For Quick Alerts
ALLOW NOTIFICATIONS  
For Daily Alerts
 

Ind vs Pak: ಹೈವೋಲ್ಟೇಜ್ ಪಂದ್ಯದ ಡ್ರೀಂ ಟೀಂ, ಪಿಚ್ ರಿಪೋರ್ಟ್‌, ಫ್ಯಾಂಟೆಸಿ ಟಿಪ್ಸ್‌, ಪ್ಲೇಯಿಂಗ್ 11

India vs pakistan

ಕ್ರಿಕೆಟ್‌ ಲೋಕದ ಅತ್ಯಂತ ಕುತೂಹಲಕಾರಿ ಹಾಗೂ ಹೈವೋಲ್ಟೇಜ್ ಪಂದ್ಯಕ್ಕೆ ಮೆಲ್ಬರ್ನ್‌ನ ಎಂಸಿಜಿ ಮೈದಾನವು ಸಜ್ಜಾಗಿದೆ. 2021ರ ಟಿ20 ವಿಶ್ವಕಪ್ ಬಳಿಕ ಮಹತ್ವದ ಐಸಿಸಿ ಟ್ರೋಫಿಗಾಗಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಭಾನುವಾರ (ಅ.23) ನಡೆಯಲಿರುವ ದೊಡ್ಡ ಕಾದಾಟಕ್ಕೂ ಮುನ್ನ ಉಭಯ ತಂಡಗಳ ಬಲ ಮತ್ತು ದೌರ್ಬಲ್ಯತೆಯನ್ನ ಲೆಕ್ಕಾಚಾರ ಹಾಕಲಾಗುತ್ತಿದೆ.

ಕಳೆದ ವಿಶ್ವಕಪ್‌ನಲ್ಲಿ ಅನುಭವಿಸಿದ ಕೆಟ್ಟ ಸೋಲಿಗೆ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ರೆಡಿಯಾಗಿದ್ದು, ಏಷ್ಯಾಕಪ್‌ನಲ್ಲಿ ಭಾರತದ ವಿರುದ್ಧ ನೀಡಿದ ಉತ್ತಮ ಪ್ರದರ್ಶನವನ್ನೇ ಮುಂದುವರಿಸಲು ಬಾಬರ್ ಅಜಮ್ ನಾಯಕತ್ವದ ತಂಡವು ಯೋಜನೆ ರೂಪಿಸಿದೆ.

ಭಾರತೀಯ ಕಾಲಮಾನ ಮಧ್ಯಾಹ್ನ 1.30ಕ್ಕೆ ಪ್ರಾರಂಭಗೊಳ್ಳಲಿರುವ ಸಾಂಪ್ರದಾಯಿಕ ಎದುರಾಳಿಯ ಮುಖಾಮುಖಿಗೆ ಐತಿಹಾಸಿಕ ಎಂಸಿಜಿ ಮೈದಾನ ಸಾಕ್ಷಿಯಾಗಲಿದ್ದು, ಹವಾಮಾನ, ಸಂಭಾವ್ಯ ಪ್ಲೇಯಿಂಗ್ 11, ಡ್ರೀಂ 11 ಟೀಂ, ಫ್ಯಾಂಟೆಸಿ ಕ್ರಿಕೆಟ್ ಟಿಪ್ಸ್‌ ಈ ಕೆಳಗೆ ಕಾಣಬಹುದು.

ಹವಾಮಾನ ವರದಿ

ಹವಾಮಾನ ವರದಿ

ಅಕ್ಟೋಬರ್ 23ರಂದು ಭಾನುವಾರ ಭಾರತ-ಪಾಕಿಸ್ತಾನ ಪಂದ್ಯ ನಡೆಯುವ ಮೆಲ್ಬರ್ನ್‌ನ ಎಂಸಿಜಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಳೆಯ ಕಾಟ ಎದುರಾಗುವ ಸಂಭವವಿದೆ. ಪಂದ್ಯದ ದಿನದಂದು ಶೇಕಡಾ 80ರಷ್ಟು ಮಳೆ ಬರುವ ಸಾಧ್ಯತೆ ಹೆಚ್ಚಿದೆ. ಹ್ಯುಮಿಡಿಟಿ ಶೇಕಡಾ 83ರಷ್ಟಿರಲಿದ್ದು, ಗಾಳಿಯು 19/km ವೇಗದಲ್ಲಿ ಬೀಸಲಿದೆ.

ಶನಿವಾರ ಅಂದ್ರೆ ಪಂದ್ಯದ ಹಿಂದಿನ ದಿನ 100ಕ್ಕೆ ಶೇಕಡಾ 99ರಷ್ಟು ಮಳೆ ಬರುವ ಸಾಧ್ಯತೆಯಿರುವುದರಿಂದ ಪಿಚ್ ಔಟ್‌ಫೀಲ್ಡ್ ತೇವಾಂಶದಿಂದ ಕೂಡಿರುವುದರಲ್ಲಿ ಅನುಮಾನವಿಲ್ಲ. ಇದಷ್ಟೇ ಅಲ್ಲದೆ ಎಂಸಿಜಿಯಲ್ಲಿ ಅಕ್ಟೋಬರ್ 24, 25ರಂದು ಕೂಡ ಮಳೆ ಬರುವ ವರದಿ ಬಿತ್ತರವಾಗಿದೆ. ಇದ್ರಿಂದ ಕ್ರಿಕೆಟ್ ಅಭಿಮಾನಿಗಳು ಭಾರತ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ಎಷ್ಟು ಓವರ್‌ಗಳನ್ನ ವೀಕ್ಷಿಸಲು ಸಾಧ್ಯವಿದೆ ಎಂಬುದು ತಿಳಿದುಬರಲಿದೆ.

ಪಿಚ್ ರಿಪೋರ್ಟ್‌

ಪಿಚ್ ರಿಪೋರ್ಟ್‌

ಮೆಲ್ಬರ್ನ್ ಎಂಸಿಜಿ ಕ್ರಿಕೆಟ್ ಮೈದಾನವು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಸಮನಾಗಿ ನೆರವಾಗಿದ್ದನ್ನು ನಾವು ಕಂಡಿದ್ದೇವೆ. ಅದ್ರಲ್ಲೂ ಪೇಸರ್‌ಗಳು ಪಂದ್ಯದ ಆರಂಭದಲ್ಲಿ ಉತ್ತಮ ಬೌನ್ಸ್‌ ಸಹ ಕಾಣಬಹುದು. ಹಿಂದಿನ ಟ್ರ್ಯಾಕ್‌ ರೆಕಾರ್ಡ್‌ ನೋಡುವುದಾದ್ರೆ ಈ ಪಿಚ್‌ ಸ್ಪಿನ್ನರ್‌ಗಳಿಗೆ ನೆರವಾಗುವುದು ತುಂಬಾ ಕಡಿಮೆ.

ಇನ್ನು ಈ ಪಿಚ್‌ನಲ್ಲಿ ಮೊದಲ ಇನ್ನಿಂಗ್ಸ್‌ ಸ್ಕೋರ್ 150 ರನ್‌ಗಳಷ್ಟಿದ್ದು, ಎರಡನೇ ಬಾರಿಗೆ ಬ್ಯಾಟಿಂಗ್ ಮಾಡುವ ತಂಡವು ಉತ್ತಮ ದಾಖಲೆಯನ್ನು ಹೊಂದಿದ್ದು, ಶೇಕಡಾ 60ರಷ್ಟು ಗೆಲುವಿನ ಸರಾಸರಿಯನ್ನು ಹೊಂದಿವೆ.

India Vs Pakistan : ಪಾಕಿಸ್ತಾನದ ಬೌಲಿಂಗ್ ಬಗ್ಗೆ ನಾಯಕ ರೋಹಿತ್ ಶರ್ಮಾ ಹೇಳಿದ್ದೇನು ಗೊತ್ತಾ?

ಭಾರತ ಮತ್ತು ಪಾಕ್ ಸಂಭಾವ್ಯ ಪ್ಲೇಯಿಂಗ್ 11

ಭಾರತ ಮತ್ತು ಪಾಕ್ ಸಂಭಾವ್ಯ ಪ್ಲೇಯಿಂಗ್ 11

ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ) , ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷ್‌ದೀಪ್ ಸಿಂಗ್, ಮೊಹಮ್ಮದ್ ಶಮಿ/ಹರ್ಷಲ್ ಪಟೇಲ್, ಯುಜವೇಂದ್ರ ಚಹಾಲ್

ಪಾಕಿಸ್ತಾನ: ಮೊಹಮ್ಮದ್ ರಿಜ್ವಾನ್, ಬಾಬರ್ ಅಜಮ್ (ನಾಯಕ), ಫಖಾರ್ ಜಮಾನ್, ಮೊಹಮ್ಮದ್ ನವಾಜ್, ಇಫ್ತಿಕರ್ ಅಹಮದ್, ಶಾನ್ ಮಸೂದ್, ಆಸಿಫ್ ಅಲಿ, ಶದಾಬ್ ಖಾನ್, ಶಾಹಿನ್ ಅಫ್ರಿದಿ, ನಾಸಿರ್ ಷಾ, ಹ್ಯಾರಿಸ್ ರೌಫ್

