ಟಿ20 ಕ್ರಿಕೆಟ್‌ನಲ್ಲಿ ಪವರ್‌ಪ್ಲೇ ಓವರ್‌ಗಳಲ್ಲಿ 5ನೇ ಬಾರಿ 5 ವಿಕೆಟ್ ಪಡೆದ ಟೀಂ ಇಂಡಿಯಾ!

ತಿರುವನಂತಪುರದಲ್ಲಿ ನಡೆಯುತ್ತಿರುವ ಭಾರತ-ದಕ್ಷಿಣ ಆಫ್ರಿಕಾ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ದಾಳಿಗೆ ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್ ನಡೆಸಿದ್ದಾರೆ. ಪವರ್‌ಪ್ಲೇ ಓವರ್‌ಗಳಲ್ಲಿ ದೀಪಕ್ ಚಹಾರ್ ಮತ್ತು ಅರ್ಷ್‌ದೀಪ್ ಸಿಂಗ್ ಬೌಲಿಂಗ್ ದಾಳಿಗೆ ತರಗೆಲೆಯಂತೆ ಉದುರಿದ ಆಫ್ರಿಕಾದ ಬ್ಯಾಟರ್‌ಗಳು ಸಿಂಗಲ್ ಡಿಜಿಟ್‌ಗೆ ಔಟಾಗಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಕನಸಿನಲ್ಲೂ ನೆನೆಯದ ರೀತಿಯಲ್ಲಿ ವಿಕೆಟ್‌ಗಳನ್ನ ಕಳೆದುಕೊಂಡಿತು. ದೀಪಕ್ ಚಹಾರ್ ಮೊದಲ ಓವರ್‌ನಲ್ಲಿ ಎದುರಾಳಿ ನಾಯಕ ಟೆಂಬಾ ಬವುಮಾ ಶೂನ್ಯಕ್ಕೆ ಬೌಲ್ಡ್ ಆದರು.

ಎರಡನೇ ಓವರ್‌ನಲ್ಲಿ ಮೂರು ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾ
ಮೊದಲ ಓವರ್‌ನಲ್ಲೇ ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ ಪಂದ್ಯದ ಎರಡನೇ ಓವರ್‌ನಲ್ಲಿ, ಅರ್ಷ್‌ದೀಪ್ ಮೊದಲ ಓವರ್‌ನಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕ್ವಿಂಟನ್ ಡಿಕಾಕ್ 1, ರಿಲ್ಲೈ ರೊಸ್ಸೊ 0, ಡೇವಿಡ್ ಮಿಲ್ಲರ್ 0 ಸುತ್ತಿ ಪೆವಿಲಿಯನ್ ಸೇರಿಕೊಂಡರು.
ಹೀಗೆ ಎರಡು ಓವರ್‌ಗಳಲ್ಲಿ 8ರನ್‌ಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ, ಮೂರನೇ ಓವರ್‌ನಲ್ಲಿ ಮತ್ತೊಂದು ವಿಕೆಟ್ ಕಳೆದುಕೊಂಡಿತು. ದೀಪಕ್ ಚಹಾರ್ ಎರಡನೇ ಓವರ್‌ನಲ್ಲಿ ಟ್ರಿಸ್ಟನ್ ಸ್ಟಬ್ಸ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ರು. ಅರ್ಷ್‌ದೀಪ್ ಹಿಡಿದ ಅದ್ಭುತ ಕ್ಯಾಚ್‌ಗೆ ಬಲಿಯಾದ್ರು.
ಈ ಮೂಲಕ ದಕ್ಷಿಣ ಆಫ್ರಿಕಾ ಆರು ಓವರ್‌ಗಳ ಪವ

2.4 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡ ದ.ಆಫ್ರಿಕಾ ದಾಖಲೆ
ದಕ್ಷಿಣ ಆಫ್ರಿಕಾ ಟಿ20 ಕ್ರಿಕೆಟ್‌ನಲ್ಲಿ ಯಾರೂ ಕಾಣದ ಹೀನಾಯ ದಾಖಲೆ ಮಾಡಿದೆ. ಮೊದಲ ಐದು ವಿಕೆಟ್‌ಗಳನ್ನ ಅತ್ಯಂತ ಕಡಿಮೆ ಸಮಯದಲ್ಲಿ ಕಳೆದುಕೊಂಡಿದ್ದು ಕೂಡ ದಾಖಲೆ ಪುಟ ಸೇರಿದೆ. ತಿರುವನಂತಪುರದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಪ್ರೋಟೀಸ್ ತನ್ನ ಆರಂಭಿಕ ಐದು ಬ್ಯಾಟ್ಸ್‌ಮನ್‌ಗಳನ್ನು ಕೇವಲ 2.4 ಓವರ್‌ಗಳಲ್ಲಿ ಭಾರತದ ವಿರುದ್ಧ ಕಳೆದುಕೊಂಡಿತು.
ಪಂದ್ಯಗಳಲ್ಲಿ ದಾಖಲೆಯ ಸಮಯದಲ್ಲಿ ಮೊದಲ ಐದು ವಿಕೆಟ್‌ಗಳನ್ನು ಕಳೆದುಕೊಂಡ ದಾಖಲೆಯನ್ನು ಮುರಿದಿದೆ. ತಿರುವನಂತಪುರದಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಪ್ರೋಟೀಸ್ ತನ್ನ ಆರಂಭಿಕ ಐದು ಬ್ಯಾಟ್ಸ್‌ಮನ್‌ಗಳನ್ನು ಕೇವಲ 2.4 ಓವರ್‌ಗಳಲ್ಲಿ ಭಾರತದ ವಿರುದ್ಧ ಕಳೆದುಕೊಂಡಿತು.
ಸೂರ್ಯಕುಮಾರ್ ಯಾದವ್ ಸಿಕ್ಕ ಅವಕಾಶವನ್ನ ಚೆನ್ನಾಗಿ ಬಳಸಿಕೊಂಡ್ರು: ಪ್ರಮುಖ ವಿಚಾರ ಬಿಚ್ಚಿಟ್ಟ ರಿಕಿ ಪಾಂಟಿಂಗ್

ಪವರ್‌ಪ್ಲೇ ಓವರ್‌ಗಳಲ್ಲಿ 5ನೇ ಬಾರಿ 5 ವಿಕೆಟ್ ಪಡೆದ ಟೀಂ ಇಂಡಿಯಾ
ಹೌದು, ಟೀಂ ಇಂಡಿಯಾ ಈ ಸಾಧನೆ ಮಾಡಿರುವುದು ಇದೇ ಮೊದಲಲ್ಲ. ಪವರ್‌ಪ್ಲೇ ಓವರ್‌ಗಳಲ್ಲಿ ಭಾರತ ಐದನೇ ಬಾರಿಗೆ ಐದು ವಿಕೆಟ್ ಸಂಪಾದಿಸಿದೆ. ಟೀಂ ಇಂಡಿಯಾ ಯಾರ ವಿರುದ್ಧ ಈ ಅದ್ಭುತ ಸಾಧನೆ ಮಾಡಿದೆ ಎಂಬುದನ್ನ ಈ ಕೆಳಗೆ ಕಾಣಬಹುದು
31/5 vs ದಕ್ಷಿಣ ಆಫ್ರಿಕಾ, ಡರ್ಬನ್ (2007)
29/5 vs ಶ್ರೀಲಂಕಾ, ವೈಜಾಗ್ (2016 )
33/5 vs ವೆಸ್ಟ್ ಇಂಡೀಸ್, ಲಾಡರ್ಹಿಲ್ (2019)
21/5 vs ಅಫ್ಘಾನಿಸ್ತಾನ, ದುಬೈ (2022)
30/5 vs ದಕ್ಷಿಣ ಆಫ್ರಿಕಾ, ತ್ರಿವಂಡಮ್ (2022)
ಕೋವಿಡ್-19 ಸೋಂಕಿನಿಂದ ಗುಣಮುಖರಾದ ಮೊಹಮ್ಮದ್ ಶಮಿ, ಹೃದಯರಕ್ತನಾಳ ಪರೀಕ್ಷೆ ಬಾಕಿ

ಭಾರತ ಮತ್ತು ದಕ್ಷಿಣ ಆಫ್ರಿಕಾ ಪ್ಲೇಯಿಂಗ್ ಇಲೆವೆನ್
ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್
ಭಾರತದ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್(ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಹರ್ಷಲ್ ಪಟೇಲ್, ದೀಪಕ್ ಚಾಹರ್, ಅರ್ಷದೀಪ್ ಸಿಂಗ್
ದಕ್ಷಿಣ ಆಫ್ರಿಕಾ ಪ್ಲೇಯಿಂಗ್ 11
ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ಟೆಂಬಾ ಬವುಮಾ(ನಾಯಕ), ರಿಲೀ ರೋಸ್ಸೌ, ಏಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಎರ್ನಿಕ್ ನಾರ್ಟ್ಜೆ, ತಬ್ರೈಜ್ ಶಮ್ಸಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications