ICC ಮಹಿಳಾ ವಿಶ್ವಕಪ್ 2022: ಗೆದ್ದವರಿಗೆ ಎಷ್ಟು ಹಣ? ಸೋತವರಿಗೆ ಎಷ್ಟು ಸಿಗಲಿದೆ?

ಐಸಿಸಿ ಮಹಿಳಾ ವಿಶ್ವಕಪ್ 2022ರ ಟೂರ್ನಿಗೆ ನಾಳೆ ಅಧಿಕೃತವಾಗಿ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ಮಹಿಳಾ ತಂಡಗಳು ಮುಖಾಮುಖಿಯಾಗಲಿವೆ.
ಇನ್ನು ಭಾರತ ಮಹಿಳಾ ಕ್ರಿಕೆಟ್ ತಂಡವು ಮಾರ್ಚ್ 6, 2022 ರಂದು ನ್ಯೂಜಿಲೆಂಡ್‌ನ ಟೌರಂಗಸ್ ಬೇ ಓವಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ತನ್ನ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ. ಹಿರಿಯ ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ನೇತೃತ್ವದಲ್ಲಿ ಮುನ್ನಡೆಯಲಿರುವ ಭಾರತ ಮಹಿಳಾ ತಂಡವು ಕಳೆದ ಬಾರಿ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲನ್ನ ಕಂಡಿತ್ತು.

31 ಪಂದ್ಯಗಳು ನಡೆಯುವ ಮಹಾ ಟೂರ್ನಿ
ಮಾರ್ಚ್ 4 ರಿಂದ ಏಪ್ರಿಲ್ 3 ರವರೆಗೆ 6 ಸ್ಥಳಗಳಲ್ಲಿ ಒಟ್ಟು 31 ಪಂದ್ಯಗಳು ನಡೆಯಲಿವೆ. ಮೌಂಟ್ ಮಂಗಾನಿಯಾ (ಬೇ ಓವಲ್), ಡ್ಯುನೆಡಿನ್ (ಯೂನಿವರ್ಸಿಟಿ ಓವಲ್), ಹ್ಯಾಮಿಲ್ಟನ್ (ಸೆಡಾನ್ ಪಾರ್ಕ್), ವೆಲ್ಲಿಂಗ್ಟನ್ (ಬೇಸಿನ್ ರಿಸರ್ವ್), ಆಕ್ಲೆಂಡ್ (ಈಡನ್ ಪಾರ್ಕ್), ಕ್ರೈಸ್ಟ್‌ಚರ್ಚ್ (ಹ್ಯಾಗ್ಲಿ ಓವಲ್) ಮೆಗಾ ಟೂರ್ನಿಯ ಸ್ಥಳಗಳಾಗಿವೆ. ಅಂತಿಮ ಪಂದ್ಯ ಏಪ್ರಿಲ್ 3 ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ. ಮಹಿಳಾ ಏಕದಿನ ವಿಶ್ವಕಪ್ ಇದುವರೆಗೆ 11 ಬಾರಿ ನಡೆದಿದ್ದು, ಆಸ್ಟ್ರೇಲಿಯಾ 6 ಬಾರಿ, ಇಂಗ್ಲೆಂಡ್ 4 ಬಾರಿ, ನ್ಯೂಜಿಲೆಂಡ್ 1 ಬಾರಿ ಟ್ರೋಫಿ ಗೆದ್ದುಕೊಂಡಿದೆ.

ಬಹುಮಾನ ಮೊತ್ತ ಎಷ್ಟು?
2017ಕ್ಕಿಂತ ಈ ಬಾರಿ ಬಹುಮಾನದ ಮೊತ್ತ ದುಪ್ಪಟ್ಟಾಗಿದೆ. ವಿಜೇತರು $ 13.20 ಲಕ್ಷ (ರೂ. 10 ಕೋಟಿ), ರನ್ನರ್ ಅಪ್ ತಂಡ $ 6 ಲಕ್ಷ (ರೂ. 4 ಕೋಟಿ 54 ಲಕ್ಷ) ಮತ್ತು ಸೆಮಿಸ್‌ನಲ್ಲಿ ಸೋತ ತಂಡವು $ 3 ಲಕ್ಷ (ರೂ. 2 ಕೋಟಿ 26 ಲಕ್ಷ) ಪಡೆಯುತ್ತದೆ. ಪ್ರತಿ ತಂಡವು ಉಳಿದ ಏಳು ತಂಡಗಳ ವಿರುದ್ಧ ಒಂದು ಪಂದ್ಯವನ್ನು ಆಡುತ್ತದೆ.
ಪಾಯಿಂಟ್ ಪಟ್ಟಿಯಲ್ಲಿ ಅಗ್ರ 4 ತಂಡಗಳು ಸೆಮಿಸ್‌ಗೆ ಅರ್ಹತೆ ಪಡೆಯುತ್ತವೆ. ಎರಡು ತಂಡಗಳು ಪಾಯಿಂಟ್‌ಗಳಲ್ಲಿ ಸಮಬಲದಲ್ಲಿದ್ದರೆ ರನ್ ರೇಟ್ ಅನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಲೀಗ್ ಹಂತದಲ್ಲಿ 'ಟೈ' ಪಂದ್ಯಗಳಿಗೆ ಚೆರೋ ಅಂಕಗಳನ್ನು ನೀಡಲಾಗುತ್ತದೆ. ಆದರೆ, ಸೆಮಿಸ್ ಮತ್ತು ಫೈನಲ್‌ಗೆ ‘ಸೂಪರ್' ಓವರ್ ಇದೆ. ಸೂಪರ್ ಓವರ್ ಕೂಡ ಟೈ ಆಗಿದ್ದರೆ ಫಲಿತಾಂಶ ಸ್ಪಷ್ಟವಾಗುವವರೆಗೆ ಮತ್ತೆ ಮತ್ತೆ ಆಡಲಾಗುತ್ತದೆ. ಈ ಬಾರಿ ಲೀಗ್ ಹಂತದಿಂದಲೂ ಎಲ್ಲಾ ಪಂದ್ಯಗಳಲ್ಲಿ 'ಡಿಆರ್‌ಎಸ್' ಜಾರಿಯಲ್ಲಿರುತ್ತದೆ.
ಆರ್‌ಸಿಬಿ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯಬಲ್ಲ 4 ವಿದೇಶಿ ಆಟಗಾರರು

ಭಾರತೀಯ ಕಾಲಮಾನ ಬೆಳಿಗ್ಗೆ 6.30ಕ್ಕೆ ಪಂದ್ಯ ಪ್ರಾರಂಭ
ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ 6.30ಕ್ಕೆ ಆರಂಭವಾಗಲಿದೆ. ಪಂದ್ಯವನ್ನು ಬಿಸಿಸಿಐ ಅಧಿಕೃತ ಬ್ರಾಡ್‌ಕಾಸ್ಟರ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಇದು ಆಯಾ ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ನೇರ ಪ್ರಸಾರವಾಗಲಿದೆ. ಪಂದ್ಯಗಳನ್ನು ಸ್ಟಾರ್ ನೆಟ್‌ವರ್ಕ್‌ನ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಮಾಡಲಾಗುತ್ತದೆ. ಕಾಮೆಂಟರಿ ಎಲ್ಲಾ ಭಾಷೆಗಳಲ್ಲಿ ಲಭ್ಯವಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಸಾಧನೆಗೆ ಕೊಹ್ಲಿ ಕೊಡುಗೆ ಅಪಾರ : ಟೆಸ್ಟ್ ನಾಯಕನಾಗಿ ರೋಹಿತ್ ಮೊದಲ ಮಾತು

ವಿಶ್ವಕಪ್‌ಗೆ ಭಾರತ ಮಹಿಳಾ ಸ್ಕ್ವಾಡ್ ಮತ್ತು ಪಂದ್ಯಗಳು
ಮಿಥಾಲಿ ರಾಜ್ (ನಾಯಕಿ), ಹರ್ಮನ್‌ಪ್ರೀತ್ ಕೌರ್ (ಉಪನಾಯಕಿ), ಸ್ಮೃತಿ, ಶಫಾಲಿ, ಯಾಸ್ತಿಕಾ, ದೀಪ್ತಿ, ರಿಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ ರಾಣಾ, ಜೂಲನ್ ಗೂಸ್ವಾಮಿ, ಪೂಜಾ, ಮೇಘನಾ ಸಿಂಗ್, ರೇಣುಕಾ ಸಿಂಗ್ ಠಾಕೂರ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ರಾಜೇಶ್ವರಿ ಗಾಯಕ್ವಾಡ್, ಪೂನಂ ಯಾದವ್
ಸ್ಟ್ಯಾಂಡ್‌ಬೈ ಆಟಗಾರರು: ಸಬ್ಬಿನೇನಿ ಮೇಘನಾ, ಏಕ್ತಾ ಬಿಷ್ತ್, ಸಿಮ್ರಾನ್ ದಿಲ್ ಬಹದ್ದೂರ್
ಭಾರತದ ವೇಳಾಪಟ್ಟಿ (ಸಮಯ: ಭಾರತೀಯ ಕಾಲಮಾನ)
ಮಾರ್ಚ್ 6: ಭಾರತ ವರ್ಸಸ್ ಪಾಕಿಸ್ತಾನ (ಟೌರಂಗ) (6.30 AM)
ಮಾರ್ಚ್ 10: ಭಾರತ ವರ್ಸಸ್ ನ್ಯೂಜಿಲೆಂಡ್ (ಹ್ಯಾಮಿಲ್ಟನ್) (6.30 AM)
ಮಾರ್ಚ್ 12: ಭಾರತ ವರ್ಸಸ್ ವೆಸ್ಟ್ ಇಂಡೀಸ್ (ಹ್ಯಾಮಿಲ್ಟನ್) (6.30 AM)
ಮಾರ್ಚ್ 16: ಭಾರತ ವರ್ಸಸ್ ಇಂಗ್ಲೆಂಡ್ (ಹ್ಯಾಮಿಲ್ಟನ್) (6.30 AM)
ಮಾರ್ಚ್ 19: ಭಾರತ ವರ್ಸಸ್ ಆಸ್ಟ್ರೇಲಿಯಾ (ಆಕ್ಲೆಂಡ್) (6.30 AM)
ಮಾರ್ಚ್ 22: ಭಾರತ ವರ್ಸಸ್ ಬಾಂಗ್ಲಾದೇಶ (ಹ್ಯಾಮಿಲ್ಟನ್) (6.30 AM)
ಮಾರ್ಚ್ 28: ಭಾರತ ವರ್ಸಸ್ ದಕ್ಷಿಣ ವಿರುದ್ಧ (ವೆಲ್ಲಿಂಗ್ಟನ್) (6.30 AM)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications