ವಿರಾಟ್ ಕೊಹ್ಲಿಯನ್ನ ಅಷ್ಟು ಹಗುರವಾಗಿ ಪರಿಗಣಿಸಬೇಡಿ: ಪಾಕಿಸ್ತಾನ ತಂಡಕ್ಕೆ ವಾರ್ನಿಂಗ್ ಕೊಟ್ಟ ಕ್ರಿಕೆಟಿಗ

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಸದ್ಯ ಉತ್ತಮ ಫಾರ್ಮ್‌ನಲ್ಲಿ ಇರದೇ ಇರಬಹುದು, ಆದ್ರೆ ಆತನನ್ನು ಅಷ್ಟು ಹಗುರವಾಗಿ ಪರಿಗಣಿಸಬೇಡಿ ಎಂದು ಪಾಕಿಸ್ತಾನ ಅನುಭವಿ ಸ್ಪಿನ್ನರ್ ಯಾಸಿರ್ ಶಾ ಪಾಕ್ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.
ವಿರಾಟ್ ಕೊಹ್ಲಿ ಸದ್ಯ ವಿಶ್ರಾಂತಿಯಲ್ಲಿದ್ದು, ವೆಸ್ಟ್ ಇಂಡೀಸ್ ಬಳಿಕ ಜಿಂಬಾಬ್ವೆ ಸರಣಿಗೂ ಅಲಭ್ಯರಾಗಿದ್ದಾರೆ. ಇಂಗ್ಲೆಂಡ್ ಪ್ರವಾಸದ ಬಳಿಕ ವಿಶ್ರಾಂತಿ ಪಡೆದ ವಿರಾಟ್ ಏಷ್ಯಾಕಪ್‌ನಲ್ಲಿ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ.
ಆಗಸ್ಟ್ 27ರಿಂದ ಪ್ರಾರಂಭಗೊಳ್ಳಲಿರುವ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಆಗಸ್ಟ್ 28ರಂದು ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯವನ್ನಾಡಲಿದ್ದು ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಲು ಸಕಲ ತಯಾರಿ ನಡೆಸಿದ್ದಾರೆ.

70 ಶತಕಗಳ ಒಡೆಯನಿಗೆ ಎರಡು ವರ್ಷದಿಂದ ಶತಕ ಸಿಡಿಸಲು ಸಾಧ್ಯವಾಗಿಲ್ಲ
43 ಏಕದಿನ ಶತಕಗಳು ಮತ್ತು 27 ಟೆಸ್ಟ್ ಶತಕಗಳನ್ನ ದಾಖಲಿಸಿರುವ ವಿರಾಟ್ ಕೊಹ್ಲಿ ಸಾಮರ್ಥ್ಯ ಎಂತಹದ್ದು ಎಂಬುದು ಇಡೀ ಕ್ರಿಕೆಟ್ ಲೋಕಕ್ಕೆ ತಿಳಿದಿದೆ. ಕ್ರಿಕೆಟ್‌ನ ಮೂರು ಫಾರ್ಮೆಟ್‌ನಲ್ಲಿ 50ಕ್ಕೂ ಹೆಚ್ಚು ಸರಾಸರಿ ಹೊಂದಿರುವ ಏಕೈಕ ಆಟಗಾರನಾಗಿರುವ ವಿರಾಟ್ ಕೊಹ್ಲಿ, ಕಳೆದ ಎರಡು ವರ್ಷಗಳಿಂದ ಶತಕದ ಬರ ಎದುರಿಸಿದ್ದಾರೆ.
2019ರಿಂದ ಒಂದೇ ಒಂದು ಅಂತರಾಷ್ಟ್ರೀಯ ಶತಕ ದಾಖಲಿಸಲು ವಿಫಲಗೊಂಡಿರುವ ವಿರಾಟ್ ಕೊಹ್ಲಿ 71ನೇ ಶತಕ ಸಿಡಿಸಲು ಸಾಧ್ಯವಾಗಿಲ್ಲ. ವಿರಾಟ್ ಕೊನೆಯದಾಗಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಂಡಿದ್ದು, ಬ್ಯಾಟಿಂಗ್‌ನಲ್ಲಿ ಮತ್ತೆ ವಿಫಲರಾದರು.
ಐಪಿಎಲ್ 2022ರ ಸೀಸನ್ ಬಳಿಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಎರಡು ಟಿ20 ಪಂದ್ಯಗಳಲ್ಲಿ 12 ರನ್ ಮತ್ತು ಎರಡು ಏಕದಿನ ಪಂದ್ಯದಲ್ಲಿ 33ರನ್ ಕಲೆಹಾಕಿ ನಿರಾಸೆ ಮೂಡಿಸಿದ್ರು.
ಸ್ಕೂಟರ್‌ನಲ್ಲಿ ಮುಂಬೈ ಸಿಟಿ ಸುತ್ತಿದ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ: ವೀಡಿಯೋ ವೈರಲ್

ಕೊಹ್ಲಿಯನ್ನ ಅಷ್ಟು ಹಗುರವಾಗಿ ಪರಿಗಣಿಸಬೇಡಿ ಎಂದ ಯಾಸಿರ್ ಶಾ
ವಿರಾಟ್ ಕೊಹ್ಲಿ ವಿಶ್ವ ವಿಖ್ಯಾತ ಬ್ಯಾಟರ್ ಆಗಿದ್ದು, ಯಾವುದೇ ಕ್ಷಣದಲ್ಲಿ ಮತ್ತೆ ಫಾರ್ಮ್‌ಗೆ ಮರಳಬಹುದು, ಆತನನ್ನು ಅಷ್ಟು ಸುಲಭವಾಗಿ ಪರಿಗಣಿಸಬೇಡಿ ಎಂದು ಯಾಸಿರ್ ಶಾ ಪಾಕ್ ತಂಡವನ್ನ ಎಚ್ಚರಿಸಿದ್ದಾರೆ.
'' ವಿರಾಟ್ ಕೊಹ್ಲಿಯನ್ನ ಅಷ್ಟು ಸುಲಭವಾಗಿ ಪರಿಗಣಿಸಬೇಡಿ, ಹೌದು ಆತ ಫಾರ್ಮ್‌ನಲ್ಲಿ ಇರದೇ ಇರಬಹುದು, ಆತ ರನ್‌ಗಳಿಸಲು ಪರದಾಡುತ್ತಿದ್ದಾನೆ, ಆದ್ರೆ ಆತ ವರ್ಲ್ಡ್ ಕ್ಲಾಸ್ ಬ್ಯಾಟರ್ ಆಗಿದ್ದು, ಯಾವುದೇ ಕ್ಷಣದಲ್ಲಿ ಆತ ಫಾರ್ಮ್‌ಗೆ ಮರಳಬಹುದು'' ಎಂದು ಯಾಸಿರ್ ಶಾ ಹೇಳಿದ್ದಾರೆ.
ಏಷ್ಯಾಕಪ್: ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳ ಸ್ಕ್ವಾಡ್ ಹಾಗೂ ನಾಯಕರ ಸಂಪೂರ್ಣ ವಿವರ

ಪಾಕಿಸ್ತಾನ ವಿರುದ್ಧ ಭರ್ಜರಿ ರೆಕಾರ್ಡ್ ಹೊಂದಿರುವ ವಿರಾಟ್
ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಸಖತ್ ದಾಖಲೆ ಹೊಂದಿದ್ದಾರೆ. ಅದ್ರಲ್ಲೂ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಏಳು ಇನ್ನಿಂಗ್ಸ್‌ನಲ್ಲಿ 77.75ರ ಬ್ಯಾಟಿಂಗ್ ಸರಾಸರಿಯಲ್ಲಿ ಮೂರು ಅರ್ಧಶತಕ ಸಹಿತ 311ರನ್ ಕಲೆಹಾಕಿದ್ದಾರೆ. ಈ ಫಾರ್ಮೆಟ್‌ನಲ್ಲಿ ಭಾರತದ ಬೇರೆ ಯಾವೊಬ್ಬ ಬ್ಯಾಟರ್ 200ರನ್‌ಗಳನ್ನು ದಾಟಿಲ್ಲ.
ಆಗಸ್ಟ್ 28ರಂದು ನಡೆಯಲಿರುವ ಭಾರತ ವರ್ಸಸ್ ಪಾಕಿಸ್ತಾನ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿನತ್ತ ಗುರಿನೆಟ್ಟಿದ್ದು ಪ್ರಮುಖ ಆಟಗಾರರ ಗಾಯದಿಂದ ಹಿನ್ನಡೆ ಅನುಭವಿಸಿದೆ. ಭಾರತ ಪರ ಜಸ್ಪ್ರೀತ್ ಬುಮ್ರಾ, ಹರ್ಷಲ್ ಪಟೇಲ್ ಅಲಭ್ಯರಾಗಿದ್ದಾರೆ. ಮತ್ತೊಂದೆಡೆ ಪಾಕಿಸ್ತಾನ ತಂಡದ ಪ್ರಮುಖ ಬೌಲರ್ ಶಾಹೀನ್ ಅಫ್ರಿದಿ ಕೂಡ ತಂಡದಿಂದ ಹೊರಬಿದ್ದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications