Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸ್ಥಿರತೆಯ ವಿಚಾರದಲ್ಲಿ ದಿನೇಶ್ ಕಾರ್ತಿಕ್, ಟೀಂ ಇಂಡಿಯಾದ ಎಲ್ಲಾ ಬ್ಯಾಟರ್‌ಗಿಂತ ಮುಂದಿದ್ದಾರೆ: ಕಪಿಲ್ ದೇವ್

Dinesh karthik

ಬಹಳ ದಿನಗಳ ನಂತರ ದಿನೇಶ್ ಕಾರ್ತಿಕ್ ಭಾರತ ಕ್ರಿಕೆಟ್ ತಂಡಕ್ಕೆ ಮರಳಿದ್ದಾರೆ. ಕಾಮೆಂಟೇಟರ್ ಆಗಿ ವೃತ್ತಿಜೀವನವನ್ನು ಪ್ರಾರಂಭಿಸಿದ ನಂತರವೂ, ಕಾರ್ತಿಕ್ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನದೊಂದಿಗೆ ಭಾರತ ತಂಡಕ್ಕೆ ಮರಳಲು ಸಾಧ್ಯವಾಯಿತು. ಈ ಬಾರಿ ಕಾರ್ತಿಕ್ ಫಿನಿಶಿಂಗ್ ರೋಲ್‌ನಲ್ಲಿ ಭಾರತ ತಂಡಕ್ಕೆ ಮರಳಿದ್ದು ಆರ್‌ಸಿಬಿ ಜೊತೆಗಿನ ಅವರ ಪ್ರಭಾವಿ ಪ್ರದರ್ಶನವು ಮತ್ತೆ ಟೀಂ ಇಂಡಿಯಾ ಜೆರ್ಸಿ ತೊಡಿಸಿದೆ. ಮುಂಬರುವ ಟಿ20 ವಿಶ್ವಕಪ್‌ಗಾಗಿ ಕಾರ್ತಿಕ್ ಭಾರತದ ತಂಡದ ಭಾಗವಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಭಾರತಕ್ಕೆ ಕಾರ್ತಿಕ್‌ನಂತಹ ಅನುಭವಿ ಫಿನಿಶರ್ ಅಗತ್ಯವಿದೆ. ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿಯಲ್ಲಿ ಭಾರತಕ್ಕಾಗಿ ಫಿನಿಶರ್ ಆಗಿ ಆಡುತ್ತಿದ್ದಾರೆ. ಭಾರತದ ಮಾಜಿ ನಾಯಕ ಮತ್ತು ದಂತಕಥೆ ಕಪಿಲ್ ದೇವ್ ಅವರು ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕಾರ್ತಿಕ್ ಟಿ20 ವಿಶ್ವಕಪ್‌ಗೆ ಭಾರತೀಯ ತಂಡವನ್ನು ಮಾಡುವ ಸಾಧ್ಯತೆಯನ್ನು ಶ್ಲಾಘಿಸಿದ್ದಾರೆ.

ಸ್ಥಿರತೆಯ ವಿಚಾರದಲ್ಲಿ ಕಾರ್ತಿಕ್ ಎಲ್ಲರಿಗಿಂತ ಮುಂದಿದ್ದಾರೆ: ಕಾರ್ತಿಕ್

ಸ್ಥಿರತೆಯ ವಿಚಾರದಲ್ಲಿ ಕಾರ್ತಿಕ್ ಎಲ್ಲರಿಗಿಂತ ಮುಂದಿದ್ದಾರೆ: ಕಾರ್ತಿಕ್

ಸ್ಥಿರತೆಯಲ್ಲಿ ದಿನೇಶ್ ಕಾರ್ತಿಕ್ ಯಾವುದೇ ಭಾರತೀಯರಿಗಿಂತ ಬುದ್ಧಿವಂತರು ಎಂದು ಭಾರತದ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ಹೇಳಿದ್ದಾರೆ.

"ಅವರು ಈ ಬಾರಿ ಉತ್ತಮವಾಗಿ ಆಡುತ್ತಿದ್ದಾರೆ. ರಿಷಬ್ ಪಂತ್ ಇನ್ನೂ ಯುವ ಕ್ರಿಕೆಟಿಗ. ಅವರಲ್ಲಿ ಸಾಕಷ್ಟು ಕ್ರಿಕೆಟ್ ಉಳಿದಿದೆ. ಕಾರ್ತಿಕ್ ಅನುಭವಿ ಆಟಗಾರ. ಈಗಲೂ ಚೆನ್ನಾಗಿ ಆಡುತ್ತಾರೆ. ಆದ್ದರಿಂದ, ಅವರು ಪ್ರಸ್ತುತ ಹೊಗಳಿಕೆಗಿಂತ ಹೆಚ್ಚು ಅರ್ಹರು'' ಎಂದಿದ್ದಾರೆ.

ಟೀಮ್ ಇಂಡಿಯಾಗೆ ಆಯ್ಕೆಯಾದರೂ ನಾನು ಖುಷಿ ಪಡುವುದಿಲ್ಲ, ಅವಕಾಶ ಬೇಡ ಎಂದ ರಿಯಾನ್ ಪರಾಗ್!

