ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs SA 1st T20I: ಗೆಲುವಿನ ಓಟ ಮುಂದುವರಿಸಿದ ಭಾರತ, 8 ವಿಕೆಟ್‌ಗಳ ಜಯ

Team india win

ತಿರುವನಂತಪುರದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸುಲಭ ಜಯ ಸಾಧಿಸಿದ್ದು, 8 ವಿಕೆಟ್‌ಗಳ ಅಮೋಘ ಗೆಲುವು ದಾಖಲಿಸಿದೆ. ಭಾರತದ ದಾಳಿಗೆ ತತ್ತರಿಸಿ 106ರನ್ ಕಲೆಹಾಕಿದ್ದ ದಕ್ಷಿಣ ಆಫ್ರಿಕಾ ಟೀಂ ಇಂಡಿಯಾಗೆ 107ರನ್‌ಗಳ ಗುರಿ ನೀಡಿತ್ತು.

ಈ ಸುಲಭ ಗುರಿಯನ್ನ ಬೆನ್ನತ್ತಿದ ಭಾರತದ ಪರ ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ಜೊತೆಗೆ ಕೆ.ಎಲ್ ರಾಹುಲ್ ತಾಳ್ಮೆಯ ಆಟದಿಂದಾಗಿ ಟೀಂ ಇಂಡಿಯಾ 16.4 ಓವರ್‌ಗಳಲ್ಲಿಯೇ ಗೆಲುವಿನ ದಡ ತಲುಪಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಅಬ್ಬರದ ಅರ್ಧಶತಕ ದಾಖಲಿಸಿದ ಸೂರ್ಯ, ಕೆ.ಎಲ್ ರಾಹುಲ್ ಬೊಂಬಾಟ್ ಕೊಡುಗೆ

ಅಬ್ಬರದ ಅರ್ಧಶತಕ ದಾಖಲಿಸಿದ ಸೂರ್ಯ, ಕೆ.ಎಲ್ ರಾಹುಲ್ ಬೊಂಬಾಟ್ ಕೊಡುಗೆ

107ರನ್‌ಗಳ ಗುರಿ ಬೆನ್ನತ್ತಿದ ಭಾರತ ಪರ ಕೂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಮೊದಲ ಓವರ್‌ ಮೇಡನ್ ಓವರ್‌ನಲ್ಲಿ ಮುಕ್ತಾಯಗೊಂಡ್ರೆ, ಮೂರನೇ ಓವರ್‌ನಲ್ಲಿ ನಾಯಕ ರೋಹಿತ್ ಶರ್ಮಾ ಕಗಿಸೊ ರಬಾಡ ಬೌಲಿಂಗ್‌ನಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.

ಇನ್ನು ಫಾರ್ಮ್‌ಗೆ ಮರಳಿರುವ ವಿರಾಟ್ ಕೊಹ್ಲಿ ಆಟ ಕೇವಲ 3 ರನ್‌ಗೆ ಮುಕ್ತಾಯಗೊಂಡಿತು. ರೋಹಿತ್ ಶರ್ಮಾನಂತೆಯೇ ವಿಕೆಟ್ ಕೀಪರ್‌ಗೆ ಕ್ಯಾಚಿತ್ತು ಕೊಹ್ಲಿ ವಿಕೆಟ್ ಒಪ್ಪಿಸಿದ್ರು.

ಹೀಗೆ ಒಂದೆಡೆ ವಿಕೆಟ್ ಉರುಳಿದ್ರೆ ಕೆ.ಎಲ್ ರಾಹುಲ್ ತಾಳ್ಮೆಯ ಬ್ಯಾಟಿಂಗ್ ಮೂಲಕ ಭಾರತದ ಗೆಲುವಿಗೆ ಕೊಡುಗೆ ನೀಡಿದ್ರು. ಮತ್ತೊಂದೆಡೆ ಸೂರ್ಯಕುಮಾರ್ ಎಂದಿನಂತೆ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 33 ಎಸೆತಗಳಲ್ಲಿ ಅರ್ಧಶತಕದ ಗಡಿದಾಟಿದ್ರು. ಅಜೇಯ 50 ರನ್‌ಗಳ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಮತ್ತು 3 ಭರ್ಜರಿ ಸಿಕ್ಸರ್‌ಗಳಿದ್ದವು.

ಆರಂಭದಿಂದಲೂ ತಾಳ್ಮೆಯುತ ಆಟವಾಡಿದ ಕೆ.ಎಲ್ ರಾಹುಲ್ 16.4ನೇ ಎಸೆತಗಳಲ್ಲಿ ಸ್ವಿಪ್‌ ಮೂಲಕ ಸಿಕ್ಸರ್‌ ಸಿಡಿದ್ದಲ್ಲದೆ ತಂಡಕ್ಕೆ ಗೆಲುವು ತಂದುಕೊಟ್ಟರು. ಹಾಗೆಯೇ 56 ಎಸೆತದಲ್ಲಿ ರಾಹುಲ್ ಅರ್ಧಶತಕದ ಗಡಿದಾಟಿದ್ರು. ಇವರ ಇನ್ನಿಂಗ್ಸ್‌ನಲ್ಲಿ 2 ಬೌಂಡರಿ ಮತ್ತು 4 ಅಮೋಘ ಸಿಕ್ಸರ್‌ ಒಳಗೊಂಡಿದ್ದವು.

ಟಿ20 ಕ್ರಿಕೆಟ್‌ನಲ್ಲಿ ಪವರ್‌ಪ್ಲೇ ಓವರ್‌ಗಳಲ್ಲಿ 5ನೇ ಬಾರಿ 5 ವಿಕೆಟ್ ಪಡೆದ ಟೀಂ ಇಂಡಿಯಾ!

ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ

ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ

ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಯಾರೂ ಊಹಿಸದ ರೀತಿಯಲ್ಲಿ ಪವರ್‌ಪ್ಲೇ ಓವರ್‌ಗಳಲ್ಲಿ ವಿಕೆಟ್ ಕಳೆದುಕೊಂಡಿತು. ಡ್ರೀಮ್ ಸ್ಟಾರ್ಟ್‌ ಪಡೆದ ಟೀಂ ಇಂಡಿಯಾ ಪವರ್‌ಪ್ಲೇ ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾದ ಐದು ವಿಕೆಟ್‌ ಎಗರಿಸುವಲ್ಲಿ ಯಶಸ್ವಿಯಾಯಿತು.

ಟೀಂ ಇಂಡಿಯಾ ಪರ ಕಂಬ್ಯಾಕ್‌ ಮಾಡಿದ ದೀಪಕ್ ಚಹಾರ್ ಮೊದಲ ಓವರ್‌ನಲ್ಲೇ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ್ರು. ದೀಪಕ್ ಚಹಾರ್ ಮೊದಲ ಓವರ್‌ನಲ್ಲಿ ಎದುರಾಳಿ ನಾಯಕ ಟೆಂಬಾ ಬವುಮಾ ಶೂನ್ಯಕ್ಕೆ ಬೌಲ್ಡ್‌ ಆದರು. ಇದಾದ ಬಳಿಕ ನಂತರದ ಓವರ್‌ನಲ್ಲೇ ದಕ್ಷಿಣ ಆಫ್ರಿಕಾದ ಟಾಪ್‌ ಆರ್ಡರ್‌ ಅನ್ನು ಅರ್ಷ್‌ದೀಪ್ ಸಿಂಗ್ ಧ್ವಂಸಗೊಳಿಸಿದ್ರು.

ಎರಡನೇ ಓವರ್‌ನಲ್ಲಿ, ಅರ್ಷ್‌ದೀಪ್ ಮೂರು ವಿಕೆಟ್ ಉರುಳಿಸಿದ್ರು. ಕ್ವಿಂಟನ್ ಡಿಕಾಕ್ 1, ರಿಲ್ಲೈ ರೊಸ್ಸೊ 0, ಡೇವಿಡ್ ಮಿಲ್ಲರ್ 0 ಸುತ್ತಿ ಪೆವಿಲಿಯನ್ ಸೇರಿಕೊಂಡರು. ಹೀಗೆ ಎರಡು ಓವರ್‌ಗಳಲ್ಲಿ 8ರನ್‌ಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ, ಮೂರನೇ ಓವರ್‌ನಲ್ಲಿ ಮತ್ತೊಂದು ವಿಕೆಟ್ ಕಳೆದುಕೊಂಡಿತು. ದೀಪಕ್ ಚಹಾರ್ ಎರಡನೇ ಓವರ್‌ನಲ್ಲಿ ಟ್ರಿಸ್ಟನ್ ಸ್ಟಬ್ಸ್‌ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ರು. ಅರ್ಷ್‌ದೀಪ್ ಹಿಡಿದ ಅದ್ಭುತ ಕ್ಯಾಚ್‌ಗೆ ಬಲಿಯಾದ್ರು.

ಪವರ್‌ಪ್ಲೇನಲ್ಲೇ 5 ವಿಕೆಟ್ ಪತನ, 106ರನ್‌ಗೆ ಇನ್ನಿಂಗ್ಸ್ ಮುಕ್ತಾಯ!

ಪವರ್‌ಪ್ಲೇನಲ್ಲೇ 5 ವಿಕೆಟ್ ಪತನ, 106ರನ್‌ಗೆ ಇನ್ನಿಂಗ್ಸ್ ಮುಕ್ತಾಯ!

ಈ ಮೂಲಕ ದಕ್ಷಿಣ ಆಫ್ರಿಕಾ ಆರು ಓವರ್‌ಗಳ ಪವರ್‌ಪ್ಲೇ ಓವರ್‌ಗಳಲ್ಲಿ 31 ರನ್‌ಗೆ ಐದು ವಿಕೆಟ್‌ ಕಳೆದುಕೊಂಡಿತು. ಈ ಸಂದರ್ಭದಲ್ಲಿ ಏಡನ್ ಮಕ್ರಾಮ್ 25ರನ್‌ಗಳಿಸಿ ಹರ್ಷಲ್‌ ಪಟೇಲ್ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ರೆ, ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ ವೇಯ್ನ್ ಪರ್ನೆಲ್ 37 ಎಸೆತಗಳಲ್ಲಿ 24ರನ್ ಕಲೆಹಾಕಿ ಅಕ್ಷರ್ ಪಟೇಲ್‌ಗೆ ವಿಕೆಟ್ ಒಪ್ಪಿಸಿದ್ರು.

ಇನ್ನು ದಕ್ಷಿಣ ಆಫ್ರಿಕಾ ಪರ ಏಕಾಂಗಿ ಹೋರಾಟ ನಡೆಸಿದ ಕೇಶವ್ ಮಹಾರಾಜ್ 35 ಎಸೆತಗಳಲ್ಲಿ 41 ರನ್‌ ಕಲೆಹಾಕಿ ಕೊನೆಯ ಓವರ್‌ನಲ್ಲಿ ಹರ್ಷಲ್ ಪಟೇಲ್‌ಗೆ ವಿಕೆಟ್ ಒಪ್ಪಿಸಿದರು. ಇವರ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿ ಮತ್ತು ಎರಡು ಸಿಕ್ಸರ್ ಸಿಡಿಸಿದ್ರು. ಹರ್ಷಲ್ ಪಟೇಲ್ ಕೊನೆಯ ಓವರ್‌ನಲ್ಲಿ ವಿಕೆಟ್ ಜೊತೆಗೆ ಕೇವಲ ಆರು ರನ್‌ ನೀಡಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 106 ರನ್ ಕಲೆಹಾಕಿತು.

ಭಾರತದ ಪರ ಅದ್ಭುತ ಬೌಲಿಂಗ್ ಮಾಡಿದ ಅರ್ಷ್‌ದೀಪ್ ಸಿಂಗ್ 32 ರನ್ ನೀಡಿ 3 ವಿಕೆಟ್ ಪಡೆದ್ರೆ, ದೀಪಕ್ ಚಹಾರ್ 24 ರನ್ ನೀಡಿ 2 ವಿಕೆಟ್ ಸಂಪಾದಿಸಿದರು. ಇನ್ನು ಹರ್ಷಲ್ ಪಟೇಲ್ 26 ರನ್‌ ನೀಡಿ 2 ವಿಕೆಟ್ ಉರುಳಿಸಿದರು. ಅಕ್ಷರ್ ಪಟೇಲ್ ಕೇವಲ 16 ರನ್ ನೀಡಿ 1 ವಿಕೆಟ್ ತನ್ನ ಖಾತೆಗೆ ಹಾಕಿಕೊಂಡರು.

Ind vs SA: ಒಂದೇ ಓವರ್‌ನಲ್ಲಿ ಮೂರು ವಿಕೆಟ್ ಪಡೆದ ಅರ್ಶ್‌ದೀಪ್: ವಿಡಿಯೋ

ಭಾರತ ಮತ್ತು ದಕ್ಷಿಣ ಆಫ್ರಿಕಾ ಪ್ಲೇಯಿಂಗ್ ಇಲೆವೆನ್

ಭಾರತ ಮತ್ತು ದಕ್ಷಿಣ ಆಫ್ರಿಕಾ ಪ್ಲೇಯಿಂಗ್ ಇಲೆವೆನ್

ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್
ಭಾರತದ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್(ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಹರ್ಷಲ್ ಪಟೇಲ್, ದೀಪಕ್ ಚಾಹರ್, ಅರ್ಷದೀಪ್ ಸಿಂಗ್

ದಕ್ಷಿಣ ಆಫ್ರಿಕಾ ಪ್ಲೇಯಿಂಗ್ 11
ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ಟೆಂಬಾ ಬವುಮಾ(ನಾಯಕ), ರಿಲೀ ರೋಸ್ಸೌ, ಏಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಎರ್ನಿಕ್ ನಾರ್ಟ್ಜೆ, ತಬ್ರೈಜ್ ಶಮ್ಸಿ

Story first published: Wednesday, September 28, 2022, 22:44 [IST]
Other articles published on Sep 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X