಡಿಮೆ ಅಂದಾಜು ಮಾಡಬೇಡಿ; ಹಾರ್ದಿಕ್ ಪತ್ನಿ ನತಾಶ

ಟೀಕಾಕಾರರು ತೆಂಡೂಲ್ಕರ್ ನೋಡಿ ಕಲಿಯಬೇಕು ಎಂದ ಅಖ್ತರ್
ಟೀಕಾಕಾರರು ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರಿಂದ ಕಲಿಯಬೇಕು ಎಂದು ಶೋಯೆಬ್ ಅಖ್ತರ್ ಸಲಹೆ ನೀಡಿದ್ದಾರೆ. ಸಚಿನ್ ಕೂಡ ತಮ್ಮ ಮಾತುಗಳಿಂದ ಯಾರನ್ನೂ ಅವಮಾನಿಸುವುದಿಲ್ಲ, ಎಲ್ಲರನ್ನೂ ಗೌರವಿಸುತ್ತಾರೆ ಎಂದು ಹೇಳಿದ್ದಾರೆ.
''ಸಚಿನ್ ತೆಂಡೂಲ್ಕರ್ ನಾನು ಕಂಡ ಶ್ರೇಷ್ಠ ವ್ಯಕ್ತಿ, ಸಭ್ಯ ಮನುಷ್ಯ. ಅವರು ಇತರ ಕ್ರಿಕೆಟಿಗರ ಬಗ್ಗೆ ತುಂಬಾ ನಯವಾಗಿ ಮಾತನಾಡುತ್ತಾರೆ. ವಿಮರ್ಶಕರು ಸಚಿನ್ ಅವರನ್ನು ನೋಡಿ ಕಲಿಯಬೇಕು. ಲೆಜೆಂಡರಿ ಕ್ರಿಕೆಟಿಗ ಸಚಿನ್ ಎಂದಿಗೂ ಇತರ ಕ್ರಿಕೆಟಿಗರನ್ನು ಅವಮಾನಿಸುವಂತೆ ಟ್ವೀಟ್ ಮಾಡಿಲ್ಲ. ಇತರ ಮಾಜಿ ಕ್ರಿಕೆಟಿಗರು ಇದೇ ರೀತಿಯ ಪ್ರಬುದ್ಧ ಕಾಮೆಂಟ್‌ಗಳನ್ನು ಮಾಡಬೇಕು, "ಎಂದು ಅಖ್ತರ್ ಹೇಳಿದರು.


Click it and Unblock the Notifications
