For Quick Alerts
ALLOW NOTIFICATIONS  
For Daily Alerts
 

ಭಾರತದ ಟಿ20 ಪ್ಲೇಯಿಂಗ್ ಇಲೆವೆನ್‌ನಲ್ಲಿ ಕೊಹ್ಲಿ ಇರುವುದಿಲ್ಲ: ಅಜಯ್ ಜಡೇಜಾ

Ajay jadeja vs kohli

ಟೀಂ ಇಂಡಿಯಾ ಮತ್ತಷ್ಟು ಅಗ್ರೆಸ್ಸಿವ್‌ ಆಗಿ ಟಿ20 ಕ್ರಿಕೆಟ್ ಆಡಬೇಕಾಗಿದ್ದು, ನನ್ನ ಭಾರತದ ಪ್ಲೇಯಿಂಗ್ ಇಲೆವೆನ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಗೆ ಸ್ಥಾನವಿಲ್ಲ ಎಂದು ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಹೇಳಿದ್ದಾರೆ.

ಮುಂಬರುವ ವಿಶ್ವಕಪ್ ದೃಷ್ಟಿಯಿಂದ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ವಿರಾಟ್ ಕೊಹ್ಲಿ ತಂಡಕ್ಕೆ ಹೊಂದಾಣಿಕೆಯಾಗುತ್ತಾರ ಅಥವಾ ಇಲ್ಲವೇ ಎಂಬುದನ್ನ ನಿರ್ಧರಿಸಬೇಕಿದೆ ಎಂದು ಹೇಳಿದ್ದಾರೆ. ಟಿ20 ಕ್ರಿಕೆಟ್‌ ಫಾರ್ಮೆಟ್‌ಗೆ ನಾಯಕ ಮತ್ತು ಮ್ಯಾನೇಜ್‌ಮೆಂಟ್‌ ವಿರಾಟ್ ಕೊಹ್ಲಿ ಫಾರ್ಮ್ ದೊಡ್ಡ ತಲೆನೋವಾಗಿದ್ದು, ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ ಎಂಬುದು ಜಡೇಜಾ ಅಭಿಪ್ರಾಯವಾಗಿದೆ.

ದೀಪಕ್ ಹೂಡ ಬಿಟ್ಟು ,ಕೊಹ್ಲಿ ಸೇರಿಸಿಕೊಂಡಿದ್ದಕ್ಕೆ ಜಡೇಜಾ ಅಸಮಾಧಾನ

ದೀಪಕ್ ಹೂಡ ಬಿಟ್ಟು ,ಕೊಹ್ಲಿ ಸೇರಿಸಿಕೊಂಡಿದ್ದಕ್ಕೆ ಜಡೇಜಾ ಅಸಮಾಧಾನ

ಎಡ್ಜ್‌ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 49ರನ್‌ಗಳ ಅಮೋಘ ಗೆಲುವು ದಾಖಲಿಸಿತು. ಈ ಮೂಲಕ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಂಡಿದೆ. ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ರವೀಂದ್ರ ಜಡೇಜಾ, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ, ವಿರಾಟ್ ಕೊಹ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದರು.

ಆದ್ರೆ ಈ ಎಲ್ಲಾ ಆಟಗಾರರ ಕುರಿತಾಗಿ ಓಕೆ ಎಂದಿರುವ ಜಡೇಜಾ, ದೀಪಕ್ ಹೂಡಾ ಬದಲು ವಿರಾಟ್ ಕೊಹ್ಲಿಯನ್ನು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸೇರಿಸಿಕೊಳ್ಳುವುದು ಎಷ್ಟು ಸರಿ ಎಂಬಂತೆ ಪ್ರಶ್ನಿಸಿದ್ದಾರೆ. ರಿಷಭ್ ಪಂತ್ ಮತ್ತು ವಿರಾಟ್‌ ಕೊಹ್ಲಿ ಪವರ್ ಪ್ಲೇ ಓವರ್‌ಗಳಲ್ಲಿ ಉತ್ತಮ ಆರಂಭ ನೀಡಿದ್ದರು. ಆದ್ರೆ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಮೂರು ಎಸೆತಗಳನ್ನ ಎದುರಿಸಿ ಕೇವಲ 1ರನ್‌ಗೆ ವಿಕೆಟ್‌ ಒಪ್ಪಿಸಿದ್ರು.

ಮತ್ತೊಮ್ಮೆ ಕೆಟ್ಟದಾಗಿ ಔಟಾದ ವಿರಾಟ್ ಕೊಹ್ಲಿ: ಇನ್ನೆಷ್ಟು ಚಾನ್ಸ್ ಕೊಡಬೇಕು ಎಂದ ನೆಟ್ಟಿಗರು!

ಆಟವು ಬದಲಾಗಿದೆ, ಅದಕ್ಕೆ ತಕ್ಕಂತೆ ಬದಲಾಗಬೇಕು

ಆಟವು ಬದಲಾಗಿದೆ, ಅದಕ್ಕೆ ತಕ್ಕಂತೆ ಬದಲಾಗಬೇಕು

''ಟಿ20 ಕ್ರಿಕೆಟ್ ಸಾಕಷ್ಟು ಬದಲಾಗಿದೆ. ನೀವು ಇನ್ನೂ ಸುಮಾರು 180 ರಿಂದ 200 ಸ್ಕೋರ್ ಮಾಡುತ್ತಿದ್ದೀರಿ. ಆದ್ರೆ ಮುಂದಿನ ದಿನಗಳಲ್ಲಿ ನೀವು ಹೇಗೆ ಆಡಲು ಬಯಸುತ್ತೀರಿ ಎಂಬುದರ ಆಯ್ಕೆಯನ್ನು ನೀವು ಹೊಂದಿದ್ದೀರಿ. ರೋಹಿತ್ ಶರ್ಮಾ ಆ ಕರೆಯನ್ನು ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ, "ಜಡೇಜಾ ಸೋನಿ ಸ್ಪೋರ್ಟ್ಸ್‌ಗೆ ತಿಳಿಸಿದರು.

"ತಂಡವನ್ನು ಮುನ್ನಡೆಸುವ ಯಾರಿಗಾದರೂ ಕೇವಲ ಎರಡು ಆಯ್ಕೆಗಳಿವೆ ಎಂದು ನಾನು ಭಾವಿಸುತ್ತೇನೆ. ಅದು ನಾನು ನೋಡುವ ರೀತಿ. ಒಂದೋ ನೀವು ಆಡುತ್ತಿರುವ ರೀತಿಗೆ ಅಂಟಿಕೊಳ್ಳಿ, ಯುವಕರಿಗೆ ಅವಕಾಶಗಳನ್ನು ನೀಡಿ ಅಥವಾ ನೀವು ಅವಕಾಶಗಳನ್ನು ನೀಡಲು ಪ್ರಯತ್ನಿಸುವ ಮೊದಲು ಆಡಿದ ನಿಮ್ಮ ಹಳೆಯ ತಂಡಕ್ಕೆ ಹಿಂತಿರುಗಿ, "ಎಂದು ಅವರು ಹೇಳಿದರು.

ರಿಕಿ ಪಾಂಟಿಂಗ್ ವಿಶ್ವದಾಖಲೆ ಸರಿಗಟ್ಟಲು, ರೋಹಿತ್‌ಗೆ ಇನ್ನೊಂದೇ ಹೆಜ್ಜೆ

Dhoni Ind vs Eng ಪಂದ್ಯ ಮುಗಿದಾಗ ನಂತರ ಡ್ರೆಸ್ಸಿಂಗ್ ರೂಮ್‌‌ಗೆ ಭೇಟಿ ನೀಡಿದರು | *Cricket | OneIndia Kannada
ವಿರಾಟ್ ಕೊಹ್ಲಿ ನನ್ನ ಭಾರತದ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಇಲ್ಲ ಎಂದ ಜಡೇಜಾ

ವಿರಾಟ್ ಕೊಹ್ಲಿ ನನ್ನ ಭಾರತದ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಇಲ್ಲ ಎಂದ ಜಡೇಜಾ

ಭಾರತದ ಭವಿಷ್ಯದ ಟಿ20 ತಂಡದಲ್ಲಿ ವಿರಾಟ್ ಕೊಹ್ಲಿ ನನ್ನ ಪ್ಲೇಯಿಂಗ್ ಇಲೆವೆನ್‌ನಲ್ಲಿ ಇರಲಾರರು ಎಂದು ಜಡೇಜಾ ಇದೇ ವೇಳೆಯಲ್ಲಿ ಹೇಳಿದ್ದಾರೆ.

''ವಿರಾಟ್ ವಿಶೇಷ ಆಟಗಾರನಾಗಿದ್ದು, ಆತ ವಿರಾಟ್ ಕೊಹ್ಲಿ ಆಗಿಲ್ಲದಿದ್ರೆ, ಟೆಸ್ಟ್‌ ಕ್ರಿಕೆಟ್ ಆಡುತ್ತಿರಲಿಲ್ಲ'' ಎಂದು ಎಂದು ಮಾತಿಗೆ ಸೇರಿಸಿದ್ದಾರೆ. ಇದರರ್ಥ ಟೀಂ ಇಂಡಿಯಾದಲ್ಲೇ ಇರುತ್ತಿಲ್ಲ ಎಂದಿದ್ದಾರೆ.

ಕಳೆದ 8, 10 ಪಂದ್ಯಗಳನ್ನು ನೋಡಿದ್ರೆ ವಿರಾಟ್ ಕೊಹ್ಲಿ ಎಲ್ಲಿಯೂ ಶತಕವನ್ನು ಸಿಡಿಸಿಲ್ಲ. ಆದ್ರೂ ಕೂಡ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಇದಕ್ಕೆ ಕಾರಣ ಆತ ಕೇವಲ ಶತಕ ಸಿಡಿಸಿಲ್ಲ ಎಂಬರ್ಥವಲ್ಲ, ಬದಲು ಆತನ ಹಿಂದೆ ತಂಡಕ್ಕೆ ಏನೆಲ್ಲಾ ಮಾಡಿದ್ದಾನೆ'' ಎಂದು ಜಡೇಜಾ ಹೇಳಿದ್ದಾರೆ.

ಇಂಗ್ಲೆಂಡ್ ನೆಲದಲ್ಲಿ ಭುವಿ ಯಶಸ್ಸಿನ ಗುಟ್ಟೇನು?: ಬಹಿರಂಗಪಡಿಸಿದ ಭಾರತದ ವೇಗಿ

Story first published: Sunday, July 10, 2022, 17:35 [IST]
Other articles published on Jul 10, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+