ಬೂಮ್ ಬೂಮ್ ಅಫ್ರಿದಿಯ ವಿಶ್ವದಾಖಲೆ ಮುರಿದ ರೋಹಿತ್ ಶರ್ಮಾ: ಏಕದಿನ ಕ್ರಿಕೆಟ್‌ನಲ್ಲಿ 250 ಸಿಕ್ಸರ್

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಟಿ20 ಸರಣಿಯ ಬಳಿಕ ಏಕದಿನ ಫಾರ್ಮೆಟ್‌ನಲ್ಲೂ ತಂಡವನ್ನ ಗೆಲುವಿನತ್ತ ಕೊಂಡೊಯ್ದಿದ್ದಾರೆ. ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 10 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.
ಭಾರತದ ಬಿಗು ಬೌಲಿಂಗ್ ದಾಳಿಗೆ ತರಗೆಲೆಯೆಂತೆ ಉದುರಿದ ಇಂಗ್ಲೆಂಡ್ ಬ್ಯಾಟರ್ಸ್ ಪೆವಿಲಿಯನ್ ಪರೇಡ್ ನಡೆಸಿದ್ರು. ಬುಮ್ರಾ ವೈಯಕ್ತಿಕ ಶ್ರೇಷ್ಟ ಬೌಲಿಂಗ್ ದಾಳಿಗೆ ನಲುಗಿದ ಆಂಗ್ಲರು 110ರನ್‌ಗಳಿಗೆ ಆಲೌಟ್ ಆದರು. ಈ ಗುರಿಯನ್ನ ಸುಲಭವಾಗಿ ಬೆನ್ನತ್ತಿದ ಟೀಂ ಇಂಡಿಯಾ 18.4 ಓವರ್‌ಗಳಲ್ಲಿ ಗುರಿ ತಲುಪುವ ಮೂಲಕ ದಾಖಲೆಯ ಗೆಲುವು ಸಂಪಾದಿಸಿತು.
ತನ್ನ ಹಳೆಯ ಬ್ಯಾಟಿಂಗ್ ಜೊತೆಗಾರ ಶಿಖರ್ ಧವನ್ ಜೊತೆಗೂಡಿ ಶತಕದ ಜೊತೆಯಾಟವಾಡಿದ ರೋಹಿತ್ ಅರ್ಧಶತಕದ ಜೊತೆಗೆ ತಂಡವನ್ನ ಗೆಲುವಿನ ಗೆರೆ ದಾಟಿಸಿದರು.

ರೋಹಿತ್ ಶರ್ಮಾ ಅಬ್ಬರ, ಇಂಗ್ಲೆಂಡ್ ಬೌಲರ್ಸ್ ತತ್ತರ
111ರನ್‌ಗಳ ಸುಲಭ ಗುರಿಯನ್ನ ಬೆನತ್ತಿದ ಭಾರತ ಪರ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಬೊಂಬಾಟ್ ಜೊತೆಯಾಟವಾಡಿದರು. ಏಕದಿನ ಕ್ರಿಕೆಟ್‌ನಲ್ಲಿ 18ನೇ ಬಾರಿಗೆ ಶತಕದ ಜೊತೆಯಾಟವಾಡಿದ ಈ ಜೋಡಿ ಆಂಗ್ಲರಿಗೆ ಯಾವುದೇ ಅವಕಾಶ ನೀಡಲಿಲ್ಲ. ಮೊದಲ ಎಸೆತದಲ್ಲಿ ರನೌಟ್ ಆಗುವ ಅವಕಾಶವನ್ನು ನೀಡಿದ್ದು ಬಿಟ್ಟರೆ, ಉಳಿದಂತೆ ಇನ್ನಿಂಗ್ಸ್‌ನಲ್ಲಿ ಸೊಗಸಾಟ ಜೊತೆಯಾಟವಾಡಿ ಇಂಗ್ಲೆಂಡ್‌ನಿಂದ ಗೆಲುವನ್ನ ಕಸಿದುಕೊಂಡರು.
ರೋಹಿತ್ ಶರ್ಮಾ 58 ಎಸೆತಗಳಲ್ಲಿ ಅಜೇಯ 76 ರನ್ ಕಲೆಹಾಕಿದ್ದು, ಇದರಲ್ಲಿ ಆರು ಬೌಂಡರಿ ಮತ್ತು ಐದು ಸಿಕ್ಸರ್‌ಗಳಿದ್ದವು. ಅತ್ತ ಧವನ್ ತಾಳ್ಮೆಯುತ ಬ್ಯಾಟಿಂಗ್ ಮಾಡಿ 54 ಎಸೆತಗಳಲ್ಲಿ ಅಜೇಯ 34ರನ್ ಕಲೆಹಾಕಿದರು.
ರೋಹಿತ್ ಶರ್ಮಾ ಭರ್ಜರಿ ಸಿಕ್ಸರ್: ಬಾಲಕಿ ತಲೆಗೆ ಬಡಿಯಿತು ಚೆಂಡು!