India vs Pakistan: ಮೆಲ್ಬೋರ್ನ್ ಪಿಚ್‌ ಮೇಲೆ ಕೋಚ್ ರಾಹುಲ್ ದ್ರಾವಿಡ್ ರಣತಂತ್ರ

ಡ್ರೀಂ ಇಲೆವೆನ್ ಫ್ಯಾಂಟೆಸಿ ಟೀಂ 1

ಡ್ರೀಂ ಇಲೆವೆನ್ ಫ್ಯಾಂಟೆಸಿ ಟೀಂ 1

ಡ್ರೀಂ ಇಲೆವೆನ್ ಫ್ಯಾಂಟೆಸಿ ತಂಡವನ್ನು ಈ ಕೆಳಗೆ ನೀವು ಕಾಣಬಹುದಾಗಿದೆ.
ನಾಯಕ: ಹಾರ್ದಿಕ್ ಪಾಂಡ್ಯ, ವಿರಾಟ್ ಕೊಹ್ಲಿ

ಉಪನಾಯಕ: ಬಾಬರ್ ಅಜಮ್, ಮೊಹಮ್ಮದ್ ನವಾಜ್

ವಿಕೆಟ್ ಕೀಪರ್: ಮೊಹಮ್ಮದ್ ರಿಜ್ವಾನ್

ಬ್ಯಾಟ್ಸ್‌ಮನ್: ವಿರಾಟ್ ಕೊಹ್ಲಿ (ಉಪನಾಯಕ), ಸೂರ್ಯಕುಮಾರ್ ಯಾದವ್, ಬಾಬರ್ ಅಜಮ್

ಆಲ್‌ರೌಂಡರ್ಸ್‌: ಹಾರ್ದಿಕ್ ಪಾಂಡ್ಯ(ನಾಯಕ) , ಶದಾಬ್ ಖಾನ್, ಮೊಹಮ್ಮದ್ ನವಾಜ್

ಬೌಲರ್ಸ್: ಮೊಹಮ್ಮದ್ ಶಮಿ, ಶಾಹಿನ್ ಅಫ್ರಿದಿ, ಹ್ಯಾರಿಸ್ ರೌಫ್, ನಾಸಿಮ್ ಷಾ

Ind Vs Pak: ಪಾಕ್ ವಿರುದ್ಧ ಈ ಬೌಲರ್ ಆಡುವುದು ಪಕ್ಕಾ, ಈ ಆಲ್‌ರೌಂಡರ್ ಸ್ಥಾನಕ್ಕೆ ಕಂಟಕ

ಡ್ರೀಂ ಇಲೆವೆನ್ ಫ್ಯಾಂಟೆಸಿ ಟೀಂ 2

ಡ್ರೀಂ ಇಲೆವೆನ್ ಫ್ಯಾಂಟೆಸಿ ಟೀಂ 2

ವಿಕೆಟ್ ಕೀಪರ್: ಮೊಹಮ್ಮದ್ ರಿಜ್ವಾನ್
ಬ್ಯಾಟ್ಸ್‌ಮನ್: ವಿರಾಟ್ ಕೊಹ್ಲಿ (ನಾಯಕ), ಸೂರ್ಯಕುಮಾರ್ ಯಾದವ್, ಬಾಬರ್ ಅಜಮ್ (ಉಪನಾಯಕ)
ಆಲ್‌ರೌಂಡರ್ಸ್: ಹಾರ್ದಿಕ್ ಪಾಂಡ್ಯ, ಶದಾಬ್ ಖಾನ್, ಮೊಹಮ್ಮದ್ ನವಾಜ್, ಅಕ್ಷರ್ ಪಟೇಲ್
ಬೌಲರ್ಸ್: ಮೊಹಮ್ಮದ್ ಶಮಿ, ಶಾಹಿನ್ ಅಫ್ರಿದಿ, ಹ್ಯಾರಿಸ್ ರೌಫ್‌

ಹಾರ್ದಿಕ್ ಪಾಂಡ್ಯ ಉತ್ತಮ ಫಾರ್ಮ್‌ನಲ್ಲಿದ್ದು ನಾಯಕನಾಗಿ ಆಯ್ಕೆ ಮಾಡುವುದು ಉತ್ತಮವಾಗಿದೆ. ಹಾಗೆಯೇ ವಿರಾಟ್ ಕೊಹ್ಲಿ ಕೂಡ ನಾಯಕನಾಗಿ ಆಯ್ಕೆ ಮಾಡಬಹುದು.

Story first published: Saturday, October 22, 2022, 14:37 [IST]
Other articles published on Oct 22, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+