ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ನೆಲದಲ್ಲಿ ಭುವಿ ಯಶಸ್ಸಿನ ಗುಟ್ಟೇನು?: ಬಹಿರಂಗಪಡಿಸಿದ ಭಾರತದ ವೇಗಿ

India vs England: Bhuvneshwar Kumar reveals how he get success in England Condition

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಎರಡು ಪಂದ್ಯದಲ್ಲಿಯೂ ಭಾರತದ ಪರವಾಗಿ ಅಮೋಘ ಪ್ರದರ್ಶನ ನೀಡಿದ ಆಟಗಾರ ಭುವನೇಶ್ವರ್ ಕುಮಾರ್. ಬೌಲಿಂಗ್‌ನಲ್ಲಿ ಆರಂಭದಲ್ಲಿಯೇ ಪ್ರಮುಖ ಆಟಗಾರರ ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಮುನ್ನಡೆ ಒದಗಿಸುವಲ್ಲಿ ಭುವಿ ಯಶಸ್ವಿಯಾಗಿದ್ದಾರೆ. ಇಂಗ್ಲೆಂಡ್ ಪಿಚ್‌ಅನ್ನು ಅದ್ಭುತವಾಗಿ ಬಳಸಿಕೊಳ್ಳುವಲ್ಲಿ ಭುವಿ ಯಶಸ್ವಿಯಾಗಿದ್ದು ಇದರ ಲಾಭ ನೇರವಾಗಿ ಭಾರತ ತಂಡಕ್ಕೆ ದೊರೆತಿದೆ.

ಇನ್ನು ಈ ಸಂದರ್ಭದಲ್ಲಿ ಭುವನೇಶ್ವರ್ ಕುಮಾರ್ ಇಂಗ್ಲೆಂಡ್ ನೆಲದಲ್ಲಿ ತಾನು ಯಶಸ್ಸು ಸಾಧಿಸಲು ಸಾಧ್ಯವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಯಾವ ರೀತಿಯ ರಣತಂತ್ರದೊಂದಿಗೆ ಕಣಕ್ಕಿಳಿದಿದ್ಏನೆ ಎಂಬುದನ್ನು ಸ್ವತಃ ಭುವಿ ಹಂಚಿಕೊಂಡಿದ್ದಾರೆ. ಆದ ಕಾರಣದಿಂದಾಯಿಯೇ ಈ ಮಟ್ಟಿಗೆ ಯಶಸ್ಸು ಸಾಧ್ಯವಾಗಿದೆ ಎಂಬ ಅಂಶವನ್ನು ಕೂಡ ಭಾರತದ ವೇಗಿ ಹೇಳಿಕೊಂಡಿದ್ದಾರೆ.

IND vs ENG: 1 ರನ್ ಗಳಿಸಿ ಕಳಪೆಯಾದ ಕೊಹ್ಲಿ 3ನೇ ಟಿ20ಯಿಂದ ಔಟ್? ಕೊಹ್ಲಿ ಕೊಟ್ಟ ಉತ್ತರವಿದುIND vs ENG: 1 ರನ್ ಗಳಿಸಿ ಕಳಪೆಯಾದ ಕೊಹ್ಲಿ 3ನೇ ಟಿ20ಯಿಂದ ಔಟ್? ಕೊಹ್ಲಿ ಕೊಟ್ಟ ಉತ್ತರವಿದು

