ಅಬ್ಬಾ..! ಈತ ಡೇಂಜರಸ್ ಬೌಲರ್: ಅಭ್ಯಾಸದ ವೇಳೆಯಲ್ಲಿ ರೋಹಿತ್ ಶರ್ಮಾ ಉದ್ಗಾರ!

ಭಾರತ ಮತ್ತು ಪಾಕಿಸ್ತಾನ ತಂಡಗಳು ಅಕ್ಟೋಬರ್ 23ರಂದು ಮೆಲ್ಬರ್ನ್‌ನ ಐತಿಹಾಸಿಕ ಎಂಸಿಜಿ ಕ್ರಿಕೆಟ್ ಮೈದಾನದಲ್ಲಿ ಮುಖಾಮುಖಿಯಾಗುತ್ತಿವೆ. ಹೀಗಾಗಿ ಈಗಾಗಲೇ ಪಂದ್ಯ ನಡೆಯುವ ಸ್ಥಳದಲ್ಲಿ ಬೀಡು ಬಿಟ್ಟಿರುವ ಉಭಯ ತಂಡಗಳು ಕಠಿಣ ಅಭ್ಯಾಸದಲ್ಲಿ ತೊಡಗಿಕೊಂಡಿವೆ.
ಟೀಂ ಇಂಡಿಯಾ ಬ್ಯಾಟರ್ಸ್ ಹಾಗೂ ಪ್ರಮುಖ ಬೌಲರ್‌ಗಳು ನೆಟ್ಸ್‌ನಲ್ಲಿ ಶನಿವಾರ ಅಭ್ಯಾಸ ನಡೆಸಿದ್ದಾರೆ. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್, ದಿನೇಶ್ ಕಾರ್ತಿಕ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಕಳೆದ್ರೆ, ಯುಜವೇಂದ್ರ ಚಹಾಲ್, ಮೊಹಮ್ಮದ್ ಶಮಿ ಬೌಲಿಂಗ್ ಮಾಡಿ ಬೆವರು ಸುರಿಸಿದ್ರು.
ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ತನ್ನ A ಗೇಮ್ ಅನ್ನು ಪ್ರದರ್ಶಿಸಲು ಎಲ್ಲಾ ಯೋಜನೆಗಳನ್ನು ರೂಪಿಸಿದೆ. ಸ್ವಲ್ಪ ಯಾಮಾರಿದ್ರೂ ಪಾಕ್ ಪಂದ್ಯದ ಮೇಲೆ ಪ್ರಭಾವ ಬೀರಬಹುದು ಎಂಬುದನ್ನ ನಾಯಕ ರೋಹಿತ್ ಹಾಗೂ ಕೋಚ್ ರಾಹುಲ್ ದ್ರಾವಿಡ್ ಅರಿತಿದ್ದಾರೆ. ಹೀಗಾಗಿಯೇ ಈಗಾಗಲೇ ಪ್ಲೇಯಿಂಗ್ 11 ಅನ್ನು ಫೈನಲ್ ಮಾಡಿರುವ ಹಿಟ್‌ಮ್ಯಾನ್ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ.
ನೆಟ್ ಅಭ್ಯಾಸದ ವೇಳೆಯಲ್ಲಿ ನಾಯಕ ರೋಹಿತ್ ಶರ್ಮಾ ಟೀಂ ಇಂಡಿಯಾ ಬೌಲರ್‌ಗಳ ಜೊತೆಗೆ ನೆಟ್ ಬೌಲರ್‌ಗಳನ್ನು ಎದುರಿಸಿದ್ದಾರೆ. ಈ ವೇಳೆಯಲ್ಲಿ ಅನುಭವಿ ವೇಗಿ ಮೊಹಮ್ಮದ್ ಶಮಿ ಬೌಲಿಂಗ್ ಎದುರಿಸಿ ಸ್ವತಃ ನಾಯಕನೇ ಆಶ್ಚರ್ಯಗೊಂಡಿದ್ದಾನೆ.
ಮೊಹಮ್ಮದ್ ಶಮಿ ಬೌಲಿಂಗ್ ನೋಡಿ ದಂಗಾದ ರೋಹಿತ್ ಶರ್ಮಾ
ಶನಿವಾರ ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ 3 ನಿಮಿಷಗಳ ವೀಡಿಯೋದಲ್ಲಿ ಟೀಂ ಇಂಡಿಯಾ ಆಟಗಾರರು ನೆಟ್ ಅಭ್ಯಾಸ ಮಾಡುತ್ತಿರುವುದನ್ನು ಕಾಣಬಹುದು. ನಾಯಕ ರೋಹಿತ್ ಶರ್ಮಾ, ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಜೊತೆಗೂಡಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ರು.
ಬ್ಯಾಟಿಂಗ್ ಅಭ್ಯಾಸ ವೇಳೆಯಲ್ಲಿ ರೋಹಿತ್ ಶರ್ಮಾ ಮೊಹಮ್ಮದ್ ಶಮಿ ಎಸೆತಗಳನ್ನು ಎದುರಿಸಿದ ಬಳಿಕ ಪಕ್ಕದಲ್ಲಿಯೇ ಇದ್ದ ದಿನೇಶ್ ಕಾರ್ತಿಕ್‌ಗೆ ''ಈತ ನಿಜಕ್ಕೂ ಡೇಂಜರಸ್ ಬೌಲರ್ ಆಗಿದ್ದಾನೆ, ತುಂಬಾನೇ ಅಪಾಯಕಾರಿ'' ಎಂದು ಉದ್ಗಾರ ತೆಗೆದಿದ್ದಾರೆ.
India Vs Pakistan : ಪಾಕಿಸ್ತಾನದ ಬೌಲಿಂಗ್ ಬಗ್ಗೆ ನಾಯಕ ರೋಹಿತ್ ಶರ್ಮಾ ಹೇಳಿದ್ದೇನು ಗೊತ್ತಾ?