ಧೋನಿಗಿಂತ ಮೊದಲು ಭಾರತಕ್ಕೆ ಆಡಿದ ಪ್ಲೇಯರ್

ಧೋನಿಗಿಂತ ಮೊದಲು ಭಾರತಕ್ಕೆ ಆಡಿದ ಪ್ಲೇಯರ್

ಎಂಎಸ್ ಧೋನಿಗೂ ಮೊದಲು ದಿನೇಶ್‌ ಕಾರ್ತಿಕ್ ಭಾರತ ತಂಡದಲ್ಲಿದ್ದರು ಎಂಬುದನ್ನು ನೆನಪಿನಲ್ಲಿಡಬೇಕು. ಧೋನಿ ನಿವೃತ್ತಿಯಾಗಿ ಎರಡು ವರ್ಷಗಳಾಗಿವೆ. ಆಗಿನಂತೆಯೇ ಈಗಲೂ ಕ್ರಿಕೆಟ್ ಪ್ರೀತಿಸುತ್ತಾರೆ. ಇಷ್ಟು ವರ್ಷಗಳ ನಂತರವೂ ಹಳೆಯ ಶ್ರೇಷ್ಠತೆಯೊಂದಿಗೆ ಮುನ್ನಡೆಯುವುದು ಸುಲಭವಲ್ಲ. ನೀವು ಸ್ಥಿರತೆಯ ಬಗ್ಗೆ ಮಾತನಾಡಿದರೆ, ಕಾರ್ತಿಕ್ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ. ಅವನು ಎದುರಿಸುವ ಚೆಂಡುಗಳ ಸಂಖ್ಯೆಯು ಕಡಿಮೆಯಾಗಿದ್ರೂ ಸಹ ದೊಡ್ಡ ಪರಿಣಾಮವನ್ನು ಬೀರುತ್ತದೆ. ನಾವು ಅದನ್ನು ಐಪಿಎಲ್‌ನಲ್ಲಿ ನೋಡಿದ್ದೇವೆ ಎಂದು ಕಪಿಲ್ ದೇವ್ ಹೇಳಿದ್ದಾರೆ.

ಸಚಿನ್ ಬಳಿಕ ಈತನ ಆಟವನ್ನು ನೋಡಲು ಉತ್ಸುಕತೆಯಿಂದ ಕಾಯುತ್ತಿದ್ದೇನೆ: ಯುವ ಆಟಗಾರನ ಬಗ್ಗೆ ಗವಾಸ್ಕರ್ ಮಾತು

IND vs RSA ಮೂರನೇ ಪಂದ್ಯದಲ್ಲಿ ಏನೆಲ್ಲಾ ವಿಶೇಷತೆಗಳಿದ್ದವು? | OneIndia Kannada
ಕಾರ್ತಿಕ್‌ ಕಾರಣಾಂತರಗಳಿಂದ ತಂಡದಿಂದ ಸ್ಥಾನ ಕಳೆದುಕೊಂಡರು

ಕಾರ್ತಿಕ್‌ ಕಾರಣಾಂತರಗಳಿಂದ ತಂಡದಿಂದ ಸ್ಥಾನ ಕಳೆದುಕೊಂಡರು

ದಿನೇಶ್ ಕಾರ್ತಿಕ್ ಕಾರಣಾಂತರಗಳಿಂದ ಟೀಂ ಇಂಡಿಯಾದಿಂದ ಸ್ಥಾನವನ್ನ ಕಳೆದುಕೊಂಡರು. ಧೋನಿ ಮೈದಾನ ತುಂಬಿದ ನಂತರ ವಿಕೆಟ್ ಕೀಪರ್ ಸ್ಥಾನ ಕಳೆದುಕೊಂಡ ಕಾರ್ತಿಕ್ ಗೆ ನಂತರ ಕಾಯಂ ಸ್ಥಾನ ಸಿಗಲಿಲ್ಲ. ಆಗಾಗ ಬಂದು ಹೋಗುತ್ತಿದ್ದರೂ ಕಾರ್ತಿಕ್ ನಿರ್ಣಾಯಕವಾಗಿರಲಿಲ್ಲ.

ಆದರೆ ಈಗ ಭಾರತ ಕಾರ್ತಿಕ್ ಅವರನ್ನು ಅತ್ಯಂತ ಪ್ರಮುಖವಾಗಿ ನೋಡುತ್ತಿದೆ. ಏಕೆಂದರೆ ಭಾರತದ ಅಗ್ರ ಕ್ರಮಾಂಕದಲ್ಲಿ ಅನೇಕ ಸ್ಥಿರ ಹೆಸರುಗಳಿದ್ದರೂ, ಫಿನಿಶಿಂಗ್ ಪಾತ್ರದಲ್ಲಿ ಅನುಭವಿ ಆಟಗಾರರಿಲ್ಲ. ಎಂಎಸ್ ಧೋನಿಯಿಂದ ತೆರವಾದ ಫಿನಿಶರ್ ಪಾತ್ರಕ್ಕೆ ಕಾರ್ತಿಕ್ ಈಗ ಮರಳುತ್ತಿದ್ದಾರೆ. ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಗಳಲ್ಲಿ ಕಾರ್ತಿಕ್ ಭಾರತ ತಂಡದೊಂದಿಗೆ ಇರಲಿದ್ದಾರೆ. ಸದ್ಯದ ಫಾರ್ಮ್ ಮುಂದುವರಿದರೆ ಕಾರ್ತಿಕ್ ವಿಶ್ವಕಪ್ ಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತ ಎಂದಿದ್ದಾರೆ.

Story first published: Wednesday, June 15, 2022, 9:56 [IST]
Other articles published on Jun 15, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+