ಈ ಹಿಂದೆ ದೊಡ್ಡ ಯಶಸ್ಸು ಸಾಧಿಸಿರಲಿಲ್ಲ ಭುವಿ

ಈ ಹಿಂದೆ ದೊಡ್ಡ ಯಶಸ್ಸು ಸಾಧಿಸಿರಲಿಲ್ಲ ಭುವಿ

ಈ ಬಾರಿಯ ಇಂಗ್ಲೆಂಡ್ ಪ್ರವಾಸದಲ್ಲಿ ಭುವನೇಶ್ವರ್ ಕುಮಾರ್ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿದ್ದಾರೆ. ಎರಡನೇ ಪಂದ್ಯದ ಮೊದಲ ಎಸೆತದಲ್ಲಿಯೇ ಆರಂಭಿಕ ಆಟಗಾರ ಜೇಸನ್ ರಾಯ್ ವಿಕೆಟ್ ಪಡೆದಿದ್ದರು. ಇನ್ನು ಜೊಸ್ ಬಟ್ಲರ್ ಅವರನ್ನು ಸತತ ಎರಡು ಪಂದ್ಯದಲ್ಲಿಯೂ ಅಗ್ಗಕ್ಕೆ ಫೆವಿಲಿಯನ್‌ಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ ಭುವಿ. ಆದರೆ ಇದಕ್ಕೂ ಹಿಂದಿನ ಇಂಗ್ಲೆಂಡ್ ಪ್ರವಾಸಗಳಲ್ಲಿ ಭುವನೇಶ್ವರ್ ಕುಮಾರ್ ಹೇಳಿಕೊಳ್ಳುವಂತಾ ಯಶಸ್ಸು ಸಾಧಿಸಿರಲಿಲ್ಲ ಎಂಬುದು ಗಮನಾರ್ಹ. ಆದರೆ ಈ ಬಾರಿ ಹೆಚ್ಚಿನ ಸ್ವಿಂಗ್ ದೊರೆಯುತ್ತಿರುವ ಕಾರಣ ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿರುವುದಾಗಿ ಭುವಿ ಹೇಳಿದ್ದಾರೆ.

ಇಷ್ಟು ಸ್ವಿಂಗ್ ಆಗುತ್ತಿರಲಿಲ್ಲ

ಇಷ್ಟು ಸ್ವಿಂಗ್ ಆಗುತ್ತಿರಲಿಲ್ಲ

"ನಿಜ ಹೇಳಬೇಕೆಂದರೆ ಇದು ನನಗೂ ಗೊತ್ತಿಲ್ಲ. ಇಂಗ್ಲೆಂಡ್‌ಗೆ ಇದಕ್ಕೂ ಮುನ್ನ ಹಲವು ಬಾರಿ ಬಂದಿದ್ದರೂ ಕಳೆದ ಕೆಲ ಸರಣಿಗಳಲ್ಲಿ ಹೆಚ್ಚು ಸ್ವಿಂಗ್ ಆಗುತ್ತಿರಲಿಲ್ಲ. ಈಗ ಸ್ವಿಂಗ್ ಆಗುತ್ತಿರುವುದನ್ನು ನೋಡಿ ನಾನು ಕುಡ ಅಚ್ಚರಿಪಟ್ಟಿದ್ದೇನೆ. ಅದು ಕೂಡ ಹೆಚ್ಚು ಕಾಲ ಸ್ವಿಂಗ್ ಆಗುತ್ತಿದೆ. ವಿಶೇಷವಾಗಿ ಟಿ20 ಮಾದರಿಯಲ್ಲಿ, ಇನ್ನು ಪಿಚ್ ಕುಡ ಹೆಚ್ಚು ಬೌನ್ಸ್ ಆಗುತ್ತಿದೆ. ಚೆಂಡು ಹೆಚ್ಚಾಗಿ ಸ್ವಿಂಗ್ ಆಗುತ್ತಿದ್ದರೆ ನೀವು ಹೆಚ್ಚು ಬೌಲಿಂಗ್‌ಅನ್ನು ಆನಂದಿಸುತ್ತೀರಿ" ಎಂದಿದ್ದಾರೆ ವೇಗಿ ಭುವನೇಶ್ವರ್ ಕುಮಾರ್.

ಸ್ವಿಂಗ್ ಆಗುತ್ತಿರುವ ಕಾರಣ ಆಕ್ರಮಣಕಾರಿ ಆಟ

ಸ್ವಿಂಗ್ ಆಗುತ್ತಿರುವ ಕಾರಣ ಆಕ್ರಮಣಕಾರಿ ಆಟ

ಮುಂದುವರಿದು ಮಾತನಾಡಿದ ಭುವನೇಶ್ವರ್ ಕುಮಾರ್ "ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಸ್ವಿಂಗ್ ಮಾಡುತ್ತಿದ್ದೇನಾ, ಅಥವಾ ವಾತಾವರಣದ ಕಾರಣಕ್ಕಾಗಿ ಆಗುತ್ತಿದೆಯಾ ಅಥವಾ ಚೆಂಡಿನ ಕಾರಣದಿಂದಾಗಿ ಆಗುತ್ತಿದೆಯಾ ಎಂಬುದು ಗೊತ್ತಿಲ್ಲ. ಆದರೆ ಚೆಂಡು ಸ್ವಿಂಗ್ ಆಗುತ್ತಿದೆ ಎಂದರೆ ಅದು ನನ್ನ ಸಾಮರ್ಥ್ಯ. ಅದನ್ನು ನಾನು ಬಳಸಿಕೊಳ್ಳಲು ಪ್ರಯತ್ನಿಸುತ್ತೇನೆ. ಹಾಗಾಗಿ ಆಕ್ರಮಣಕಾರಿ ಆಟಕ್ಕೆ ಮುಮದಾಗುತ್ತೇನೆ. ಎರಡು ಪಂದ್ಯದಲ್ಲಿಯೂ ಚೆಂಡು ಉತ್ತಮವಾಗಿ ಸ್ವಿಂಗ್ ಆಗಲು ಆರಂಬಿಸಿತ್ತು. ನಾನು ಆಕ್ರಮಣಕಾರಿ ಆಡಲು ಮುಂದಾದೆ. ಹೀಗಾಗಿ ವಿಕೆಟ್ ಪಡೆಯಲು ಸಾಧ್ಯವಾಯಿತು" ಎಂದಿದ್ದಾರೆ ಭುವನೇಶ್ವರ್ ಕುಮಾರ್.

ವೈಟ್‌ವಾಶ್ ಮೇಲೆ ಭಾರತದ ಚಿತ್ತ

ವೈಟ್‌ವಾಶ್ ಮೇಲೆ ಭಾರತದ ಚಿತ್ತ

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಎರಡು ಪಂದ್ಯದಲ್ಲಿಯೂ ಭಾರತ ಅದ್ಭುತ ಪ್ರದರ್ಶನ ನೀಡುವ ಮೂಲಕ ಸರಣಿಯನ್ನು ಈಗಾಗಲೇ ವಶಕ್ಕೆ ಪಡೆದುಕೊಂಡಿದೆ. ಅಂತಿಮ ಪಂದ್ಯ ಭಾನುವಾರ ನಡೆಯಲಿದ್ದು ಈ ಪಂದ್ಯವನ್ನು ಕೂಡ ಗೆಲ್ಲುವ ಮೂಲಕ ಭಾರತ 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿ ಸರಣಿಯನ್ನು ವಶಕ್ಕೆ ಪಡೆಯುವಹುಮ್ಮಸ್ಸಿನಲ್ಲಿದೆ. ಭಾರತದ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗ ಅದ್ಭುತ ಫಾರ್ಮ್‌ನಲ್ಲಿರುವ ಕಾರಣ ತಂಡದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ.

ಸ್ಕ್ವಾಡ್‌ಗಳು ಹೀಗಿದೆ:
ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್ (ನಾಯಕ & ವಿಕೆಟ್ ಕೀಪರ್), ಜೇಸನ್ ರಾಯ್, ಡೇವಿಡ್ ಮಲನ್, ಲಿಯಾಮ್ ಲಿವಿಂಗ್‌ಸ್ಟನ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಸ್ಯಾಮ್ ಕರ್ರಾನ್, ಡೇವಿಡ್ ವಿಲ್ಲಿ, ಕ್ರಿಸ್ ಜೋರ್ಡಾನ್, ರಿಚರ್ಡ್ ಗ್ಲೀಸನ್, ಮ್ಯಾಥ್ಯೂ ಪಾರ್ಕಿನ್ಸನ್, ರೀಸ್ ಟೋಪ್ಲಿ, ಟೈಮಲ್ ಮಿಲ್ಸ್, ಫಿಲಿಪ್ ಸಾಲ್ಟ್

ವಿರಾಟ್ ಕೊಹ್ಲಿ ಎರಡನೇ ಪಂದ್ಯದಲ್ಲೂ 1 ರನ್ ಗಳಿಸಿ ಔಟಾದರು | OneIndia Kannada

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಾಹಲ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಅಕ್ಷರ್ ಪಟೇಲ್, ಅವೇಶ್ ಖಾನ್, ರವಿ ಬಿಷ್ಣೋಯ್, ಉಮ್ರಾನ್ ಮಲಿಕ್

Story first published: Sunday, July 10, 2022, 16:51 [IST]
Other articles published on Jul 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X