ಡೆತ್ ಓವರ್‌ಗಳಲ್ಲಿ ಅತ್ಯಂತ ಕೀ ಬೌಲರ್ ಆಗಿರುವ ಮೊಹಮ್ಮದ್ ಶಮಿ
ಟೀಂ ಇಂಡಿಯಾ ಸದ್ಯ ಡೆತ್ ಓವರ್‌ಗಳಲ್ಲಿ ಸ್ವಲ್ಪ ವೀಕ್ ಇದೇ ಎಂಬುದನ್ನ ಅರಿತಿತ್ತು. ಅದ್ರಲ್ಲೂ ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರಾ ಗಾಯಗೊಂಡು ಹೊರಬಿದ್ದ ಬಳಿಕ ಮೊಹಮ್ಮದ್ ಶಮಿಯನ್ನು ಸ್ಕ್ವಾಡ್‌ಗೆ ಕರೆತರಲಾಗಿದೆ. ಆದ್ರೆ ಶಮಿ ಬಂದಷ್ಟೇ ವೇಗದಲ್ಲಿ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಭದ್ರಪಡಿಸಿಕೊಂಡರು.
ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಮೊಹಮ್ಮದ್ ಶಮಿ ನೇರವಾಗಿ 20ನೇ ಓವರ್ ಬೌಲಿಂಗ್ ಮಾಡಿ ಕೇವಲ 4ರನ್ ನೀಡಿದ್ದಲ್ಲದೆ 1 ರನೌಟ್ ಸೇರಿ ನಾಲ್ಕು ವಿಕೆಟ್ ಉರುಳಿಸಿದ್ರು. ಈ ಮೂಲಕ ನಾಯಕ ರೋಹಿತ್ ಶರ್ಮಾ ತಲೆನೋವಾಗಿದ್ದ ಡೆತ್ ಓವರ್ ಬೌಲಿಂಗ್ ಅನ್ನು ಅನುಭವಿ ಬಲಗೈ ವೇಗಿ ನೀಗಿಸಿದ್ದಾರೆ.
ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಮೊಹಮ್ಮದ್ ಶಮಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯುವುದರಲ್ಲಿ ಅನುಮಾನವಿಲ್ಲ. ಭುವನೇಶ್ವರ್ ಕುಮಾರ್, ಅರ್ಷ್‌ದೀಪ್ ಸಿಂಗ್ ಜೊತೆಯಲ್ಲಿ ಅನುಭವಿ ವೇಗಿ ಮೊಹಮ್ಮದ್ ಶಮಿ ಅವಕಾಶ ಪಡೆದ್ರೆ ಟೀಂ ಇಂಡಿಯಾ ಬೌಲಿಂಗ್ ವಿಭಾಗ ತುಂಬಾನೆ ಬಲಿಷ್ಠವಾಗಿರುವುದು.
Ind vs Pak: ಹೈವೋಲ್ಟೇಜ್ ಪಂದ್ಯದ ಡ್ರೀಂ ಟೀಂ, ಪಿಚ್ ರಿಪೋರ್ಟ್, ಫ್ಯಾಂಟೆಸಿ ಟಿಪ್ಸ್, ಪ್ಲೇಯಿಂಗ್ 11

ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಭಾರತ ಹಾಗೂ ಪಾಕಿಸ್ತಾನ ಸಂಭಾವ್ಯ ಪ್ಲೇಯಿಂಗ್ 11
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ) , ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷ್‌ದೀಪ್ ಸಿಂಗ್, ಮೊಹಮ್ಮದ್ ಶಮಿ/ಹರ್ಷಲ್ ಪಟೇಲ್, ಯುಜವೇಂದ್ರ ಚಹಾಲ್
ಪಾಕಿಸ್ತಾನ: ಮೊಹಮ್ಮದ್ ರಿಜ್ವಾನ್, ಬಾಬರ್ ಅಜಮ್ (ನಾಯಕ), ಫಖಾರ್ ಜಮಾನ್, ಮೊಹಮ್ಮದ್ ನವಾಜ್, ಇಫ್ತಿಕರ್ ಅಹಮದ್, ಶಾನ್ ಮಸೂದ್, ಆಸಿಫ್ ಅಲಿ, ಶದಾಬ್ ಖಾನ್, ಶಾಹಿನ್ ಅಫ್ರಿದಿ, ನಾಸಿರ್ ಷಾ, ಹ್ಯಾರಿಸ್ ರೌಫ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications