ದ.ಆಫ್ರಿಕಾ ವಿರುದ್ಧದ T20 ಪಂದ್ಯದಿಂದ ಹೊರಗುಳಿದ ಬುಮ್ರಾ: ಫ್ಯಾನ್ಸ್ ಅಸಮಾಧಾನ

ತಿರುವನಂತಪುರಂನ ಗ್ರೀನ್‌ಫೀಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ 8 ವಿಕೆಟ್‌ಗಳ ಅಮೋಘ ಗೆಲುವು ದಾಖಲಿಸಿದೆ. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 1-0 ಮುನ್ನಡೆ ಕೂಡ ಸಾಧಿಸಿದೆ.
ಟಾಸ್ ಗೆದ್ದು ಫಿಲ್ಡಿಂಗ್ ಆಯ್ದುಕೊಂಡಿದ್ದ ರೋಹಿತ್, ತಂಡದಲ್ಲಿ ಮೂವರು ಪ್ರಮುಖ ಆಟಗಾರರು ಕೈ ಬಿಟ್ಟಿದ್ದರು. ಜಸ್ಪ್ರೀತ್ ಬುಮ್ರಾ ಬೆನ್ನು ನೋವಿನಿಂದ ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗುಳಿದಿದ್ದು, ಅರ್ಷ್‌ದೀಪ್ ಹಿಂದಿರುಗಿದರು. ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಯುಜವೇಂದ್ರ ಚಹಾಲ್ ಬದಲು ಸ್ಥಾನ ಪಡೆದರು. ಜೊತೆಗೆ ರಿಷಭ್ ಪಂತ್ ಕೂಡ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದ್ರು.
ಆದ್ರೆ ಇತ್ತೀಚೆಗಷ್ಟೇ ಕಂಬ್ಯಾಕ್ ಮಾಡಿದ್ದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಗಾಯದ ಕಾರಣ ಟೀಕೆಗೆ ಗುರಿಯಾಗಿದ್ದಾರೆ. ಅವರ ಗಾಯದ ಕುರಿತು ನೆಟ್ಟಿಗರು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಶ್ನಿಸಿದ್ದಾರೆ.
ಬುಮ್ರಾ ಮೊದಲ ಪಂದ್ಯ ಆಡದಷ್ಟು ಸಮಸ್ಯೆ ಎದುರಿಸುತ್ತಿದ್ದಾರ?
ಮಂಗಳವಾರದ ಪಂದ್ಯದ ವೇಳೆ ಜಸ್ಪ್ರೀತ್ ಬುಮ್ರಾ ಬೆನ್ನುನೋವಿನ ಬಗ್ಗೆ ದೂರು ನೀಡಿದ್ದರು ಮತ್ತು ಬಿಸಿಸಿಐನ ವೈದ್ಯಕೀಯ ತಂಡವು ಪರೀಕ್ಷಿಸಿದ ನಂತರ ಅವರು ಹಿಂದೆ ಸರಿಯಬೇಕಾಯಿತು ಎಂದು ಬಿಸಿಸಿಐ ಪತ್ರಿಕಾ ಪ್ರಕಟಣೆ ತಿಳಿಸಿದೆ. ಈ ಪಂದ್ಯದಲ್ಲಿ ಬುಮ್ರಾ ಬದಲಿಗೆ ದೀಪಕ್ ಚಹಾರ್ ಬೌಲಿಂಗ್ ಮಾಡಿದರು. ಅವರು ಎರಡು ವಿಕೆಟ್‌ಗಳೊಂದಿಗೆ ತಮ್ಮ ರೋಲ್ ಅನ್ನು ನಿಭಾಯಿಸಿದ್ರು.

ಮತ್ತೆ ಗಾಯಗೊಂಡ್ರಾ ಬುಮ್ರಾ?
ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ಮುನ್ನ ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆ ಭಾರತವನ್ನು ಚಿಂತೆಗೀಡು ಮಾಡಿದೆ. ಕಳೆದ ಕೆಲವು ತಿಂಗಳುಗಳಿಂದ ಗಾಯ ಅವರನ್ನು ಕಾಡುತ್ತಿತ್ತು. ಇತ್ತೀಚೆಗಷ್ಟೇ ಯುಎಇಯಲ್ಲಿ ನಡೆದ ಏಷ್ಯಾಕಪ್‌ನಿಂದ ಬುಮ್ರಾ ಗಾಯದ ಸಮಸ್ಯೆಯಿಂದ ಹೊರಗುಳಿಯಬೇಕಾಯಿತು. ಗಾಯದಿಂದ ಚೇತರಿಸಿಕೊಂಡ ನಂತರ, ಅವರು ಆಸ್ಟ್ರೇಲಿಯಾದೊಂದಿಗಿನ ಕೊನೆಯ ಮೂರು ಟಿ20 ಸರಣಿಯ ಮೂಲಕ ಮರಳಿದರು. ಮೊದಲ ಟಿ20ಯಲ್ಲಿ ಔಟಾಗಿದ್ದ ಬುಮ್ರಾ ನಂತರದ ಎರಡು ಪಂದ್ಯಗಳಲ್ಲಿ ಆಡಿದ್ದರು.
Ind vs SA 1st T20I: ಗೆಲುವಿನ ಓಟ ಮುಂದುವರಿಸಿದ ಭಾರತ, 8 ವಿಕೆಟ್‌ಗಳ ಜಯ

ಬುಮ್ರಾ ಕುರಿತು ವ್ಯಂಗ್ಯವಾಡಿದ ನೆಟ್ಟಿಗರು
ಜಸ್ಪ್ರೀತ್ ಬುಮ್ರಾ ಗಾಯದ ರಾಜ ಎಂದು ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು ಟ್ವಿಟರ್‌ನಲ್ಲಿ ವ್ಯಂಗ್ಯವಾಗಿ ಬರೆದಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಗಳಲ್ಲಿ ಭಾರತ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಬೇಕು. ಸೆಮಿ ಫೈನಲ್‌ಗಳು ಮತ್ತು ಫೈನಲ್‌ಗಳಲ್ಲಿ ಆಟಗಾರನನ್ನು ಹೆಚ್ಚು ತಾಜಾವಾಗಿರಿಸಲು ವಿಶ್ರಾಂತಿ ಕೊಡಿ ಎಂದು ಟ್ರೋಲ್‌ಗಳು ಸಹ ಕೇಳಿಬಂದಿವೆ.
ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಯಿಂದಾಗಿ ಮತ್ತೊಂದು ಪಂದ್ಯವನ್ನು ಕಳೆದುಕೊಂಡಿದ್ದಾರೆ. ಇದು ಈಗ ಆತಂಕಕಾರಿಯಾಗಿ ಪರಿಣಮಿಸಿದೆ. ಭಾರತಕ್ಕೆ ಬುಮ್ರಾ ಎಷ್ಟು ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ದಾರೆ ನೋಡಿ. ಆದರೆ ಅವರು ಮುಂಬೈ ಇಂಡಿಯನ್ಸ್‌ಗಾಗಿ ಐಪಿಎಲ್‌ನಲ್ಲಿ ಎಲ್ಲಾ 14 ಪಂದ್ಯಗಳನ್ನು ಆಡುತ್ತಿದ್ದರು ಎಂದು ಬಳಕೆದಾರರು ಟೀಕಿಸಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಪವರ್‌ಪ್ಲೇ ಓವರ್‌ಗಳಲ್ಲಿ 5ನೇ ಬಾರಿ 5 ವಿಕೆಟ್ ಪಡೆದ ಟೀಂ ಇಂಡಿಯಾ!

ಬುಮ್ರಾ ಇಲ್ಲದೆ ಬೊಂಬಾಟ್ ಬೌಲಿಂಗ್ ಮಾಡಿದ ಭಾರತ
ಇನ್ನು ಸ್ಟಾರ್ ಬೌಲರ್ ಇಲ್ಲದೆಯೂ ಭಾರತ ಬೊಂಬಾಟ್ ಬೌಲಿಂಗ್ ಮಾಡಿತು. ಅರ್ಷ್‌ದೀಪ್ ಮತ್ತು ದೀಪಕ್ ಚಹಾರ್ ಪವರ್‌ಪ್ಲೇನಲ್ಲಿ ಐದು ವಿಕೆಟ್ ಉರುಳಿಸಿದ್ದಲ್ಲದೆ. ಹರ್ಷಲ್ ಪೇಲ್ ಸಾಥ್‌ನಿಂದಾಗಿ ನಿಗದಿತ 20 ಓವರ್‌ನಲ್ಲಿ 8 ವಿಕೆಟ್ ನಷ್ಟಕ್ಕೆ 106ರನ್‌ಗಳಿಸಲಷ್ಟೇ ಶಕ್ತಗೊಂಡಿತು. ಈ ಗುರಿಯನ್ನ ಬೆನ್ನತ್ತಿದ ಟೀಂ ಇಂಡಿಯಾ 20 ಎಸೆತಗಳು ಬಾಕಿ ಇರುವಂತೆಯೇ 8 ವಿಕೆಟ್‌ಗಳ ಅಮೋಘ ಗೆಲುವು ಸಾಧಿಸಿತು. ಭಾರತದ ಪರ ಸೂರ್ಯಕುಮಾರ್ ಯಾದವ್ ಮತ್ತು ಕೆ.ಎಲ್ ರಾಹುಲ್ ಅರ್ಧಶತಕ ದಾಖಲಿಸಿ ಮಿಂಚಿದ್ರು.

ಭಾರತ ಮತ್ತು ದಕ್ಷಿಣ ಆಫ್ರಿಕಾ ಪ್ಲೇಯಿಂಗ್ ಇಲೆವೆನ್
ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್
ಭಾರತದ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್(ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಹರ್ಷಲ್ ಪಟೇಲ್, ದೀಪಕ್ ಚಾಹರ್, ಅರ್ಷದೀಪ್ ಸಿಂಗ್
ದಕ್ಷಿಣ ಆಫ್ರಿಕಾ ಪ್ಲೇಯಿಂಗ್ 11
ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ಟೆಂಬಾ ಬವುಮಾ(ನಾಯಕ), ರಿಲೀ ರೋಸ್ಸೌ, ಏಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಎರ್ನಿಕ್ ನೊರ್ಕಿಯಾ, ತಬ್ರೈಜ್ ಶಮ್ಸಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications