For Quick Alerts
ALLOW NOTIFICATIONS  
For Daily Alerts
 

ಚಾನ್ಸ್ ಅಂದ್ರೆ ಹೀಗಿರ್ಬೇಕು! ಟೆಸ್ಟ್ ಕ್ರಿಕೆಟ್‌ನಲ್ಲೂ ಟೀಂ ಇಂಡಿಯಾ ನಾಯಕನಾದ ಕೆ.ಎಲ್ ರಾಹುಲ್

KL RAHUL

ಒಂದು ವರ್ಷದ ಹಿಂದೆ ಟೀಂ ಇಂಡಿಯಾ ಟೆಸ್ಟ್ ಸ್ಕ್ವಾಡ್‌ನಲ್ಲಿ ಸ್ಥಾನ ಪಡೆಯುವಲ್ಲಿ ಹಿಂದೆ ಬಿದ್ದಿದ್ದ ಓಪನರ್ ಕೆ.ಎಲ್ ರಾಹುಲ್, ಒಂದು ವರ್ಷದಲ್ಲಿ ತಾನು ಟೀಂ ಇಂಡಿಯಾ ಟೆಸ್ಟ್ ತಂಡವನ್ನ ಮುನ್ನಡೆಸಲಿದ್ದೇನೆ ಎಂದು ಸ್ವತಃ ಕನಸಲ್ಲೂ ನೆನೆಸಿಕೊಂಡಿರೋದಿಲ್ಲ. ಅಂತದ್ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಭಾರತ ತಂಡವನ್ನ ಮುನ್ನೆಡೆಸುತ್ತಿದ್ದಾರೆ.

ಪಂದ್ಯ ಶುರುವಾಗುವ ಕೆಲ ಕ್ಷಣದಲ್ಲಿ ವಿರಾಟ್ ಕೊಹ್ಲಿ ಗಾಯಾಳು ಎಂದು ಘೋಷಣೆಯಾಗಿದ್ದು, ಕೆ.ಎಲ್ ರಾಹುಲ್ ಟೀಂ ಇಂಡಿಯಾವನ್ನ ಮುನ್ನಡೆಸಿದ್ದಾರೆ. ದುರದೃಷ್ಟವಶಾತ್ ವಿರಾಟ್‌ಗೆ ಬೆನ್ನುಮೂಳೆಯ ನೋವಿನ ಸೆಳೆತದಿಂದ ಬಳಲುತ್ತಿದ್ದು, ಫಿಸಿಯೋಗಳು ಕೊಹ್ಲಿ ಚೇತರಿಕೆಗೆ ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಇಂದು 99ನೇ ಟೆಸ್ಟ್ ಪಂದ್ಯವನ್ನಾಡಬೇಕಿದ್ದ ವಿರಾಟ್, ಕಣದಿಂದ ಹೊರಗುಳಿದಿದ್ದಾರೆ.

ಏಕದಿನ ತಂಡಕ್ಕೂ ನಾಯಕನಾಗಿರುವ ಕೆ.ಎಲ್ ರಾಹುಲ್

ಏಕದಿನ ತಂಡಕ್ಕೂ ನಾಯಕನಾಗಿರುವ ಕೆ.ಎಲ್ ರಾಹುಲ್

ಟೀಂ ಇಂಡಿಯಾದ ಏಕದಿನ ನಾಯಕತ್ವದಿಂದ ವಿರಾಟ್ ಕೊಹ್ಲಿ ವಜಾಗೊಂಡ ಬಳಿಕ, ರೋಹಿತ್ ಶರ್ಮಾರನ್ನ ಲಿಮಿಟೆಡ್ ಓವರ್ ಫಾರ್ಮೆಟ್‌ನ ನಾಯಕನನ್ನಾಗಿ ಮಾಡಲಾಯಿತು. ಆದ್ರೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನವೇ ರೋಹಿತ್ ಗಾಯಗೊಂಡ ಪರಿಣಾಮ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಮಿಸ್ ಮಾಡಿಕೊಂಡ್ರು. ಇತ್ತೀಚೆಗಷ್ಟೇ ಏಕದಿನ ತಂಡದ ಆಯ್ಕೆ ವೇಳೆಯು ಶೇಕಡಾ 100ರಷ್ಟು ಗುಣಮುಖನಾಗದ ರೋಹಿತ್‌ ಶರ್ಮಾನನ್ನ ಆಯ್ಕೆ ಮಾಡಲಿಲ್ಲ. ಪರಿಣಾಮ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಕೆ.ಎಲ್ ರಾಹುಲ್ ಟೀಂ ಇಂಡಿಯಾವನ್ನ ಮುನ್ನಡೆಸಲಿದ್ದಾರೆ.

ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ: ಐತಿಹಾಸಿಕ ಗೆಲುವಿಗೆ ಮುನ್ನವೇ ಗಾಯಾಳುವಾಗಿ ಹೊರಬಿದ್ದ ಕೊಹ್ಲಿ

ಭಾರತದ 34ನೇ ಟೆಸ್ಟ್ ಕ್ಯಾಪ್ಟನ್ ಆದ ಕನ್ನಡಿಗ

ಭಾರತದ 34ನೇ ಟೆಸ್ಟ್ ಕ್ಯಾಪ್ಟನ್ ಆದ ಕನ್ನಡಿಗ

ಕೆ.ಎಲ್ ರಾಹುಲ್ ಟೀಂ ಇಂಡಿಯಾವನ್ನ ಟೆಸ್ಟ್ ಕ್ರಿಕೆಟ್‌ನಲ್ಲಿ ಮುನ್ನಡೆಸುತ್ತಿರುವ ಭಾರತದ 34ನೇ ನಾಯಕರಾಗಿದ್ದಾರೆ. ಅದ್ರಲ್ಲೂ ಏಕದಿನ, ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನ ಮುನ್ನಡೆಸದೇ, ಟೆಸ್ಟ್‌ ಫಾರ್ಮೆಟ್‌ನಲ್ಲಿ ತಂಡವನ್ನ ಮುನ್ನಡೆಸುತ್ತಿರುವ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

1990 ರಲ್ಲಿ ಮೊಹಮ್ಮದ್ ಅಜರುದ್ದೀನ್ ನಂತರ , ಸೀಮಿತ ಓವರ್‌ಗಳ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸದೇ, ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತವನ್ನು ಮುನ್ನಡೆಸುತ್ತಿರುವ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಈತನದ್ದಾಗಿದೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತವನ್ನ ಮುನ್ನಡೆಸುತ್ತಿರುವ ನಾಲ್ಕನೇ ಕನ್ನಡಿಗ!

ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತವನ್ನ ಮುನ್ನಡೆಸುತ್ತಿರುವ ನಾಲ್ಕನೇ ಕನ್ನಡಿಗ!

ಟೆಸ್ಟ್​ನಲ್ಲಿ ಭಾರತವನ್ನ ಮುನ್ನಡೆಸುತ್ತಿರುವ 34ನೇ ಕ್ಯಾಪ್ಟನ್ ಆಗಿರುವ ರಾಹುಲ್, ಈ ಸಾಧನೆ ಮಾಡಿದ ನಾಲ್ಕನೇ ಕನ್ನಡಿಗ ಎಂಬ ದಾಖಲೆಯನ್ನೂ ಕೂಡ ಬರೆದಿದ್ದಾರೆ. ಈ ಹಿಂದೆ ಗುಂಡಪ್ಪ ವಿಶ್ವನಾಥ್ (1980), ರಾಹುಲ್ ದ್ರಾವಿಡ್ (2003-2007) ಹಾಗೂ ಅನಿಲ್ ಕುಂಬ್ಳೆ (2007-08) ಟೀಮ್ ಇಂಡಿಯಾವನ್ನು ಮುನ್ನಡೆಸಿದ ಕನ್ನಡಿಗರೆನಿಸಿಕೊಂಡಿದ್ದರು. ಇದೀಗ ವಿಶೇಷ ಸಾಧಕರ ಪಟ್ಟಿಗೆ ಕೆಎಲ್ ರಾಹುಲ್ ಕೂಡ ಸೇರ್ಪಡೆಯಾಗಿದ್ದಾರೆ.

2019ರಲ್ಲಿ ಟೀಂ ಇಂಡಿಯಾದಿಂದ ಸ್ಥಾನ ಕಳೆದುಕೊಂಡಿದ್ದ ರಾಹುಲ್

2019ರಲ್ಲಿ ಟೀಂ ಇಂಡಿಯಾದಿಂದ ಸ್ಥಾನ ಕಳೆದುಕೊಂಡಿದ್ದ ರಾಹುಲ್

2019 ರಲ್ಲಿ ಕೆಲವು ಸಾಧಾರಣ ಪ್ರದರ್ಶನಗಳ ನಂತರ ಭಾರತೀಯ ಆಯ್ಕೆಗಾರರು ರಾಹುಲ್ ಅವರನ್ನು ಟೆಸ್ಟ್ ತಂಡದಿಂದ ಕೈಬಿಟ್ಟರು. ಕೆ.ಎಲ್ ರಾಹುಲ್ ನಾಲ್ಕು ಪಂದ್ಯಗಳಲ್ಲಿ 22 ರ ಸರಾಸರಿಯಲ್ಲಿ 110 ರನ್ ಗಳಿಸಿದರು. ಇನ್ನು 2020 ರಲ್ಲಿ ರಾಹುಲ್ ಒಂದೇ ಒಂದು ಪಂದ್ಯವನ್ನು ಆಡಲಿಲ್ಲ , ಹೀಗಾಗಿ, ಸಂಪೂರ್ಣ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಕಳೆದುಕೊಂಡರು.

ಭಾರತವು ಟಾಪ್‌ ಆರ್ಡರ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿತು ಆದ್ರೆ ಎಲ್ಲೂ ಕೂಡ ಯಶಸ್ವಿಯಾಗಲಿಲ್ಲ.

ಕೊಹ್ಲಿ, ಪೂಜಾರ, ರಹಾನೆಗೆ ಬಿಗ್‌ ಸ್ಕೋರ್ ಏಕೆ ಸಾಧ್ಯವಾಗುತ್ತಿಲ್ಲ? ಈ ಸಮಸ್ಯೆಯನ್ನ ಪತ್ತೆಹಚ್ಚಿದ ರಾಹುಲ್ ದ್ರಾವಿಡ್!

ಇಂಗ್ಲೆಂಡ್ ಪ್ರವಾಸಕ್ಕೆ ವಾಪಸ್ಸಾದ ರಾಹುಲ್

ಇಂಗ್ಲೆಂಡ್ ಪ್ರವಾಸಕ್ಕೆ ವಾಪಸ್ಸಾದ ರಾಹುಲ್

ಟೀಂ ಇಂಡಿಯಾ ಆರಂಭಿಕ ಜೋಡಿ ಯಶಸ್ಸು ಸಿಗದೇ ಇದ್ದಾಗ, ಇಂಗ್ಲೆಂಡ್ ಪ್ರವಾಸದಲ್ಲಿ ಕೆ.ಎಲ್ ರಾಹುಲ್ ಅವರನ್ನು ವಾಪಸ್ ಕರೆಸಲಾಗಿತ್ತು. ನಾಟಿಂಗ್‌ಹ್ಯಾಮ್ ಟೆಸ್ಟ್‌ನಲ್ಲಿ ಅರ್ಧಶತಕ ಮತ್ತು ಲಾರ್ಡ್ಸ್‌ನಲ್ಲಿ ಶತಕ ಸೇರಿದಂತೆ ನಾಲ್ಕು ಪಂದ್ಯಗಳಲ್ಲಿ ರಾಹುಲ್ 315 ರನ್ ಕಲೆಹಾಕಿದ್ರು. ಈ ಮೂಲಕ ಕೆ.ಎಲ್ ರಾಹುಲ್ ವೃತ್ತಿ ಜೀವನದಲ್ಲಿ ಆ ಸರಣಿಯು ಮಹತ್ವದ ತಿರುವು ತಂದುಕೊಟ್ಟಿತು.

ಇಂಗ್ಲೆಂಡ್ ಪ್ರವಾಸದಲ್ಲಿ ಭಾರತದ ಪರ ಎರಡನೇ ಅತಿ ಹೆಚ್ಚು ರನ್‌ ಕಲೆಹಾಕಿದ ಆಟಗಾರನಾಗಿ ರಾಹುಲ್ ಹೊರಹೊಮ್ಮಿದ್ರು. ಆ ಮೂಲಕ ಕೆ.ಎಲ್ ರಾಹುಲ್ ತಂಡದಲ್ಲಿ ತಮ್ಮ ಸ್ಥಾನವನ್ನ ಭದ್ರಪಡಿಸಿಕೊಂಡ್ರು. ಆ ಬಳಿಕ ರಾಹುಲ್‌ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಒಂದೊಂದೆ ಹಂತವನ್ನ ಏರುತ್ತಾ ಸಾಗಿದ ಕನ್ನಡಿಗ ರಾಹುಲ್ ಇದೀಗ ಕೊಹ್ಲಿ ಅನಪಸ್ಥಿತಿಯಲ್ಲಿ ಟೆಸ್ಟ್ ತಂಡಕ್ಕೆ, ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಏಕದಿನ ತಂಡಕ್ಕೆ ನಾಯಕನಾಗಿ ಭಾರತವನ್ನ ಮುನ್ನಡೆಸುತ್ತಿದ್ದಾರೆ.

ಒಂದು ವರ್ಷದ ಹಿಂದೆ ಮತ್ತೆ ತಾನು ಟೆಸ್ಟ್ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಪಡೆಯುತ್ತೀನಿ ಎಂದು ಅಂದುಕೊಂಡಿರದ ಕೆ.ಎಲ್ ರಾಹುಲ್ ಉಭಯ ಫಾರ್ಮೆಟ್‌ನಲ್ಲೂ ಟೀಂ ಇಂಡಿಯಾವನ್ನ ಮುನ್ನಡೆಸುತ್ತಿರುವುದು ನಿಜಕ್ಕೂ ಅದ್ಭುತ ಅವಕಾಶವೇ ಸರಿ.

ಟೆಸ್ಟ್ ಮ್ಯಾಚ್ ನೋಡೋಕೆ ಯಾರಿಗೂ ಅವಕಾಶ ಇಲ್ಲಾ | Oneindia Kannada
ಜೋಹಾನ್ಸ್‌ಬರ್ಗ್‌ನಲ್ಲಿ ಭಾರತ ಸೋತಿಲ್ಲ!

ಜೋಹಾನ್ಸ್‌ಬರ್ಗ್‌ನಲ್ಲಿ ಭಾರತ ಸೋತಿಲ್ಲ!

ಜೋಹಾನ್ಸ್‌ಬರ್ಗ್ ಮೈದಾನದಲ್ಲಿ ಭಾರತ ಇದುವರೆಗೆ ಯಾವುದೇ ಟೆಸ್ಟ್ ಪಂದ್ಯವನ್ನು ಸೋತಿಲ್ಲ. ಇಲ್ಲಿ ಐದು ಟೆಸ್ಟ್‌ಗಳನ್ನು ಆಡಿರುವ ಭಾರತ ಎರಡರಲ್ಲಿ ಗೆದ್ದು ಮೂರರಲ್ಲಿ ಡ್ರಾ ಮಾಡಿಕೊಂಡಿದ್ದಾರೆ. ಸೆಂಚೂರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತ ಏಕಪಕ್ಷೀಯವಾಗಿ ಗೆದ್ದಿತ್ತು. ಪಂದ್ಯವನ್ನು 113 ರನ್‌ಗಳಿಂದ ಗೆದ್ದು ಮೂರು ಟೆಸ್ಟ್‌ಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸೆಂಚುರಿಯನ್‌ನಲ್ಲಿ ದಕ್ಷಿಣ ಆಫ್ರಿಕಾದ ಸತತ ಗೆಲುವಿನ ಓಟಕ್ಕೆ ಭಾರತ ಮೊದಲ ಟೆಸ್ಟ್‌ನಲ್ಲಿ ಗೆಲುವಿನೊಂದಿಗೆ ಅಂತ್ಯಗೊಳಿಸಿದೆ.

Story first published: Monday, January 3, 2022, 19:45 [IST]
Other articles published on Jan 3, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+