For Quick Alerts
ALLOW NOTIFICATIONS  
For Daily Alerts
 

IPL 2022: RCB ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯಬಲ್ಲ 4 ವಿದೇಶಿ ಆಟಗಾರರು

RCB

15ನೇ ಸೀಸನ್ ಮಾರ್ಚ್ 26ರಂದು ಆರಂಭವಾಗಲಿದ್ದು, ಈ ಬಾರಿಯ ಟೂರ್ನಿಯಲ್ಲಿ 10 ತಂಡಗಳು ಭಾಗವಹಿಸಲಿದೆ ಹಾಗೂ ಗ್ರೂಪ್ ಸ್ಟೇಜ್‌ನಲ್ಲಿ ಒಟ್ಟು 70 ಪಂದ್ಯಗಳು ನಡೆಯಲಿವೆ. ಅಪೂರ್ವವಾಗಿ ಈ ಬಾರಿ ಎರಡು ಗುಂಪುಗಳಲ್ಲಿ ಟೂರ್ನಿ ಆಯೋಜಿಸಲಾಗಿದೆ. ಪ್ರತಿ ತಂಡವು 14 ಪಂದ್ಯಗಳನ್ನು ಆಡಲಿದ್ದು, ಏಳು ಸ್ಥಳೀಯ ಪಂದ್ಯಗಳು ಮತ್ತು 7 ಇತರೆ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ.

ಪುಣೆ ಮತ್ತು ಮುಂಬೈ ಸ್ಟೇಡಿಯಂಗಳಲ್ಲಿ ಪಂದ್ಯಗಳು ನಡೆಯಲಿವೆ. 55 ಪಂದ್ಯಗಳು ಮುಂಬೈನ ವಾಂಖೆಡೆ, ಬ್ರಬೋರ್ನ್ ಮತ್ತು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಉಳಿದ 15 ಪಂದ್ಯಗಳು ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆಯಲಿದೆ. ಪ್ಲೇ-ಆಫ್ ಪಂದ್ಯಗಳ ಸ್ಥಳವನ್ನು ನಂತರ ನಿರ್ಧರಿಸಲಾಗುತ್ತದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕೆಲವು ನಿರ್ಣಾಯಕ ಖರೀದಿಗಳನ್ನು ಮಾಡಿದೆ, ಆರ್‌ಸಿಬಿಯ ಕ್ರಿಕೆಟ್ ಕಾರ್ಯಾಚರಣೆಯ ನಿರ್ದೇಶಕ ಮೈಕ್ ಹೆಸ್ಸನ್ ಫ್ರಾಂಚೈಸ್ ಮೆಗಾ ಹರಾಜಿನಲ್ಲಿ ಎಲ್ಲಾ ವಿಭಾಗವು ಬಲಿಷ್ಠಗೊಳ್ಳುವಂತೆ ಸ್ಪರ್ಧಾತ್ಮಕ ತಂಡವನ್ನ ಒಟ್ಟುಗೂಡಿಸಿರುವುದಾಗಿ ಹೇಳಿದ್ದಾರೆ.

ಆರ್‌ಸಿಬಿ ಬಲಿಷ್ಠ ತಂಡವನ್ನ ಸಂಘಟಿಸುವುದರ ಜೊತೆಗೆ ವಿದೇಶಿ ಆಟಗಾರರ ಖರೀದಿಯಲ್ಲೂ ಎಚ್ಚರವಹಿಸಿದೆ. ಹೀಗೆ ವಿದೇಶಿ ಆಟಗಾರರಲ್ಲಿ ಫಾಫ್ ಡು ಪ್ಲೆಸಿಸ್, ಜೋಶ್ ಹೇಜಲ್‌ವುಡ್, ವನಿಂದು ಹಸರಂಗ, ಮತ್ತು ದಿನೇಶ್ ಕಾರ್ತಿಕ್ ಸೇರಿದ್ದಾರೆ. ಇವರಲ್ಲಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯಬಲ್ಲ ಆಟಗಾರರು ಈ ಕೆಳಗಿದ್ದಾರೆ.

ಫಾಫ್ ಡುಪ್ಲೆಸಿಸ್

ಫಾಫ್ ಡುಪ್ಲೆಸಿಸ್

ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡುಪ್ಲೆಸಿಸ್‌ ಈ ಬಾರಿ ಆರ್‌ಸಿಬಿಯ ಟ್ರಂಪ್ ಕಾರ್ಡ್‌ ಬ್ಯಾಟ್ಸ್‌ ಆಗಿದ್ದಾರೆ. 15ನೇ ಸೀಸನ್‌ನ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮೊದಲ ಆಟಗಾರನಾಗಿ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಫಾಫ್‌ ಡುಪ್ಲೆಸಿಸ್‌ರನ್ನ ಕೊಂಡುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಸ್ಫೋಟಕ ಆಟಗಾರ ಮತ್ತು ಅತ್ಯಂತ ಕನ್ಸಿಸ್ಟೆನ್ಸಿ ಹೊಂದಿರುವ ಫಾಫ್‌ ಡುಪ್ಲೆಸಿಸ್‌ರನ್ನ ಕೊಂಡುಕೊಳ್ಳಲು ಆರ್‌ಸಿಬಿ, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಸಖತ್ ಬಿಡ್ ನಡೆಸಿದವು. ಚೆನ್ನೈ ಸೂಪರ್ ಕಿಂಗ್ಸ್ ತನ್ನ ಮಾಜಿ ಆಟಗಾರರನ್ನ ಮತ್ತೆ ಹಿಂಪಡೆಯಲು ಸಾಕಷ್ಟು ಪ್ರಯತ್ನ ನಡೆಸಿತು. ಆದ್ರೆ ಅಂತಿಮವಾಗಿ ಡುಪ್ಲೆಸಿಸ್ ಏಳು ಕೋಟಿ ರೂಪಾಯಿಗೆ ಆರ್‌ಸಿಬಿ ಬಿಡ್ ಮಾಡಿದ ನಂತರ ಚೆನ್ನೈ ಸೂಪರ್ ಕಿಂಗ್ಸ್ ಬಿಡ್‌ ನಿಂದ ಹಿಂದೆ ಸರಿಯಿತು.

ಪರಿಣಾಮ ಅಂತಿಮವಾಗಿ ಫಾಫ್ ಡುಪ್ಲೆಸಿಸ್‌ 7 ಕೋಟಿ ರೂಪಾಯಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಪಾಲಾಗಿದ್ದಾರೆ. ಈ ಮೂಲಕ ಐಪಿಎಲ್ 15ನೇ ಸೀಸನ್‌ನಲ್ಲಿ ಆರ್‌ಸಿಬಿ ಓಪನಿಂಗ್ ಸ್ಲಾಟ್‌ನಲ್ಲಿ ಬಲಿಷ್ಠ ಆಟಗಾರನೊಬ್ಬ ಸೇರ್ಪಡೆಯಾದಂತಿದೆ. ನಾಲ್ವರು ವಿದೇಶಿ ಆಟಗಾರರ ಖೋಟಾದಲ್ಲಿ ಡುಪ್ಲೆಸಿಸ್ ಕಣಕ್ಕಿಳಿಯಲಿದ್ದಾರೆ.

ಇದುವರೆಗೆ 100 ಐಪಿಎಲ್ ಪಂದ್ಯಗಳಲ್ಲಿ ಅವರು 34.94 ಸರಾಸರಿಯಲ್ಲಿ 2,935 ರನ್ ಗಳಿಸಿದ್ದಾರೆ. ಟೂರ್ನಿಯಲ್ಲಿ 131.08 ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಸುರೇಶ್ ರೈನಾ ಟ್ರೆಂಡಿಂಗ್: ಮತ್ತೆ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಮಿಸ್ಟರ್ ಐಪಿಎಲ್!

ಗ್ಲೆನ್ ಮ್ಯಾಕ್ಸ್‌ವೆಲ್

ಗ್ಲೆನ್ ಮ್ಯಾಕ್ಸ್‌ವೆಲ್

ಗ್ಲೆನ್ ಮ್ಯಾಕ್ಸ್‌ವೆಲ್ ಅಂತರಾಷ್ಟ್ರೀಯ ಮಟ್ಟದಲ್ಲಿ ಆಸ್ಟ್ರೇಲಿಯಾ ತಂಡವನ್ನ ಮುನ್ನಡೆಸದಿದ್ದರೂ ಸಹ , ಬಿಗ್ ಬ್ಯಾಶ್ ಲೀಗ್ ಟಿ20 ಲೀಗ್‌ನಲ್ಲಿ ತಂಡವೊಂದನ್ನ ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಇದರ ಜೊತೆಗೆ ಆರ್‌ಸಿಬಿ ಭವಿಷ್ಯದ ದೃಷ್ಟಿಯಿಂದ ಫಾಫ್ ಡುಪ್ಲೆಸಿಸ್‌ಗೆ ನಾಯಕತ್ವ ನೀಡಲು ಸಾಧ್ಯವಾಗುವುದಿಲ್ಲ. ಆದ್ರೆ ಮ್ಯಾಕ್ಸ್‌ವೆಲ್‌ಗೆ ಇನ್ನೂ ಅಂತರಾಷ್ಟ್ರೀಯ ಕ್ರಿಕೆಟ್ ಆಡುವ ಅವಕಾಶವಿದ್ದು ಆರ್‌ಸಿಬಿಯನ್ನ ಮುನ್ನಡೆಸುವ ಅವಕಾಶವೂ ಸಹ ಇದೆ.

ಸ್ಟಾರ್ ಬ್ಯಾಟರ್ ಎಬಿ ಡಿವಿಲಿಯರ್ಸ್ ಅನುಪಸ್ಥಿತಿಯಲ್ಲಿ, ಮ್ಯಾಕ್ಸ್‌ವೆಲ್‌ನ ಮಧ್ಯಮ ಓವರ್‌ಗಳಲ್ಲಿ ಸಾಕಷ್ಟು ತ್ವರಿತ ರನ್ ಗಳಿಸುವ ಅವಕಾಶ ತಂದುಕೊಡಲಿದ್ದಾರೆ. ಜೊತೆಗೆ ಆಫ್-ಸ್ಪಿನ್ ಬೌಲ್ ಮಾಡುವ ಮೂಲಕ ತಂಡಕ್ಕೆ ಹೆಚ್ಚುವರಿ ಓವರ್‌ಗಳಲ್ಲಿ ನೆರವಾಗಬಲ್ಲರು. ಇನ್ನು ಮ್ಯಾಕ್ಸಿ ಅದ್ಭುತ ಫೀಲ್ಡರ್ ಕೂಡ ಹೌದು.

97 ಐಪಿಎಲ್ ಪಂದ್ಯಗಳನ್ನು ಆಡಿರುವ ಮ್ಯಾಕ್ಸ್‌ವೆಲ್ 25.23 ರ ಬ್ಯಾಟಿಂಗ್ ಸರಾಸರಿಯಲ್ಲಿ 2018ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ ಕೂಡ ಗರಿಷ್ಠ 151.84 ರಷ್ಟಿದೆ. ಪಂದ್ಯಾವಳಿಯಲ್ಲಿ ಅವರು ತಮ್ಮ ಹೆಸರಿನಲ್ಲಿ 22 ವಿಕೆಟ್‌ಗಳನ್ನು ಸಹ ಹೊಂದಿದ್ದರು.

BCCI ಕೇಂದ್ರೀಯ ಗುತ್ತಿಗೆ 2022: ರಹಾನೆ, ಪೂಜಾರ ಸ್ಥಾನ ಕುಸಿತ, ಹಾರ್ದಿಕ್‌ಗೆ 'C' ಗ್ರೇಡ್‌!

ವನಿಂದು ಹಸರಂಗ

ವನಿಂದು ಹಸರಂಗ

ಆರ್‌ಸಿಬಿ ಅತಿ ಹೆಚ್ಚು ಹಣ ಕೊಟ್ಟು ಖರೀದಿಸಿರುವ ವಿದೇಶಿ ಆಟಗಾರ ವನಿಂದು ಹಸರಂಗ ಕಳೆದು ಒಂದು ವರ್ಷದಿಂದ ಶ್ರೀಲಂಕಾ ತಂಡದಲ್ಲಿ ಮಿಂಚಿನ ಪ್ರದರ್ಶನ ತೋರುತ್ತಿದ್ದಾರೆ. ತಮ್ಮ ಸ್ಪಿನ್ ಚಾಣಾಕ್ಯತೆ ಜೊತೆಗೆ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಆಧಾರವಾಗಬಲ್ಲರು.

ಕೇವಲ 2 ಐಪಿಎಲ್ ಪಂದ್ಯಗಳನ್ನ ಆಡಿರುವ ಹಸರಂಗಗೆ ಆರ್‌ಸಿಬಿ 10.75 ಕೋಟಿ ರೂಪಾಯಿ ನೀಡಿ ತನ್ನ ಸ್ಕ್ವಾಡ್‌ಗೆ ಸೇರಿಸಿಕೊಂಡಿತು. ಮುಂಬರುವ ಸೀಸನ್‌ನಲ್ಲಿ ಈತ ಯುಜವೇಂದ್ರ ಚಹಾಲ್ ಸ್ಥಾನವನ್ನ ಯಶಸ್ವಿಯಾಗಿ ತುಂಬಬಲ್ಲರು ಎಂಬ ವಿಶ್ವಾಸವನ್ನ ಆರ್‌ಸಿಬಿ ಹೊಂದಿದೆ. ಹೀಗಾಗಿ ಈತ ಪ್ಲೇಯಿಂಗ್‌ 11ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ.

ಆರ್‌ಸಿಬಿ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯಬಲ್ಲ 4 ವಿದೇಶಿ ಆಟಗಾರರು

ಕೊಹ್ಲಿಯ 100 ನೇ ಟೆಸ್ಟ್ ಗೆ ಶುಭಾಶಯ ಕೋರಲು BCCI ಮಾಡಿದ ಪ್ಲ್ಯಾನ್ ನೋಡಿ | Oneindia Kannada
ಜೋಶ್ ಹೇಜಲ್‌ವುಡ್

ಜೋಶ್ ಹೇಜಲ್‌ವುಡ್

ಆಸ್ಟ್ರೇಲಿಯಾ ವೇಗಿ ಜೋಶ್ ಹೇಜಲ್‌ವುಡ್ ಖರೀದಿಸುವ ಮೂಲಕ ವೇಗಿಗಳ ವಿಭಾಗವನ್ನು ಆರ್‌ಸಿಬಿ ಬಲಪಡಿಸಿದೆ. 7.75 ಕೋಟಿ ರೂಪಾಯಿ ನೀಡಿ ಆರ್‌ಸಿಬಿ ಹೇಜಲ್‌ವುಡ್ರನ್ನ ತನ್ನ ತೆಕ್ಕೆಗೆ ಹಾಕಿಕೊಂಡಿತು.

ಹೇಜಲ್‌ವುಡ್ 12 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 7.93 ರ ಎಕಾನಮಿಯೊಂದಿಗೆ 12 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಅವರ ನಿರಂತರ ಲೈನ್ ಅಂಡ್ ಲೆಂತ್‌ ಬೌಲಿಂಗ್‌ನಲ್ಲಿ ಹೆಸರುವಾಸಿಯಾಗಿದ್ದು, ಮುಂಬರುವ ಐಪಿಎಲ್ ಋತುವಿನಲ್ಲಿ ಆರ್‌ಸಿಬಿಗಾಗಿ ಪ್ರಮುಖ ಪ್ರದರ್ಶನ ನೀಡಲಿದ್ದಾರೆ.

ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಹೇಜಲ್‌ವುಡ್ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದ್ದು, ಹರ್ಷಲ್ ಪಟೇಲ್ ಮತ್ತು ಮೊಹಮ್ಮದ್ ಸಿರಾಜ್ ಜೊತೆಗೆ ವೇಗಿಗಳ ನೇತೃತ್ವ ವಹಿಸಲಿದ್ದಾರೆ.

Story first published: Thursday, March 3, 2022, 16:03 [IST]
Other articles published on Mar 3, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+