ಏಕದಿನ ಕ್ರಿಕೆಟ್‌ನಲ್ಲಿ 250ನೇ ಸಿಕ್ಸರ್, ಅಫ್ರಿದಿ ದಾಖಲೆ ಪುಡಿ
ಏಕದಿನ ಕ್ರಿಕೆಟ್‌ನಲ್ಲಿ 250 ಸಿಕ್ಸರ್ ಸಿಡಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ ರೋಹಿತ್ ವೈಯಕ್ತಿಕವಾಗಿ ಹೊಸ ಮೈಲುಗಲ್ಲನ್ನ ಕೂಡ ತಲುಪಿದ್ದಾರೆ. ಈ ವೇಳೆಯಲ್ಲಿ ಪಾಕಿಸ್ತಾನದ ಬೂಮ್ ಬೂಮ್ ಬ್ಯಾಟರ್ ಶಾಹಿದ್ ಅಫ್ರಿದಿ ದಾಖಲೆಯನ್ನು ಮುರಿದಿದ್ದು ಅತ್ಯಂತ ಕಡಿಮೆ ಪಂದ್ಯಗಳಲ್ಲಿ ಈ ಸಾಧನೆಯ ಮೆಟ್ಟಿಲನ್ನೇರಿದ್ದಾರೆ.
ರೋಹಿತ್ ಶರ್ಮಾ 250 ಸಿಕ್ಸರ್ ಸಿಡಿಸಲು ಒಟ್ಟಾರೆ 224 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡರೆ, ಪಾಕ್ ಮಾಜಿ ಆಟಗಾರ ಅಫ್ರಿದಿ 259 ಇನ್ನಿಂಗ್ಸ್‌ಗಳಲ್ಲಿ 250 ಸಿಕ್ಸರ್ ಕಲೆಹಾಕಿದ್ದರು. ಈ ಮೂಲಕ ಹಿಟ್‌ಮ್ಯಾನ್ ವೇಗವಾಗಿ 250 ಸಿಕ್ಸರ್ ಸಿಡಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.
ಭಾರತಕ್ಕೆ ಹೀನಾಯವಾಗಿ ಶರಣಾದ ಇಂಗ್ಲೆಂಡ್: ನಗೆಪಾಟಲಿಗೀಡಾದ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್

ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿರುವ ಶಾಹಿದ್ ಅಫ್ರಿದಿ
ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ದಾಖಲೆಯು ಶಾಹಿದ್ ಅಫ್ರಿದಿ ಹೆಸರಿನಲ್ಲಿದೆ. ಒಡಿಐನಲ್ಲಿ ಅತಿ ಹೆಚ್ಚು ಸಿಕ್ಸರ್ ಕಲೆಹಾಕಿರುವ ಬ್ಯಾಟರ್ ಇವರಾಗಿದ್ದಾರೆ. 398 ಪಂದ್ಯಗಳಲ್ಲಿ 369 ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿರುವ ಅಫ್ರಿದಿ 351 ಬಾರಿ ಚೆಂಡನ್ನ ಬೌಂಡರಿ ಗೆರೆ ದಾಟಿಸಿದ್ದಾರೆ. ಇದಲ್ಲದೆ 730 ಬಾರಿ ಬೌಂಡರಿಗಳನ್ನ ಸಿಡಿಸಿದ್ದಾರೆ. ತನ್ನ ವೃತ್ತಿ ಜೀವನದಲ್ಲಿ 117.00 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿರುವ ಅಫ್ರಿದಿ ಕ್ರಿಕೆಟ್ ಲೋಕ ಕಂಡಂತಹ ಸ್ಫೋಟಕ ಬ್ಯಾಟ್ಸ್‌ಮನ್‌ಗಳಲ್ಲಿ ಪ್ರಮುಖರಾಗಿದ್ದಾರೆ.
ಅಫ್ರಿದಿ ನಂತರದ ಸ್ಥಾನದಲ್ಲಿ ವಿಂಡೀಸ್ ದೈತ್ಯ ಕ್ರಿಸ್‌ಗೇಲ್ 294 ಇನ್ನಿಂಗ್ಸ್‌ನಲ್ಲಿ 331 ಸಿಕ್ಸರ್, ಶ್ರೀಲಂಕಾದ ದಿಗ್ಗಜ ಬ್ಯಾಟರ್ ಸನತ್ ಜಯಸೂರ್ಯ 443 ಇನ್ನಿಂಗ್ಸ್‌ಗಳಲ್ಲಿ 270 ಸಿಕ್ಸರ್ ಕಲೆಹಾಕಿದ್ದಾರೆ. ಈ ನಂತರ ನಾಲ್ಕನೇ ಸ್ಥಾನವನ್ನ ರೋಹಿತ್ ಶರ್ಮಾ ಅಲಂಕರಿಸಿದ್ದು 224 ಇನ್ನಿಂಗ್ಸ್‌ಗಳಲ್ಲಿ 250 ಸಿಕ್ಸರ್ ಕಲೆಹಾಕಿದ್ದಾರೆ. ಜೊತೆಗೆ 852 ಬೌಂಡರಿ ಸಹ ಸಿಡಿಸಿದ್ದಾರೆ. ಹಿಟ್‌ಮ್ಯಾನ್ ಬಳಿಕ ಐದನೇ ಸ್ಥಾನದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 297 ಇನ್ನಿಂಗ್ಸ್‌ಗಳಲ್ಲಿ 229 ಸಿಕ್ಸರ್ ಕಲೆಹಾಕಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications